ಗೂಗಲ್‌ ಕ್ಯಾಂಪಸ್‌ ನೇಮಕಾತಿಗೆ ಎನ್‌ಐಟಿಗಳಲ್ಲಿ ಜಾಗವಿಲ್ಲ..!

By Gizbot Bureau
|

ಕ್ಯಾಂಪಸ್ ಸಂದರ್ಶನಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಗೂಗಲ್ ಕನಿಷ್ಠ ಎರಡು ವಾರ ಸಮಯ ಕೇಳಿದ್ದರಿಂದ ಈ ವರ್ಷ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಲ್ಲಿ ಗೂಗಲ್‌ ನೇಮಕಾತಿ ನಡೆಯುವುದು ಅನುಮಾನವಾಗಿದೆ. ಐಐಟಿ ವಿದ್ಯಾರ್ಥಿಗಳಿಗೆ ಉನ್ನತ ಸಂಭಾವನೆ ನೀಡುವ ಗೂಗಲ್, ಸೂರತ್‌ಕಲ್, ತಿರುಚ್ಚಿ ಮತ್ತು ವಾರಂಗಲ್ ಎನ್‌ಐಟಿಗಳಲ್ಲಿ ಅಂತಿಮ ನೇಂಕಾತಿ ಹಂತದಲ್ಲಿ ಮೊದಲ ದಿನದ ಅವಧಿಯನ್ನು ಕೇಳಿದೆ. ಆದರೆ, ಗೂಗಲ್‌ನ ಹೊಸ ನೀತಿ ವಿದ್ಯಾರ್ಥಿಗಳಿಗೆ ಮುಳುವಾಗುವುದರಿಂದ ಎನ್‌ಐಟಿಗಳು ತಮ್ಮ ನೇಮಕಾತಿ ನೀತಿಯನ್ನು ಬದಲಾಯಿಸುವುದಿಲ್ಲವೆಂದು ಹೇಳಿವೆ.

ಸಂದರ್ಶನ ದಿನವೇ ಫಲಿತಾಂಶ

ಸಂದರ್ಶನ ದಿನವೇ ಫಲಿತಾಂಶ

ಫೈನಲ್‌ ನೇಮಕಾತಿಯಲ್ಲಿ ಭಾಗವಹಿಸುವ ಕಂಪನಿಗಳು ಸಾಮಾನ್ಯವಾಗಿ ಸಂದರ್ಶನದ ದಿನದಂದೇ ಫಲಿತಾಂಶಗಳನ್ನು ಪ್ರಕಟಿಸುತ್ತವೆ. ಅದಲ್ಲದೇ, ಅಭ್ಯರ್ಥಿಗಳಿಗೆ ಇತರ ನೇಮಕಾತಿದಾರರು ನಡೆಸುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಆದರೆ, ಗೂಗಲ್‌ಗೆ ಈ ವಿನಾಯಿತಿಯನ್ನು ನೀಡಲು ಎನ್‌ಐಟಿಗಳು ನಿರಾಕರಿಸಿವೆ. ಫಲಿತಾಂಶಗಳನ್ನು ಬಹಿರಂಗಪಡಿಸಲು ಗೂಗಲ್ ಒಂದೆರಡು ವಾರಗಳ ಸಮಯವನ್ನು ಕೇಳುತ್ತಿದೆ. ನೈಜವಾಗಿ ಈ ಪ್ರಕ್ರಿಯೆ ಯಾವುದೇ ಐಐಟಿಗಳಲ್ಲಿ ಇಲ್ಲ. ಆದರೆ, ಎನ್‌ಐಟಿಗಳಲ್ಲಿ ಏಕೆ ಬೇಕು..? ಎಂದು ತಿರುಚ್ಚಿ ಎನ್‌ಐಟಿಯ-ನಿಯೋಜನೆಗಳ ಮುಖ್ಯಸ್ಥ ಎ.ಕೆ.ಭಕ್ತವತ್ಸಲಂ ಹೇಳುತ್ತಾರೆ.

