2018 ರಲ್ಲಿ ಬಿಡುಗಡೆಗೊಂಡ ಬೆಸ್ಟ್ 5 ಸ್ಮಾರ್ಟ್ ಟಿವಿಗಳು

|

ಮನರಂಜನೆಯ ವಿಚಾರ ಬಂದಾಗ ನಿಮ್ಮ ಇಷ್ಟದ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ಎಂಜಾಯ್ ಮಾಡುವುದಕ್ಕೆ ಹಲವಾರು ಬೆಸ್ಟ್ ಗೆಡ್ಜೆಟ್ ಗಳಿವೆ. ಅದರಲ್ಲಿ ಸ್ಮಾರ್ಟ್ ಫೋನ್ ಗಳು, ಟಿವಿ, ಪಿಸಿ ಮತ್ತು ಟ್ಯಾಪ್ ಟಾಪ್ ಗಳು ಸೇರಿವೆ. ಆದರೆ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್ ಟಾಪ್ ಗಳು ನಾವು ಸಂಚರಿಸುತ್ತಿರುವಾಗಲೂ ಕೂಡ ಮನರಂಜನೆ ಪಡೆಯಲು ಅವಕಾಶ ನೀಡುತ್ತದೆ. ಆದರೆ ಟಿವಿ ಮತ್ತು ಡೆಸ್ಕ್ ಟಾಪ್ ಗಳು ನಾವು ಮನೆಯಲ್ಲಿ ರಿಲ್ಯಾಕ್ಸ್ ಮಾಡುವ ಸಂದರ್ಬದಲ್ಲಿ ಮನರಂಜನೆ ಒದಗಿಸಲು ನೆರವು ನೀಡುತ್ತದೆ.

2018 ರಲ್ಲಿ ಬಿಡುಗಡೆಗೊಂಡ ಬೆಸ್ಟ್ 5 ಸ್ಮಾರ್ಟ್ ಟಿವಿಗಳು

ಮಾರ್ಡನ್ ಜಗತ್ತಿನ ಟಿವಿಗಳನ್ನು ಸ್ಮಾರ್ಟ್ ಟಿವಿಗಳು ಎಂದು ಕರೆಯುತ್ತೇವೆ. ಇವು ನಿಮಗೆ ಕೆಲವು ವಿಭಿನ್ನ ಫಂಕ್ಷನಾಲಿಟಿಗಳನ್ನು ಒಧಗಿಸುತ್ತದೆ ಮತ್ತು ಅಂತರ್ಜಾಲ ಸಂಪರ್ಕವನ್ನು ಪಡೆಯಲು ಕೂಡ ನೆರವು ನೀಡುತ್ತದೆ.ಥರ್ಡ್ ಪಾರ್ಟಿ ಆಪ್ ಸಪೋರ್ಟ್ ಮತ್ತು ಇತರೆ ಫೀಚರ್ ಗಳಿಂದಾಗಿ ಜೀವನವನ್ನು ಮತ್ತಷ್ಟು ಮನರಂಜನೆಗೆ ಒಗ್ಗಿಕೊಳ್ಳುವಂತೆ ಮಾಡುವುದಕ್ಕೆ ಈಗಿನ ಜಮಾನದ ಟಿವಿಗಳು ನೆರವು ನೀಡುತ್ತದೆ. ಈ ವರ್ಷ ಬಿಡುಗಡೆಗೊಂಡ ಟಿವಿಗಳಲ್ಲಿ ಕೆಲವು ಸಂಪೂರ್ಣ ಸ್ಮಾರ್ಟ್ ಟಿವಿಗಳಾಗಿದ್ದರೆ ಇನ್ನೂ ಕೆಲವು ಭಾಗಶಃ ಸ್ಮಾರ್ಟ್ ಟಿವಿಗಳಾಗಿವೆ. ಈ ಲೇಖನದಲ್ಲಿ ನಾವು ಈ ವರ್ಷ ಬಿಡುಗಡೆಗೊಂಡ ಅತ್ಯುತ್ತಮ 5 ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಸ್ಯಾಮ್ ಸಂಗ್ Q900R 85-ಇಂಚಿನ 8K QLED ಟಿವಿ

