'ಗೂಗಲ್' ಮೂಲಕ ಹಣಕ್ಕೆ ಕನ್ನ!..ಈ ಆಘಾತಕಾರಿ ವಂಚನೆ ಬಗ್ಗೆ ನೀವು ತಿಳಿಯಲೇಬೇಕು!

|

ಜನರನ್ನು ಮೋಸಗೊಳಿಸಲು ವಂಚಕರು ಯಾವಾಗಲೂ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇದೀಗ ಭಾರತದಲ್ಲಿ ಗೂಗಲ್ ಸರ್ಚ್ ಸೇವೆಯು ಇತ್ತೀಚಿನ ವಂಚನೆಯ ಬಹುದೊಡ್ಡ ಸಾಧನವಾಗಿದೆ. ಹಾಗೆಂದು ಇದು ಗೂಗಲ್‌ ತಪ್ಪು ಅಥವಾ ಗೂಗಲ್ ದುರ್ಬಲತೆಯಲ್ಲ. ಆದರೆ, ಬಳಕೆದಾರರಿಗೆ ಸಹಾಯ ಮಾಡಲು ಗೂಗಲ್ ಮಾಡಿದ ಸರಳ ಸೇವೆಯನ್ನು ವಂಚಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಜನರ ಮುಗ್ಧತೆಯಿಂದಲೂ ಕೂಡ ವಂಚಕರಿಗೆ ಹಣ ಎಗರಿಸಲು ಸಾಧ್ಯವಾಗುತ್ತಿದೆ ಎಂಬುದು ಸಹ ನಿಜ.

ಗೂಗಲ್ ಮೊರೆ ಹೋಗುತ್ತೇವೆ.

ಹೌದು, ನಾವು ಯಾವುದೇ ವಿಷಯದ ಬಗ್ಗೆ ತಿಳಿಯಬೇಕಾದರೆ ಗೂಗಲ್ ಮೊರೆ ಹೋಗುತ್ತೇವೆ. ಗೂಗಲ್ ಸರ್ಚ್ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಈ ವೇಳೆ ನಮಗೆ ದೊರೆತ ಎಲ್ಲ ಮಾಹಿತಿಯೂ ಸಹ ನಿಜ ಎಂದು ನಾವು ನಂಬುತ್ತೇವೆ. ಎಡವಟ್ಟಾಗುತ್ತಿರುವುದು ಇಲ್ಲೇ.! ಹೌದು, ಗೂಗಲ್ ಎಂಬುದು ಒಂದು ಮಾಹಿತಿಯುಕ್ತ ತಾಣವಷ್ಟೇ. ಅಲ್ಲಿ ಇರುವು ಎಲ್ಲವೂ ನಿಜಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಗಟ್ಟಿ ಉತ್ಪನ್ನಗಳ ಜೊತೆಗೆ ಕಸಕಡ್ಡಿಗಳು ಸಹ ಸೇರಿಕೊಂಡಿರುವುದನ್ನು ನಾವು ಅರಿಯಬೇಕು. ಇಲ್ಲದಿದ್ದರೆ ವಂಚನೆಯೇ ಹೆಚ್ಚು.

ಕ್ಷಣ ಮಾತ್ರದಲ್ಲಿ ವಂಚಿಸಿದ್ದಾನೆ.

ಇತ್ತೀಚಿನ ನಡೆದ ಆಂತಕಕಾರಿ ಘಟನೆಗಳು ಈ ಬಗ್ಗೆ ಎಲ್ಲರನ್ನು ಎಚ್ಚರಿಸಿದೆ. ಗೂಗಲ್ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ. ಗೂಗಲ್ ಪೇ ಬಳಕೆದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಗೂಗಲ್‌ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಹೇಳಿ, ಆಪ್‌ನ ಲಿಂಕ್‌ ಮುಖಾಂತರ ಅವರಿಗೆ ಕ್ಷಣ ಮಾತ್ರದಲ್ಲಿ ವಂಚಿಸಿದ್ದಾನೆ. ಇದಕ್ಕೆ ಕಾರಣ ಜನರಿಗೆ ಸರಿಯಾದ ಮಾಹಿತಿ ಇಲ್ಲದಿರುವುದು.

