2023ರಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!

|

ಹೊಸ ವರ್ಷ ಶುರುವಾಗ್ತಿದ್ದ ಹಾಗೇ ಅನೇಕ ಸ್ಮಾರ್ಟ್‌ಫೊನ್‌ಗಳು ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿವೆ. ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ದಿನಾಂಕ ನಿಗಧಿಪಡಿಸಿಕೊಂಡಿವೆ. ಇದರ ನಡುವೆ ಈ ವರ್ಷ ಸ್ಮಾರ್ಟ್‌ಫೋನ್‌ಗಳಲ್ಲಿ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎನ್ನಲಾಗಿದೆ. ಅದರಲ್ಲೂ 15,000ರೂ.ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ಅಪ್ಡೇಟ್‌ಗಳನ್ನು ಕಾಣಬಹುದಾಗಿದೆ. ಈಗಾಗಲೇ ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭವಾಗಿರುವುದರಿಂದ ಹೆಚ್ಚಿನ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಲಾಗಿದೆ.

2023ರಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!

ಹೌದು, 2023ರಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಫ್ಲ್ಯಾಗ್‌ಶಿಪ್ ಡಿವೈಸ್‌ಗಳು ಹಿಂದಿನ ವರ್ಷಕ್ಕಿಂತ ಹೆಚ್ಚು ಪವರ್‌ಫುಲ್‌ ಆಗಿ ಎಂಟ್ರಿ ನೀಡುವ ಸಾಧ್ಯತೆಯಿವೆ. ಹಾಗೇಯೇ 15,000 ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಕೂಡ ಹಲವು ಬದಲಾವಣೆಗಳೊಂದಿಗೆ ಎಂಟ್ರಿ ನೀಡುವ ಸಾದ್ಯತೆಯಿದೆ. ಇದರಲ್ಲಿ ಡಿಸ್‌ಪ್ಲೇ, ಚಾರ್ಜಿಂಗ್‌ ಟೆಕ್ನಾಲಜಿ ಸೇರಿದಂತೆ ಅನೇಕ ವಿಚಾರಗಳನ್ನು ಕಾಣಬಹುದಾಗಿದೆ. ಹಾಗಾದ್ರೆ ಈ ವರ್ಷ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಬದಲಾವಣೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ಟೆಕ್ನಾಲಜಿಯಲ್ಲಿ ಬದಲಾವಣೆ
ಈ ವರ್ಷ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಡಿಸ್‌ಪ್ಲೇ ಟೆಕ್ನಾಲಜಿಯಲ್ಲಿ ಬದಲಾವಣೆಯನ್ನು ಕಾಣಬಹುದು. ಇಂದಿನ ದಿನಗಳಲ್ಲಿ ಅನೇಕ ಫೋನ್‌ಗಳು ಡಿಸ್‌ಪ್ಲೇ ಪ್ಯಾನಲ್‌ ಗುಣಮಟ್ಟಕ್ಕಿಂತ ರಿಫ್ರೆಶ್‌ ರೇಟ್‌ಗೆ ಹೆಚ್ಚಿನ ಅದ್ಯತೆ ನೀಡುತ್ತಿವೆ. ಆದರೆ ಇದು ಬಳಕೆದಾರರಿಗೆ ಸೂಕ್ತವೆನಿಸುವುದಿಲ್ಲ. ಆದರಿಂದ ನೀವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಕನಿಷ್ಠ ಅಮೋಲೆಡ್‌ ಡಿಸ್‌ಪ್ಲೇ ಒಳಗೊಂಡ ಸ್ಮಾರ್ಟ್‌ಫೋನ್‌ ಖರೀದಿಗೆ ಹೆಚ್ಚಿನ ಅದ್ಯತೆ ನೀಡಬೇಕಾಗುತ್ತದೆ.

2023ರಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!

ಅಲ್ಟ್ರಾ-ವೈಡ್ ಕ್ಯಾಮೆರಾ
ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಹೆಚ್ಚಿನ ಕ್ಯಾಮೆರಾಗಳು ಮುಖ್ಯವಲ್ಲ, ಬದಲಿಗೆ ಪ್ರೈಮೆರಿ ಕ್ಯಾಮೆರಾ ಸೆನ್ಸಾರ್‌ ಹೊಂದಿದೆ ಅನ್ನೊದು ಮುಖ್ಯವಾಗಲಿದೆ. ಏಕೆಂದರೆ ಮಿಡ್-ಬಜೆಟ್ ಫೋನ್‌ಗಳಲ್ಲಿ ಮ್ಯಾಕ್ರೋ ಅಥವಾ ಪೋರ್ಟ್ರೇಟ್ ಕ್ಯಾಮೆರಾಗಳು ಇನ್ನೂ ಸಮಾನವಾಗಿಲ್ಲ ಅನ್ನೊದನ್ನ ಗಮನಿಸಬಹುದಾಗಿದೆ.

33W ಚಾರ್ಜಿಂಗ್
15,000 ಕ್ಕಿಂತ ಕಡಿಮೆ ಇರುವ ಹೆಚ್ಚಿನ ಫೋನ್‌ಗಳು ವೇಗದ ಚಾಜಿಂಗ್‌ ತಂತ್ರ್ಞಾನದಲ್ಲಿ ಹಿನ್ನಡೆ ಅನುಭವಿಸಿವೆ. ಆದರೆ ಈ ವರ್ಷ 33W ವೇಗದ ಚಾರ್ಜಿಂಗ್ ತಂತ್ರಜ್ಞಾನ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡುವ ಸಾಧ್ಯತೆಯಿದೆ.

2023ರಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!

5G ನೆಟ್‌ವರ್ಕ್‌
15,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಖರೀದಿಸಿದರೂ ಅದು 5G ಬೆಂಬಲಿಸಲಿದೆಯಾ ಅನ್ನೊದು ಮುಖ್ಯವಾಗಲಿದೆ. ಆದರಿಂದ ಯಾವುದೇ ಸ್ಮಾರ್ಟ್‌ಫೋನ್‌ ಖರೀದಿಸಿದರೂ 5G ನೆಟ್‌ವರ್ಕ್‌ ಬ್ಯಾಂಡ್‌ ಬೆಂಬಲದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತವಾಗಿದೆ.

ಇನ್ನು ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಫೋನ್‌ಗಳಿಗೆ ಸ್ಕ್ರೀನ್‌ಗಾರ್ಡ್‌ ಬಳಸುವುದಕ್ಕೆ ಬಯಸುತ್ತಾರೆ. ಈ ಮೂಲಕ ಡಿಸ್‌ಪ್ಲೇ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ಸ್ಮಾರ್ಟ್‌ಫೋನ್‌ಗಳಿಗೆ ಸ್ಕ್ರೀನ್‌ಗಾರ್ಡ್‌ಗಳನ್ನು ಆಯ್ಕೆ ಮಾಡುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನೀವು ಸ್ಮಾರ್ಟ್‌ಫೋನ್‌ ಅನ್ನು ಬಳಸುವ ಆಧಾರದ ಮೇಲೆ ಸ್ಕ್ರೀನ್‌ಗಾರ್ಡ್‌ಗಳನ್ನು ಆಯ್ಕೆ ಮಾಡೋದು ಉಪಯುಕ್ತವೆನಿಸಲಿದೆ.

2023ರಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!

ನೀವು ಫೋನ್‌ ಅನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಸ್ಕ್ರೀನ್‌ ಗಾರ್ಡ್‌ ಅನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ. ನೀವು ಫೋನ್‌ ಬಳಸುವ ವಿಧಾನಕ್ಕೆ ತಕ್ಕಂತೆ ಸ್ಕ್ರೀನ್‌ಗಾರ್ಡ್‌ ಆಯ್ಕೆ ಮಾಡಿದರೆ ನಿಮ್ಮ ಫೋನ್‌ಗೆ ಸೂಕ್ತ ಸುರಕ್ಷತೆ ದೊರೆಯಲಿದೆ. ಇನ್ನು ಸ್ಕ್ರೀನ್ ಪ್ರೊಟೆಕ್ಟರ್‌ಗಳು ಪ್ಲಾಸ್ಟಿಕ್ ಮತ್ತು ಟೆಂಪರ್ಡ್ ಎಂಬ ಎರಡು ವಿಧದ ಆಯ್ಕೆಗಳಲ್ಲಿ ದೊರೆಯಲಿವೆ. ಪ್ಲಾಸ್ಟಿಕ್ ಸ್ಕ್ರೀನ್‌ ಗಾರ್ಡ್‌ಗಳು ಸೂಕ್ತವಾದ ಪ್ರೊಟೆಕ್ಷನ್‌ ನಿಡಲಿವೆ. ಹಾಗೆಯೇ ಟೆಂಪರ್ಡ್ ಸ್ಕ್ರೀನ್ ಗಾರ್ಡ್‌ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ದೊರೆಯಲಿವೆ.

ಇನ್ನು ಸ್ಕ್ರೀನ್‌ಗಾರ್ಡ್‌ಗಳ ಬೆಲೆ ಹೆಚ್ಚಿನ ಬೆಲೆ ಹೊಂದಿದೆ ಎಂದು ಮಾತ್ರಕ್ಕೆ ಅವು ಸೂಕ್ತವಾದ ಸ್ಕ್ರೀನ್ ಗಾರ್ಡ್‌ಗಳು ಎಂದು ಭಾವಿಸಬೇಡಿ. ಬೆಲೆಯ ಆಯ್ಕೆಯನ್ನು ನೋಡುವುದಕ್ಕಿಂತ ನೀವು ಆಯ್ಕೆ ಮಾಡುವ ಸ್ಕ್ರೀನ್‌ಗಾರ್ಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಸೇರಿದಂತೆ ನಿಮಗೆ ಸರಿ ಹೊಂದುವ ಫೀಚರ್ಸ್‌ಗಳನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆಯಾ ಎಂದು ಪರಿಶೀಲಿಸಿ. ಎಲ್ಲದಕ್ಕಿಂತ ಮುಖ್ಯ ವಾಗಿ ಕವರ್ ಫ್ರೆಂಡ್ಲಿಯಾಗಿರುವ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಆಯ್ಕೆಮಾಡಿ.

Best Mobiles in India

English summary
These 5 Features must Have in Your next buying phone in 2023

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X