ಅತೀ ಹೆಚ್ಚು ಮಾರಾಟ ಕಂಡ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ?

|

ಪ್ರಸ್ತುತ ಸ್ಮಾರ್ಟ್‌ಫೋನ್ ಇಲ್ಲದೇ ಯಾವ ಕೆಲಸವು ನಡೆಯಲ್ಲ ಅನ್ನುವಷ್ಟರ ಮಟ್ಟಿಗೆ ಫೋನ್‌ನೊಂದಿಗೆ ಜನರು ಅಟ್ಯಾಚ್‍ಮೆಂಟ್‍ ಬೇಸೆದುಕೊಂಡಿದೆ. ಈ ನಿಟ್ಟಿನಲ್ಲಿ ಭಿನ್ನ ವಿಭಿನ್ನ ಫೀಚರ್ಸ್‌ಗಳನ್ನು ಹೊಂದಿರುವ ನೂತನ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಸಾಗಿವೆ. ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಫೋನ್‌ಗಳು ಬಹುಬೇಗನೆ ಗ್ರಾಹಕರನ್ನು ಸೆಳೆದು ಬಿಡುತ್ತವೆ. ಆದರೆ ಕೆಲವು ಹಳೆಯ ಫೋನ್‌ಗಳು ಮಾರುಕಟ್ಟೆಯಲ್ಲಿ ಇಂದಿಗೂ ತಮ್ಮ ಖದರ್ ಉಳಿಸಿಕೊಂಡಿವೆ.

ಜನಪ್ರಿಯ ಸ್ಮಾರ್ಟ್‌ಫೋನ್‌

ಹೌದು, ಹೊಸ ಸ್ಮಾರ್ಟ್‌ಫೋನ್‌ಗಳ ನಡುವೆ ಅನೇಕ ಗ್ರಾಹಕರನ್ನು ಇಂದಿಗೂ ಕೆಲವು ಹಳೆಯ ಫೋನ್‌ಗಳು ಆಕರ್ಷಿಸುತ್ತಿವೆ. ಹೀಗಾಗಿ ಅತೀ ಹೆಚ್ಚು ಮಾರಾಟ ಕಂಡ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ ಲಿಸ್ಟಿನಲ್ಲಿ ನೂತನ ಫೋನ್‌ಗಳ ಜೊತೆಗೆ ಹಳೆಯ ಫೋನ್‌ಗಳು ಸಹ ಸೇರಿಕೊಂಡಿವೆ. ಈ ಫೋನ್‌ಗಳ ಕಳೆದ ವರ್ಷ ಅತೀ ಹೆಚ್ಚು ಮಾರಾಟ ಆಗಿವೆ ಎಂದು Omdia ಓಮ್ಡೀಯಾ ರೀಸರ್ಚ್ ಸಂಸ್ಥೆಯು ವರದಿ ಹೊರಹಾಕಿದೆ. ಈ ವರದಿ ಪ್ರಕಾರ ಅತೀ ಹೆಚ್ಚು ಸೇಲ್ ಕಂಡ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಆಪಲ್ ಐಫೋನ್ XR

ಆಪಲ್ ಐಫೋನ್ XR

2018ರಲ್ಲಿ ಲಾಂಚ್ ಆಗಿರುವ ಆಪಲ್‌ನ ಐಫೋನ್ XR ಸ್ಮಾರ್ಟ್‌ಫೋನ್ ಭಾರಿ ಯಶಸ್ಸು ಕಂಡಿದೆ. ಓಮ್ಡೀಯಾ ಸಂಸ್ಥೆಯ ವರದಿ ಪ್ರಕಾರ ಈ ಐಫೋನ್ ಕಳೆದ 2019ರಲ್ಲಿ ಸುಮಾರು 46.3 ಮಿಲಿಯನ್ ಯೂನಿಟ್ಸ್ ಮಾರಾಟ ಕಂಡಿದೆ. ಇಂದಿಗೂ ಐಫೋನ್ ಪ್ರಿಯರು ಈ ಫೋನ್‌ ಅನ್ನು ಲೈಕ್ ಮಾಡುತ್ತಾರೆ. ಬೆಲೆಯು 49,900ರೂ ಆಗಿದೆ.