ಸ್ಯಾಮ್ ಸಂಗ್ Q900R 85-ಇಂಚಿನ 8K QLED ಟಿವಿ

ಕೆಲವು ಅತ್ಯುಧ್ಬುತ ಡಿಸ್ಪ್ಲೇ ಪೆನಲ್ ಗಳೊಂದಿಗೆ ಡಿಸೈನ್ ಮಾಡಲಾಗಿರುವ ಟಿವಿ ಎಂದರೆ ಅದು ಸ್ಯಾಮ್ ಸಂಗ್ ಟಿವಿಗಳು. ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು ಯಾವುದೇ ಅನುಮಾನವಿಲ್ಲದೆ ಅತ್ಯುತ್ತಮ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಸ್ಯಾಮ್ ಸಂಗ್ ಟಿವಿಗಳೂ ಕೂಡ ಹೊರತಾಗಿಲ್ಲ. ಈ ಲಿಸ್ಟ್ ನಲ್ಲಿರುವ ಮುಖ್ಯವಾದ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಎಂದರೆ ಅದು ಸ್ಯಾಮ್ ಸಂಗ್ 85-ಇಂಚಿನ 8K QLED ಟಿವಿ.

ಸ್ಯಾಮ್ ಸಂಗ್ 85-ಇಂಚಿನ 8K QLED ಟಿವಿ 8ಕೆ ರೆಸಲ್ಯೂಷನ್ ಜೊತೆಗೆ 4,320 x 7,680 ಪಿಕ್ಸಲ್ ಸಾಮರ್ಥ್ಯದ್ದಾಗಿದೆ ಮತ್ತು 4,000nits ಮತ್ತು HDR10+ ಬೆಂಬಲವಿದೆ.ಕೇವಲ ಡಿಸ್ಪ್ಲೇಯನ್ನು ಬ್ರೈಟ್ ಮಾತ್ರವಲ್ಲದೆ ಕ್ರಿಸ್ಪ್ ಮತ್ತು ವಿವಿಡ್ ಆಗಿಸುವುದಕ್ಕೂ ಇದು ನೆರವು ನೀಡುತ್ತದೆ. ಇದು ಹೈ-ರೆಸಲ್ಯೂಷನ್ ವೀಡಿಯೋ ಕನ್ಸಪ್ಶನ್ ನ್ನು ಹೊಂದಿದೆ.

ಈ ಟಿವಿಯು ಆಂಬಿಯಂಟ್ ಮೋಡ್ ನ್ನು ಹೊಂದಿದೆ. ಡಿಸ್ಪ್ಲೇ ಬಾಕ್ಸಿ ಆಗಿದೆ, ವಾಯ್ಸ್ ಕಮಾಂಡ್ಸ್, ಪರ್ಸನಲ್ ರೆಕಮಂಡೇಷನ್ ಮತ್ತು ಆಟೋಮ್ಯಾಟಿಕ್ ಮೋಡ್ ಡಿಟೆಕ್ಷನ್ ನ್ನು ಹೊಂದಿದೆ.