ಗೂಗಲ್‌ ನೀತಿಯಿಂದ ಆತಂಕ

ಗೂಗಲ್‌ ನೀತಿಯಿಂದ ಆತಂಕ

ಒಂದು ವೇಳೆ ಕಂಪನಿಯು ವಿದ್ಯಾರ್ಥಿಯನ್ನು ನೇಮಕ ಮಾಡಿಕೊಳ್ಳದಿದ್ದರೆ, ಆ ವಿದ್ಯಾರ್ಥಿ ಇತರ ಉನ್ನತ ನೇಮಕಾತಿ ಅವಕಾಶವನ್ನು ಕಳೆದುಕೊಳ್ಳುತ್ತಾನೆ ಎಂದು ಉದ್ಯೋಗ ಅಧಿಕಾರಿಗಳು ತಿಳಿಸಿದ್ದಾರೆ. ಸಂದರ್ಶನ ಮತ್ತು ಫಲಿತಾಂಶಗಳ ನಡುವೆ ಎಂದಿಗೂ ದೀರ್ಘ ಅಂತರವಿರಲಿಲ್ಲ ಎಂದು ಭಕ್ತವತ್ಸಲಂ ಹೇಳಿದ್ದಾರೆ. ಹೆಚ್ಚಿನ ಎನ್‌ಐಟಿಗಳಂತೆ, ತಿರುಚ್ಚಿಯಲ್ಲಿನ ಎನ್‌ಐಟಿಯು ಆಗಸ್ಟ್ ಮಧ್ಯಭಾಗದಲ್ಲಿ ತನ್ನ ಪ್ಲೇಸ್‌ಮೆಂಟ್‌ನ್ನು ಪ್ರಾರಂಭಿಸಿತು. ಮೊದಲ ದಿನ ಅಮೆಜಾನ್, ಮೈಕ್ರೋಸಾಫ್ಟ್, ಗೋಲ್ಡ್ಮನ್ ಸ್ಯಾಚ್ಸ್, ಡಿಇ ಶಾ ಮತ್ತು ಊಬರ್‌ನಂತ ದೊಡ್ಡ ಕಂಪನಿಗಳು ನೇಮಕಾತಿದಾರರ ಪಟ್ಟಿಯಲ್ಲಿದ್ದವು. ಈ ಹಿಂದೆ, ಗೂಗಲ್ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು 25 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗೂ ವೇತನ ನೀಡಿ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಂಡಿತ್ತು.

ಈ ವರ್ಷವೂ ನೇಮಕ

ಈ ವರ್ಷವೂ ನೇಮಕ

ನಾವು ಕಳೆದ ವರ್ಷ ಭಾರತದಾದ್ಯಂತ ಟೆಕ್ ಕ್ಯಾಂಪಸ್‌ಗಳಿಂದ ನೇಮಕ ಮಾಡಿಕೊಂಡಿದ್ದೇವೆ ಮತ್ತು ಮುಂಬರುವ ವರ್ಷದಲ್ಲಿ ಮತ್ತೆ ನೇಮಕಾತಿ ಮಾಡಿಕೊಳ್ಳುತ್ತೇವೆ. ಅವರು ಯಾವ ಕಾಲೇಜಿನಿಂದ ಬಂದರೂ ನಮ್ಮ ಮಾರ್ಗದರ್ಶಿ ಮಾನದಂಡ ಉತ್ತಮ ಪ್ರತಿಭೆಯಾಗಿದೆ. ಕಿಕ್‌ಸ್ಟಾರ್ಟ್ ಅನ್ನು ಯಶಸ್ವಿಯಾಗಿ ತೆರವುಗೊಳಿಸಿದ ಎಲ್ಲ ಅಭ್ಯರ್ಥಿಗಳಿಗೂ ನಮ್ಮೊಂದಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ಗೂಗಲ್ ಇಂಡಿಯಾದ ಟೆಕ್ ಪೀಪಲ್ ಪಾರ್ಟನರ್‌ ಜಯಶ್ರೀ ರಾಮಮೂರ್ತಿ ಹೇಳಿದ್ದಾರೆ. ಕಿಕ್‌ಸ್ಟಾರ್ಟ್‌ ಪರೀಕ್ಷೆ ಕಂಪನಿಯ ಆರಂಭಿಕ ಮಟ್ಟದ ಸ್ಕ್ರೀನಿಂಗ್ ಪರೀಕ್ಷೆಗಳಲ್ಲಿ ಒಂದಾಗಿದೆ.

