ಥಾಮ್ಸನ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಬೆಲೆ ಎಷ್ಟು?

|

ಭಾರತದ ಟಿವಿ ಮಾರುಕಟ್ಟೆಯಲ್ಲಿ ಥಾಮ್ಸನ್‌ ಕಂಪೆನಿ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ QLED ಸ್ಮಾರ್ಟ್ ಟಿವಿಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಇನ್ನು ವಿಶೇಷವೆಂದರೆ ಈ ಸ್ಮಾರ್ಟ್ ಟಿವಿ ಸರಣಿಯನ್ನು ಭಾರತದಲ್ಲಿ ತಯಾರಿಸಲಾಗಿದ್ದು, 50-ಇಂಚಿನ, 55-ಇಂಚಿನ ಮತ್ತು 65-ಇಂಚಿನ ಮೂರು ಮಾದರಿಗಳಲ್ಲಿ ಬರಲಿದೆ.

ಥಾಮ್ಸನ್‌

ಹೌದು, ಥಾಮ್ಸನ್‌ ಕಂಪೆನಿ QLED ಸ್ಮಾರ್ಟ್ ಟಿವಿ ಸರಣಿಯನ್ನು ಪರಿಚಯಿಸಿದೆ. ಇದರಲ್ಲಿ ಮೂರು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದೆ. ಈ ಮೂರು ಮಾದರಿಗಳು ಕೂಡ ಗೂಗಲ್‌ ಟಿವಿ, ಡಾಲ್ಬಿ ವಿಷನ್‌, ಡಾಲ್ಬಿ ಅಟ್ಮೋಸ್‌ ಮತ್ತು ಡಿಟಿಎಸ್‌ ಟ್ರೂ ಸರೌಂಡ್ ಸೌಂಡ್‌ಗೆ ಬೆಂಬಲವನ್ನು ಹೊಂದಿವೆ. ಇನ್ನು ಈ ಸ್ಮಾರ್ಟ್ ಟಿವಿಗಳು ಬಹು ವಯಸ್ಕ ಮತ್ತು ಮಕ್ಕಳ ಬಳಕೆದಾರರ ಪ್ರೊಫೈಲ್‌ಗಳಿಗೆ ಬೆಂಬಲವನ್ನು ಹೊಂದಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು? ಬೆಲೆ ಎಷ್ಟಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಥಾಮ್ಸನ್ QLED ಸ್ಮಾರ್ಟ್ ಟಿವಿ ಸರಣಿ ಫೀಚರ್ಸ್‌!

ಥಾಮ್ಸನ್ QLED ಸ್ಮಾರ್ಟ್ ಟಿವಿ ಸರಣಿ ಫೀಚರ್ಸ್‌!

ಥಾಮ್ಸನ್‌ ಕಂಪೆನಿ ಹೊಸದಾಗಿ ಪರಿಚಯಿಸಿರುವ ಸ್ಮಾರ್ಟ್‌ಟಿವಿ ಸರಣಿ 50-ಇಂಚಿನ, 55-ಇಂಚಿನ ಮತ್ತು 65-ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಬರಲಿವೆ. ಈ ಸ್ಮಾರ್ಟ್ ಟಿವಿ ಸರಣಿಯಲ್ಲಿನ ಎಲ್ಲಾ ಮಾದರಿಗಳು HDR 10+, ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್ಟ್ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್‌ ಬೆಂಬಲದೊಂದಿಗೆ 4L QLED ಡಿಸ್‌ಪ್ಲೇ ಹೊಂದಿವೆ. ಇನ್ನು 50 ಮತ್ತು 55-ಇಂಚಿನ ಮಾದರಿಗಳು 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಆದರೆ 65 ಇಂಚಿನ ಮಾದರಿಯು 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ.

ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ ಸರಣಿಯಲ್ಲಿನ ಎಲ್ಲಾ ಮಾದರಿಗಳು 40W ನ ಒಟ್ಟು ಔಟ್‌ಪುಟ್‌ನೊಂದಿಗೆ ಎರಡು ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿವೆ. ಅಲ್ಲದೆ DTS ಟ್ರೂಸರ್‌ರೌಂಡ್‌ ಸೌಂಡ್‌ಗೆ ಬೆಂಬಲವನ್ನು ನೀಡುತ್ತವೆ. ಈ ಸ್ಮಾರ್ಟ್‌ಟಿವಿಗಳು ಮೀಡಿಯಾ ಟೆಕ್ MT9062 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ-ಜಿ 52 ಜಿಪಿಯು ಸಪೋರ್ಟ್‌ ಪಡೆದಿವೆ. ಹಾಗೆಯೇ 2GB RAM ಮತ್ತು 16GB ಸ್ಟೋರೇಜ್ ಸ್ಪೇಸ್‌ ಅನ್ನು ಹೊಂದಿದೆ. ಇದಲ್ಲದೆ ಗೂಗಲ್‌ನ ಗೂಗಲ್‌ ಟಿವಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ.