New Cable TV and DTH channel price list
ಫಿಲಿಪ್ಸ್ ಆಂಬಿಲೈಟ್ 4K ಅಲ್ಟ್ರಾ HD ಟಿವಿ

ಫಿಲಿಪ್ಸ್ ಆಂಬಿಲೈಟ್ 4K ಅಲ್ಟ್ರಾ HD ಟಿವಿ

ಎರಡನೇ ಸ್ಮಾರ್ಟ್ ಟಿವಿ ಈ ಪಟ್ಟಿಯಲ್ಲಿರುವುದೆಂದರೆ ಅದು ಡಚ್ ನ ಮಲ್ಟಿನ್ಯಾಷನಲ್ ಬ್ರ್ಯಾಂಡ್ ಆಗಿರುವ ಫಿಲಿಫ್ಸ್ ಕಂಪೆನಿಯದ್ದಾಗಿದೆ. ಅದುವೇ ಫಿಲಿಪ್ಸ್ ಆಂಬಿಲೈನ್ 4K ಅಲ್ಟ್ರಾ HD ಟಿವಿ. 2015 ರಲ್ಲಿ ಫಿಲಿಪ್ಸ್ ಸಂಸ್ಥೆ ಇದನ್ ಬಿಡುಗಡೆಗೊಳಿಸಿತ್ತು. ಆದರೆ ಈ ವರ್ಷವೂ ಕೂಡ ಫಿಲಿಪ್ಸ್ ನ ಈ ಟಿವಿ ತನ್ನ ಪ್ರಸಿದ್ಧತೆಯನ್ನು ಹಾಗೆಯೇ ಉಳಿಸಿಕೊಂಡಿದೆ. 4ಕೆ ರೆಸಲ್ಯೂಷನ್ ನ್ನು ಈ ಟಿವಿ ಆಫರ್ ಮಾಡುತ್ತದೆ. ಉತ್ತಮ ಪಿಕ್ಚರ್ ಕ್ವಾಲಿಟಿ ಇದೆ. ಇದು ಬಳಕೆದಾರರಿಗೆ ಸೋಷಿಯಲ್ ಮೀಡಿಯಾ ವೆಬ್ ಸೈಟ್ ಗಳನ್ನು ಆಕ್ಸಿಸ್ ಮಾಡುವುದಕ್ಕೆ, ಗೇಮ್ ಗಳನ್ನು ಆಡುವುದಕ್ಕೆ, ಥರ್ಡ್ ಪಾರ್ಟಿ ಆಪ್ ಗಳಾದ ಯುಟ್ಯೂಬ್, ಸ್ಕೈಪ್, ವಿಮಿಯೋ ಮತ್ತು ಇತ್ಯಾದಿಗಳನ್ನು ಆಕ್ಸಿಸ್ ಮಾಡುವುದಕ್ಕೆ ನೆರವು ನೀಡುತ್ತದೆ.

ಆಂಬಿಲೈಟ್ ತಂತ್ರಗಾರಿಕೆಯನ್ನು ಎಕ್ಸ್ ಕ್ಲೂಸೀವ್ ಆಗಿ ಫಿಲಿಪ್ಸ್ ಟಿವಿಗಳಲ್ಲಿ ಕಾಣಬಹುದಾಗಿದೆ. ಈ ತಂತ್ರಜ್ಞಾನವು ಬಳಕೆದಾರರಿಗೆ ಎಮರ್ಸೀವ್ ವ್ಯೂವಿಂಗ್ ಅನುಭವವನ್ನು ಟಿವಿಯಲ್ಲಿ ನೀಡುತ್ತದೆ. ಇದು ಆಕ್ಟೀವಿ 3ಡಿ ಫೀಚರ್ ನಿಂದ ಬರುತ್ತದ. ಉತ್ತಮ ಕಲರ್ ಪ್ರೊಡಕ್ಷನ್ ಗೆ ನೆರವಾಗುತ್ತದೆ. ಮತ್ತೊಂದು ಪ್ರಮುಖ ಫೀಚರ್ ಇದರಲ್ಲಿ ಇರುವುದೆಂದರೆ ಫಿಲಿಪ್ಸ್ ಮೈಕ್ರೋ ಡಿಮ್ಮಿಂಗ್ ಪ್ರೋ. ಇದು ಡೀಪರ್ ಕಪ್ಪು ಮತ್ತು ಬ್ರೈಟರ್ ವೈಟ್ ನ್ನು ಡೆಲಿವರ್ ಮಾಡುವುದಕ್ಕೆ ಸಹಕಾರಿಯಾಗಿದೆ.ಇದು ಮೂರು ವಿಭಿನ್ನ ಪೆನಲ್ ಗಳಲ್ಲಿ ಲಭ್ಯವಾಗುತ್ತದೆ. 50-ಇಂಚು, 58-ಇಂಚು, ಮತ್ತು 65-ಇಂಚು ಮತ್ತು ಇದರ ಬೆಲೆ Rs 1,55,000 ನಿಂದ ಆರಂಭವಾಗಿ Rs 3,72,500 ವರೆಗೆ ಇದೆ.

