2021ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಆದ ವಿಚಾರ ಯಾವುದು ಗೊತ್ತಾ?

|

ಇಂದಿನ ದಿನಗಳಲ್ಲಿ ಯಾವುದೇ ವಿಚಾರದ ಬಗ್ಗೆ ಮಾಹಿತಿ ಬೇಕಿದ್ದರೂ ಮೊದಲು ನೆನಪಿಗೆ ಬರೋದು ಗೂಗಲ್‌. ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಅಷ್ಟರ ಮಟ್ಟಿಗೆ ತನ್ನ ಪ್ರಾಬಲ್ಯವನ್ನು ಜನರ ಮನಸ್ಸಿನಲ್ಲಿ ಮೂಡಿಸಿದೆ. ಸದ್ಯ ಗೂಗಲ್‌ ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಪಡೆದಿದ್ದು, ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಇನ್ನು ಗೂಗಲ್‌ನಲ್ಲಿ ವರ್ಷದಿಂದ ವರ್ಷಕ್ಕೆ ಜನರು ಏನೆಲ್ಲಾ ಸರ್ಚ್‌ ಮಾಡಿದ್ದಾರೆ? ಯಾವ ವಿಚಾರ ಹೆಚ್ಚು ಸರ್ಚ್‌ ಆಗಿದೆ ಅನ್ನೊದು ಕೂಡ ಸಾಕಷ್ಟು ಕುತೂಹಲ ಮೂಡಿಸುತ್ತೆ.

ಗೂಗಲ್‌ ಇಂಡಿಯಾ

ಹೌದು, ಗೂಗಲ್‌ ಇಂಡಿಯಾ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹೆಚ್ಚಿನ ಜನರು ಏನೆಲ್ಲಾ ಸರ್ಚ್‌ ಮಾಡಿದ್ದಾರೆ ಅನ್ನೊ ಮಾಹಿತಿ ಹಂಚಿಕೊಂಡಿದೆ. ಭಾರತದಲ್ಲಿ 2021 ರ ಹೆಚ್ಚಿನ ಸರ್ಚ್‌ ಟ್ರೆಂಡ್‌ಗಳನ್ನು ರಿಸ್ಟೋರ್‌ ಮಾಡಿದೆ. ಸುದ್ದಿ, ಕ್ರೀಡೆ, ಮನರಂಜನೆ ಮತ್ತು ಇತರ ವಿಭಾಗಗಳಲ್ಲಿ ಭಾರತೀಯರು ವರ್ಷವಿಡೀ ಯಾವುದನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ಅನ್ನೊದನ್ನು ಈ ಬಹಿರಂಗಪಡಿಸಿದೆ. ಹಾಗಾದ್ರೆ 2021ರಲ್ಲಿ ಭಾರತದಲ್ಲಿ ಯಾವ ವಿಚಾರವನ್ನು ಗೂಗಲ್‌ನಲ್ಲಿ ಹೆಚ್ಚಿನ ಜನರು ಸರ್ಚ್‌ ಮಾಡಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ರಿಕೆಟ್ ಮತ್ತು ಪುಟ್ಬಾಲ್‌

ಕ್ರಿಕೆಟ್ ಮತ್ತು ಪುಟ್ಬಾಲ್‌

ಗೂಗಲ್‌ ನೀಡಿರುವ ಮಾಹಿತಿಯಂತೆ 2021ರಲ್ಲಿ ಕೂಡ ಕ್ರಿಕೆಟ್ ವಿಚಾರದ ಬಗ್ಗೆ ಹೆಚ್ಚಿನ ಜನರು ಸರ್ಚ್‌ ಮಾಡಿರುವ ಪ್ರವೃತ್ತಿ ಮುಂದುವರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ICC T20 ವಿಶ್ವಕಪ್ ಕ್ರಿಕೆಟ್‌ ಬಗ್ಗೆ ಸರ್ಚ್‌ ಮಾಡಿರುವುದು ಅಗ್ರಸ್ಥಾನ ಪಡೆದುಕೊಂಡಿದೆ. ಅಲ್ಲದೆ ಕೋಪಾ ಅಮೇರಿಕಾ ಮತ್ತು ಯುರೋ ಕಪ್ ಪಂದ್ಯಾವಳಿ ಸಮಯದಲ್ಲೂ ಪುಟ್ಬಾಲ್‌ ಪ್ರಿಯರು ಹೆಚ್ಚಿನ ಸಮಯ ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾರೆ. ಇನ್ನು ಇದೇ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ ಸಮಯದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಕೂಡ ಉತ್ತಮವಾಗಿತ್ತು.ಈ ಸಮಯದಲ್ಲಿ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಬಗ್ಗೆ ಕೂಡ ಗೂಗಲ್‌ನಲ್ಲಿ ಹೆಚ್ಚಿನ ಜನರು ಸರ್ಚ್‌ ಮಾಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಗಣ್ಯರು

ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಗಣ್ಯರು

ಇನ್ನು ಬಾಲಿವುಡ್‌ ಸಿನಿಮಾ ವಿಚಾರ. ಬಾಲಿವುಡ್‌ ಗಾಸಿಪ್‌ಗಳು, ಬಾಲಿವುಡ್‌ ಮಂದಿಯ ದಿನಚರಿಯ ಬಗ್ಗೆ ಜನರಿಗೆ ಎಲ್ಲಿಲ್ಲದ ಅಸಕ್ತಿ ಇದ್ದೆ ಇದೆ. ಈ ಆಸಕ್ತಿ ಈ ವರ್ಷವೂ ಕುಡ ಮುಂದುವರೆದಿದ್ದು, ಬಾಲಿವುಡ್‌ ಮಂದಿಯ ಬಗ್ಗೆ ಗೂಗಲ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದ್ದಾರೆ. ಅದರಲ್ಲೂ ಶಾರುಕ್‌‌ ಖಾನ್‌ ಪುತ್ರ ಆರ್ಯನ್ ಖಾನ್, ವಿಕ್ಕಿ ಕೌಶಲ್‌, ಶೆಹನಾಜ್ ಗಿಲ್ ಮತ್ತು ರಾಜ್ ಕುಂದ್ರಾ ಬಗ್ಗೆ ಹೆಚ್ಚಿನ ಜನರು ಗೂಗಲ್‌ನಲ್ಲಿ ಮಾಹಿತಿಯನ್ನು ಜಾಲಾಡಿದ್ದಾರೆ. ಇದಲ್ಲದೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಬಗ್ಗೆ ಕೂಡ ಜನರ ಕುತೂಹಲ ಹೆಚ್ಚಿದ್ದು ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕಾಟ ಮಾಡಿದ್ದಾರೆ ಎನ್ನಲಾಗಿದೆ.

ವ್ಯಾಕ್ಸಿನೇಷನ್

ವ್ಯಾಕ್ಸಿನೇಷನ್

ಇದಲ್ಲದೆ ಭಾರತದಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್‌ನ ಬಗ್ಗೆ ಕೂಡ ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾರೆ. ಅದರಲ್ಲೂ ವ್ಯಾಕ್ಸಿನೇಷನ್‌ ಅಭಿಯಾನದಲ್ಲಿ COWIN ಮತ್ತು Covid ಲಸಿಕೆಗಾಗಿ ಜನರು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾರೆ. ಏಕೆಂದರೆ ಜನರು ವ್ಯಾಕ್ಸಿನೇಷನ್ ಆಯ್ಕೆಗಳು ಮತ್ತು ಅವುಗಳ ಲಭ್ಯತೆಯ ಬಗ್ಗೆ ಗೂಗಲ್‌ನಲ್ಲಿ ಮಾಹಿತಿಯನ್ನು ಪಡೆಯುವುದಕ್ಕಾಗಿಯೇ ಸರ್ಚ್‌ ಮಾಡಿದ್ದಾರೆ.

'ನಿಯರ್ ಮಿ' ಸರ್ಚ್‌

'ನಿಯರ್ ಮಿ' ಸರ್ಚ್‌

ಇನ್ನು ಈ ವರ್ಷ 'ನಿಯರ್ ಮಿ' ಸರ್ಚ್‌ನಲ್ಲಿ ಕೊರೊನಾ ವಿಚಾರ ಹೆಚ್ಚಿನ ಪ್ರಮಾಣದಲ್ಲಿ ಸರ್ಚ್‌ ಆಗಿದೆ. ಏಕೆಂದರೆ ಕೊರೊನಾ ಸಂಬಂದಿತ ಸುದ್ದಿ, ವ್ಯಾಕ್ಸಿನೇಷನ್‌ ಮಾಹಿತಗಾಗಿ ನಿಯರ್‌ ಮಿ ವಿಚಾರ ಹೆಚ್ಚು ಸರ್ಚ್‌ ಆಗಿದೆ. ಬಹಳಷ್ಟು ಜನರು ತಮ್ಮ ಹತ್ತಿರದಲ್ಲಿರುವ ವ್ಯಾಕ್ಸಿನ್‌, ಕೋವಿಡ್ ಪರೀಕ್ಷೆಗಳು ಮತ್ತು ಕೋವಿಡ್ ಆಸ್ಪತ್ರೆಗಳಿಗಾಗಿ ಹುಡುಕಿದಾಗ, ಆಮ್ಲಜನಕ ಸಿಲಿಂಡರ್‌ಗಳು ಮತ್ತು CT ಸ್ಕ್ಯಾನ್‌ಗಳ ಬಗ್ಗೆ ಸರ್ಚ್‌ ಮಾಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಆಹಾರ ವಿತರಣೆಗಳು, ಟಿಫಿನ್ ಸೇವೆಗಳು ಮತ್ತು ಟೇಕ್‌ಔಟ್ ರೆಸ್ಟೋರೆಂಟ್‌ಗಳ ಮೇಲಿನ ಪ್ರಶ್ನೆಗಳು ಕೂಡ ಮಧ್ಯಂತರ ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ಚ್‌ ಮಾಡಿದ್ದಾರೆ.

