ಟ್ವಿಟ್ಟರ್ ಸಿಇಒ ಗೂಗಲ್ ಸರ್ಚ್ ಬಳಸುವುದಿಲ್ಲವಂತೆ!..ಏಕೆ ಗೊತ್ತಾ?

|

ಇಂಟರ್ನೆಟ್ ಬಳಸುವ ಬಹುತೇಕ ಎಲ್ಲರೂ ಗೂಗಲ್ ಅನ್ನೇ ಬಳಸುತ್ತಾರೆ ಎನ್ನುವಷ್ಟು ಗೂಗಲ್ ಸರ್ಚ್ ಎಂಜಿನ್ ಹೆಸರು ಮಾಡಿದೆ. ಸರ್ಚ್ ಮಾರುಕಟ್ಟೆಯಲ್ಲಿ ಸುಮಾರು 90% ರಷ್ಟು ಗೂಗಲ್ ಒಡೆತನದಲ್ಲಿದ್ದು, ವಿಶ್ವದಲ್ಲೇ ಹೆಚ್ಚು ಬಳಕೆಯಾಗುವ ಸರ್ಚ್ ಎಂಜಿನ್ ಆಗಿ ಗೂಗಲ್ ಗುರುತಿಸಿಕೊಂಡಿದೆ. ಆದರೆ, ಟೆಕ್ ದಿಗ್ಗಜ ವ್ಯಕ್ತಿ ಹಾಗೂ ಟ್ವಿಟ್ಟರ್ ಸಿಇಒ 'ಜ್ಯಾಕ್ ಡಾರ್ಸೆ' ಮಾತ್ರ ತಾನು ಗೂಗಲ್ ಅನ್ನು ಬಳಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಡಾರ್ಸೆ ಅವರು ಇತ್ತೀಚೆಗೆ ಟ್ವೀಟ್ ಒಂದನ್ನು ಮಾಡಿದ್ದು, ಅಲ್ಲಿ ಅವರು ಗೂಗಲ್ ಹುಡುಕಾಟದ 'ಪ್ರತಿಸ್ಪರ್ಧಿ' ಯನ್ನು ಹೊಗಳಿದ್ದಾರೆ.!

 ಟ್ವಿಟ್ಟರ್

ಹೌದು, ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟ್ ಒಂದರಲ್ಲಿ ಗೂಗಲ್‌ಗೆ ಪರ್ಯಾಯವಾಗಿರುವ 'ಡಕ್‌ಡಕ್‌ಗೋ' ಸರ್ಚ್ ಎಂಜಿನ್ ಅನ್ನು ಹೊಗಳಿದ್ದಾರೆ. 'ನಾನು ಡಕ್ ಡಕ್ಗೊವನ್ನು ಪ್ರೀತಿಸುತ್ತೇನೆ. ಇದು ನನ್ನ ಡೀಫಾಲ್ಟ್ ಸರ್ಚ್ ಎಂಜಿನ್ ಆಗಿದೆ. ಅಪ್ಲಿಕೇಶನ್ ಇನ್ನೂ ಉತ್ತಮವಾಗಿದೆ! ಎಂದು ಹೇಳಿಕೊಂಡಿದ್ದಾರೆ. ಅಂದರೆ, ಅವರು ನೇರವಾಗಿ ಗೂಗಲ್ ಬಗ್ಗೆ ಹೇಳದೇ ಇದ್ದರೂ ಸಹ ಗೂಗಲ್‌ಗೆ ಪರ್ಯಾಯವಾಗಿರುವ 'ಡಕ್‌ಡಕ್‌ಗೋ' ಸರ್ಚ್ ಎಂಜಿನ್ ಹೆಸರಿಸುವ ಮೂಲಕ ಗೂಗಲ್ ಅನ್ನು ಟ್ರೋಲ್ ಮಾಡುವ ಉದ್ದೇಶ ಅವರಲ್ಲಿದೆ ಎಂದು ಹೇಳಲಾಗಿದೆ.

