ಐಫೋನ್‌ 14 Crash Detection ಟೆಸ್ಟ್‌ ಪರೀಕ್ಷಿಸಲು ಈ ಯೂಟ್ಯೂಬರ್ ಮಾಡಿದ್ದೇನು ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ಯುಟ್ಯೂಬ್‌ ಕಂಟೆಂಟ್‌ ಕ್ರಿಯೆಟರ್‌ಗಳು ವೀಕ್ಷಕರನ್ನು ಸೆಳೆಯುವುದಕ್ಕಾಗಿ ನಾನಾ ಕಸರತ್ತುಗಳನ್ನು ನಡೆಸುತ್ತಾರೆ. ವೀಕ್ಷಕರಿಗೆ ಸಾಕಷ್ಟು ಸರಳವಾಗಿ ಹಾಗೂ ಅವರ ಮನಸ್ಸಿಗೆ ಹತ್ತಿರವಾಗುವ ರೀತಿಯ ಕಂಟೆಂಟ್‌ಗಳ ಮೂಲಕ ಮನಗೆಲ್ಲುವ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುಟ್ಯೂಬರ್‌ ತನ್ನ ವೀಕ್ಷಕರಿಗಾಗಿ ಮಾಡಿದ ಕಸರತ್ತು ನೋಡಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. ಏಕೆಂದರೆ ವೀಡಿಯೊ ಕಂಟೆಂಟ್‌ ಅನ್ನು ಅರ್ಥ ಮಾಡಿಸುವುದಕ್ಕಾಗಿ ನಿಜವಾದ ಕಾರು ಅಪಘಾತವನ್ನು ಮಾಡಿದ್ದಾನೆ.

ಯುಟ್ಯೂಬರ್‌

ಹೌದು, ಯುಟ್ಯೂಬರ್‌ ಒಬ್ಬ ಅಪಲ್‌ ಐಫೋನ್‌ 14 ಸರಣಿಯ ಫೀಚರ್ಸ್‌ ಬಗ್ಗೆ ವಿವರವನ್ನು ನೀಡುವುದಕ್ಕಾಗಿ ತನ್ನ ಕಾರನ್ನು ಅಪಘಾತ ಮಾಡಿದ್ದಾನೆ. ಐಫೋನ್‌ 14 ಸರಣಿಯಲ್ಲಿರುವ ಪ್ರಮುಖ ಫೀಚರ್ಸ್‌ ಒಂದರ ಬಗ್ಗೆ ತಿಳಿಸುವುದಕ್ಕಾಗಿ ಈ ರೀತಿಯ ಕೆಲಸ ಮಾಡಿದ್ದಾನೆ. ಈ ಕೆಲಸದಲ್ಲಿ ಆತ ಸಫಲ ಕೂಡ ಆಗಿದ್ದಾನೆ. ಹಾಗಾದ್ರೆ ಆತ ಐಫೋನ್‌ 14 ಸರಣಿಯಲ್ಲಿನ ಯಾವ ಫೀಚರ್ಸ್‌ ಬಗ್ಗೆ ತಿಳಿಸಲು ಹೋಗಿದ್ದಾನೆ. ಆತ ಕಾರು ಆಕ್ಸಿಡೆಂಟ್‌ ಮಾಡಿದ್ದು ಎಲ್ಲಿ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಫೋನ್‌

ಇತ್ತೀಚಿಗೆ ಬಿಡುಗಡೆಯಾದ ಐಫೋನ್‌ 14 ಸರಣಿ ಕ್ರ್ಯಾಶ್‌ ಡಿಟೆಕ್ಷನ್‌ ಎನ್ನುವ ಫೀಚರ್ಸ್‌ ಅನ್ನು ಒಳಗೊಂಡಿದೆ. ಈ ಫೀಚರ್ಸ್‌ ತುರ್ತು ಸಂದರ್ಭದಲ್ಲಿ ಆಟೋಮ್ಯಾಟಿಕ್‌ ಎರ್ಮಜೆನ್ಸಿ ಕರೆಯನ್ನು ಮಾಡಲಿದೆ. ಇದರಿಂದ ಐಫೋನ್‌ 14 ಸರಣಿ ಫೋನ್‌ ಬಳಸುವವರಿಗೆ ಅಪಘಾತದಂತಹ ತುರ್ತುಸಂದರ್ಭದಲ್ಲಿ ತ್ವರಿತವಾಗಿ ಸಹಾಯ ಸಿಗಲಿದೆ ಎಂದು ಆಪಲ್‌ ಕಂಪೆನಿ ಹೇಳಿದೆ. ಈ ಫೀಚರ್ಸ್‌ ನಿಜವಾಗಿಯೂ ಕಾರ್ಯನಿರ್ವಹಿಸುತ್ತಾ ಅನ್ನೊದನ್ನ ವಿವರಿಸುವುದಕ್ಕಾಗಿ ಯುಟ್ಯೂಬರ್‌ ಈ ರೀತಿಯ ಸಾಹಸಕ್ಕೆ ಕೈ ಹಾಕಿದ್ದಾನೆ.

