ಟಿಕ್‌ಟಾಕ್‌ ನಿಂದ 'ಟಿಕ್‌ಟಾಕ್ ಫಾರ್ ಬಿಸಿನೆಸ್' ಆವೃತ್ತಿ ಪ್ರಾರಂಭ!

|

ಇತ್ತೀಚಿನ ದಿನಗಳಲ್ಲಿ ಚೀನಿ ಆಪ್‌ಗಳನ್ನ ಅನ್‌ಇನ್‌ಸ್ಟಾಲ್‌ ಮಾಡಿ, ಚೀನಿ ವಸ್ತುಗಳನ್ನ ನಿಷೇದಿಸಿ ಎಂಬ ಕೂಗು ಇಡೀ ದೇಶದೆಲ್ಲೆಡೆ ವ್ಯಾಪಕವಾಗಿ ಪಸರಿಸಿದೆ. ಅದರಲ್ಲೂಸಸ ಚೀನಿ ಆಪ್ ಟಿಕ್‌ಟಾಕ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡುವಂತೆ ಭಾರಿ ಅಭಿಯಾನವೇ ನಡೆಯುತ್ತಿದೆ. ಆದರೆ ಇದರ ನಡುವೆ ಚೀನೀ ಕಿರು-ವಿಡಿಯೋ ತಯಾರಿಕಾ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ತನ್ನ ಹೊಸ ಟಿಕ್‌ಟಾಕ್‌ ಫಾರ್ ಬಿಸಿನೆಸ್ ಅನ್ನು ಪ್ರಾರಂಭಿಸಿದೆ.

ಟಿಕ್‌ಟಾಕ್‌

ಹೌದು, ಕಿರು ವೀಡಿಯೋ ಪ್ಲಾಟ್‌ಫಾರ್ಮ್‌ ಟಿಕ್‌ಟಾಕ್‌ ತನ್ನ ಹೊಸ ಟಿಕ್‌ಟಾಕ್‌ ಫಾರ್‌ ಬಿಸಿನೆಸ್‌ ಅನ್ನು ಪ್ರಾರಂಭಿಸಿದೆ. ಬ್ರಾಂಡ್‌ಗಳು ಮತ್ತು ಮಾರಾಟಗಾರರಿಗೆ ತನ್ನ ಸಾಧನಗಳನ್ನು ಪರಿಚಯಿಸಲು ಟಿಕ್‌ಟಾಕ್‌ ಅನ್ನು ಉತ್ತಮ ವೇದಿಕೆ ಮಾಡಿಕೊಳ್ಳಲು ಮುಂದಾಗಿದೆ. ಕಿರು ವೀಡಿಯೊ-ಹಂಚಿಕೆ ವೇದಿಕೆಯ ಮೂಲಕ ಪ್ರೇಕ್ಷಕರೊಂದಿಗೆ ಹೊಸ ಮಾದರಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾದ್ರೆ ಈ ಟಿಕ್‌ಟಾಕ್‌ ಫಾರ್‌ ಬಿಸಿನೆಸ್‌ ಉದ್ದೇಶವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಟಿಕ್‌ಟಾಕ್

ಸದ್ಯ "ಟಿಕ್‌ಟಾಕ್ ಫಾರ್ ಬಿಸಿನೆಸ್ ಅನ್ನು ಪರಿಚಯಿಸಲು ಟಿಕ್‌ಟಾಕ್‌ ಸಿದ್ದತೆ ನಡೆಸಿದೆ. ಇದು ಜಾಗತಿಕ ಬ್ರ್ಯಾಂಡ್ ಮತ್ತು ಬ್ರ್ಯಾಂಡ್‌ಗಳ ಎಲ್ಲಾ ಪ್ರಸ್ತುತ ಮತ್ತು ಭವಿಷ್ಯದ ಮಾರ್ಕೆಟಿಂಗ್ ಪರಿಹಾರಗಳಿಗೆ ನೆಲೆಯಾಗಿ ಕಾರ್ಯನಿರ್ವಹಿಲಿದೆ ಎಂದು ಟಿಕ್‌ಟಾಕ್‌ನ ಗ್ಲೋಬಲ್ ಬಿಸಿನೆಸ್ ಮಾರ್ಕೆಟಿಂಗ್ ವ್ಯವಸ್ಥಾಪಕ ನಿರ್ದೇಶಕ ಕೇಟೀ ಪುರಿಸ್ ಹೇಳಿದ್ದಾರೆ. ಟಿಕ್‌ಟಾಕ್ ಫಾರ್ ಬಿಸಿನೆಸ್‌ನೊಂದಿಗೆ, ಮಾರಾಟಗಾರರಿಗೆ ಬೇಕಾದ ಪ್ರಾಡಕ್ಟ್‌ಗಳನ್ನು ನೀಡುವುದು ಮತ್ತು ಅವರ ಸುತ್ತಲಿನವರ ಜೊತೆಗೂ ವ್ಯಾಪಾರ ಸಂಪರ್ಕ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

