Subscribe to Gizbot

ಏರ್‌ಟೆಲ್‌ ಗ್ರಾಹಕರಿಗೆ ಡಾಟಾ ಬೆನಿಫಿಟ್ಸ್‌ಗಳ ಸುರಿಮಳೆ

Written By:

ಏರ್‌ಟೆಲ್‌ ತನ್ನ ಗ್ರಾಹಕರಿಗೆ ಈಗ ಡಾಟಾ ಬಳಕೆಗೆ ಸಂಬಂಧಿಸಿದಂತೆ ಕ್ಯಾಶ್‌ಬ್ಯಾಕ್‌ ಆಫರ್‌ಗಳನ್ನು ನೀಡುತ್ತಿದೆ. ಕ್ಯಾಶ್‌ಬ್ಯಾಕ್‌ ಶೇಕಡ 50 ರಷ್ಟಿದ್ದು, ಸ್ಮಾರ್ಟ್‌ಫೊನ್ ಬೆನಿಫಿಟ್ಸ್‌ಮತ್ತು ಫ್ಯಾಮಿಲಿ ಶೇರಿಂಗ್ ಪ್ಯಾಕ್‌ಗಳನ್ನು ನೀಡುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್‌ಗಳಲ್ಲಿ ಡಾಟಾ ಬಳಕೆ ಕಡಿಮೆಗೊಳಿಸಲು ಅತ್ಯುತ್ತಮ ಸಲಹೆಗಳು

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ನೀಡಿರುವ ಆಫರ್‌ಗಳು ಏನು ಎಂಬುದನ್ನು ಇಲ್ಲಿ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌

ಏರ್‌ಟೆಲ್‌

232 ಮಿಲಿಯನ್‌ ಗಿಂತಲು ಹೆಚ್ಚು ಚಂದಾದಾರರನ್ನು ಹೊಂದಿರುವ ಭಾರತದ ಬಹುದೊಡ್ಡ ಟೆಲಿಕಾಂ ಆಪರೇಟರ್ ಏರ್‌ಟೆಲ್‌ ಮೊಬೈಲ್‌ ಇಂಟರ್ನೆಟ್‌ ಬಳಕೆದಾರರಿಗೆ ಹೊಸ ಡಾಟಾ ಬೆನಿಫಿಟ್ಸ್‌ ನೀಡುತ್ತಿದೆ.

ಹೊಸ ಡಾಟಾ ಪ್ಯಾಕ್‌ಗಳು

ಹೊಸ ಡಾಟಾ ಪ್ಯಾಕ್‌ಗಳು

ಏರ್‌ಟೆಲ್‌ ಹೊಸ ಡಾಟಾ ಪ್ಯಾಕ್‌ಗಳು ಉತ್ತಮ ಆಫರ್‌ಗಳೊಂದಿಗೆ ಡಾಟಾ ಕ್ಯಾಶ್‌ಬ್ಯಾಕ್‌, ಫ್ಯಾಮಿಲಿ ಡಾಟಾ ಶೇರ್‌ ಮತ್ತು ಇತರೆ ಸ್ಮಾರ್ಟ್‌ಫೋನ್‌ ಪ್ರಯೋಜನಗಳನ್ನು ಉಚಿತವಾಗಿ ಬಳಕೆದಾರರಿಗೆ ನೀಡಿದೆ.

anti-net neutrality

anti-net neutrality

ಏರ್‌ಟೆಲ್‌ ಈ ಹಿಂದೆಯಷ್ಟೇ ಈ ವರ್ಷದ ಏರ್ಪಿಲ್‌ ತಿಂಗಳಲ್ಲಿ ವಿವಾದಕ್ಕೆ ಒಳಗಾದ anti-net neutrality (ಏರ್‌ಟೆಲ್‌ ಜಿರೋ) ಲಾಂಚ್‌ ಮಾಡಿತ್ತು. ಆದರೆ ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ಇದುವರೆಗೆ ನೀಡಿಲ್ಲ.

 ಏರ್‌ಟೆಲ್‌ ಡಾಟಾ ಕ್ಯಾಶ್‌ಬ್ಯಾಕ್‌ ಆಫರ್

ಏರ್‌ಟೆಲ್‌ ಡಾಟಾ ಕ್ಯಾಶ್‌ಬ್ಯಾಕ್‌ ಆಫರ್

ಏರ್‌ಟೆಲ್‌ ಡಾಟಾ ಕ್ಯಾಶ್‌ಬ್ಯಾಕ್‌ ಆಫರ್, ಬಳಕೆದಾರರು ಅವರ ಡಾಟಾ ಬಳಕೆಯಲ್ಲಿ ಶೇಕಡ 50 ರಷ್ಟು ಹೆಚ್ಚಿನ ಡಾಟಾ ಬಳಕೆ ಮಾಡುವ ಅವಕಾಶ ನೀಡಿದೆ.

2G/3G/4G

2G/3G/4G

ಯಾವುದೇ ಮೊಬೈಲ್‌ ಇಂಟರ್ನೆಟ್ (2G/3G/4G) ಬಳಕೆಯಲ್ಲಿ 12.00am ನಿಂದ 6.00pm ವರೆಗೆ ಬಳಕೆದಾರರು ಶೇಕಡ 50 ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದೆ.

ಆಫರ್‌ ಪಡೆಯುವುದು ಹೇಗೆ?

ಆಫರ್‌ ಪಡೆಯುವುದು ಹೇಗೆ?