ಶಿಯೋಮಿ ಎಂಐ ಟಿವಿ 4ಎ

ಶಿಯೋಮಿ ಬಜೆಟ್ ಕಿಂಗ್ ಎಂದೇ ಕರೆಸಿಕೊಳ್ಳುತ್ತದೆ. ಯಾವುದೇ ಡಿವೈಸ್ ಬಿಡುಗಡೆಗೊಳಿಸಿದರೂ ಅದು ಕೈಗೆಟುಕುವ ಬೆಲೆಯಲ್ಲಿ ಇರಬೇಕು ಎಂಬುದು ಶಿಯೋಮಿಯ ಮುಖ್ಯ ಗುರಿ. ಸ್ಮಾರ್ಟ್ ಫೋನ್ ಗೆ ಮಾತ್ರವೇ ಇದು ಸೀಮೀತವಾಗಿರದೇ ಶಿಯೋಮಿಯ ಎಲ್ಲಾ ಪ್ರೊಡಕ್ಟ್ ಗಳಿಗೂ ಕೂಡ ಅನ್ವಯಿಸುತ್ತದೆ. ಹಾಗಾಗಿ ಈ ಲಿಸ್ಟ್ ನಲ್ಲಿರುವ ಮೂರನೇ ಸ್ಮಾರ್ಟ್ ಟಿವಿ ಎಂದರೆ ಅದು ಎಂಐ ಟಿವಿ4ಎ

ಶಿಯೋಮಿ ಎಂಐ ಟಿವಿ 4ಎ ಈ ವರ್ಷದ ಎಪ್ರಿಲ್ ನಲ್ಲಿ ಪ್ರಕಟಿಸಲಾಗಿದ್ದು ಬಜೆಟ್ ಬೆಲೆಯಲ್ಲಿ ಉತ್ತಮ ವೀಡಿಯೋ ಅನುಭವವನ್ನು ನೀಡುತ್ತದೆ.ಎಂಐ ಟಿವಿ 4ಎ ಎರಡು ಸೈಜ್ ನಲ್ಲಿ ಲಭ್ಯವಾಗುತ್ತದೆ. 32-ಇಂ ಚಿನ ಪೆನಲ್ ಮತ್ತು 43- ಇಂಚಿನ ಡಿಸ್ಪ್ಲೇ ಪೆನಲ್ ನ್ನು ಇದು ಹೊಂದಿದೆ. ಫುಲ್ HD LED ಡಿಸ್ಪ್ಲೇ ಪೆನಲ್ ಜೊತೆಗೆ ಸ್ಕ್ರೀನ್ ರೆಸಲ್ಯೂಷನ್ 1080 x 1920 ಪಿಕ್ಸಲ್ ನ್ನು ಹೊಂದಿದೆ ಮತ್ತು 4ಕೆ ರೆಸಲ್ಯೂಷನ್ ನ್ನು ಹೊಂದಿದೆ.

ಎಂಐ ಟಿವಿ 4ಎ PatchWall OS ಆಧಾರಿತ ಆಂಡ್ರಾಯ್ಡ್ ಮಾರ್ಷ್ ಮಾಲೋ ಮತ್ತು ಎಐ ಕೆಪ್ಯಾಬಲಿಟೀಸ್ ನ್ನು ಹೊಂದಿದೆ. 500+ ಘಂಟೆಗಳ ವರೆಗೆ ಬಳಕೆದಾರರು ಬ್ರೌಸ್ ಮಾಡಲು ಅವಕಾಶವಿರುತ್ತದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಇದರಲ್ಲಿ ಮೂರು HDMI ಪೋರ್ಟ್ಸ್ ಮತ್ತು ಮೂರು USB 2.0 ಪೋರ್ಟ್ಸ್ ಗಳಿದೆ. ಇದರ ಆರಂಭಿಕ ಬೆಲೆ Rs 22,999 ಮತ್ತು ಮಾರುಕಟ್ಟೆಯಲ್ಲಿರುವ ಕೈಗೆಟುಕುವ ಬೆಲೆಯ ಬೆಸ್ಟ್ ಸ್ಮಾರ್ಟ್ ಟಿವಿ ಆಗಿದೆ.