ಆಪಲ್ ಐಫೋನ್ 11

ಆಪಲ್ ಐಫೋನ್ 11

ಆಪಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಫೋನ್ 11 ಸಹ ಟ್ರೆಂಡಿಂಗ್‌ನಲ್ಲಿದ್ದು, 2019ರ ಅಂತ್ಯದ ವೇಳೆಗೆ ಒಟ್ಟು 37.3 ಮಿಲಿಯನ್ ಯೂನಿಟ್‌ಗಳ ಮಾರಾಟ ಕಂಡಿದೆ. ಈ ಮೂಲಕ ಅತೀ ಹೆಚ್ಚು ಮಾರಾಟ ಕಂಡ ಫೋನ್‌ಗಳ ಪೈಕಿ ಎರಡನೇ ಸ್ಥಾನ ಪಡೆದಿದೆ. ಈ ಫೋನ್ ಬೆಲೆಯು 64.900ರೂ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A10

ಸ್ಯಾಮ್‌ಸಂಗ್ ಗ್ಯಾಲಕ್ಸಿ A10

ಸ್ಯಾಮ್‌ಸಂಗ್ ಸಂಸ್ಥೆಯ ಎಂಟ್ರಿ ಲೆವೆಲ್ ಫೋನ್ ಆಗಿರುವ ಗ್ಯಾಲಕ್ಸಿ A10 ಅತೀ ಹೆಚ್ಚು ಮಾರಾಟ ಕಂಡ ಫೋನ್‌ಗಳ ಪೈಕಿ ಮೂರನೇ ಸ್ಥಾನದಲ್ಲಿ ಇದೆ. ಕಳೆದ ವರ್ಷ ಈ ಫೋನ್ ಒಟ್ಟು 30 ಮಿಲಿಯನ್ ಯೂನಿಟ್‌ಗಳಷ್ಟು ಸೇಲ್ ಆಗಿದೆ. ಇನ್ನು ಈ ಫೋನ್ ಬೆಲೆಯು 7,990ರೂ. ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A50

ಸ್ಯಾಮ್‌ಸಂಗ್ ಗ್ಯಾಲಕ್ಸಿ A50

ಕಳೆದ ವರ್ಷ 2019ರಲ್ಲಿ ಅತೀ ಹೆಚ್ಚು ಮಾರಾಟ ಕಂಡ ಲಿಸ್ಟ್‌ನಲ್ಲಿ ಗ್ಯಾಲಕ್ಸಿ A50 ಫೋನ್ ನಾಲ್ಕನೇಯದಾಗಿ ಕಾಣಿಸಿಕೊಂಡಿದೆ. ಈ ಫೋನ್ ಒಟ್ಟು 24.2 ಮಿಲಿಯನ್ ಯೂನಿಟ್‌ಗಳು ಸೇಲ್ ಆಗಿವೆ. ಈ ಫೋನ್ ಬೆಲೆಯು 12,999ರೂ ಆಗಿದ್ದು, ಗ್ರಾಹಕರಿಗೆ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A20

ಸ್ಯಾಮ್‌ಸಂಗ್ ಗ್ಯಾಲಕ್ಸಿ A20

ಕಳೆದ ವರ್ಷ 2019ರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A20 ಫೋನ್ ಒಟ್ಟು 19.2 ಮಿಲಿಯನ್ ಯೂನಿಟ್‌ಗಳಷ್ಟು ಮಾರಾಟ ಕಂಡು, ಅತೀ ಹೆಚ್ಚು ಸೇಲ್ ಕಂಡ ಫೋನ್‌ಗಳ ಪೈಕಿ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇನ್ನು ಈ ಫೋನಿನ ಬೆಲೆಯು 10,990ರೂ ಆಗಿದ್ದು, ಗ್ರಾಹಕ ಸ್ನೇಹಿಯಾಗಿದೆ.

ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್‌

ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್‌

ಐಫೋನ್ 11 ಸರಣಿಯಲ್ಲಿನ ಹೈ ಎಂಡ್ ಐಫೋನ್ ಆಗಿರುವ ಐಫೋನ್ 11 ಪ್ರೊ ಮ್ಯಾಕ್ಸ್‌ ಫೋನ್ 2019ರಲ್ಲಿ ಒಟ್ಟು 17.6ಮಿಲಿಯನ್ ಯೂನಿಟ್‌ಗಳಷ್ಟು ಮಾರಾಟ ಕಂಡಿದ್ದು, ಆರನೇ ಸ್ಥಾನವನ್ನು ಹೊಂದಿದೆ. ಇದು ದುಬಾರಿ ಬೆಲೆಯನ್ನು ಹೊಂದಿದ್ದರು ಅತೀ ಹೆಚ್ಚು ಮಾರಾಟ ಕಂಡ ಫೋನ್‌ಗಳ ಲಿಸ್ಟಿನಲ್ಲಿ ಕಾನಿಸಿದ್ದು, ಅಚ್ಚರಿ ಅನಿಸಿದೆ. ಇದರ ಬೆಲೆಯು 1,09,900ರೂ ಆಗಿದೆ.