121 ಗೆ ಎಂದು ಸಂದೇಶ ಕಳುಹಿಸುವ ಮೂಲಕ ಅಥವಾ 55555 ಗೆ ಮಿಸ್‌ಕಾಲ್‌ ನೀಡುವ ಮೂಲಕ ಅಥವಾ ಮೈ ಏರ್‌ಟೆಲ್‌ ಅಪ್ಲಿಕೇಶನ್‌ಗೆ ಲಾಗಿನ್‌ ಆಗುವ ಮೂಲಕ ಆಫರ್‌ಗಳನ್ನು ಪಡೆಯಬಹುದಾಗಿದೆ.

ಆಫರ್‌ ಪಡೆಯುವುದು ಹೇಗೆ?

ಆಫರ್‌ ಪಡೆಯುವುದು ಹೇಗೆ?

ಏರ್‌ಟೆಲ್‌ ಪ್ರೀಪೇಡ್ ಮೊಬೈಲ್‌ ಬಳಕೆದಾರರು ಇಂದಿನಿಂದಲೇ ಆಫರ್‌ ಪ್ರಯೋಜನ ಪಡೆಯಬಹುದಾಗಿದೆ. ಆದರೆ ಪೋಸ್ಟ್‌ ಪೇಡ್‌ ಗ್ರಾಹಕರಿಗೆ ಈ ಆಫರ್‌ ಶೀಘ್ರದಲ್ಲೇ ವಿಸ್ತರಿಸಲಾಗುವುದು ಎನ್ನಲಾಗಿದೆ.

ಮಾರ್ಕೆಟಿಂಗ್‌ ಗಿಮಿಕ್

ಮಾರ್ಕೆಟಿಂಗ್‌ ಗಿಮಿಕ್

ಆಫರ್‌ಗಳು ಕನಿಷ್ಟವಾಗಿದ್ದು ಕೇವಲ ಮಾರ್ಕೆಟಿಂಗ್‌ ಗಿಮಿಕ್‌ ಆಗಿದೆ. ಅಲ್ಲದೇ ಈ ಆಫರ್‌ ಅನ್ನು ರಾತ್ರಿ ಶಿಫ್ಟ್‌ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚು ಪ್ರಯೋಜನ ಪಡೆಯಬಹುದಾಗಿದೆ.

 ಫ್ಯಾಮಿಲಿ ಡಾಟಾ ಶೇರ್

ಫ್ಯಾಮಿಲಿ ಡಾಟಾ ಶೇರ್

ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರು 3G/4G ಡಾಟಾವನ್ನು ಫ್ಯಾಮಿಲಿ ಸದಸ್ಯರೊಂದಿಗೆ ಶೇರ್‌ ಮಾಡಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್‌ ಆಶ್ಚರ್ಯಕರ ಪ್ರಯೋಜನಗಳು

ಸ್ಮಾರ್ಟ್‌ಫೋನ್‌ ಆಶ್ಚರ್ಯಕರ ಪ್ರಯೋಜನಗಳು

ಏರ್‌ಟೆಲ್‌ ಪ್ರೀಪೇಡ್‌ನಿಂದ ತಮ್ಮ ಮೊಬೈಲ್‌ ಡಿವೈಸ್‌ ಅನ್ನು ಯಾರು ಅಪ್‌ಗ್ರೇಡ್‌ ಮಾಡುತ್ತಾರೋ ಅವರು ಈ ಕೆಳಗಿನ ಉಡುಗೊರೆಗಳಿಗೆ ಪಾತ್ರರಾಗುತ್ತಾರೆ.
* ಡಬಲ್‌ ಡಾಟಾ ಬೆನಿಫಿಟ್ಸ್‌
* ಒಂದು ವರ್ಷದ ಅವಧಿಗೆ ಉಚಿತ ಡಾಟಾ
* ಟ್ಯಾಬ್ಲೆಟ್
* ಬ್ಲೂಟೂತ್‌ ಸ್ಪೀಕರ್‌
* ಹೆಡ್‌ಸೆಟ್ಸ್‌

ಆಫರ್‌ ಯಾರಿಗೆ ?

ಆಫರ್‌ ಯಾರಿಗೆ ?

ಏರ್‌ಟೆಲ್‌ನ ಈ ಆಫರ್‌ಗಳು ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಸಹ ದೊರೆಯಲಿದೆ.

ರೂ. 750

ರೂ. 750

ಪ್ರೀಪೇಡ್‌ ಗ್ರಾಹಕರು ಸ್ನಾಪ್‌ಡೀಲ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಮೂಲಕ ರೂ. 750 ರಿಯಾಯಿತಿಯನ್ನು ಒಮ್ಮೆ ಪಡೆಯಬಹುದಾಗಿದೆ.

ಏರ್‌ಟೆಲ್‌ ಗ್ರಾಹಕರಿಗೆ ಉಚಿತ ಡೌನ್‌ಲೋಡ್‌

ಏರ್‌ಟೆಲ್‌ ಗ್ರಾಹಕರಿಗೆ ಉಚಿತ ಡೌನ್‌ಲೋಡ್‌

ಏರ್‌ಟೆಲ್‌ ಗ್ರಾಹಕರು ಉಚಿತವಾಗಿ ಅನ್‌ಲಿಮಿಟೆಡ್‌ ಹಾಡುಗಳನ್ನು ವಿಂಕ್‌ ಮ್ಯೂಸಿಕ್‌ನಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದೆ. ಹಾಗೂ 5 ಉಚಿತ ಮೂವಿಗಳನ್ನು ವಿಂಕ್‌ ಮೂವೀಸ್‌ನನಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದೆ. ಆದರೆ ಡಾಟಾ ಚಾರ್ಜ್‌ ಇರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel, India’s largest telecom operator with over 232 million subscribers have announced new data benefits for their mobile internet users. New data deals and offers include Data Cashback, Family Data Share, Smartphone Surprises and other benefits that will be offered to customers free of cost.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot