ಬಳಕೆದಾರರಿಗೆ 'ಫ್ಯಾಮಿಲಿ ಪೇರಿಂಗ್' ಫೀಚರ್ಸ್‌ ಪರಿಚಯಿಸಿದ ಟಿಕ್‌ಟಾಕ್‌!

|

ಟಿಕ್‌ಟಾಕ್‌ ಜಗತ್ತಿನ ಪ್ರಸಿದ್ದ ಸೊಶೀಯಲ್‌ ಮಿಡಿಯಾ ಆಪ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕೇವಲ ಮೂವತ್ತು ಸೆಕೆಂಡುಗಳ ವಿಡಿಯೋ ಸ್ಟ್ರಿಮಿಂಗ್‌ ಅವಕಾಶ ನೀಡಿ ಮನರಂಜನಾತ್ಮಕವಾಗಿ ಎಲ್ಲರನ್ನೂ ಸೆಳೆದಿರುವ ಟಿಕ್‌ಟಾಕ್‌ ಬಳಕೆದಾರರಿಗೆ ಹಂತಹಂತವಾಗಿ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಹೊಸ ಮಾದರಿಯ ಟೀಮ್‌ ಫೀಚರ್ಸ್‌ ಒಂದನ್ನ ಪರಿಚಯಿಸುತ್ತಿದೆ. ಯುಎಸ್‌ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಬಳಕೆದಾರರಿಗೆ ಈ ಹೊಸ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ.

ಹೌದು

ಹೌದು, ಜನಪ್ರಿಯ ಆಪ್‌ ಟಿಕ್‌ಟಾಕ್‌ ಆಪ್‌ ತನ್ನ ಬಳಕೆದಾರರಿಗೆ ಹೊಸ ಟೀಮ್‌ ಫೀಚರ್ಸ್‌ ಪರಿಚಯಿಸುತ್ತಿದೆ. ಈ ಫೀಚರ್ಸ್‌ ಮೂಲಕ 16 ವರ್ಷದೊಳಗಿನ ಮಕ್ಕಳು ಟಿಕ್‌ಟಾಕ್‌ ಬಳಕೆ ಮಾಡುವಾಗ ಯಾವ ವಿಚಾರವನ್ನ ಬಳಸಬೇಕು, ಯಾವ ವಿಚಾರವನ್ನ ಪ್ರವೇಶಿಸಬಾರದು ಎಂದು ನಿರ್ಧರಿಸುವುದು ಫೋಷಕರಿಗೆ ಸಾಧ್ಯವಾಗಲಿದೆ. ಈ ಫೀರ್ಚ್‌ ಮೂಲಕ ಪೋಷಕರು ಕಂಟ್ರೋಲ್‌ ಮಾಡಬಹುದಾಗಿದೆ. "ಫ್ಯಾಮಿಲಿ ಪೇರಿಂಗ್" ಎಂದು ಕರೆಯಲ್ಪಡುವ ಈ ಫೀಚರ್ಸ್‌ ಪೋಷಕರಿಗೆ ಸ್ಕ್ರೀನ್ ಟೈಮ್ ಮ್ಯಾನೇಜ್‌ಮೆಂಟ್, ನಿರ್ಬಂಧಿತ ಮೋಡ್ ಮತ್ತು ನೇರ ಸಂದೇಶಗಳ ಮೇಲೆ ಕಂಟ್ರೋಲ್‌ ಮಾಡಲು ಅವಕಾಶ ಕಲ್ಪಿಸುತ್ತದೆ.

