ಪ್ಲೇಸ್ಟೋರ್‌ಗೆ ಬಂತು 'ಟೈಗರ್‌' ಆಪ್!.ನವರಾತ್ರಿಗೆ ಕ್ಯಾಬ್ ಸೇವೆ ಪಕ್ಕಾ!!

|

ಮಾಜಿ ಮುಖ್ಯಮಂತ್ರಿ ಹೆಚ್‌ಡಿ.ಕುಮಾರಸ್ವಾಮಿ ಅವರಿಂದ ಇದೇ ಗುರುವಾರ ಬಿಡುಗಡೆಗೊಂಡ 'ನಮ್ಮ ಟೈಗರ್‌' ಮೊಬೈಲ್ ಅಪ್ಲಿಕೇಶನ್ ಆಗಲೇ ಪ್ಲೇಸ್ಟೋರ್‌ನಲ್ಲಿ ಬೀಡುಬಿಟ್ಟಿದೆ.!! ಹೌದು, ಟೈಗರ್ ಡ್ರೈವರ್ (Tygr Driver) ಹೆಸರಿನಲ್ಲಿ ಈ ಆಪ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, 20 ದಿನಗಳ ಕಾಲ ಚಾಲಕರು ನೊಂದಣಿ ಮಾಡಲು ಅವಕಾಶ ನೀಡಲಾಗಿದೆ.!!

ಚಾಲಕರ ನೋಂದಣಿ ಮುಗಿದ ತಕ್ಷಣವೇ ಗ್ರಾಹಕರಿಗಾಗಿ 'ನಮ್ಮ ಟೈಗರ್‌'ಆಪ್ ಬಿಡುಗಡೆಯಾಗಲಿದ್ದು, ನವರಾತ್ರಿ ಹಬ್ಬಕ್ಕೆ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರೇ ಸೇರಿ ಆರಂಭಿಸಲಾಗುತ್ತಿರುವ ಟೈಗರ್ ಕ್ಯಾಬ್ ಕಾರ್ಯಾರಂಭ ಮಾಡಲಿದೆ.! ನಗರದ ಹೆಣ್ಣೂರು ರಸ್ತೆಯಲ್ಲಿ ಈಗಾಗಲೇ ಕಚೇರಿ ನಿರ್ಮಾಣವಾಗಿದ್ದು, ಟೈಗರ್ ಕ್ಯಾಬ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಹುಲಿ ಟೆಕ್ನಾಲಜೀಸ್

ಹುಲಿ ಟೆಕ್ನಾಲಜೀಸ್

ಟೈಗರ್ ಆಪ್ ನಿರ್ಮಿಸುವ ಸಲುವಾಗಿಯೇ ಕುಮಾರಸ್ವಾಮಿ ಅವರ ನಿರ್ದೇಶನದಲ್ಲಿ ‘ಹುಲಿ ಟೆಕ್ನಾಲಜೀಸ್‌' ಎಂಬ ಕಂಪನಿ ಜನ್ಮ ತಾಳಿದೆ.! ಗ್ರಾಹಕ ಮತ್ತು ಡ್ರೈವರ್‌ ಇಬ್ಬರ ಯೋಗಕ್ಷೇಮಕ್ಕಾಗಿ 'ನಮ್ಮ ಟೈಗರ್‌' ಕ್ಯಾಬ್ ಸೇವೆ ಹುಟ್ಟಿಕೊಂಡಿದೆ.!!

