Just In
Don't Miss
- News
ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್ ಬಗ್ಗೆ ಭಾರೀ ಮೆಚ್ಚುಗೆ!
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
UPI ಮೂಲಕ ಹಣ ವರ್ಗಾವಣೆ ಮಾಡುವಾಗ ಈ ಸಂಗತಿ ನಿಮಗೆ ತಿಳಿದಿರಲಿ!
ಸದ್ಯ ಡಿಜಿಟಲ್ ಪಾವತಿ ವಿಧಾನ ಹೆಚ್ಚು ಮುನ್ನಲೆಯಲ್ಲಿದೆ. ಯುಪಿಐ ಅಪ್ಲಿಕೇಶನ್‌ಗಳು ಅದಕ್ಕೆ ಪೂರಕವಾಗಿ ಸಾಥ್ ನೀಡುತ್ತಿವೆ. ಯುಪಿಐ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿ, ಹಣ ಸ್ವೀಕರಿಸುವುದು ಬಹಳ ಸುರಕ್ಷಿತವಾಗಿದೆ. ಅದಾಗ್ಯೂ, ಕೆಲವೊಮ್ಮೆ ಸ್ಕ್ಯಾಮರ್‌ಗಳು ಬಳಕೆದಾರರ ಯುಪಿಐ (UPI) ಖಾತೆಗಳನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಕೆಲವು ವಂಚನೆಯ ಮಾರ್ಗಗಳ ಮೂಲಕ ಮೋಸ ಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವಾಗ ಎಚ್ಚರ, ಎಚ್ಚರ, ಎಚ್ಚರ.!

ಹೌದು, ಯುಪಿಐ ಮೂಲಕ ಹಣ ವರ್ಗಾವಣೆ ಸುಲಭ ಹಾಗೂ ಸುರಕ್ಷಿತವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಯುಪಿಐ ಅಪ್ಲಿಕೇಶನ್ ಗಳು ಬಳಕೆಗೆ ಲಭ್ಯ ಇವೆ. ಅವುಗಳಲ್ಲಿ ಮುಖ್ಯವಾಗಿ ಫೋನ್‌ಪೇ, ಗೂಗಲ್ ಪೇ, ಪೇಟಿಎಮ್, ಭಾರತ ಪೇ ಹೆಚ್ಚು ಬಳಕೆಯಲ್ಲಿರುವ ಆಪ್‌ಗಳಾಗಿ ಗುರುತಿಸಿಕೊಂಡಿವೆ. ಸುರಕ್ಷಿತವಾಗಿ ಇದ್ದರೂ, ಬಳಕೆದಾರರು ಎಚ್ಚರ ತಪ್ಪಿದರೆ, ವಂಚನೆ ಆಗುವ ಸಾಧ್ಯತೆಗಳಿರುತ್ತವೆ. ಬಳಕೆದಾರರು ವಂಚನೆ ತಪ್ಪಿಸಲು ಮೂಲಕ ಆನ್‌ಲೈನ್ ಪಾವತಿಗಳನ್ನು ಮಾಡುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವುಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ ಯುಪಿಐ ಪಿನ್ ಯಾರೊಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ 6 ಅಥವಾ 4 ಅಂಕಿಯ UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದು ಅಗತ್ಯ ಮತ್ತು ಪ್ರಮುಖ ಅಂಶವಾಗಿದೆ. ಯುಪಿಐ ಸಕ್ರಿಯಗೊಳಿಸಿದ ಆಪ್‌ನ ಪ್ರತಿ ಹಣ ವರ್ಗಾವಣೆಯ ಮೊದಲು ಪಿನ್ ಅನ್ನು ಕೇಳುತ್ತದೆ. ಆದ್ದರಿಂದ, ನಿಮ್ಮ ಯುಪಿಐ ಐಡಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಲಿಂಕ್ ಮಾಡಿದಾಗ, ಒಂದು ಪಾಸ್‌ವರ್ಡ್/ ಪಿನ್ ಅನ್ನು ಸೆಟ್ ಮಾಡಬೇಕಿರುತ್ತದೆ. ಎಟಿಎಂ ಪಿನ್‌ನಂತೆಯೇ ಸುರಕ್ಷಿತ ಪಾವತಿಗಳನ್ನು ಆರಂಭಿಸಲು ಈ ಪಿನ್ ಅನ್ನು ಬಳಸಲಾಗುತ್ತದೆ. ಹೀಗಾಗಿ, ನಿಮ್ಮ ಯುಪಿಐ ಪಿನ್ ಅನ್ನು ಯಾರಿಗೂ ನೀಡಬೇಡಿ.

ಫೋನಿಗೆ ಸ್ಕ್ರೀನ್ ಲಾಕ್ ಹಾಕುವುದು ಉತ್ತಮ
ಬಳಕೆದಾರರೇ, ನಿಮ್ಮ ಮೊಬೈಲ್‌ನಲ್ಲಿ ಹಲವಾರು ಪ್ರಮುಖ ಅಪ್ಲಿಕೇಶನ್‌ಗಳು, ಇ-ಮೇಲ್‌ಗಳು ಮತ್ತು ಫೋಟೊಗಳು ಇರುತ್ತವೆ. ಈ ನಿಟ್ಟಿನಲ್ಲಿ ಯಾವಾಗಲೂ ನಿಮ್ಮ ಫೋನ್‌ನಲ್ಲಿ ಸ್ಕ್ರೀನ್ ಲಾಕ್ ಅನ್ನು ಇಟ್ಟುಕೊಳ್ಳವುದು ಉತ್ತಮ. ನಿಮ್ಮ ಫೋನಿಗೆ ಲಾಕ್ ಇಟ್ಟರೆ, ಯುಪಿಐ ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳು ಸುರಕ್ಷಿತ ವಹಿವಾಟಿಗಾಗಿ ಅಪ್ಲಿಕೇಶನ್ ತೆರೆಯುವ ಮೊದಲು ನಿಮ್ಮ ಫೋನ್ ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ಸಹ ಕೇಳುತ್ತವೆ.