ಟಿಕ್‌ಟಾಕ್‌

ಸದ್ಯ ಟಿಕ್‌ಟಾಕ್‌ ಆಪ್‌ ಎಲ್ಲಾ ವಯೋಮಾನದವರನ್ನು ಸೆಳೆದಿದೆ. ತನ್ನ ವಿಶೇಷ ಸೇವೆಗಳಿಂದ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಜಾಗತಿಕವಾಗಿ ಬೇರೂರಿದೆ. ಇದೀಗ ಹದಿಹರೆಯದ ಬಳಕೆದಾರರು, 16 ವರ್ಷದೊಳಗಿನ ಬಳಕೆದಾರರಿಗೆ ಡೈರೆಕ್ಟ್‌ ಮೇಸೆಜ್‌ ಸೆಂಡಿಂಗ್‌ ಅವಕಾಶವನ್ನು ನಿಷ್ಕ್ರಿಯಗೊಳಿಸುತ್ತಿದೆ. ಇನ್ನು ಈ ಫೀಚರ್ಸ್‌ ಅನ್ನು ಈಗಾಗಲೇ ಫೆಬ್ರವರಿಯಲ್ಲಿ ಯು.ಕೆ.ನಲ್ಲಿ ಪ್ರಾರಂಭಿಸಲಾಗಿತ್ತು, ಇದನ್ನು ಯುರೋಪಿಯನ್ ಕಾನೂನುಗಳು ಮತ್ತು ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿತ್ತು. ಇದನ್ನ ಇದೀಗ ಜಾಗತಿಕವಾಗಿ ಪರಿಚಯಿಸಲಾಗುತ್ತಿದೆ. ಇದರಿಂದ ಹದಿಹರೆಯದ ಮಕ್ಕಳು ಟಿಕ್‌ಟಾಕ್‌ನಲ್ಲಿ ಹಾದಿ ತಪ್ಪುವುದನ್ನು ತಪ್ಪಿಸಬಹುದಾಗಿದೆ.

ಕಂಟ್ರೋಲ್‌

ಈ ಹೊಸ ಕಂಟ್ರೋಲ್‌ ಫೀಚರ್ಸ್‌ ಬಳಸಲು, 13 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹದಿಹರೆಯದ ಬಳಕೆದಾರರ ಪೋಷಕರು ತಮ್ಮ ಖಾತೆಯನ್ನು ತಮ್ಮ ಮಗುವಿನೊಂದಿಗೆ ಲಿಂಕ್ ಮಾಡಲು ಸಾಧ್ಯವಾಗಲಿದೆ, ಇದಕ್ಕೆ ಪೋಷಕರು ತಮ್ಮದೇ ಆದ ಟಿಕ್‌ಟಾಕ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಇದರ ಮೂಲಕ ತಮ್ಮ ಮಗುವಿಗೆ ಎಷ್ಟು ಸಮಯದವರೆಗೆ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ಬಳಸಬಹುದು. ಹದಿಹರೆಯದವರು ಯಾರೊಂದಿಗೆ ಸಂದೇಶವನ್ನು ಕಳುಹಿಸಲು ಅವಕಾಶ ನೀಡಬಹುದು ಎಂಬುದನ್ನು ಆನ್ ಅಥವಾ ಆಫ್ ಮಾಡಲು ಪೋಷಕರಿಗೆ ಕಂಟ್ರೋಲ್‌ ಮಾಡಲು ಅವಕಾಶ ನೀಡುತ್ತದೆ. ಮತ್ತು ಅವರು ಮಗುವಿನ ಖಾತೆಗಾಗಿ ಟಿಕ್‌ಟಾಕ್‌ನ "ನಿರ್ಬಂಧಿತ" ಮೋಡ್ ಅನ್ನು ಆನ್ ಮಾಡಲು ಆಯ್ಕೆ ಮಾಡಬಹುದು ಸೂಕ್ತವಲ್ಲದ ವಿಷಯವನ್ನು ಮಿತಗೊಳಿಸಲುಬಹುದು.