ಟಿಕ್‌ಟಾಕ್‌

ಅಷ್ಟೇ ಅಲ್ಲ ಟಿಕ್‌ಟಾಕ್‌ ಪ್ಲಾಟ್‌ಫಾರ್ಮ್‌ನ ಬಳಕೆದಾರರು ಎಷ್ಟು ಮಂದಿ ವ್ಯವಹಾರಿಕವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಮಾರ್ಕೆಟಿಂಗ್ ಅಭಿಯಾನದಿಂದ ಎಷ್ಟು ಮಂದಿ ಪ್ರೇರಿತರಾಗಬಹುದು ಅನ್ನೊದನ್ನ ಸಹ ಗಮನಿಸಲಾಗ್ತಿದೆಯಂತೆ. ಜೊತೆಗೆ ಬಳಕೆದಾರರಿಗೆ ಇಷ್ಟವಾಗುವ ಬ್ರ್ಯಾಂಡ್‌ಗಳು ಮತ್ತು ಟಿಕ್‌ಟಾಕ್‌ ಫಾರ್‌ ಬಿಸಿನೆಸ್‌ ಅಭಿಯಾನದಿಂದ ಜನರ ಮೇಲೆ ಬಿಡುವ ಪರಿಣಾಮ ಏನು ಅನ್ನೊದನ್ನ ಸಹ ಇಲ್ಲಿ ಪರೀಕ್ಷಿಸಲಾಗುತ್ತಿದೆ. ಇದಲ್ಲದೆ "ಟಿಕ್‌ಟಾಕ್ ಫಾರ್ ಬಿಸಿನೆಸ್ ಅನ್ನು ಪ್ರಾರಂಭಿಸುವುದರೊಂದಿಗೆ, ಅಭಿವ್ಯಕ್ತಿಶೀಲ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಟಿಕ್‌ಟಾಕ್‌ ಪ್ರಯತ್ನ ಪಡುತ್ತಿದೆ.

ಟೆಕ್‌ಟಾಕ್‌

ಒಂದು ಕಡೆ ಭಾರತದಲ್ಲಿ ಟೆಕ್‌ಟಾಕ್‌ ವಿರುದ್ದ ಅಭಿಯಾನವೇ ನಡೆಯುತ್ತಿದೆ. ಟಿಕ್‌ಟಾಕ್‌ ಗೆ ಬದಲಾಗಿ ಮಿತ್ರಾನ್‌ ಅಪ್ಲಿಕೇಶನ್ ಅನ್ನು ಬಳಸಿ ಎಂದು ಹೇಳಲಾಗ್ತಿದೆ. ಟಿಕ್‌ಟಾಕ್‌ ಅನ್‌ಇನ್‌ಸ್ಟಾಲ್ ಮಾಡಲಾಗ್ತಿದೆ. ಆದರೂ ಸಹ ಟಿಕ್‌ಟಾಕ್‌ ಫಾರ್‌ ಬಿಸಿನೆಸ್‌ ಅಪ್ಲಿಕೇಶನ್‌ ಗೆ ಚಾಲನೆ ನೀಡಿರೋದು ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಹೇಳಲಾಗ್ತಿದೆ.

Best Mobiles in India

English summary
TikTok said that users of the platform can become so engaged and inspired by a marketing campaign, that they could create their own version of it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X