ಸಿನಿಮಾ ಮತ್ತು ಇತರ ಸುದ್ದಿಗಳು

ಸಿನಿಮಾ ಮತ್ತು ಇತರ ಸುದ್ದಿಗಳು

ಕೊರೊನಾ ಬಂದ ನಂತರ ಸಂಪೂರ್ಣ ಸ್ಥಬ್ದವಾಗಿದ್ದ ಚಿತ್ರರಂಗ 2021ರಲ್ಲಿ ಚೇತರಿಕೆ ಕಾಣಲು ಪ್ರಾರಂಭಿಸಿತು. ಈ ಸಮಯದಲ್ಲಿ ಚಿತ್ರಮಂದಿರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಪ್ರಾದೇಶಿಕ ಸಿನಿಮಾ ವಿಚಾರವಾಗಿ ಗೂಗಲ್‌ನಲ್ಲಿ ಹೆಚ್ಚಿನ ಜನರು ಸರ್ಚ್‌ ಮಾಡಿದ್ದಾರೆ.ಅದರಲ್ಲೂ ಈ ವಷ್ ಗೂಗಲ್‌ ಅತಿ ಹೆಚ್ಚು ಸರ್ಚ್‌ ಮಾಲಡಾದ ಸಿನಿಮಾ ಸಾಲಿನಲ್ಲಿ ತಮಿಳಿನ ಬ್ಲಾಕ್‌ಬಸ್ಟರ್ ಜೈ ಭೀಮ್ ಚಲನಚಿತ್ರಗಳ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ನಂತರ ಬಾಲಿವುಡ್ ಚಲನಚಿತ್ರಗಳಾದ ಶೇರ್ಷಾ, ರಾಧೆ ಮತ್ತು ಬೆಲ್ ಬಾಟಮ್ ಸ್ಥಾನಗಳನ್ನು ಪಡೆದುಕೊಂಡಿವೆ. ಇನ್ನು ಹಾಲಿವುಡ್ ಚಲನಚಿತ್ರಗಳಾದ ಗಾಡ್ಜಿಲ್ಲಾ vs ಕಾಂಗ್ ಮತ್ತು ಎಟರ್ನಲ್ಸ್ ಈ ವರ್ಷದ ಟಾಪ್ ಟ್ರೆಂಡಿಂಗ್ ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಗೂಗಲ್‌

ಇನ್ನು ಗೂಗಲ್‌ನಲ್ಲಿ ಎನೋಕಿ ಮಶ್ರೂಮ್‌ಗಳು ಹೆಚ್ಚಿನ ಸರ್ಚ್‌ ಮಾಡಲ್ಪಟ್ಟ ವಿಚಾರದಲ್ಲಿ ಸ್ತಾನ ಪಡೆದುಕೊಂಡಿದೆ. ಪಾಕ ವಿಧಾನಗಳ ಬಗ್ಗೆ ಮಾಹಿತಿ ತಿಳಿಯುವುದಕ್ಕಾಗಿ ಜನರು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾರೆ. ಇದಲ್ಲದೆ ಮೋದಕ್ ಮತ್ತು ಕುಕೀಸ್ ಪಾಕವಿಧಾನಗಳು 'ಮೇಥಿ ಮಟರ್ ಮಲೈ' ಮತ್ತು 'ಪಾಲಕ್' ನಂತಹ ಹೋಮ್ಲಿ ಸ್ಟೇಪಲ್ಸ್ ಬಗ್ಗೆ ಸರ್ಚ್‌ ಮಾಡಲಾಗಿದೆ. ಕಾಡಾ, ಹಾಟ್ ಫೇವರಿಟ್ ಇಮ್ಯುನಿಟಿ-ಬೂಸ್ಟ್ ಮಾಡುವ ಮನೆಮದ್ದು, ಅಗ್ರ ರೆಸಿಪಿಗಳಲ್ಲಿ ಕೂಡ ಕಾಣಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹುಡುಕಾಟ

ಇದಲ್ಲದೆ ಹೆಚ್ಚಿನ ಜನರು ಯಾವ ಸುದ್ದಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹುಡುಕಾಟ ನಡೆಸಿದ್ದಾರೆ ಅನ್ನೊದನ್ನ ನೋಡುವುದಾದರೆ ಈ ಬಾರಿಯೂ ಕೋವಿಡ್-19 ಸುದ್ದಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಜನರು ಹೆಚ್ಚು ಹುಡುಕಿರುವ ಇತರ ಪ್ರಮುಖ ಅಂಶಗಳನ್ನು ನೋಡುವುದಾದರೆ ಪ್ರಮುಖ ಜಾಗತಿಕ ಘಟನೆಗಳು ಮತ್ತು ಟೋಕಿಯೊ ಒಲಿಂಪಿಕ್ಸ್, ಬ್ಲ್ಯಾಕ್ ಫಂಗಸ್, ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಪಶ್ಚಿಮ ಬಂಗಾಳ ಚುನಾವಣೆ ವಿಷಯಗಳ ಬಗ್ಗೆ ಕೂಡ ಗೂಗಲ್‌ನಲ್ಲಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

Best Mobiles in India

English summary
Google India today announced the results for its Year in Search 2021, recapping the top search trends of 2021 in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X