2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಬಾರಿ ರೀಟ್ವೀಟ್‌ ಮಾಡಿದ ಟ್ವೀಟ್‌ ಯಾವುದು ಗೊತ್ತಾ?

|

ಪ್ರಸ್ತುತ ನಾವು ವರ್ಷದ ಕೊನೆಯ ತಿಂಗಳ ಡಿಸೆಂಬರ್‌ನಲ್ಲಿದ್ದೇವೆ ಇನ್ನೇನು ಕೆಲವೇ ದಿನಗಳಲ್ಲಿ 2021ಕ್ಕೆ ಬಾಯ್‌ ಹೇಳಿ 2022ಕ್ಕೆ ಹಾಯ್‌ ಹೇಳುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಈ ಸಂದರ್ಭದಲ್ಲಿ 2021ರಲ್ಲಿ ಏನೆಲ್ಲಾ ನಡೆಯಿತು ಅನ್ನೊದನ್ನ ಎಲ್ಲರು ನೆನಪಿಸಿಕೊಳ್ಳುವುದು ಸಾಮಾನ್ಯ. ಕಳೆದ ಒಂದು ವರ್ಷದಲ್ಲಿ ಕೊರೊನಾ ಎರಡನೇ ಅಲೆಯ ನಡುವೆ ಸಾಕಷ್ಟು ಖುಷಿ ಸಂಗತಿಗಳು ಕೂಡ ದೇಶದಲ್ಲಿ ನಡೆದಿವೆ. ಹಾಗೆಯೇ ಕೆಲವು ದುರಂತಗಳಿಗೂ ಕೂಡ ಈ ವರ್ಷ ಕಾರಣವಾಗಿದೆ. ಇನ್ನು ಈ ವರ್ಷ ಟ್ವಿಟರ್‌ನಲ್ಲಿ ಯಾವ ಟ್ವೀಟ್‌ಗಳು ಅಗ್ರಸ್ಥಾನ ಪಡೆದಿವೆ ಅನ್ನೊದು ಕೂಡ ಕುತೂಹಲಕರವಾಗಿದೆ.

ಟ್ವೀಟ್‌ಗಳು

ಹೌದು, 2021ರಲ್ಲಿ ಯಾವ ಟ್ವೀಟ್‌ಗಳು ಅಗ್ರಸ್ಥಾನ ಪಡೆದುಕೊಂಡಿವೆ ಅನ್ನೊದನ್ನ Twitter ಬಹಿರಂಗಪಡಿಸಿದೆ. 2021ರಲ್ಲಿ ಯಾವ ವಿಚಾರವಾಗಿ ಹೆಚ್ಚಿನ ಟ್ವೀಟ್‌ಗಳ ಸದ್ದು ಮಾಡಿ, ಯಾವ ವಿಚಾರ ಸಾಕಷ್ಟು ಟ್ರೆಂಡಿಂಗ್‌ನಲ್ಲಿತ್ತು ಎಂಬ ವಿಚಾರವನ್ನು ಟ್ವಿಟರ್‌ ಬಹಿರಂಗ ಪಡಿಸಿದೆ. ಈ ವರ್ಷ ಅತಿಹೆಚ್ಚು ಇಷ್ಟಪಟ್ಟ ಟ್ವೀಟ್, ಹೆಚ್ಚು ರೀಟ್ವೀಟ್ ಮಾಡಲಾದ ಟ್ವೀಟ್ ಮತ್ತು ವ್ಯಾಪಾರ, ಕ್ರೀಡೆ, ಮನರಂಜನೆ ಮುಂತಾದ ವಿವಿಧ ವಿಭಾಗಗಳಲ್ಲಿ ಯಾವ ಟ್ವೀಟ್‌ಗಳು ಟಾಪ್‌ ಸ್ಥಾನ ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅತಿ ಹೆಚ್ಚು ಲೈಕ್ಸ್‌ ಪಡೆದ ಟ್ವೀಟ್