ಡಿಟೆಕ್ಷನ್‌

ಕ್ರ್ಯಾಶ್ ಡಿಟೆಕ್ಷನ್‌ ಫೀಚರ್ಸ್‌ನ ವಿವರ ನೀಡಲು ಯುಟ್ಯೂಬರ್‌ ಕಾರು ಅಪಘಾತದ ಸನ್ನಿವೇಶವನ್ನು ನೈಜವಾಗಿ ಚಿತ್ರಿಸಿದ್ದಾನೆ. ಇದಕ್ಕಾಗಿ ಆತ ಬಯಲು ಪ್ರದೇಶದಲ್ಲಿ ರಿಮೋಟ್‌ ಕಂಟ್ರೋಲ್‌ ಡ್ರೈವರ್‌ಲೆಸ್‌ ಕಾರನ್ನು ಬಳಸಿದ್ದಾನೆ. ಈ ಕಾರ್‌ ಅನ್ನು ವಿವಿಧ ವೇಗದ ಸಾಮರ್ಥ್ಯದಲ್ಲಿ ಚಲಾಯಿಸಿ ಆಕ್ಸಿಡೆಂಟ್‌ ಮಾಡಿಕೊಂಡರೆ ಕ್ರ್ಯಾಶ್‌ ಡಿಟೆಕ್ಷನ್‌ ಹೇಗೆ ಆಕ್ಟಿವ್‌ ಆಗಲಿದೆ ಎಂಬುದರ ಸಂಪೂರ್ಣ ವಿವರವನ್ನು ನೀಡಿದ್ದಾನೆ. ಇನ್ನು ಈ ಪ್ರಯತ್ನದಲ್ಲಿ ಕ್ರ್ಯಾಶ್‌ ಡಿಟೆಕ್ಷನ್‌ ಫೀಚರ್ಸ್‌ ಕೆಲ ಸೆಕೆಂಡುಗಳ ನಂತರ ಆಕ್ಟಿವ್‌ ಆಗಿರುವುದನ್ನು ಕಾಣಬಹುದಾಗಿದೆ.

ಯುಟ್ಯೂಬರ್‌

ಇನ್ನು ಯುಟ್ಯೂಬರ್‌ ಮೊದಲ ಪ್ರಯತ್ನದಲ್ಲಿ ಕಡಿಮೆ ವೇಗದಲ್ಲಿ ಕಾರನ್ನು ಚಲಿಸುವಂತೆ ಮಾಡುತ್ತಾನೆ. ಗುಜರಿ ವಾಹನಗಳ ಮೇಲೆ ಅಪಘಾತವಾಗುವ ರೀತಿಯಲ್ಲಿ ಮಾಡಿದ್ದಾನೆ. ಈ ಸಮಯದಲ್ಲಿ ಕ್ರ್ಯಾಶ್‌ ಡಿಟೆಕ್ಷನ್‌ ಕೆಲ ಸಮಯದ ನಂತರ ಆಕ್ಟಿವ್‌ ಆಗಿದೆ. ಅಲ್ಲದೆ ತುರ್ತು SOS ಕೌಂಟ್‌ಡೌನ್ ಅನ್ನು ಪ್ರಾರಂಭಿಸಿದೆ. ನಂತರ ಎರಡನೇ ಪ್ರಯತ್ನದಲ್ಲಿ ಕಾರು ಹೆಚ್ಚಿನ ವೇಗದಲ್ಲಿ ವಾಹನಗಳ ಸಮೂಹಕ್ಕೆ ಡಿಕ್ಕಿಯಾಗಲಿದೆ. ಈ ಸನ್ನಿವೇಶದಲ್ಲಿ ಕೂಡ ಈ ಫೀಚರ್ಸ್‌ ಆಕ್ಟಿವ್‌ ಆಗಿರುವುದು ಕಂಡು ಬಂದಿದೆ.

ಮಾಡುವ

ಹೀಗೆ ಹೊಸ ಸಾಹಸವನ್ನು ಮಾಡುವ ಮೂಲಕ ಯುಟ್ಯೂಬರ್‌ ತನ್ನ ವೀಕ್ಷಕರಿಗೆ ಐಫೋನ್‌ 14 ಫೀಚರ್ಸ್‌ ಬಗ್ಗೆ ಮಾಹಿತಿ ನೀಡಿದ್ದಾನೆ. ತಾನು ನೀಡುವ ಮಾಹಿತಿ ಎಷ್ಟು ಸತ್ಯವಿದೆ ಅನ್ನೊದನ್ನ ತಿಳಿಸುವುದಕ್ಕಾಗಿ ಈ ರೀತಿಯ ಪ್ರಯತ್ನವನ್ನು ಆತ ಮಾಡಿದ್ದಾನೆ. ಇದಕ್ಕಾಗಿ ಆತ ಮಾಡಿರುವ ಈ ಪ್ರಯತ್ನವನ್ನು ಎಲ್ಲರೂ ಮೆಚ್ಚಲೇಬೇಕು. ಯಾಕಂದ್ರೆ ಆಫಲ್‌ ಐಫೋನ್‌ 14 ಸರಣಿಯಲ್ಲಿರುವ ಕ್ರ್ಯಾಶ್‌ ಡಿಟೆಕ್ಷನ್‌ ಅಪಘಾತದ ಸಮಯದಲ್ಲಿ ಎಷ್ಟು ಸಹಾಯಕ ಅನ್ನೊದು ಇದರಿಂದ ಬಹಿರಂಗವಾಗಿದೆ. ಸದ್ಯ ಇದೇ ವೀಡಿಯೋ ಇದೀಗ ಆನ್‌ಲೈನ್‌ನಲ್ಲಿ ಸಾಕಷ್ಟು ವೈರಲ್‌ ಆಗಿದೆ. ವೀಕ್ಷಕರಿಗಾಗಿ ಯುಟ್ಯೂಬರ್‌ ಮಾಡಿರುವ ಕಸರತ್ತು ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ.

Best Mobiles in India

English summary
This YouTuber performs a car accident to test iPhone 14 Crash Feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X