ಟೈಮ್

ಇನ್ನು ಸ್ಕ್ರೀನ್ ಟೈಮ್ ಮ್ಯಾನೇಜ್‌ಮೆಂಟ್ ಮತ್ತು ನಿರ್ಬಂಧಿತ ಮೋಡ್ ಎರಡೂ ಅಸ್ತಿತ್ವದಲ್ಲಿರುವ ನಿಯಂತ್ರಣಗಳಾಗಿದ್ದು, ಟಿಕ್‌ಟಾಕ್ ಬಳಕೆದಾರರು ಅಪ್ಲಿಕೇಶನ್‌ನ ಡಿಜಿಟಲ್ ಯೋಗಕ್ಷೇಮ ವಿಭಾಗದ ಮೂಲಕ ತಮ್ಮನ್ನು ತಾವು ಹೊಂದಿಸಿಕೊಳ್ಳಬಹುದು. ಆದರೆ ಫ್ಯಾಮಿಲಿ ಪೇರಿಂಗ್‌ನೊಂದಿಗೆ, ಪೋಷಕರು ತಮ್ಮ ಮಗುವಿಗೆ ಈ ನಿಯಂತ್ರಣಗಳನ್ನು ಹೊಂದಿಸಲು ಸಾಧ್ಯವಾಗುತ್ತದೆ. ಟಿಕ್‌ಟಾಕ್ ಈಗಾಗಲೇ ಡೈರೆಕ್ಟ್ ಮೆಸೇಜಿಂಗ್‌ನಲ್ಲಿ ಈಗಾಗಲೇ ಹಲವಾರು ನಿಯಂತ್ರಣಗಳನ್ನು ನೀಡಿದೆ, ಇದು ಬಳಕೆದಾರರಿಗೆ ಸಂದೇಶಗಳನ್ನು ಅನುಮೋದಿತ ಅನುಯಾಯಿಗಳಿಗೆ ಮಾತ್ರ ನಿರ್ಬಂಧಿಸಲು, ಪ್ರೇಕ್ಷಕರನ್ನು ನಿರ್ಬಂಧಿಸಲು ಅಥವಾ ನೇರ ಸಂದೇಶಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಅನುಮತಿಸುತ್ತದೆ.

ಹೊಸ

ಸದ್ಯ ಈ ಹೊಸ ಫೀಚರ್ಸ್‌ನಿಂದಾಗಿ ಟಿಕ್‌ಟಾಕ್‌ ಬಳಕೆ ಮಾಡುವ ಮಕ್ಕಳ ಮೇಲೆ ಪೋಷಕರು ಗಮನವಿಡಲು ಸಹಕಾರಿಯಾಗಿದೆ. ಈಗಾಗಲೇ ಕೊರೊನಾ ಎಫೆಕ್ಟ್‌ನಿಂದ ಮನೆಯಲ್ಲಿ ಕಾಲಕಳೆಯುತ್ತಿರುವ ಮಕ್ಕಳು ಟಿಕ್‌ಟಾಕ್‌ ನಲ್ಲಿ ಅಕ್ಷೆಪಾರ್ಹ, ಅಥವಾ ಆಶ್ಲಿಲ ಸಂದೇಶಗಳನ್ನ ನೊಡುವುದು ಅಥವಾ ಮಾಡುವುದಕ್ಕೆ ಮುಂದಾದರೆ ಅದನ್ನ ಪೋಷಕರು ತಡೆಯಲು ಸಾಧ್ಯವಾಗಲಿದೆ. ಟಿಕ್‌ಟಾಕ್‌ನಲ್ಲಿ ಮಕ್ಕಳು ಯಾರ ಜೊತೆ ಡ್ಯುಯೆಟ್‌ ಮಾಡಬಹುದು, ಯಾರಿಗೆ ಸಂದೇಶವನ್ನ ಕಳುಹಿಸಬಹುದು, ಯಾರಿಗೆ ಉತ್ತರಿಸಬಹುದು ಇದೆಲ್ಲವೂ ಕೂಡ ಪೋಷಕರ ಕಂಟ್ರೋಲ್‌ನಲ್ಲಿ ಇರುವಂತೆ ಮಾಡಲಿದೆ.

Most Read Articles
Best Mobiles in India

English summary
TikTok is introducing a new set of parental controls to its platform to users worldwide, including in the U.S. The features, collectively referred to as “Family Pairing,.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more