ಅತಿ ಹೆಚ್ಚು ಲೈಕ್ಸ್‌ ಪಡೆದ ಟ್ವೀಟ್

2021ರಲ್ಲಿ ಅತಿ ಹೆಚ್ಚು ಲೈಕ್‌ ಪಡೆದ ಟ್ವೀಟ್‌ ಎಂದರೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್‌ ಅನ್ನೊದು ಗಮನಾರ್ಹ. ವಿರಾಟ್‌ ಕೋಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಮಗುವಿನ ಬಗ್ಗೆ ಮಾಡಿದ ಟ್ವೀಟ್‌ ಇದಾಗಿದೆ. ಕೋಹ್ಲಿ ತಮ್ಮ ಮಗಳ ಆಗಮನವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು, ಇದು 2021 ರಲ್ಲಿ ಭಾರತದಿಂದ ಹೆಚ್ಚು ಲೈಕ್ಸ್‌ ಪಡೆದ ಟ್ವೀಟ್ ಆಗಿದೆ. ಕೊಹ್ಲಿಯ ಈ ಟ್ವೀಟ್‌ಗೆ 539.1K ಲೈಕ್‌ಗಳು ಮತ್ತು 50.4K ರೀಟ್ವೀಟ್‌ಗಳು ಬಂದಿವೆ.

ಅತಿ ಹೆಚ್ಚು ರೀಟ್ವೀಟ್ ಮಾಡಿದ ಟ್ವೀಟ್

ಅತಿ ಹೆಚ್ಚು ರೀಟ್ವೀಟ್ ಮಾಡಿದ ಟ್ವೀಟ್

ಇನ್ನು ಭಾರತದಲ್ಲಿ ಅತಿ ಹೆಚ್ಚು ರೀಟ್ವೀಟ್‌ ಪಡೆದ ಟ್ವೀಟ್‌ ಆಸ್ಟ್ರೇಲಿಯನ್ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಅವರ ಟ್ವೀಟ್‌ ಎಂದರೆ ನಿಮಗೆ ಅಚ್ಚರಿ ಆಗೋದು ಖಂಡಿತ. ಹೌದು, ಆಸ್ಟ್ರೇಲಿಯನ್‌ ಕ್ರಿಕೆಟಿಗ ಪ್ಯಾಟ್‌ ಕಮ್ಮಿನ್ಸ್‌ ಭಾರತದಲ್ಲಿ ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಸಹಾಯ ಮಾಡಿದ್ದರ ಬಗ್ಗೆ ಮಾಡಿದ ಟ್ವೀಟ್‌ ಆಗಿದೆ. ಈ ಟ್ವೀಟ್ ಈ ವರ್ಷದಲ್ಲಿ ಅತಿ ಹೆಚ್ಚು ರಿಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಇನ್ನು ಈ ಟ್ವೀಟ್ 488.1K ಲೈಕ್ಸ್‌ ಮತ್ತು 114.1K ರಿಟ್ವೀಟ್‌ಗಳನ್ನು ಪಡೆದುಕೊಂಡಿದೆ. ಕಮ್ಮಿನ್ಸ್ ಟ್ವೀಟ್ ವರ್ಷದ ಅತಿ ಹೆಚ್ಚು ಕೋಟ್ ರಿಟ್ವೀಟ್ ಮಾಡಿದ ಟ್ವೀಟ್ ಆಗಿದೆ.

ಟಾಪ್ ಟ್ವೀಟ್‌ಗಳು

ಟಾಪ್ ಟ್ವೀಟ್‌ಗಳು

ಇನ್ನು ಈ ವರ್ಷ ಆಸ್ಟ್ರೇಲಿಯಾದ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಟೆಸ್ಟ್ ಗೆಲುವಿಗಾಗಿ ಟೀಂ ಇಂಡಿಯಾವನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಸರ್ಕಾರಿ ವಿಭಾಗದಲ್ಲಿ ಹೆಚ್ಚು ಲೈಕ್ಸ್‌ ಪಡೆದ ಟ್ವೀಟ್ ಆಗಿದೆ. ಆದರೆ ಮೋದಿ ಅವರು ಮೊದಲ ಕೋವಿಡ್ ವ್ಯಾಕ್ಸಿನ್‌ ಪಡೆಯುವಾಗ ತೆಗೆದ ಚಿತ್ರವನ್ನು ಹಂಚಿಕೊಂಡ ಟ್ವೀಟ್ ಹೆಚ್ಚು ಮರುಟ್ವೀಟ್ ಆಗಿದೆ.

