ತನ್ನ 7ನೇ ವಯಸ್ಸಿಗೇ ಈತ ಗಳಿಸುತ್ತಿರುವುದು ವರ್ಷಕ್ಕೆ 155 ಕೋಟಿ!!

|

ತನ್ನ 7 ವಯಸ್ಸಿಗೇ ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ಅಮೆರಿಕನ್ ಯೂಟ್ಯೂಬ್ ಸ್ಟಾರ್ 'ರೇಯಾನ್' ಈಗ ವಿಶ್ವದಲ್ಲೇ ಅತಿಹೆಚ್ಚು ಹಣಗಳಿಸುವ ಯೂಟ್ಯೂಬ್ ಸ್ಟಾರ್ ಆಗಿ ಹೊರಹೊಮ್ಮಿದ್ದಾನೆ. ಫೋರ್ಬ್ಸ್ ಪ್ರಕಟಿಸಿರುವ ಸ್ಟಾರ್ -2018 ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ 'ರೇಯಾನ್' ಇಂದು ಪ್ರತಿ ವರ್ಷ ವರ್ಷಕ್ಕೆ 155 ಕೋಟಿ ಸಂಪಾದನೆ ಮಾಡುತ್ತಿದ್ದಾನೆ.

ಕಳೆದ ವರ್ಷ ಯೂಟ್ಯೂಬ್ ಮೂಲಕ ಅತ್ಯಧಿಕ ಆದಾಯ ಗಳಿಸುತ್ತಿರುವ ಸ್ಟಾರ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದ್ದ 7 ವರ್ಷ ವಯಸ್ಸಿನ ಯೂಟ್ಯೂಬ್ ಸ್ಟಾರ್ 'ರೇಯಾನ್' ಈಗ ಸ್ಟಾರ್ -2018 ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಮತ್ತೆ ವಿಶ್ವದ ಗಮನವನ್ನು ಸೆಳೆದಿದ್ದಾನೆ. ವೀಡಿಯೋ ಚಾನೆಲ್‌ ನಡೆಸುತ್ತಿರುವ ಹಾಲುಗಲ್ಲದ ಈತ ವಯಸ್ಸಿನಲ್ಲಿ ಜಗದ್ವಿಖ್ಯಾತನಾಗಿದ್ದಾನೆ.

ತನ್ನ 7ನೇ ವಯಸ್ಸಿಗೇ ಈತ ಗಳಿಸುತ್ತಿರುವುದು ವರ್ಷಕ್ಕೆ 155 ಕೋಟಿ!!

ಕಳೆದ ಮೂರು ವರ್ಷಗಳಲ್ಲಿ ವಿಶ್ವದ ಆಟಿಕೆ ರಿವ್ಯೂ ಪ್ರಪಂಚದಲ್ಲಿ ಹೆಸರಾದ ಯೂಟ್ಯೂಬರ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ 'ರೇಯಾನ್' ತನಗೆ ಅರಿವಿಲ್ಲದಂತೆಯೇ ಇಂತಹ ಸಾಧನೆ ಮಾಡಿದ್ದಾನೆ. ಹಾಗಾದರೆ, ಯಾರೀತ ರೇಯಾನ್? ವಿಶ್ವದೆಲ್ಲೆಡೆ 7 ವರ್ಷದ ಬಾಲಕನೋರ್ವ ರೇಯಾನ್ನ್ ಮನೆ ಮಾತಾಗಿದ್ದು ಏಕೆ? ಎಂಬ ಕುತೂಹಲದ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ಯಾರೀತ ರೇಯಾನ್?

ಯಾರೀತ ರೇಯಾನ್?

ರೇಯಾನ್ ಎಂಬ ಆರು ವರ್ಷದ ಪೋರ ಒಟ್ಟು ಆರು ಯೂಟ್ಯೂಬ್ ಚಾನೆಲ್‌ಗ‌ಳನ್ನು ಹೊಂದಿದ್ದಾನೆ. ತಿಂಗಳಲ್ಲಿ ಈತನ ವಿಡಿಯೋಗಳು 120 ಕೋಟಿಗೂ ಹೆಚ್ಚು ವೀಕ್ಷಣೆ ಪಡೆಯುತ್ತವೆ. 2015ರ ಮಾರ್ಚ್‌ನಿಂದ ಈತ ಆಟಿಕೆಗಳೊಂದಿಗೆ ಆಟವಾಡುವ ವಿಡಿಯೋಗಳನ್ನು ಮಾಡುತ್ತಾ ಈಗ ವಿಶ್ವದಲ್ಲೇ ಅತಿಹೆಚ್ಚು ಹಣವನ್ನು ಗಳಿಸುತ್ತಿರುವ ಯೂಟ್ಯೂಬರ್ ಆಗಿ ಹೊರಹೊಮ್ಮಿದ್ದಾನೆ.

'ರೇಯಾನ್ ಟಾಯ್ಸ್ ರಿವ್ಯೂ'!

'ರೇಯಾನ್ ಟಾಯ್ಸ್ ರಿವ್ಯೂ'!