ಸ್ಮಾರ್ಟ್

ಇನ್ನು ಈ ಸ್ಮಾರ್ಟ್ ಟಿವಿಗಳು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ಹಾಟ್‌ಸ್ಟಾರ್, ಆಪಲ್‌ ಟಿವಿ, ವೂಟ್‌, ಜೀ5 ಮತ್ತು ಸೋನಿ ಲೈವ್‌ನಂತಹ 10,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ನೀಡುತ್ತವೆ. ಅಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0, ಡ್ಯುಯಲ್-ಬ್ಯಾಂಡ್ ವೈ-ಫೈ, ಇನ್-ಬಿಲ್ಟ್ ಕ್ರೋಮಾಸ್ಟ್, ಏರ್‌ಪ್ಲೇ ಬೆಂಬಲ, ಮೂರು HDMI ಪೋರ್ಟ್‌ಗಳು ಮತ್ತು ಎರಡು USB ಪೋರ್ಟ್‌ಗಳನ್ನು ಬೆಂಬಲಿಸಲಿವೆ. ಜೊತೆಗೆ ಗೂಗಲ್ ಅಸಿಸ್ಟೆಂಟ್‌ಗೆ ಬೆಂಬಲದೊಂದಿಗೆ ಧ್ವನಿ ಸಕ್ರಿಯಗೊಳಿಸಿದ ರಿಮೋಟ್‌ನೊಂದಿಗೆ ಬರುತ್ತವೆ.

ಸ್ಮಾರ್ಟ್‌ಟಿವಿಗಳು

ಇದಲ್ಲದೆ ಈ ಸ್ಮಾರ್ಟ್‌ಟಿವಿಗಳು ಬಹು ವಯಸ್ಕ ಮತ್ತು ಮಕ್ಕಳ ಬಳಕೆದಾರರ ಪ್ರೊಫೈಲ್‌ಗಳಿಗೆ ಬೆಂಬಲ ನೀಡುವ ಫೀಚರ್‌ ಅನ್ನು ಕೂಡ ಹೊಂದಿವೆ. ಸ್ಮಾರ್ಟ್‌ಫೋನ್‌ನಿಂದ ಪ್ರೊಫೈಲ್‌ಗಳಿಗೆ ಚಲನಚಿತ್ರಗಳು ಮತ್ತು ಟಿವಿ ಸರಣಿಗಳನ್ನು ಉಳಿಸುವ ಸಾಮರ್ಥ್ಯವನ್ನು ಪಡೆದಿವೆ. ಅಲ್ಲದೆ ಲೈಟ್‌ಗಳು ಮತ್ತು ಕ್ಯಾಮೆರಾಗಳು ಸೇರಿದಂತೆ ಸ್ಮಾರ್ಟ್ ಹೋಮ್ ಕಂಟ್ರೋಲ್‌ಗಳಿಗೆ ಬೆಂಬಲ ನೀಡಲಿವೆ. ಕಂಟೆಂಟ್‌ ಬ್ಲಾಕ್‌ನೊಂದಿಗೆ ಚೈಲ್ಡ್‌ ಪ್ರೊಫೈಲ್‌ಗಳಿಗೆ ಬೆಂಬಲವನ್ನು ಕೂಡ ನೀಡಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಥಾಮ್ಸನ್‌ QLED ಸ್ಮಾರ್ಟ್ ಟಿವಿ ಸರಣಿಯ 50 ಇಂಚಿನ ಮಾದರಿಯು 33,999ರೂ. ಬೆಲೆ ಹೊಂದಿದೆ. ಆದರೆ 50 ಇಂಚಿನ ಮಾದರಿಯ ಬೆಲೆ 40,999ರೂ. ಆಗಿದೆ. ಇನ್ನು ಇದರ 65 ಇಂಚಿನ ಮಾದರಿಯ ಬೆಲೆ 59,999 ರೂ.ಗೆ ನಿಗಧಿಯಾಗಿದೆ. ಈ ಸ್ಮಾರ್ಟ್ ಟಿವಿಗಳು ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್‌ ಸೇಲ್‌ ಸಮಯದಲ್ಲಿ 'ಬಿಗ್ ಬಿಲಿಯನ್ ಡೇಸ್ ಸ್ಪೆಷಲ್' ಆಫರ್‌ ಮೂಲಕ ಲಭ್ಯವಾಗಲಿದೆ ಎಂದು ಥಾಮ್ಸನ್‌ ಕಂಪೆನಿ ಹೇಳಿಕೊಂಡಿದೆ. ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಡೇಟ್‌ ನಿಖರವಾಗಿ ಬಹಿರಂಗವಾಗಿಲ್ಲ.

Best Mobiles in India

English summary
Thomson launched smart TV series has been manufactured in India and it includes three models

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X