ಎಲ್ ಜಿ B8 OLED ಸ್ಮಾರ್ಟ್ ಟಿವಿ

ಎಲ್ ಜಿ B8 OLED ಸ್ಮಾರ್ಟ್ ಟಿವಿ

ಸೊತ್ ಕೊರಿಯನ್ ಟೆಕ್ ಸಂಸ್ಥೆ ಎಲ್ ಜಿ ಮಾರುಕಟ್ಟೆಯಲ್ಲಿ ಬಿಗ್ ಪ್ಲೇಯರ್ ಗಳನ್ನು ಸ್ಥಾಪಿಸಿದೆ. ಯಾವಾಗಲೂ ಕೂಡ ವೈಡ್ ರೇಂಜಿನ ಪ್ರೊಡಕ್ಟ್ ಗಳನ್ನು ಆಫರ್ ಮಾಡಿದೆ. ಸ್ಮಾರ್ಟ್ ಫೋನ್ ಗಳು, ಟಿವಿಗಳು ಸೇರಿದಂತೆ ಹಲವಾರು ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಎಲ್ ಜಿ ಸಂಸ್ಥೆ ತಯಾರಿಸುತ್ತದೆ. ನಾವಿಲ್ಲಿ ಸ್ಮಾರ್ಟ್ ಟಿವಿಗಳ ಬಗ್ಗೆ ಹೇಳುವಾಗ ಖಂಡಿತ ಎಲ್ ಜಿ ಸಂಸ್ಥೆಯನ್ನು ಹಿಂದೆ ಸರಿಸುವಂತಿಲ್ಲ. ನಾಲ್ಕನೇ ಅತ್ಯುದ್ಭುತ ಸ್ಮಾರ್ಟ್ ಟಿವಿಗಳ ಪಟ್ಟಿಯಲ್ಲಿ ಸೇರಿಕೊಳ್ಳುವುದು ಎಲ್ ಜಿ ಸಂಸ್ಥೆಯ ಎಲ್ ಜಿ B8 OLED ಸ್ಮಾರ್ಟ್ ಟಿವಿ.

ಎಲ್ ಜಿ B8 OLED ಸ್ಮಾರ್ಟ್ ಟಿವಿಯು ಮೊದಲ ಬಾರಿಗೆ CES 2018 ರಲ್ಲಿ ಎಲ್ ಜಿ ಸಂಸ್ಥೆ ಪ್ರಕಟಿಸಿತ್ತು.ಈ ಟಿವಿಯು ಸ್ಲೀಕ್ ಡಿಸೈನ್ ನ್ನು ಹೊಂದಿದ್ದು ಎರಡು ಸೈಜ್ ನಲ್ಲಿ ಲಭ್ಯವಾಗುತ್ತದೆ- 55-ಇಂಚು ಮತ್ತು65-ಇಂಚಿನ ಡಿಸ್ಪ್ಲೆ ಪೆನಲ್. ಉತ್ತಮ ವೀಡಿಯೋ ಅನುಭವವನ್ನು ನೀಡುವುದಕ್ಕಾಗಿ ಇದರಲ್ಲಿ WebOS AI ThinQ ಅನೇಬಲ್ ಆಗಿದೆ ಮತ್ತು ಎಲ್ ಜಿ B8 OLED ಟಿವಿ HDR10 ಣತ್ತು Dolby ವಿಷನ್ ಕಟೆಂಟ್ ನ್ನು ಬೆಂಬಲಿಸುತ್ತದೆ. ಥರ್ಡ್ ಪಾರ್ಟಿ ಸ್ಟ್ರೀಮಿಂಗ್ ಸೇವೆಯನ್ನು ಇದು ಬೆಂಬಲಿಸುತ್ತದೆ ಅದರಲ್ಲಿ ಅಮೇಜಾನ್ ಪ್ರೈಮ್ ವೀಡಿಯೋ, ನೆಟ್ ಫ್ಲಿಕ್ಸ್, ಯುಟ್ಯೂಬ್ ಮತ್ತು ಇತರೆ ಹಲವು ಸೇರಿಕೊಂಡಿದೆ.