ನಾಲ್ಕು ವರ್ಷಗಳ ವಯಸ್ಸಿನಲ್ಲಿ ಆತನ ಆಸಕ್ತಿ ಗಮನಿಸಿದ ತಂದೆತಾಯಿ ವೀಡಿಯೋಗಳನ್ನು ತೆಗೆದು 'ರೇಯಾನ್ ಟಾಯ್ಸ್ ರಿವ್ಯೂ' ಎಂಬ ಯೂಟ್ಯೂಬ್ ಚಾನೆಲ್ ಸೃಷ್ಟಿಸಿ ಅದರಲ್ಲಿ ಆ ರೇಯಾನ್ ವಿಶ್ಲೇಷಿಸಿದ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾ ಬಂದಿದ್ದಾರೆ. ಆತನ ಪೋಷಕರು ರೇಯಾನ್ ವಿಡಿಯೋಗಳ ಎಲ್ಲ ಹೆಗ್ಗಳಿಕೆಯನ್ನು ತಮ್ಮ ಮಗನಿಗೇ ನೀಡುತ್ತಿದ್ದಾರೆ

ಆಟಿಕೆ ಯೂಟ್ಯೂಬರ್!

ಆಟಿಕೆ ಯೂಟ್ಯೂಬರ್!

ಎಲ್ಲ ಮಕ್ಕಳಂತೆ ರೇಯಾನ್‌ಗೆ ಗೊಂಬೆಗಳೆಂದರೆ ಇಷ್ಟ. ಆದರೆ, ಅದು ಸ್ವಲ್ಪ ಜಾಸ್ತಿ ಎಂದೇ ಹೇಳಬೇಕು.ಆತನ ಕೈಗೆ ಒಂದು ಗೊಂಬೆ ಆತನ ಕೈಗೆ ಸಿಕ್ಕಿದೆ ಎಂದರೆ ಅದನ್ನು ಅಮೂಲಾಗ್ರವಾಗಿ ಪರಿಶೀಲಿಸುತ್ತಾನೆ. ಆ ಆಟಿಕೆಯೇನು, ಅದರಲ್ಲಿನ ವಿಶೇಷತೆಗಳೇನು ಎಂಬುದನ್ನು ಸಂಪೂರ್ಣ ಸ್ಟಡಿ ಮಾಡುತ್ತಿರುತ್ತಾನೆ. ಇದನ್ನು ವೀಕ್ಷಿಸಲು ಮಕ್ಕಳು ಇಷ್ಟಪಡುತ್ತಿದ್ದಾರೆ.

1ನೇ ಸ್ಥಾನದಲ್ಲಿದೆ ಈತ!

1ನೇ ಸ್ಥಾನದಲ್ಲಿದೆ ಈತ!

ಕಳೆದ ವರ್ಷ 71 ಕೋಟಿ ರೂ.ಗಳಿಸಿದ್ದ ರೇಯಾನ್ ಈ ವರ್ಷ ವರ್ಷ 155 ಕೋಟಿ ಸಂಪಾದನೆ ಮಾಡಿದ್ದಾನೆ. ಆತನ ಯೂಟ್ಯೂಬ್ ಚಾನೆಲ್‌ಗೆ 1.7 ಕೋಟಿ ಸಬ್‌ಸ್ಕ್ರೈಬರ್ ಗಳಿದ್ದಾರೆ. ಯೂಟ್ಯೂಬ್‌ನಿಂದ ಅತ್ಯಂತ ಹೆಚ್ಚು ಪೇಮೆಂಟ್ ಪಡೆಯುವ ಚಾನೆಲ್‌ಗ‌ಳ ಪೈಕಿ ರೇಯಾನ್ ಚಾನೆಲ್‌ ಈಗ ಮೊದಲನೇ ಸ್ಥಾನದಲ್ಲಿದ್ದು, ಜಗತ್ತಿನ ಅತಿ ಚಿಕ್ಕ ಯೂಟ್ಯೂಬ್ ಸ್ಟಾರ್ ಆಗಿದ್ದಾನೆ.

ರೇಯಾನ್ ವರ್ಲ್ಡ್

ರೇಯಾನ್ ವರ್ಲ್ಡ್

ಕಳೆದ ಅಕ್ಟೋಬರ್‌ನಿಂದ ಅಮೆರಿಕದ ವಾಲ್‌ಮಾರ್ಟ್ ಮಳಿಗೆಗಳಲ್ಲೂ ಈ ಬ್ರ್ಯಾಂಡ್‌ನ‌ ಆಟಿಕೆಗಳು ಲಭ್ಯವಿವೆ. ವಾಲ್‌ಮಾರ್ಟ್‌ನಲ್ಲಿ ಇದಕ್ಕೆ ರೇಯಾನ್ ವರ್ಲ್ಡ್ ಎಂದು ಹೆಸರಿಡಲಾಗಿದೆ. ಯೂಟ್ಯೂಬ್‌ನಲ್ಲಿ ಆಟಿಕೆಗಳನ್ನು ರಿವ್ಯೂ ಮಾಡುವುದರಿಂದಲೇ ವಿಶ್ವದ ಗಮನ ಸೆಳೆದಿದ್ದ ರೇಯಾನ್ ಇದೀಗ ಸ್ವಂತ ಆಟಿಕೆ ಉದ್ದಯಮ ಕ್ಷೇತ್ರದ ಬ್ರಾಡ್ ಅಂಬಾಸಿಡರ್ ಸಹ ಆಗಿದ್ದಾನೆ.

Best Mobiles in India

English summary
This 7-year-old made Rs 155 crore in a year from YouTube videos. ... Ryan who is 7-years-old is the star of his YouTube channel.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X