ಹೊಸ ವರ್ಷಕ್ಕೂ ಮೊದಲೇ ಭಾರತಕ್ಕೆ ಎಂಟ್ರಿ ನೀಡಲಿರುವ ಸ್ಮಾರ್ಟ್‌ಫೋನ್‌ಗಳು!

|

2022ರ ಅಂತ್ಯದಲ್ಲಿ ಕೂಡ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿದೆ. ಡಿಸೆಂಬರ್‌ ತಿಂಗಳಿನಲ್ಲಿಯೂ ಸಹ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ದಿನಾಂಕ ನಿಗದಿಪಡಿಸಿವೆ. ಈ ಮೂಲಕ ಇಯರ್‌ ಎಂಡ್‌ಗೂ ಮುನ್ನ ಸ್ಮಾರ್ಟ್‌ಫೋನ್‌ ಪ್ರಿಯರ ಕೈ ಸೇರುವ ಭರವಸೆಯನ್ನು ಮೂಡಿಸಿವೆ. ಈ ಸಾಲಿನಲ್ಲಿ ಇನ್ಫಿನಿಕ್ಸ್‌, ರಿಯಲ್‌ಮಿ, ಐಕ್ಯೂ, ವಿವೋ, ಒನ್‌ಪ್ಲಸ್‌ ನಂತಹ ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಿವೆ. ಅಲ್ಲದೆ ಈಗಾಗಲೇ ತಮ್ಮ ಫೀಚರ್ಸ್‌ ಲೀಕ್‌ ಮೂಲಕ ಸಾಕಷ್ಟು ಸಂಚಲನವನ್ನು ಕೂಡ ಮೂಡಿಸಿವೆ.

ಅಂತ್ಯದಲ್ಲೇ

ಹೌದು, ಡಿಸೆಂಬರ್‌ ತಿಂಗಳ ಅಂತ್ಯದಲ್ಲೇ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆ ವಲಯದಲ್ಲಿಯೂ ಸಹ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಈ ತಿಂಗಳ ಅಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ಸಹ ಹೇಳಲಾಗಿದೆ. ಹಾಗಾದ್ರೆ ಡಿಸೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್‌ ಹಾಟ್‌ 20 5G

ಇನ್ಫಿನಿಕ್ಸ್‌ ಹಾಟ್‌ 20 5G

ಡಿಸೆಂಬರ್‌ ತಿಂಗಳ ಪ್ರಾರಂಭದಲ್ಲಿಯೇ ಎಂಟ್ರಿ ನೀಡಿರುವ ಇನ್ಫಿನಿಕ್ಸ್‌ ಹಾಟ್‌ 20 5G ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಇದೇ ಡಿಸೆಂಬರ್ 6 ರಂದು ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಮೀಡಿಯಾಟೆಕ್‌ ಡೈಮೆನ್ಸಿಟಿ 810SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಬೆಲೆ 11,999 ರೂ. ಆಗಿದೆ. ಹಾಗೆಯೇ 5G ಅಲ್ಲದ ಸ್ಮಾರ್ಟ್‌ಫೋನ್‌ ರೂಪಾಂತರವು 8,999ರೂ.ಗಳಿಗೆ ಸೇಲ್‌ ಆಗಲಿದೆ.

ಒನ್‌ಪ್ಲಸ್‌ 11 5G

ಒನ್‌ಪ್ಲಸ್‌ 11 5G

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ QHD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1440 x 3216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 120Hz ರಿಫ್ರೆಶ್ ರೇಟ್ ಹೊಂದಿದ್ದು, 526 ppi ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ರಿಯಲ್‌ಮಿ 10ಪ್ರೊ ಸರಣಿ

ರಿಯಲ್‌ಮಿ 10ಪ್ರೊ ಸರಣಿ

ರಿಯಲ್‌ಮಿ 10ಪ್ರೊ ಸರಣಿ ಭಾರತದಲ್ಲಿ ಇದೇ ಡಿಸೆಂಬರ್ 8 ರಂದು ಪ್ರಾರಂಭಿಸಲಿದೆ. ಇನ್ನು ಈ ರಿಯಲ್‌ಮಿ 10ಪ್ರೊ ಸರಣಿಯು 5G ಮತ್ತು 5G ಅಲ್ಲದ ಎರಡೂ ರೂಪಾಂತರದ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ ಸುಮಾರು 25,000ರೂ. ಬೆಲೆಯಲ್ಲಿ ಬರುವ ಸಾಧ್ಯತೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 3X ಅಲ್ಟ್ರಾ ಜೂಮ್, ಸ್ಟ್ರೀಟ್ ಮೋಡ್ 3.0, AI ವಿಡಿಯೋ-ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ.

ವಿವೋ X90 ಸರಣಿ

ವಿವೋ X90 ಸರಣಿ

ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ ವಿವೋ X90 ಸರಣಿ ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡುವ ನಿರೀಕ್ಷೆಯಿದೆ. ಇದರಲ್ಲಿ ವಿವೋ X90, ವಿವೋ X90 ಪ್ರೊ ಮತ್ತು ವಿವೋ X90 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಬರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ.

Best Mobiles in India

English summary
These smartphones will be released in December

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X