ಆಪಲ್ ಐಫೋನ್ 8

ಆಪಲ್ ಐಫೋನ್ 8

ಪ್ರಸ್ತುತ ಆಪಲ್ ಐಫೋನ್‌ಗಳಿಗೆ ಡಿಮ್ಯಾಂಡ್ ಹೆಚ್ಚಿದ್ದು, ಜನಪ್ರಿಯ ಐಫೋನ್ 8 ಕಳೆದ ವರ್ಷ ಒಟ್ಟು 17 ಮಿಲಿಯನ್ ಯೂನಿಟ್ ಮಾರಾಟ ಆಗಿದೆ. ಐಫೋನ್ 8 ಹಳೆಯ ಐಫೋನ್ ವೇರಿಯಂಟ್ ಆಗಿದ್ದರೂ ಸಹ ಗ್ರಾಹಕರು ಈ ಫೋನ ಅನ್ನು ಅಧಿಕ ಸಂಖ್ಯೆಯಲ್ಲಿ ಖರೀದಿಸಿರುವುದು ಅಚ್ಚರಿ ಅನಿಸಿದ್ದು, ಏಳನೇ ಸ್ಥಾನ ಪಡೆದಿದೆ. ಇದರ ಬೆಲೆಯು 39,990ರೂ.ಆಗಿದೆ.

ಶಿಯೋಮಿ ರೆಡ್ಮಿ ನೋಟ್ 7

ಶಿಯೋಮಿ ರೆಡ್ಮಿ ನೋಟ್ 7

ಚೀನಾ ಮೂಲದ ಶಿಯೋಮಿ ಕಳೆದ ವರ್ಷ ಲಾಂಚ್ ಮಾಡಿದ್ದ ರೆಡ್ಮಿ ನೋಟ್ 7 ಒಟ್ಟು 16.4 ಮಿಲಿಯನ್ ಯೂನಿಟ್ ಮಾರಾಟ ಕಂಡಿದ್ದು, ಎಂಟನೇ ಸ್ಥಾನದಲ್ಲಿ ಕಾಣಿಸಿದೆ. ಆಪಲ್ ಮತ್ತು ಸ್ಯಾಮ್‌ಸಂಗ್ ಹೊರತುಪಡಿಸಿದರೇ ಈ ಫೋನ್ ಅತೀ ಹೆಚ್ಚು ಮಾರಾಟ ಕಂಡ ಫೋನ್‌ಗಳ ಲಿಸ್ಟ್ನಲ್ಲಿ ಕಾಣಿಸಿದೆ. ಈ ಫೋನ್ ಬೆಲೆಯು 9,999ರೂ. ಆಗಿದೆ.

ಆಪಲ್ ಐಫೋನ್ 11 ಪ್ರೊ

ಆಪಲ್ ಐಫೋನ್ 11 ಪ್ರೊ

ಐಫೋನ್ 11 ಸರಣಿಯಲ್ಲಿ ಭಾರಿ ಸದ್ದು ಮಾಡಿರುವ ಐಫೋನ್ 11 ಪ್ರೊ ಸ್ಮಾರ್ಟ್‌ಫೋನ್ ಕಳೆದ ವರ್ಷ 15.5 ಮಿಲಿಯನ್ ಯೂನಿಟ್‌ಗಳಷ್ಟು ಮಾರಾಟ ಆಗಿದ್ದು, ಒಂಬತ್ತನೇ ಸ್ಥಾನ ತನ್ನದಾಗಿಸಿಕೊಂಡಿದೆ. ಈ ಐಫೋನ್ 99,900ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ J2 ಕೋರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ J2 ಕೋರ್

ಸ್ಯಾಮ್‌ಸಂಗ್ ಸಂಸ್ಥೆಯ ಹಳೆ ಗ್ಯಾಲಕ್ಸಿ J2 ಕೋರ್ ಫೋನ್ ಇನ್ನು ತನ್ನ ಖದರ್ ಉಳಿಸಿದ್ದು, ಕಳೆದ ವರ್ಷ ಒಟ್ಟು 15.2 ಮಿಲಿಯನ್ ಯೂನಿಟ್ ಮಾರಾಟ ಕಂಡು ಹತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಬೆಲೆಯು 6,190ರೂ.ಆಗಿದೆ.

Best Mobiles in India

English summary
Research firm Omdia has revealed the list of the 10 best-selling smartphones in the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X