ನಮ್ಮ ನೀತಿಯಲ್ಲಿ ಬದಲಾವಣೆ ಇಲ್ಲ

ನಮ್ಮ ನೀತಿಯಲ್ಲಿ ಬದಲಾವಣೆ ಇಲ್ಲ

ಮೊದಲ ದಿನವೇ ಸ್ಥಳಾವಕಾಶ ಕಲ್ಪಿಸಲು ಸಿದ್ಧರಿದ್ದೇವು. ಆದರೆ, ಕಂಪನಿಯ ಆಂತರಿಕ ನೀತಿಯಿಂದಾಗಿ, ನೇಮಕಾತಿ ಕಾರ್ಯಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂದು ವಾರಂಗಲ್‌ ಎನ್ಐಟಿಯ ನಿಯೋಜನೆಗಳ ಮುಖ್ಯಸ್ಥ ಚಿಂತಮ್ ವೆಂಕಯ್ಯ ಹೇಳಿದ್ದಾರೆ. ತ್ರಿಚಿ, ವಾರಂಗಲ್ ಮತ್ತು ಸೂರತ್ಕಲ್ ಎನ್‌ಐಟಿಗಳು ನೇಮಕಾತಿಗೆ ಹೆಚ್ಚು ಬೇಡಿಕೆ ಹೊಂದಿವೆ. ಗೂಗಲ್ ಫೈನಲ್‌ ಪ್ಲೇಸ್‌ಮೆಂಟ್‌ಗೆ ಭೇಟಿ ನೀಡಲು ಬಯಸಿದೆ. ಆದರೆ, ನಮ್ಮ ಉದ್ಯೋಗ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ನಾವು ಬಯಸಲ್ಲ ಎಂದು ಸೂರತ್ಕಲ್ ಎನ್ಐಟಿಯ ವೃತ್ತಿಜೀವನ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ವಿಜಯ್ ದೇಸಾಯಿ ಹೇಳಿದ್ದಾರೆ.

ಪ್ರಮುಖ ನೇಮಕಾತಿ

ಪ್ರಮುಖ ನೇಮಕಾತಿ

ಕ್ಯಾಂಪಸ್‌ನಲ್ಲಿ ಗೂಗಲ್‌ ಪ್ಲೇಸ್‌ಮೆಂಟ್‌ ಉನ್ನತ ನೇಮಕಾತಿಯಾಗಿದ್ದು, ಉತ್ತಮ ಪ್ರಯತ್ನಗಳ ಹೊರತಾಗಿಯೂ ಈ ವರ್ಷ ಗೂಗಲ್‌ ಕ್ಯಾಂಪಸ್‌ ಸೆಲೆಕ್ಷನ್ ನಮ್ಮ ಕೈತಪ್ಪಿದೆ ಎಂದು ವಾರಂಗಲ್‌ ಎನ್‌ಐಟಿಯ ವೆಂಕಯ್ಯ ಹೇಳಿದ್ದಾರೆ. 2016ರಲ್ಲಿ, ಸುಮಾರು ಒಂದು ದಶಕದ ನಂತರ ಐಐಟಿಗಳಲ್ಲಿ ಪ್ಲೇಸ್‌ಮೆಂಟ್ ಪ್ರಕ್ರಿಯೆಯನ್ನು ಗೂಗಲ್‌ ಪ್ರಾರಂಭಿಸಿತ್ತು. ನಂತರ 2018ರಲ್ಲಿ ಪ್ರಧಾನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಗೂಗಲ್‌ ಪ್ಲೇಸ್‌ಮೆಂಟ್‌ ಪುನಃ ಪ್ರಾರಂಭವಾಯಿತು.

ಎನ್‌ಐಟಿ ಸಂಪರ್ಕಿಸದ ಗೂಗಲ್‌

ಎನ್‌ಐಟಿ ಸಂಪರ್ಕಿಸದ ಗೂಗಲ್‌

ಫೈನಲ್‌ ಪ್ಲೇಸ್‌ಮೆಂಟ್‌ಗಾಗಿ ಗೂಗಲ್ ಜೈಪುರ ಮತ್ತು ಜಲಂಧರ್‌ ಎನ್‌ಐಟಿಗಳನ್ನು ಇನ್ನು ಸಂಪರ್ಕಿಸಿಲ್ಲ. ಈ ವರ್ಷ ಗೂಗಲ್ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಜಲಂಧರ್‌ನ ಬಿ.ಆರ್.ಅಂಬೇಡ್ಕರ್ ಎನ್ಐಟಿಯಲ್ಲಿ ನಿಯೋಜನೆ ಉಸ್ತುವಾರಿ ಎಸ್.ಘೋಷ್ ಹೇಳಿದ್ದಾರೆ. ಎನ್ಐಟಿಗಳಲ್ಲಿ ಪ್ಲೇಸ್‌ಮೆಂಟ್‌ ಋತು ಸಾಮಾನ್ಯವಾಗಿ ಜುಲೈ, ಆಗಸ್ಟ್‌ನಲ್ಲಿ ಪ್ರಾರಂಭವಾಗಿ ಹೊಸ ವರ್ಷದ ಆರಂಭದವರೆಗೆ ಮುಂದುವರಿಯುತ್ತದೆ.

Most Read Articles
Best Mobiles in India

Read more about:
English summary
These Engineering Colleges Don't Want Google To Recruit Its Students

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more