10,000ರೂ. ಒಳಗೆ 11GB RAMನ ಈ ಫೋನ್ ಮಾರುಕಟ್ಟೆಯಲ್ಲಿ ಅಬ್ಬರಿಸಲಿದೆಯಾ?

|

ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಒಂದಿಲ್ಲೊಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಆಗುತ್ತಲೆ ಇರುತ್ತವೆ. ಆದ್ರೆ ಬಿಡುಗಡೆ ಆಗುವ ಎಲ್ಲ ಫೋನ್‌ಗಳು ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಅವುಗಳಲ್ಲಿ ಕೆಲವೊಂದು ಲೀಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತವೆ, ಮತ್ತೆ ಕೆಲವು ಟ್ರೆಂಡ್‌ ಸೆಟ್ಟರ್ ಆಗುತ್ತವೆ. ಆದ್ರೆ ಇನ್ನು ಕೆಲವು ಫೋನ್‌ಗಳು ಹೇಳ ಹೆಸರಿಲ್ಲದೆ ಮಾರುಕಟ್ಟೆಯಿಂದ ಮರೆಯಾಗುತ್ತವೆ. ಅದಾಗ್ಯೂ, ಅಗ್ಗದ ಬೆಲೆಯಲ್ಲಿನ ಫೋನ್‌ಗಳು ಹೆಚ್ಚಿನ ಗಮನ ಸೆಳೆಯುತ್ತವೆ.

ಪ್ರಮುಖ

ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಅಗ್ಗದ ದರದ ಮೊಬೈಲ್‌ಗಳಿಗೆ ಉತ್ತಮ ಮಾರುಕಟ್ಟೆ ಇದೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್‌ ತಯಾರಿಕಾ ಸಂಸ್ಥೆಗಳು ಅಗ್ಗದ ಪ್ರೈಸ್‌ನಲ್ಲಿ ಆಕರ್ಷಕ ಫೀಚರ್ಸ್‌ಗಳಿರುವ ಫೋನ್‌ಗಳನ್ನು ಪರಿಚಯಿಸುತ್ತವೆ. ಹಾಗಂತ ಆಕರ್ಷಣೆಗೆ ಕೇವಲ ಅಗ್ಗದ ಪ್ರೈಸ್‌ ಟ್ಯಾಗ್‌ವೊಂದೆ ಮಾನದಂಡ ಆಗುವುದಿಲ್ಲ. ಬದಲಾಗಿ ಬೆಲೆಯೊಂದಿಗೆ ಕೆಲವು ಅತ್ಯುತ್ತಮ ಫೀಚರ್ಸ್‌ಗಳು ಸೇರಿದ್ದರೆ, ಅಂತಹ ಫೋನ್‌ಗಳು ಬೇಗನೆ ಗಮನ ಸೆಳೆಯುತ್ತವೆ.

5GB

ಹತ್ತು ಸಾವಿರ ರೂಪಾಯಿ ಪ್ರೈಸ್‌ಟ್ಯಾಗ್‌ನಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಟೆಕ್ನೋ ಸ್ಪಾರ್ಕ್‌ 9 ಫೋನ್ ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್ ಅಗ್ಗದ ಪ್ರೈಸ್‌ ಟ್ಯಾಗ್‌ ಹೊಂದಿದ್ದರೂ, 11GB RAM ಸಾಮರ್ಥ್ಯವನ್ನು ಹೊಂದಿರುವುದು ಪ್ಲಸ್‌ ಪಾಯಿಂಟ್‌ ಎನಿಸಿದೆ. ಇದರಲ್ಲಿ 6GB RAM ಆಯ್ಕೆ ಪಡೆದಿದ್ದು, ಹೆಚ್ಚುವರಿಯಾಗಿ 5GB RAM ವರ್ಚುವಲ್‌ ಆಯ್ಕೆ ಇದೆ. ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಇರುವುದು ಗಮನಾರ್ಹ.

ಸ್ಪಾರ್ಕ್‌

ಹತ್ತು ಸಾವಿರದೊಳಗೆ ಲಭ್ಯವಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಲೆವೆಲ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರುತ್ತವೆ. 2GB RAM ಅಥವಾ 3GB RAM ಹೆಚ್ಚೆಂದರೆ 4GB RAM ಸಾಮರ್ಥ್ಯವನ್ನು ಒಳಗೊಂಡಿರುತ್ತವೆ. ಆದ್ರೆ, ನೂತನ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 6GB RAM ಸಾಮರ್ಥ್ಯದಲ್ಲಿ ಎಂಟ್ರಿ ಕೊಟ್ಟಿರುವುದು ಆಕರ್ಷಕ ಎನಿಸಿದೆ. ಈ ಫೋನ್ 10,000ರೂ. ಪ್ರೈಸ್‌ ಟ್ಯಾಗ್‌ ವಿಭಾಗದಲ್ಲಿ ಸದ್ದು ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನುಳಿದಂತೆ ಟೆಕ್ನೋ ಸ್ಪಾರ್ಕ್‌ 9 ಫೋನ್‌ ಇತರೆ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್‌ 9: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಟೆಕ್ನೋ ಸ್ಪಾರ್ಕ್‌ 9: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 266 ppi ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದ್ದು, ವೀಡಿಯೋ ವೀಕ್ಷಣೆಗೆ ಹಾಗೂ ವೀಡಿಯೋ ಕರೆಗಳಿಗೆ ಯೋಗ್ಯವಾದ ಮಾದರಿಯನ್ನು ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್‌ 9: ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ

ಟೆಕ್ನೋ ಸ್ಪಾರ್ಕ್‌ 9: ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM + 64GB, 6GB RAM + 128GB ಹಾಗೂ 3GB RAM + 64GB ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ನೀವು ವರ್ಚುವಲ್‌ RAM ಫೀಚರ್ಸ್‌ ಮೂಲಕ 5GB RAM ವರೆಗೆ RAM ವಿಸ್ತರಿಸಬಹುದು. ಇನ್ನು RAM ವಿಸ್ತರಣೆಗೆ OTA ಅಪ್‌ಡೇಟ್ ಅಗತ್ಯವಿರಬಹುದು ಎಂದು ಕಂಪೆನಿ ಹೇಳಿದೆ.

ಟೆಕ್ನೋ ಸ್ಪಾರ್ಕ್‌ 9: ಕ್ಯಾಮೆರಾ ಸೆನ್ಸಾರ್ ಸ್ಪೆಷಲ್

ಟೆಕ್ನೋ ಸ್ಪಾರ್ಕ್‌ 9: ಕ್ಯಾಮೆರಾ ಸೆನ್ಸಾರ್ ಸ್ಪೆಷಲ್

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು AI ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ LED ಫ್ಲ್ಯಾಷ್ ಅನ್ನು ಹೊಂದಿದೆ. ಇದರ ಸೆಲ್ಫಿ ಕ್ಯಾಮೆರಾ ಬಗ್ಗೆ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಟೆಕ್ನೋ ಸ್ಪಾರ್ಕ್‌ 9: ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಇತರೆ ಸೌಲಭ್ಯಗಳು

ಟೆಕ್ನೋ ಸ್ಪಾರ್ಕ್‌ 9: ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಇತರೆ ಸೌಲಭ್ಯಗಳು

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಮತ್ತು ಬ್ಲೂಟೂತ್ 5.0. GPS, GNSS, ಗೆಲಿಲಿಯೋ, ಬೀಡೌ ಮತ್ತು 4G LTE ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ DTS ಬೆಂಬಲಿಸುವ ಸ್ಪೀಕರ್‌ಗಳನ್ನು ಒಳಗೊಂಡಿದೆ. ಜೊತೆಗೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಆಕ್ಸಿಲೆರೊಮೀಟರ್‌ ಅನ್ನು ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್‌ 9: ಬೆಲೆ ಮತ್ತು ಲಭ್ಯತೆ

ಟೆಕ್ನೋ ಸ್ಪಾರ್ಕ್‌ 9: ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 4GB + 64GB ಸ್ಟೋರೇಜ್‌ ಆಯ್ಕೆಗೆ 8,499ರೂ.ಬೆಲೆ ಹೊಂದಿದೆ. ಹಾಗೆಯೇ 6GB RAM + 128GB ಸ್ಟೋರೇಜ್‌ ಆಯ್ಕೆಯ ಬೆಲೆ 9,499ರೂ. ಆಗಿದೆ. ಇದರ ಮತ್ತೊಂದು ವೇರಿಯೆಂಟ್‌ನ ಬೆಲೆ ಇನ್ನು ಕೂಡ ಬಹಿರಂಗವಾಗಿಲ್ಲ. ಇನ್ನು ಈ ಸ್ಮಾರ್ಟ್‌ಫೋನ್‌ ಅಮೆಜಾನ್ ಪ್ರೈಮ್ ಡೇ ಸೇಲ್ 2022 ರ ಭಾಗವಾಗಿ ಅಮೆಜಾನ್ ಮೂಲಕ ಜುಲೈ 23 ರಂದು ಮಾರಾಟಕ್ಕೆ ಬರಲಿದೆ. ಈ ಫೋನ್‌ ಅನ್ನು ನೀವು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಟೆಕ್ನಾಲಜಿಯೊಂದಿಗೆ

ಹಾಗೆಯೇ ಟೆಕ್ನೋ ಕಂಪೆನಿ ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ನೂತನವಾಗಿ ಟೆಕ್ನೋ ಕ್ಯಾಮನ್‌ 19 ಮತ್ತು ಟೆಕ್ನೋ ಕ್ಯಾಮನ್‌ 19 ನಿಯೋ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಕೇಂದ್ರಿತ ಫೋನ್‌ಗಳಾಗಿದ್ದು, ಮೆಮೊರಿ ಫ್ಯೂಷನ್ ಟೆಕ್ನಾಲಜಿಯೊಂದಿಗೆ ಬರುತ್ತವೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿವೆ. ಆದರೆ ಮುಖ್ಯ ಕ್ಯಾಮೆರಾಗಳು ಮಾತ್ರ ಭಿನ್ನವಾಗಿವೆ.

Best Mobiles in India

English summary
This Phone Support 11GB RAM; Price Under Rs 10,000: Here is the Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X