ಐಫೋನ್ 8 ನಲ್ಲಿ ಕಂಡುಬರಲಿದೆ ಅತ್ಯದ್ಭುತ ಬದಲಾವಣೆಗಳು

By Shwetha
|

ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಆಪಲ್ ಬಳಕೆದಾರರಲ್ಲಿ ಉಂಟುಮಾಡಿರುವ ಪ್ರಭಾವ ನಿಮಗೆಲ್ಲಾ ತಿಳಿದೇ ಇದೆ. ಐಫೋನ್ ದಿಗ್ಗಜ ಆಪಲ್ ಏನೇ ಚಮತ್ಕಾರಗಳನ್ನು ಉಂಟುಮಾಡಿದರೂ ಅದರಲ್ಲೊಂದು ವಿಶೇಷತೆಯನ್ನು ಅದು ಉಂಟುಮಾಡುತ್ತದೆ. ಬೇರೆ ಫೋನ್‌ಗಳಿಗಿಂತಲೂ ಹೆಚ್ಚು ಮಹತ್ವಪೂರ್ಣವಾಗಿ ತನ್ನಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವ ಆಪಲ್ ನಿಜಕ್ಕೂ ಅತ್ಯದ್ಭುತ ಎಂದೆನಿಸಿದೆ.

ಐಫೋನ್ 8 ನಲ್ಲಿ ಕಂಡುಬರಲಿದೆ ಅತ್ಯದ್ಭುತ ಬದಲಾವಣೆಗಳು

ಈಗ ಐಫೋನ್ 8 ಕೂಡ ಮತ್ತಷ್ಟು ರೋಚಕ ಅಂಶಗಳೊಂದಿಗೆ ಮಾರುಕಟ್ಟೆಗೆ ಬರಲಿದ್ದು ತನ್ನ ಐಫೋನ್ 7 ಮತ್ತು 7 ಪ್ಲಸ್‌ಗಿಂತಲೂ ಇದು ಹೆಚ್ಚು ಆಕರ್ಷಣೀಯವಾಗಿದೆ ಅಂತೆಯೇ ಇದು ಇನ್ನಷ್ಟು ಮಹತ್ವದ ಅಂಶಗಳನ್ನು ನಿಮ್ಮ ಮುಂದೆ ತರಲಿದೆ.

ಆಪಲ್ ಐಫೋನ್ 8 ನ ವಿವಿಧ ಗಾತ್ರಗಳು

ಆಪಲ್ ಐಫೋನ್ 8 ನ ವಿವಿಧ ಗಾತ್ರಗಳು

ಮೂರು ಬೇರೆ ಬೇರೆ ಆಕಾರಗಳಲ್ಲಿ ಐಫೋನ್ 8 ಲಾಂಚ್ ಆಗಲಿದೆ ಎಂಬುದಾಗಿ ಚೀನಾದ ವೆಬ್‌ಸೈಟ್ ತಿಳಿಸಿದೆ. 4.7 ಇಂಚು ಮತ್ತು 5.5 ಇಂಚಿನ ಲಾಂಚ್‌ನ ಜೊತೆಗೆ ಇನ್ನೊಂದು 5 ಇಂಚಿನ ಆವೃತ್ತಿ ಕೂಡ ಐಫೋನ್ ಕುಟುಂಬವನ್ನು ಸೇರಿಕೊಳ್ಳಲಿದೆ.

ಸ್ಯಾಮ್‌ಸಂಗ್‌ ಹೋಲುವ ವಿನ್ಯಾಸ

ಸ್ಯಾಮ್‌ಸಂಗ್‌ ಹೋಲುವ ವಿನ್ಯಾಸ

ಇನ್ನು ವದಂತಿಗಳು ತಿಳಿಸಿರುವಂತೆ 5.5 ಇಂಚಿನ ಆವೃತ್ತಿಯು ಕರ್ವ್ಡ್ ಓಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಳ್ಳಲಿದ್ದು ಸ್ಯಾಮ್‌ಸಂಗ್‌ನ ಎಡ್ಜ್ ಸಿರೀಸ್ ಸ್ಮಾರ್ಟ್‌ಫೋನ್‌ಗಳನ್ನು ಇದು ಹೋಲಲಿದೆ ಎಂದಾಗಿದೆ. ಎರಡು ಆವೃತ್ತಿಗಳು ರೆಗ್ಯುಲರ್ ಬಾಡಿಯನ್ನು ಪಡೆದುಕೊಳ್ಳಲಿದೆ ಎಂದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಮೋಲೆಡ್ ಡಿಸ್‌ಪ್ಲೇ

ಅಮೋಲೆಡ್ ಡಿಸ್‌ಪ್ಲೇ

ಈ ಐಫೋನ್ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಳ್ಳಲಿದೆ. ಆಪಲ್ ಎಲ್‌ಸಿಡಿ ಯಿಂದ ಅಮೋಲೆಡ್ ಡಿಸ್‌ಪ್ಲೇಗೆ ಬದಲಾವಣೆಯನ್ನು ಪಡೆದುಕೊಳ್ಳಲಿದೆ. ಐಫೋನ್ 8 ಇದೇ ಮಾದರಿಯ ಡಿಸ್‌ಪ್ಲೇಯನ್ನು ಪಡೆದುಕೊಳ್ಳಲಿದೆ.

ಐಫೋನ್ 8 ಎಂಬುದು ಹೊಸ ಐಫೋನ್ 4ಎಸ್ ಆಗಲಿದೆ

ಐಫೋನ್ 8 ಎಂಬುದು ಹೊಸ ಐಫೋನ್ 4ಎಸ್ ಆಗಲಿದೆ

ಗ್ಲಾಸ್ ಡಿಸೈನ್‌ನೊಂದಿಗೆ ಮೆಟಲ್ ಬಾಡಿಯನ್ನು ಆಪಲ್ ಪ್ರಸ್ತುತಪಡಿಸಲಿದ್ದು ಗ್ಲಾಸ್ ಅನ್ನು ಫೋನ್‌ನ ಹಿಂಭಾಗ ಮತ್ತು ಮುಂಭಾಗದಲ್ಲಿ ಸೆಟ್ ಮಾಡಲಿದೆ.

ವೈರ್‌ಲೆಸ್ ಚಾರ್ಜಿಂಗ್ ಮತ್ತು ಇತರ ಬದಲಾವಣೆಗಳು

ವೈರ್‌ಲೆಸ್ ಚಾರ್ಜಿಂಗ್ ಮತ್ತು ಇತರ ಬದಲಾವಣೆಗಳು

ಆಪಲ್ ಐಫೋನ್ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಹೆಚ್ಚು ಬೆಂಬಲವನ್ನು ನೀಡಲಿದೆ ಎಂದಾಗಿದೆ. ಐಫೋನ್ 8 ನಲ್ಲಿ ಇದು ನಿಜವಾಗಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The company is expected to make huge changes both in terms of aesthetics and internals to the next series of iPhones which will be launched in 2017. And if rumours are anything to go by, these changes will blow you away for sure. Let's take a look at them below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X