ವ್ಯಾಪಾರ ವಿಭಾಗದಲ್ಲಿ ಟಾಪ್‌ ಟ್ವೀಟ್‌

ವ್ಯಾಪಾರ ವಿಭಾಗದಲ್ಲಿ ಟಾಪ್‌ ಟ್ವೀಟ್‌

ರತನ್‌ ಟಾಟಾ ಅವರು ಮಾಡಿದ ಟ್ವೀಟ್‌ ವ್ಯಾಪಾರ ವಿಭಾಗದಲ್ಲಿ ಅತಿ ಹೆಚ್ಚು ಬಾರಿ ಮಾಡಿದ ಟ್ವೀಟ್‌ ಆಗಿ ಗುರುತಿಸಿಕೊಂಡಿದೆ. ಸುಮಾರು ಎಪ್ಪತ್ತು ವರ್ಷಗಳ ನಂತರ ಸರ್ಕಾರಿ ಸ್ವಾಮ್ಯದ ಏರ್‌ಲೈನ್ಸ್‌ನ ಅನ್ನು ಟಾಟಾ ಸನ್ಸ್‌ ಮರಳಿ ಪಡೆದುಕೊಂಡ ಖುಷಿಯ ವಿಚಾರದ ಟ್ವೀಟ್‌ ಇದಾಗಿದೆ. ರತನ್ ಟಾಟಾ ಅವರ ಟ್ವೀಟ್ ಬ್ಯುಸಿನೆಸ್‌ ವಿಭಾಗದಲ್ಲಿ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಆಗಿದೆ.

ಎಂಟರ್‌ಟೈನ್‌ಮೆಂಟ್‌

ಎಂಟರ್‌ಟೈನ್‌ಮೆಂಟ್‌

ಟ್ವಿಟರ್‌ನಲ್ಲಿ ಎಂಟರ್‌ಟೈನ್‌ಮೆಂಟ್‌ ವಿಭಾಗಕ್ಕೆ ಸಂಬಂಧಿಸಿದ ವಿಚಾರಗಳು ಸಾಖಷ್ಟು ಟ್ರೆಂಡಿಂಗ್‌ನಲ್ಲಿರುತ್ತವೆ. ಬಾಲಿವುಡ್‌ ಸೇರಿದಂತೆ ಭಾರತದ ಚಿತ್ರರಂಗದ ವಿಚಾರಗಳು ಟ್ವಿಟರ್‌ನಲ್ಲಿ ಯಾವಾಗಲೂ ಟ್ರೆಂಡಿಂಗ್‌ನಲ್ಲಿರುತ್ತವೆ. ಇನ್ನು ಈ ವರ್ಷ ಎಂಟರ್‌ಟೈನ್‌ಮೆಂಟ್‌ ವಿಭಾಗದಲ್ಲಿ ಅತಿ ಹೆಚ್ಚು ಲೈಕ್ಸ್‌ ಪಡೆದ ಟ್ವೀಟ್‌ ಎಂದರೆ ಅದು ತಮಿಳು ನಟ ವಿಜಯ್ ಮಾಡಿದ ಟ್ವೀಟ್‌ ಆಗಿದೆ. ತಮಿಳು ನಟ ವಿಜಯ್‌ ತಮ್ಮ ಬಹು ನಿರೀಕ್ಷಿತ ಚಲನಚಿತ್ರ ಬೀಸ್ಟ್‌ನ ಫಸ್ಟ್‌ಲುಕ್‌ಗೆ ಸಂಬಂಧಿಸಿದ ವಿಚಾರವನ್ನು ಟ್ವೀಟ್‌ ಮಾಡಿದ್ದರು, ಎಂಟರ್‌ಟೈನ್‌ಮೆಂಟ್ ವಿಭಾಗದಲ್ಲಿ ಹೆಚ್ಚು ಲೈಕ್ಸ್‌ ಪಡೆದ ಮತ್ತು ರಿಟ್ವೀಟ್ ಮಾಡಿದ ಟ್ವೀಟ್ ಆಗಿದೆ.