ಸ್ಯಾಮ್ ಸಂಗ್ QLED (NU800)

ಸ್ಯಾಮ್ ಸಂಗ್ QLED (NU800)

ಅಂತಿಮವಾದಿ ಲಿಸ್ಟ್ ನ 5 ಸ್ಥಾನ ಪುನಃ ಸ್ಯಾಮ್ ಸಂಗ್ ಗೆ ಸೇರುತ್ತದೆ ಅದುವೇ ಸ್ಯಾಮ್ ಸಂಗ್ QLED (NU800). ಅಲ್ಟ್ರಾ ಸ್ಲಿಮ್ ಟಿವಿ ಆಗಿರುವ ಇದು ಫ್ರೇಮ್ ಲೆಸ್ ಡಿಸೈನ್ ನ್ನು ಹೊಂದಿದೆ ಮತ್ತು 4ಕೆ ರೆಸಲ್ಯೂಷನ್ ಗೆ ಬೆಂಬಲ ನೀಡುತ್ತದೆ. 65-ಇಂಚಿನ UHD ಸ್ಕ್ರೀನ್ ಗರಿಷ್ಟ ರೆಸಲ್ಯೂಷನ್ ನ್ನು ಹೊಂದಿದ್ದು 2160 x 3180 ಪಿಕ್ಸಲ್ ಸಾಮರ್ಥ್ಯದ್ದಾಗಿದೆ.ಇದು QLED ಡಿಸ್ಪ್ಲೇ ಪೆನಲ್ ನ್ನು ಹೊಂದಿದ್ದು HDR10 ಮೋಡ್ ಗೆ ಬೆಂಬಲ ನೀಡುತ್ತದೆ ಮತ್ತು ಇಮರ್ಸೀವ್ ವ್ಯೂವಿಂಗ್ ಅನುಭವದ ಜೊತೆಗೆ ಬ್ರೈಟ್ ಮತ್ತು ಕ್ರಿಸ್ಪ್ ಕಲರ್ ಗೆ ಬೆಂಬಲ ನೀಡುತ್ತದೆ. ಇತರೆ ಸ್ಮಾರ್ಟ್ ಟಿವಿಗಳಂತೆ ಇದು ಕೂಡ ಅಂತರ್ಜಾಲ ಸಂಪರ್ಕಕ್ಕೆ ಬೆಂಬಲ ನೀಡುತ್ತದೆ, ಥರ್ಡ್ ಪಾರ್ಟಿ ಆಪ್ ಗಳು ಉದಾಹರಣೆಗೆ ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ವೀಡಿಯೋ, ಯುಟ್ಯೂಬ್ ಮತ್ತು ಫೇಸ್ ಬುಕ್ ಸೇರಿದಂತೆ ಇತ್ಯಾದಿಗಳಿಗೆ ಬೆಂಬಲ ನೀಡುತ್ತದೆ.

ತೀರ್ಪು

ಮೇಲಿನ ಎಲ್ಲಾ ಸ್ಮಾರ್ಟ್ ಟಿವಿಗಳು 2018 ರಲ್ಲಿ ಆರಿಸಬಹುದಾದ ಸ್ಮಾರ್ಟ್ ಟಿವಿಗಳಾಗಿದೆ. ನೀವು ಕೂಡ ಮನರಂಜನೆಯ ಪ್ರೇಮಿಯಾಗಿದ್ದಲ್ಲಿ ಖಂಡಿತ ಬಿಗ್ ಸ್ಕ್ರೀನ್ ಟಿವಿಗಳು ಉತ್ತಮ ಆಯ್ಕೆಯಾಗಿರುತ್ತದೆ. ಉತ್ತಮ ಫೀಚರ್ ಗಳು, ಬೆಸ್ಟ್ ಡಿಸ್ಪ್ಲೇಗಳು ಸೇರಿದಂತೆ ಹಲವು ಲಾಭಗಳನ್ನು ನೀಡುವ ಈ ಟಿವಿಗಳು ಈ ವರ್ಷದಲ್ಲಿ ನಿಮ್ಮ ಆಯ್ಕೆಯಾಗಿದ್ದಲ್ಲಿ ಖಂಡಿತ ಅದು ಬೆಸ್ಟ್ ಆಯ್ಕೆಯೇ ಆಗಿದೆ ಎಂದರ್ಥ.

Best Mobiles in India

Read more about:
English summary
The top five smart TVs of 2018 comes from Samsung, Philips, Xiaomi and LG. The top five smart TVs of 2018 packs some nifty features and useful functions allowing them to deliver an immersive viewing experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X