ಈ ಅಪ್ಲಿಕೇಶನ್‌ಗಳನ್ನ ನೀವು ಬಳಸುತ್ತಿದ್ದರೆ ಕೂಡಲೇ ಡಿಲೀಟ್‌ ಮಾಡಿ!

|

ಪ್ರಸ್ತುತ ದಿನಗಳಲ್ಲಿ ನಾವು ಉಪಯೋಗಿಸುವ ಅಪ್ಲಿಕೇಶನ್‌ಗಳಲ್ಲಿ ನಕಲಿ ಯಾವುದು ಅಸಲಿ ಯಾವುದು ಅನ್ನೊದೇ ಡೌಟ್‌. ಅಷ್ಟರ ಮಟ್ಟಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿಯೂ ಕೂಡ ನಕಲಿ ಅಪ್ಲಿಕೇಶನ್‌ಗಳ ಹಾವಳಿ ಜೊರಾಗಿದೆ. ಅದರಲ್ಲೂ ಮಾಲ್‌ವೇರ್‌ ಹೊಂದಿರುವ ಅಪ್ಲಿಕೇಶನ್‌ಗಳು ಬಳಕೆದಾರರ ಡೇಟಾವನ್ನು ಕದಿಯುತ್ತಿವೆ ಅನ್ನೊದು ಶಾಕಿಂಗ್‌ ವಿಚಾರ. ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಅಪ್ಲಿಕೇಶನ್‌ಗಳನ್ನು ಬಳಸುವ ಮುನ್ನ ಬಳಕೆದಾರರು ಎಚ್ಚರಿಕೆಯಿಂದ ಇರಲೇಬೇಕಾದ ಅನಿವಾರ್ಯತೆ ಇದೆ.

ಗೂಗಲ್‌ ಪ್ಲೇ ಸ್ಟೋರ್‌

ಹೌದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಅಪ್ಲಿಕೇಶನ್‌ಗಳು ಉಚಿತವಾಗಿ ಲಭ್ಯವಾಗಲಿವೆ. ಇನ್ನು ಕೆಲವು ಅಪ್ಲಿಕೇಶನ್‌ಗಳು ಕಡಿಮೆ ಶುಲ್ಕದಲ್ಲಿ ಲಭ್ಯವಾಗಲಿವೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಅವಶ್ಯಕತೆಗೆ ತಕ್ಕ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಇದೀಗ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಹದಿನಾಲ್ಕು ಅಪ್ಲಿಕೇಶನ್‌ಗಳು ನಮ್ಮ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುತ್ತಿವೆ ಎನ್ನಲಾಗಿದೆ. ಈ ಅಪ್ಲಿಕೇಶನ್‌ಗಳನ್ನು ಮಾಲ್‌ವೇರ್‌ಗಿಂತ ಭಿನ್ನವಾಗಿ, ತಪ್ಪಾಗಿ ಕಾನ್ಫಿಗರ್ ಮಾಡಲಾಗಿದೆ ಎನ್ನಲಾಗಿದೆ. ಹಾಗಾದ್ರೆ ಬಳಕೆದಾರರ ಮಾಹಿತಿ ಕದಿಯುವ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪ್ಲೇ ಸ್ಟೋರ್‌

