ಬರಲಿವೆ ಹೊಸ ಎಮೋಜಿಗಳು: ಶುರು ಮಾಡಿ ಎಮೋಜಿ ಚಾಟ್..!

By GizBot Bureau
|

ನಾವು ಇನ್ನು ಆಂಡ್ರಾಯ್ಡ್ P ಮತ್ತು iOS 11 ಬಗ್ಗೆ ಮಾತನಾಡುತ್ತಿದ್ದರೇ ಇತ್ತ ಎಮೋಜಿಗಳು ಒಂದು ಹೆಜ್ಜೆ ಮುಂದೆ ಹೋಗಿವೆ. ಇನ್ನು ಡೆವಲಪಿಂಗ್ ನಲ್ಲಿರುವ OSಗಳಲ್ಲಿ ಕಾಣಿಸಿಕೊಳ್ಳುವ ಎಮೋಜಿಗಳು ಈಗಾಗಲೇ ಬಿಡುಗಡೆಗೊಂಡಿವೆ. ಮುಂದಿನ ವರ್ಷದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಆಂಡ್ರಾಯ್ಡ್ Q ಮತ್ತು iOS 12ನಲ್ಲಿ ಯಾವ ಮಾದರಿಯ ಎಮೋಜಿಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಮಾಹಿತಿಯೊಂದು ಲೀಕ್ ಆಗಿದೆ. ಇದರಂತೆ ಅನೇಕ ಹೊಸ ಎಮೋಜಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ನಿಮ್ಮ ಚಾಟಿಂಗ್ ಅನ್ನು ಇನ್ನಷ್ಟು ಸುಂದರಗೊಳಿಸಲಿದೆ ಎನ್ನಲಾಗಿದೆ.

ಬರಲಿವೆ ಹೊಸ ಎಮೋಜಿಗಳು: ಶುರು ಮಾಡಿ ಎಮೋಜಿ ಚಾಟ್..!

ಸದ್ಯ ಹೊಸದಾಗಿ ವಿನ್ಯಾಸಗೊಂಡಿರುವ ಎಮೋಜಿಗಳು ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಲ್ಯಾಪ್ ಟಾಪ್, ಪಿಸಿ, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ ಇರಲಿದೆ ಎನ್ನಲಾಗಿದ್ದು, ಈ ಬಾರಿ ಇನ್ನಷ್ಟು ಹೊಸ ಮಾದರಿಯ ಎಮೋಜಿಗಳನ್ನು ಸೃಷ್ಠಿಸಲಾಗಿದೆ. ಬೇರೆ ಬಣ್ಣದ ಹುಡುಗರು ಮತ್ತು ಹುಡುಗಿಯರು, ವಸ್ತುಗಳು ಸೇರಿದಂತೆ ಹಲವು ಹೊಸ ಎಮೋಜಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ಹೊಸ ಎಮೋಜಿಗಳನ್ನು ಎಮೋಜಿ 12.0 ಎಂದು ಕರೆಯಲಾಗಿದ್ದು, ಈ ಬಾರಿ ಹೊಸದಾಗಿ 61 ಎಮೋಜಿಗಳು ಜೊತೆಗೆ 179 ಕಾರೆಕ್ಟರ್ ಗಳು ಕಾಣಿಸಿಕೊಳ್ಳಲಿದೆ. 2019ರ ಮೊದಲ ತ್ರೈಮಾಸಿಕದಲ್ಲಿ ಇವು ಮಾರುಕಟ್ಟೆಯಲ್ಲಿ ಬಳಕೆಗೆ ದೊರೆಯಲಿವೆ. ಈ ಹೊಸ ಎಮೋಜಿಗಳಲ್ಲಿ ಕಿವಿ ಕೇಳದೆ ಇರುವ ಕಿವುಡ ವ್ಯಕ್ತಿ, ಕೈ ಕೈ ಹಿಡಿದು ಕೊಂಡಿರುವ ವಿವಿಧ ಬಣ್ಣಗಳ, ವಿವಿಧ ವರ್ಗಗಳ ಜೋಡಿಗಳು, ಇದುಗಳಲ್ಲಿ 55 ವಿವಿಧತೆಯನ್ನು ನೋಡಬಹುದಾಗಿದೆ.

ಇದರೊಂದಿಗೆ ಹೊಸ ಎಮೋಜಿಗಳ ಸಾಲಿನಲ್ಲಿ ಯಾವಿಂಗ್ ಫೇಸ್, ಆಕ್ಸ್, ಡೈವಿಂಗ್ ಮಾಸ್ಕ್, ಕೈಟ್ ಸೇರಿದಂತೆ ಹಲವು ಕಾಣಿಸಿಕೊಂಡಿದೆ. ಇದಲ್ಲದೇ 2020ಯಲ್ಲಿ ಕಾಣಿಸಿಕೊಳ್ಳುವ ಎಮೋಜಿಗಳ ಸಾಲಿನಲ್ಲಿ ಮಿಲಿಟರಿ ಹೆಲ್ ಮೆಟ್, ನಿಂಜಾ, ಫಾದರ್, ಮ್ಯಾಜಿಕ್ ವಾಂಡ್ ಸೇರಿದಂತೆ ಹಲವು ಎಮೋಜಿಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

ಮುಂದಿನ ವರ್ಷ ಅಂದರೆ 2019 ನಲ್ಲಿ ಕಾಣಿಸಿಕೊಳ್ಳುವ ಎಮೋಜಿಗಳನ್ನು ಗೂಗಲ್ ತನ್ನ ಮುಂದಿನ ಆವೃತ್ತಿಯ ಆಂಡ್ರಾಯ್ಡ್ ನಲ್ಲಿ ಅಳವಡಿಸಿಕೊಳ್ಳಲಿದ್ದು, ಇದರೊಂದಿದೆ ಇದೇ ಮಾದರಿಯಲ್ಲಿ ಆಪಲ್ ಸಹ ತನ್ನ ಮುಂದಿನ iOS ನಲ್ಲಿ ಈ ಹೊಸ ಮಾದರಿಯ ಎಮೋಜಿಗಳನನ್ನು ಬಳಕೆದಾರರಿಗೆ ನೀಡಲಿದೆ.

ಈ ಬಾರಿ ಇನ್ನು ಹಲವು ಮಾದರಿಯ ಎಮೋಜಿಗಳು ಬಳಕೆಗೆ ಲಭ್ಯವಾಗಬೇಕಿತ್ತು, ಆದರೆ ಕೆಲವು ಎಮೋಜಿಗಳು ಸಮಾವೇಶದಲ್ಲಿ ಕಡಿಮೆ ಅಂಕವನ್ನು ಪಡೆದುಕೊಂಡ ಕಾರಣದಿಂದಾಗಿ ಹಲವು ಎಮೋಜಿಗಳು ಮುಂದಿನ ವರ್ಷ ಅಂದರೆ 2020ಯಲ್ಲಿ ಬಳಕೆಗೆ ಬರಲಿದೆ ಎನ್ನಲಾಗಿದೆ.

Best Mobiles in India

English summary
These new emojis may be coming to Android Q and iOS 13. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X