ಒಂದು ವೇಳೆ ನಿಮ್ಮ ಫೋನ್ ಕಳುವಾದರೇ ಅಥವಾ ದುರುಪಯೋಗಪಡಿಸಿಕೊಂಡರೆ ಇದು ವಂಚನೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ಎಚ್ಚರವಾಗಿರಲು ಫೋನಿಗೆ ಲಾಕ್ ಸ್ಕ್ರೀನ್ ಅಥವಾ ಪಾಸ್‌ವರ್ಡ್ ಸೆಟ್ ಮಾಡುವುದು ಉತ್ತಮ. ಅಲ್ಲದೇ ಪಾಸ್‌ವರ್ಡ್ ಅನ್ನು ಆಗಾಗ್ಗೆ ಬದಲಾಯಿಸುವುದು ಸೂಕ್ತ.

ಹಣ ವರ್ಗಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ
ಯುಪಿಐ ಸಕ್ರಿಯಗೊಳಿಸಿದ ಅಪ್ ಸ್ವೀಕರಿಸುವವರ ನಿರ್ದಿಷ್ಟ ಯುಪಿಐ ಐಡಿಗೆ ಹಣವನ್ನು ವರ್ಗಾಯಿಸಲು ನೆರವು ಮಾಡುತ್ತದೆ. ಹಾಗೆಯೇ ವಿಶೇಷ ಯುಪಿಐ ಐಡಿಯನ್ನು ಬಳಸಿಕೊಂಡು ನೀವು ಇತರರಿಂದ ಪಾವತಿಗಳನ್ನು ಸ್ವೀಕರಿಸಬಹುದು. ಹೀಗಾಗಿ ಇತರರಿಂದ ಹಣವನ್ನು ಸ್ವೀಕರಿಸುತ್ತಿರುವಾಗ ಯಾವಾಗಲೂ ಸರಿಯಾದ ಯುಪಿಐ ಐಡಿಯನ್ನು ನೀಡಿ. ಹಾಗೆಯೇ ನಿಮ್ಮ ಯುಪಿಐ ಐಡಿಯನ್ನು ಎರಡು ಬಾರಿ ಪರಿಶೀಲಿಸಿ ನೀಡಿ. ಅಂತೆಯೇ, ವ್ಯವಹಾರ/ ಟ್ರಾನ್ಸಾಕ್ಶನ್ ಪ್ರಾರಂಭಿಸುವ ಮೊದಲು ಯಾವಾಗಲೂ ಸ್ವೀಕರಿಸುವವರ ಯುಪಿಐ ಐಡಿಯನ್ನು ಎರಡು ಬಾರಿ ಚೆಕ್ ಮಾಡಿ. ತಪ್ಪಾದ ಟ್ರಾನ್ಸಾಕ್ಶನ್ ಆಗದಂತೆ ಹಾಗೂ ಬೇರೆಯವರಿಗೆ ಸುರಕ್ಷಿತವಾಗಿ ಹಣವನ್ನು ಕಳುಹಿಸಲು ಇದು ಉಪಯುಕ್ತ.

ಒಂದಕ್ಕಿಂತ ಅಧಿಕ ಯುಪಿಐ ಆಪ್‌ಗಳು ಸೂಕ್ತವಲ್ಲ
ಫೋನಿನಲ್ಲಿ ಒಂದಕ್ಕಿಂತ ಹೆಚ್ಚು ಯುಪಿಐ ಅಪ್ಲಿಕೇಶನ್‌ಗಳು ಇದ್ದಾಗ, ಹಣ ವರ್ಗಾವಣೆ ಮಾಡುವಾಗ ಗೊಂದಲಕ್ಕೊಳಗಾಗಬಹುದು. ಅಧಿಕ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ಯಾವುದೇ ಹೆಚ್ಚುವರಿ ಪ್ರಯೋಜನವನ್ನು ಲಭ್ಯ ಇಲ್ಲ. ಬಹುತೇಕ ಎಲ್ಲ ಯುಪಿಐ ಆಪ್‌ಗಳಲ್ಲಿ ಉಚಿತ ಟ್ರಾನ್ಸಾಕ್ಶನ್ ಮಾಡಬಹುದು. ಅಲ್ಲದೇ ಯಾವುದೇ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಬಳಸಿಕೊಂಡು ಇಬ್ಬರು ಯುಪಿಐ ಬಳಕೆದಾರರ ನಡುವೆ ವಹಿವಾಟುಗಳನ್ನು ಮಾಡಬಹುದು.

ನೀವು ಹಣ ಕಳುಹಿಸಬೇಕಾಗಿರುವ ವ್ಯಕ್ತಿ ಬಳಿ ನೀವು ಬಳಕೆ ಮಾಡುವ ಯುಪಿಐ ಅಪ್ಲಿಕೇಶನ್ ಇಲ್ಲದಿರಬಹುದು. ಅಂತಹ ವೇಳೆ QR ಕೋಡ್ ಸ್ಕ್ಯಾನ್ ಬಳಕೆ ಮಾಡುವ ಮೂಲಕ ನೀವು ಸುರಕ್ಷಿತವಾಗಿ ಅವರಿಗೆ ಹಣ ವರ್ಗಾಯಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470