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವ ಬಳಕೆದಾರರು ಈ ಸ್ಟೋರಿ ಗಮನಿಸಲೇಬೇಕು. ಯಾಕಂದ್ರೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಕೆಲವು ಅಪ್ಲಿಕೇಶನ್‌ಗಳ ಕಾನ್ಫಿಗರ್‌ನಲ್ಲಿ ತಪ್ಪಾಗಿವೆ. ಈ ಕಾರಣದಿಂದಾಗಿ ಈ ಅಪ್ಲಿಕೇಶನ್‌ಗಳನ್ನು ಬಳಸುವ ಬಳಕೆದಾರರ ಮೇಲೆ ಅತ್ಯಂತ ನೆಗಟಿವ್‌ ಪರಿಣಾಮ ಬೀರುತ್ತಿವೆ ಎನ್ನಲಾಗಿದೆ. ಸೈಬರ್‌ನ್ಯೂಸ್‌ನ ವರದಿಯ ಪ್ರಕಾರ, ಫೈರ್‌ಬೇಸ್‌ ಪ್ಲಾಟ್‌ಫಾರ್ಮ್‌ನಲ್ಲಿ ತಪ್ಪಾದ ಕಾನ್ಫಿಗರೇಶನ್‌ನಿಂದಾಗಿ ಪ್ಲೇ ಸ್ಟೋರ್‌ನಲ್ಲಿರುವ 14 ಆಂಡ್ರಾಯ್ಡ್ ಆಪ್‌ಗಳು ಬಳಕೆದಾರರ ಡೇಟಾವನ್ನು ಸೋರಿಕೆ ಮಾಡುತ್ತಿವೆ. ಇದರಿಂದಾಗಿ ಖಾಸಗಿ ಮಾಹಿತಿ ಕೂಡ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ ಎನ್ನಲಾಗಿದೆ. ಅದರಲ್ಲೂ ಈ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯವಾಗಿದ್ದು 140 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ.

ಫೈರ್‌ಬೇಸ್

ಫೈರ್‌ಬೇಸ್ ಪ್ಲಾಟ್‌ಫಾರ್ಮ್ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ ಡೆವಲಪರ್‌ಗಳಿಗಾಗಿ ಒದಗಿಸಿರುವ ಒಂದು ಆಯ್ಕೆಯಾಗಿದೆ. ಈ ಆಯ್ಕೆಯಿಂದಾಗಿ ಡೆವಲಪರ್‌ಗಳು ತಮ್ಮ ಆಪ್‌ಗಳಲ್ಲಿ ಹಲವಾರು ಸಾಮರ್ಥ್ಯಗಳನ್ನು ಸೇರಿಸುವುದಕ್ಕೆ ಅವಕಾಶವಿದೆ. ಸದ್ಯ ಪ್ಲೇ ಸ್ಟೋರ್‌ನಲ್ಲಿ 55 ವಿಭಾಗಗಳಲ್ಲಿ 1,100 ಅತ್ಯಂತ ಜನಪ್ರಿಯ ಆಪ್‌ಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಇವುಗಳ ಡೀಫಾಲ್ಟ್ ಫೈರ್‌ಬೇಸ್ ವಿಳಾಸದ ಗುರುತಿಗಾಗಿ ಪ್ರತಿ ಆಪ್ ಅನ್ನು ಡಿಕಂಪೈಲ್ ಮಾಡುವ ಮತ್ತು ಹುಡುಕುವ ಮೂಲಕ ವಿಶ್ಲೇಷಿಸಲಾಗಿದೆ. ಈ ಮೂಲಕ ಈ ಅಪ್ಲಿಕೇಶನ್‌ಗಳಲ್ಲಿ ಬಳಕೆದಾರರ ಮಾಹಿತಿ ಹೇಗೆ ಲೀಕ್‌ ಆಗುತ್ತಿದೆ ಅನ್ನೊದನ್ನ ಕಂಡುಹಿಡಿಯಲಾಗಿದೆ.