ಸಹಾಯಕ್ಕೆ ಕೋರಿದ್ದಾನೆ

ಈ ಹಣ ಕಳೆದುಕೊಂಡಿರುವ ಘಟನೆಯಲ್ಲಿ ವಂಚನೆಗೆ ಒಳಗಾದ ವ್ಯಕ್ತಿ ಗೂಗಲ್ ಮೂಲಕ ಗೂಗಲ್ ಪೇ ಕಸ್ಟಮರ್ ಕೇರ್‌ ನಂಬರ್ ಹುಡುಕಿದ್ದಾನೆ. ಈ ವೇಳೆ ವಂಚಕರ ನಕಲಿ ವೆಬ್‌ಸೈಟ್ ತೆರೆದಿದೆ. ಅದನ್ನು ನಂಬಿದ ಆ ವ್ಯಕ್ತಿ ಅದರಲ್ಲಿದ್ದ ಗ್ರಾಹಕ ಸೇವಾ ಸಂಖ್ಯೆಗೆ ಕರೆಮಾಡಿ ಸಹಾಯಕ್ಕೆ ಕೋರಿದ್ದಾನೆ. ಈ ಸಮಯವನ್ನು ದುರುಪಯೋಗಪಡಿಸಿಕೊಂಡಿರುವ ವಂಚಕರು, ಆ ವ್ಯಕ್ತಿಯ ಬಳಿ ಬ್ಯಾಂಕ್ ದಾಖಲೆಗಳನ್ನು ಪಡೆದುಕೊಂಡು ಆತನ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ಕ್ಷಣಾರ್ಧದಲ್ಲಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಹತ್ತಾರು ಪ್ರಕರಣಗಳು ದಾಖಲಾಗಿವೆ.

ಕಳೆದ ಕೆಲವು ತಿಂಗಳಲ್ಲಿ ಈ ರೀತಿಯಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ. ಗ್ರಾಹಕರಿಗೆ ಬ್ಯಾಂಕ್ ಖಾತೆಯ ಸಮಸ್ಯೆ ಎದುರಾದಾಗ ಸಂಬಂಧಿಸಿದ ಬ್ಯಾಂಕಿನ ಸಂಪರ್ಕ ವಿವರಗಳನ್ನು ಆನ್​ಲೈನ್​ನಲ್ಲಿ ಹೂಡುಕಿ ಆ ಸಂಖ್ಯೆಗೆ ಕರೆ ಮಾಡುತ್ತಾರೆ. ಗೂಗಲ್ ಮ್ಯಾಪ್​ನಲ್ಲಿನ ಬ್ಯಾಂಕ್​ಗಳ ದೂರವಾಣಿ ಸಂಖ್ಯೆ ಪಡೆದುಕೊಳ್ಳುವ ಬ್ಯಾಂಕ್ ಗ್ರಾಹಕರು ಆ ಸಂಖ್ಯೆ ಬ್ಯಾಂಕ್‌ನದ್ದೇ ಆಗಿರುತ್ತದೆ ಎಂದು ನಂಬಿಕೊಳ್ಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಸುಲಭವಾಗಿ ಬಲೆಗೆ ಬೀಳುತ್ತಿದ್ದಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

ನೇರವಾಗಿ ಕರೆ

ಗೂಗಲ್ ಸರ್ಚ್ ಎಂಜಿನ್​ನಲ್ಲಿ ತೋರಿಸುವ ದೂರವಾಣಿ ಸಂಖ್ಯೆಗೆ ನೇರವಾಗಿ ಕರೆಮಾಡದೆ, ಪಾಸ್​ಬುಕ್ ಅಥವಾ ಬ್ಯಾಂಕ್ ನೀಡುವ ಕಿಟ್​ನಲ್ಲಿ ನಮೂದಿಸಿರುವ ಅಧಿಕೃತ ದೂರವಾಣಿ ಸಂಖ್ಯೆ ಬಳಸಿ ಎಂದು ಬ್ಯಾಂಕ್​ಗಳು ಗ್ರಾಹಕರಿಗೆ ತಿಳಿಸಿವೆ. ಗೂಗಲ್ ಪೇ, ಫೋನ್ ಪೇ ನಂತಹ ಹಣ ವರ್ಗಾವಣೆ ತಾಣಗಳು ಸಹಾಯವಾಣಿ ಕೇಂದ್ರವನ್ನೇ ಹೊಂದಿಲ್ಲ. ನಿಮಗೆ ಕರೆ ಮಾಡಿದವರು ಬ್ಯಾಂಕ್‌ನವರೇ ಆದರೂ ಸಿವಿವಿ ಸಂಖ್ಯೆ, ಯೂಸರ್ ​ನೇಮ್, ಡೆಬಿಟ್ ಕಾರ್ಡ್‌ಗಳ ಸಂಖ್ಯೆ ಗಳನ್ನು ತಿಳಿಸದಂತೆ ಎಚ್ಚರವಾಗಿರಿ.

Best Mobiles in India

English summary
Scamsters are always looking at new ways to dupe gullible citizens and in India, the Google search has become the latest fraud tool for them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X