ಓಲಾ ಮತ್ತು ಉಬ್ಬರ್ ವಿರುದ್ಧವಾಗಿ:

ಓಲಾ ಮತ್ತು ಉಬ್ಬರ್ ವಿರುದ್ಧವಾಗಿ:

ಟೈಗರ್ ಕ್ಯಾಬ್ ಅನ್ನು ಓಲಾ ಮತ್ತು ಉಬ್ಬರ್ ವಿರುದ್ಧವಾಗಿಯೇ ನಡೆಸಲು ಮುಂದಾಗಿದ್ದಾರೆ. ಈ ಎರಡು ಕಂಪನಿಗಳು ಚಾಲಕರನ್ನು ಶೋಷಣೆ ಮಾಡುತ್ತಿದೆ. ಪ್ರೋತ್ಸಾಹಧನ ಕಡಿತ ಮಾಡುವುದು, ದಂಡ ವಿಧಿಸುವುದನ್ನು ಮಾಡುತ್ತಿದ್ದು, ಇದರಿಂದ ಹೊರ ಬಂದು ತಮ್ಮದೇ ಒಂದು ಆಪ್ ನಿರ್ಮಿಸಲು ಚಾಲಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಖಾಸಾಗಿ ಫೋರ್ಸ್

ಖಾಸಾಗಿ ಫೋರ್ಸ್

ಇದಲ್ಲದೇ ಇಂದಿನ ದಿನದಲ್ಲಿ ಟ್ಯಾಕಿಗಳಲ್ಲಿ ಪ್ರಯಾಣಿಕರಿಗೆ ಕಿರುಕುಳ ಮತ್ತು ಪ್ರಯಾಣಿಕರಿಂದ ಚಾಲಕರಿಗೆ ಕಿರುಕುಳ ನಡೆಯುವ ಪ್ರಕರಣಗಳು ನಡೆಯುತ್ತಿದೆ. ಇದರಿಂದಾಗಿ ಪ್ರಯಾಣಿಕರ ಹಾಗೂ ಚಾಲಕರ ಸಹಾಯಕ್ಕಾಗಿ ಖಾಸಗಿ ಫೋರ್ಸ್ ವೊಂದನ್ನು ರಚಿಸುವ ಸಾಧ್ಯತೆ ಇದೆ.

ಟೈಗರ್ ಕ್ಯಾಬ್ ಬೆಲೆಗಳು

ಟೈಗರ್ ಕ್ಯಾಬ್ ಬೆಲೆಗಳು

ಟೈಗರ್ ಕ್ಯಾಬ್ ಸದ್ಯ ಮಾರುಕಟ್ಟೆಯಲ್ಲಿರುವ ಓಲಾ-ಉಬರ್ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡಲಿದ್ದು, ಒಟ್ಟು ನಾಲ್ಕು ವರ್ಗದಲ್ಲಿ ಸೇವೆಯನ್ನು ನೀಡಲಿದೆ. ಮಿನಿ ಪ್ರತಿ ಕಿ.ಮೀ ಗೆ ರೂ.12.50 ಸ್ಪೋರ್ಟ್ಸ್ ಸೆಡಾನ್ ಪ್ರತಿ ಕಿ.ಮೀಗೆ ರೂ.14.50 ಎಸ್ ಯುವಿ ಹಾಗೂ ಹೊರವಲಯದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ ರೂ. 18.50

ಆನ್‌ಲೈನ್ ಸೇವೆ ಲಭ್ಯ:

ಆನ್‌ಲೈನ್ ಸೇವೆ ಲಭ್ಯ:

ಟೈಗರ್ ಕ್ಯಾಬ್ ಬುಕ್ ಮಾಡಲು ಸ್ಮಾರ್ಟ್‌ಫೋನ್ ಬೇಕಾಗಿಲ್ಲ. ಆಪ್ ಮಾತ್ರವಲ್ಲದೇ ಆನ್‌ಲೈನಿನಲ್ಲಿಯೂ ಕ್ಯಾಬ್ ಬುಕ್ ಮಾಡಿಕೊಳ್ಳವ ಅವಕಾಶವನ್ನು ನೀಡಲಾಗುತ್ತಿದೆ.

Most Read Articles
Best Mobiles in India

English summary
The driver's registration process will start from Monday.to know more visit to kannada.gibot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X