ಸ್ಪೋರ್ಟ್ಸ್‌ ವಿಭಾಗದಲ್ಲಿ

ಸ್ಪೋರ್ಟ್ಸ್‌ ವಿಭಾಗದಲ್ಲಿ

ಭಾರತದಲ್ಲಿ ಕ್ರೀಡೆ ಅಂತಾ ಬಂದಾಗ ಕ್ರಿಕೆಟ್‌ ವಿಚಾರ ಸಾಕಷ್ಟು ಟ್ರೆಂಡಿಂಗ್‌ನಲ್ಲಿರುತ್ತೆ. ಅದರಂತೆ ಈ ವರ್ಷವೂ ಕೂಡ ಕ್ರಿಕೆಟ್‌ಗೆ ಸಂಬಂಧಿಸಿದ ಟ್ವೀಟ್‌ ಸ್ಪೋರ್ಟ್ಸ್‌ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಎಂಎಸ್ ಧೋನಿ ಅಂತಿಮ ಓವರ್‌ನಲ್ಲಿ ಪಂದ್ಯವನ್ನು ಗೆಲ್ಲಿಸಿದರ ಬಗ್ಗೆ ವಿರಾಟ್ ಕೊಹ್ಲಿ ಮೆಚ್ಚುಗೆ ಸೂಚಿಸಿ ಮಾಡಿದ ಟ್ವೀಟ್‌ ಕ್ರೀಡಾ ವಿಭಾಗದಲ್ಲಿ ಹೆಚ್ಚು ಇಷ್ಟಪಟ್ಟ ಮತ್ತು ಮರುಟ್ವೀಟ್ ಮಾಡಿದ ಟ್ವೀಟ್ ಆಗಿದೆ.

ಹೆಚ್ಚು ಟ್ವೀಟ್ ಮಾಡಿದ ಎಮೋಜಿಗಳು

ಹೆಚ್ಚು ಟ್ವೀಟ್ ಮಾಡಿದ ಎಮೋಜಿಗಳು

ಭಾರತದಲ್ಲಿ 2021 ರ ಅತಿ ಹೆಚ್ಚು ಟ್ವೀಟ್ ಮಾಡಿದ ಎಮೋಜಿಗಳ ಸಾಲಿನಲ್ಲಿ ಕೈ ಮುಗಿಯುವ ಎಮೋಜಿಯು ಟಾಪ್‌ನಲ್ಲಿದೆ. ವರ್ಷದ ಅತಿ ಹೆಚ್ಚು ಟ್ವೀಟ್ ಮಾಡಿದ ಎಮೋಜಿಯಾಗಿದೆ. ಅದರ ನಂತರ ನಗುವ ಮತ್ತು ಬೆಂಕಿಯ ಎಮೋಜಿಗಳು ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಟ್ವೀಟ್ ಮಾಡಿದ ಇತರ ಎರಡು ಎಮೋಜಿಗಳಾಗಿವೆ. ಲವ್ ಕಣ್ಣುಗಳು ಮತ್ತು ಥಂಬ್ಸ್ ಅಪ್ ಕೂಡ ಈ ವರ್ಷ ಹೆಚ್ಚು ಟ್ವೀಟ್ ಮಾಡಿದ ಐದು ಎಮೋಜಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿವೆ.

ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳು

ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳು

ಇದಲ್ಲದೆ Twitter ನಲ್ಲಿನ ಸಂಭಾಷಣೆಗಳನ್ನು ಹ್ಯಾಶ್‌ಟ್ಯಾಗ್‌ಗಳಿಂದ (#s) ಒಟ್ಟಿಗೆ ಜೋಡಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳ ವಿಭಾಗದಲ್ಲಿ #Covid19, #Afghanistan, #CGL19marks, #IndianArmy ಮತ್ತು #Uttarakhand ಜನರು ಟ್ವೀಟ್ ಮಾಡಿದ ಅತ್ಯಂತ ಜನಪ್ರಿಯ ವಿಷಯಗಳಾಗಿವೆ. ಇನ್ನು ಸಂಸ್ಕೃತಿ ವಿಭಾಗದಲ್ಲಿ, #ದೀಪಾವಳಿ, #EidMubarak, #RepublicDay, #IndependenceDay ಮತ್ತು #InternationalWomensDay ಹ್ಯಾಶ್‌ಟ್ಯಾಗ್‌ಗಳನ್ನು ಹೆಚ್ಚು ಬಳಸಲಾಗಿದೆ.

Best Mobiles in India

Read more about:
English summary
Check out the top tweets and hashtags in India 2021 across various categories.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X