ಗೂಗಲ್‌

ಗೂಗಲ್‌ ಒದಗಿಸಿದ REST API ಅನ್ನು ಬಳಸಿಕೊಂಡು ಅದನ್ನು ಪ್ರವೇಶಿಸಲು ಪ್ರಯತ್ನಿಸುವ ಮೂಲಕ ನಾವು ಡೇಟಾಬೇಸ್ ಅನುಮತಿ ತಪ್ಪು ಸಂರಚನೆಗಳನ್ನು ಪರಿಶೀಲಿಸಿದ್ದೇವೆ ಎಂದು ವರದಿಯಾಗಿದೆ. ಅಪ್ಲಿಕೇಶನ್‌ಗಳು ಫೈರ್‌ಬೇಸ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡದ ಕಾರಣ, ಬಳಕೆದಾರರ ಡೇಟಾ ಸೋರಿಕೆಯಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಖಾತೆಗಳಿಗೆ ಬಳಕೆದಾರ ಹೆಸರುಗಳು, ಇಮೇಲ್ ವಿಳಾಸಗಳು ಮತ್ತು ಬಳಕೆದಾರರ ನಿಜವಾದ ಹೆಸರು ಸೇರಿದಂತೆ ಹಲವು ವಿಚಾರಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿವೆ. URL ಅನ್ನು ತಿಳಿದಿರುವ ಯಾರಾದರೂ ಈ ಡೇಟಾಬೇಸ್‌ಗಳನ್ನು ಯಾವುದೇ ದೃಡೀಕರಣವಿಲ್ಲದೆ ಪ್ರವೇಶಿಸಬಹುದು ಎಂದು ಆರೋಪಿಸಲಾಗಿದೆ.

ಇನ್‌ಸ್ಟಾಲ್

ಒಂದು ವೇಳೆ ನೀವು ಯೂನಿವರ್ಸಲ್ ಟಿವಿ ರಿಮೋಟ್ ಕಂಟ್ರೋಲ್ ಅನ್ನು ಹೊಂದಿದ್ದರೆ, ಅದನ್ನು 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇನ್‌ಸ್ಟಾಲ್ ಮಾಡಿದ್ದಾರೆ. ಈ ರಿಮೋಟ್‌ ಕಂಟ್ರೋಲ್‌ ಅನ್ನು ಬಳಸುವ ಬೇರೊಬ್ಬ ವ್ಯಕ್ತಿ ನಿಮ್ಮ ವೈಯಕ್ತಿಕ ಡೇಟಾ ಕದಿಯುವ ಸಾದ್ಯತೆ ಕೂಡ ಇದೆ. ಅದರಂತೆ ಫೈಂಡ್ ಮೈ ಕಿಡ್ಸ್: ಚೈಲ್ಡ್ ಜಿಪಿಎಸ್ ವಾಚ್ ಆಪ್ ಮತ್ತು ಫೋನ್ ಟ್ರ್ಯಾಕರ್ ಅಪ್ಲಿಕೇಶನ್‌ಗಳು ಕೂಡ 10 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿವೆ. ಆದರೆ ಈ ಅಪ್ಲಿಕೇಶನ್‌ಗಳು ತಪ್ಪಾದ ಕಾನ್ಫಿಗರೇಶನ್‌ ಹೊಂದಿವೆ. ಆದರಿಂದ ಈ ಅಪ್ಲಿಕೇಶನ್‌ ಬಳಸುವ ಬಳಕೆದಾರರ ಮಾಹಿತಿ ಸೋರಿಕೆ ಆಗಲಿದೆ. ಬಳಕೆದಾರರು ಹೈಬ್ರಿಡ್ ವಾರಿಯರ್: ಡಂಜನ್ ಆಫ್ ದಿ ಓವರ್‌ಲಾರ್ಡ್, ರಿಮೋಟ್ ಫಾರ್ ರೋಕು: ಕೋಡ್‌ ಮ್ಯಾಟಿಕ್ಸ್‌ ಬಗ್ಗೆ ಹಾಗೂ ಇತರೆ ಭದ್ರತಾ ನ್ಯೂನತೆ ಹೊಂದಿರುವ ಅಪ್ಲಿಕೇಶನ್‌ ಬಳಸುವಾಗ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಆಂಡ್ರಾಯ್ಡ್‌ ಬಳಕೆದಾರರು ಒಂದು ವೇಳೆ ಈ ಮಾದರಿಯ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ಅದನ್ನು ಡಿಲೀಟ್‌ ಮಾಡುವುದು ಉತ್ತಮ.

Best Mobiles in India

English summary
Millions of users who downloaded these Android apps from the Google Play Store might be affected by a data leak, here’s what you need to know to stay safe.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X