'ಡಕ್‌ಡಕ್‌ಗೋ'

ನಾವು ತಿಳಿಯಬೇಕಾದ ವಿಷಯವೆಂದರೆ, 'ಡಕ್‌ಡಕ್‌ಗೋ' ಎಂಬ ಸರ್ಚ್ ಎಂಜಿನ್ ನಿಜವಾಗಿಯೂ ಒಂದು ಅತ್ಯುತ್ತಮ ಸರ್ಚ್ ಎಂಜಿನ್ ಆಗಿದೆ. ಜಾಹೀರಾತುಗಳೊಂದಿಗೆ ಅದು ತನ್ನ ಬಳಕೆದಾರರನ್ನು ಅನುಸರಿಸುವುದಿಲ್ಲ ಅಥವಾ ಅವರ ಐಪಿ ವಿಳಾಸಗಳನ್ನು ಟ್ರ್ಯಾಕ್ ಮಾಡುವುದಿಲ್ಲ ಎಂದು ಡಕ್‌ಡಕ್‌ಗೋ' ಕಂಪೆನಿ ಸ್ಪಷ್ಟಪಡಿಸುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕಂಪನಿಯು ಒಂದು ದಿನದಲ್ಲಿ ಎಷ್ಟು ಹುಡುಕಾಟಗಳನ್ನು ಹೊಡೆದಿದೆ ಎಂದು ಟ್ವೀಟ್ ಮಾಡಿದೆ. ಅಂದರೆ, ಡಕ್‌ಡಕ್‌ಗೋ' ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದನ್ನು ನಾವು ನೋಡಬಹುದು.

10 ಮಿಲಿಯನ್

"ಒಂದು ದಿನದಲ್ಲಿ 10 ಮಿಲಿಯನ್ ಖಾಸಗಿ ಹುಡುಕಾಟಗಳನ್ನು ತಲುಪಲು ನಮಗೆ ಏಳು ವರ್ಷಗಳು ಬೇಕಾದವು, ನಂತರ 20 ಮಿಲಿಯನ್ ಅನ್ನು ಹೊಡೆಯಲು ಇನ್ನೂ ಎರಡು ವರ್ಷಗಳು ಮತ್ತು ಈಗ ಒಂದು ವರ್ಷದ ನಂತರ ನಾವು 30 ಮಿಲಿಯನ್ ತಲುಪದ್ದೇವೆ" ಎಂದು 'ಡಕ್‌ಡಕ್‌ಗೋ' ತಿಳಿಸಿದೆ. ಒಂದು ದಿನದಲ್ಲಿ ಗೂಗಲ್ ಮಾಡುವ 3 ಬಿಲಿಯನ್ ಪ್ಲಸ್ ಹುಡುಕಾಟಗಳಿಗೆ ಹೋಲಿಸಿದರೆ 30 ಮಿಲಿಯನ್ ನಿಜಕ್ಕೂ ಚಿಕ್ಕದಾಗಿದೆ. ಆದರೆ ಗೌಪ್ಯತೆ ದೃಷ್ಟಿಯಲ್ಲಿ ನೋಡಿದರೆ ಡಕ್‌ಡಕ್‌ಗೋ ಬಳಸಲು ಯಾವಾಗಲೂ ಇದೊಂದು ಉತ್ತಮ ಕಾರಣವಾಗುತ್ತದೆ.

ಗೌಪ್ಯತೆ ನೀತಿ

"ನಮ್ಮ ಗೌಪ್ಯತೆ ನೀತಿ ಸರಳವಾಗಿದೆ: ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ" ಎಂದು ಡಕ್‌ಡಕ್‌ಗೋ ಸ್ಪಷ್ಟವಾಗಿ ಹೇಳುತ್ತದೆ. ಇದರಿಂದ ಹೆಚ್ಚೆಚ್ಚು ಬಳಕೆದಾರರನ್ನು ಆಕರ್ಷಿಸಲು ಸಂಸ್ಥೆಗೆ ನೆರವಾಗುತ್ತದೆ. ಡಕ್‌ಡಕ್‌ಗೊ ಬಳಕೆದಾರರ ಸಂಖ್ಯೆ ಅಥವಾ ಹುಡುಕಾಟಗಳು ಸಾಕಷ್ಟು ಚಿಕ್ಕದಾಗಿರಬಹುದು. ಆದರ ಅವರು ಜ್ಯಾಕ್ ಡಾರ್ಸಿಯಂತಹ ಉನ್ನತ ವ್ಯಕ್ತಿಯನ್ನು ತಮ್ಮ ಬಳಕೆದಾರನನ್ನಾಗಿ ಕಂಡುಕೊಂಡಿರುವುದು ಡಕ್‌ಡಕ್‌ಗೊಗೆ ಸಾಕಷ್ಟು ಶಕ್ತಿಯನ್ನು ನೀಡಿದೆ ಎಂದು ಹೇಳಬಹುದು.

Most Read Articles
Best Mobiles in India

English summary
Google Search is the most widely used engine in the world by almost everyone who uses the Internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X