ನಿಮ್ಮ ಏರ್‌ಟೆಲ್‌ ಸಿಮ್‌ ಚಾಲ್ತಿ ಇಡಲು ಈ ರೀಚಾರ್ಜ್‌ ಪ್ಲ್ಯಾನ್‌ಗಳು ಬೆಸ್ಟ್‌!

|

ಜಿಯೋ ಟೆಲಿಕಾಂಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿರುವ ಏರ್‌ಟೆಲ್ ಟೆಲಿಕಾಂ ತನ್ನ ಬಳಕೆದಾರರಿಗಾಗಿ ಹಲವು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇನ್ನು ಡ್ಯುಯಲ್‌ ಸಿಮ್‌ ಬಳಕೆ ಮಾಡುವ ಚಂದಾದಾರರು ಸಿಮ್‌ ಆಕ್ಟಿವ್‌ ಇಡಲು ವ್ಯಾಲಿಡಿಟಿ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿಸುತ್ತಾರೆ. ಇಂತಹ ಬಳಕೆದಾರರಿಗಾಗಿ ಏರ್‌ಟೆಲ್‌ ಸಂಸ್ಥೆಯು ಕೆಲವೊಂದು ವ್ಯಾಲಿಡಿಟಿ ಯೋಜನೆಗಳ ಆಯ್ಕೆ ಸಹ ನೀಡಿದೆ.

ಬಿಎಸ್‌ಎನ್‌ಎಲ್‌

ಹೌದು, ಏರ್‌ಟೆಲ್‌ ಸೇರಿದಂತೆ ಜಿಯೋ, ಬಿಎಸ್‌ಎನ್‌ಎಲ್‌, ವಿ ಟೆಲಿಕಾಂಗಳು ಸಹ ವ್ಯಾಲಿಡಿಟಿ ವಿಸ್ತರಿಸುವ ಪ್ಲ್ಯಾನ್‌ಗಳ ಆಯ್ಕೆಗಳನ್ನು ಹೊಂದಿವೆ. ಪ್ರಾಥಮಿಕ ಸಿಮ್‌ ಆಗಿ ಬಳಕೆ ಮಾಡಲು ಇನ್ನೊಂದು ಸಿಮ್‌ ಚಾಲ್ತಿ ಇಡಲು ವ್ಯಾಲಿಡಿಟಿ ಎಕ್ಸ್‌ಟೆನ್ಷನ್‌ ಪ್ಲ್ಯಾನ್‌ಗಳು ಪೂರಕವಾಗಿವೆ. ಹೀಗೆ ನೀವು ಏರ್‌ಟೆಲ್‌ ಸಿಮ್‌ ಅನ್ನು ಪ್ರಾಥಮಿಕ ಸಿಮ್‌ ಆಗಿ ಬಳಕೆ ಮಾಡದೆ ಇದ್ದರೆ, ಏರ್‌ಟೆಲ್ 99ರೂ, 109ರೂ ಮತ್ತು 111ರೂ. ಯೋಜನೆಗಳನ್ನು ರೀಚಾರ್ಜ್ ಮಾಡಿಸಬಹುದು. ಹಾಗೆಯೇ ಇತರೆ ಕೆಲವು ಅಗ್ಗದ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಮುಂದೆ ಓದಿರಿ.

ಏರ್‌ಟೆಲ್ 99ರೂ. ಯೋಜನೆ

ಏರ್‌ಟೆಲ್ 99ರೂ. ಯೋಜನೆ

ಏರ್‌ಟೆಲ್ ಟೆಲಿಕಾಂನ 99ರೂ. ಯೋಜನೆಯು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ರೀಚಾರ್ಜ್‌ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗುತ್ತದೆ.

ಏರ್‌ಟೆಲ್ 109ರೂ. ಯೋಜನೆ

ಏರ್‌ಟೆಲ್ 109ರೂ. ಯೋಜನೆ

ಏರ್‌ಟೆಲ್ ಟೆಲಿಕಾಂನ 109 ರೂ. ಯೋಜನೆಯು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ರೀಚಾರ್ಜ್‌ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗುತ್ತದೆ.

ಏರ್‌ಟೆಲ್ 111ರೂ. ಯೋಜನೆ

ಏರ್‌ಟೆಲ್ 111ರೂ. ಯೋಜನೆ

ಏರ್‌ಟೆಲ್ ಟೆಲಿಕಾಂನ 111 ರೂ. ಸ್ಮಾರ್ಟ್ ಪ್ಲಾನ್ 99 ರೂ. ಟಾಕ್-ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಎಸ್‌ಎಂಎಸ್‌ಗೆ ಸಂಬಂಧಿಸಿದಂತೆ, ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗಲಿದೆ. ಈ ಯೋಜನೆಯು ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್ 128ರೂ. ಯೋಜನೆ

ಏರ್‌ಟೆಲ್ 128ರೂ. ಯೋಜನೆ

ಏರ್‌ಟೆಲ್ ಟೆಲಿಕಾಂನ 128 ರೂ. ಸ್ಮಾರ್ಟ್ ಯೋಜನೆಯು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸುತ್ತದೆ. ಹೆಚ್ಚುವರಿಯಾಗಿ, ಮೊಬೈಲ್ ಡೇಟಾಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಸ್ಥಳೀಯ ಎಸ್‌ಎಮ್‌ಎಸ್‌ ಗೆ 1 ರೂ. ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್‌ ಗೆ 1.5 ರೂ. ಈ ಪ್ಯಾಕ್ 30 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್ 131ರೂ. ಯೋಜನೆ

ಏರ್‌ಟೆಲ್ 131ರೂ. ಯೋಜನೆ

ಏರ್‌ಟೆಲ್ ಟೆಲಿಕಾಂನ 131 ರೂ. ಸ್ಮಾರ್ಟ್ ಪ್ಲಾನ್ ಬಹುತೇಕ 128 ರೂ. ಪ್ಯಾಕ್ ಅನ್ನು ಹೋಲುತ್ತದೆ. ಈ ಪ್ಯಾಕ್ ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಬಳಕೆದಾರರಿಗೆ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸಲಾಗುತ್ತದೆ. ಪ್ರತಿ MB ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಕೊನೆಯದಾಗಿ, ಸ್ಥಳೀಯ ಎಸ್‌ಎಮ್‌ಎಸ್‌ ಗೆ 1 ರೂ. ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್‌ ಗೆ 1.5 ರೂ. ಆಗಿದೆ.

Best Mobiles in India

English summary
These Airtel Plans Helps To Validity Extension: Check Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X