ಈ ವರ್ಷ ಅತೀ ಹೆಚ್ಚು ಡೌನ್‌ಲೋಡ್ ಆದ ಆಪ್ಸ್‌ ಯಾವುವು ಗೊತ್ತಾ?

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಮನರಂಜನೆಯ ಮತ್ತು ಅನಿವಾರ್ಯ ಸಾಧನ ಆಗಿದೆ. ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಸ್ಮಾರ್ಟ್‌ ಅನಿಸಿಕೊಳ್ಳಲು ಆಪ್ಸ್‌ಗಳು ಬೆಂಬಲ ನೀಡುತ್ತಿವೆ. ಆಪ್‌ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಅನೇಕ ಆಪ್ಸ್‌ಗಳು ಲಭ್ಯ ಇವೆ. ಆದರೆ ಅವುಗಳಲ್ಲಿ ಸಾಮಾಜಿಕ ತಾಣಗಳ ಹವಾ ಸ್ವಲ್ಪ ಜಾಸ್ತಿಯೇ ಎನ್ನಬಹುದು. ಏಕೆಂದರೇ ಸದ್ಯ ಸೋಶಿಯಲ್ ಆಪ್ಸ್‌ ಭಾರಿ ಬಳಕೆಯಲ್ಲಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಸಾಮಾಜಿಕ ತಾಣಗಳು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿವೆ. ಅವುಗಳಲ್ಲಿ ಇತ್ತೀಚಿಗಿನ ಟಿಕ್‌ಟಾಕ್‌ ಅಂತೂ ಭಾರಿ ವೈರಲ್‌ ಸ್ಥಾನ ಪಡೆದಿದೆ. ಇನ್ನು ಸೋಶಿಯಲ್ ಆಪ್ಸ್‌ ದಿಗ್ಗಜ ಫೇಸ್‌ಬುಕ್ ಸಹ ತನ್ನ ಜನಪ್ರಿಯತೆಯನ್ನೇನು ಕಳೆದುಕೊಂಡಿಲ್ಲ. ಉಳಿದಂತೆ ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಟ್ರೆಂಡ್ ಉಳಿಸಿಕೊಂಡಿವೆ. ಎಂಬುದನ್ನು ಸೋಶಿಯಲ್ ಆಪ್ಸ್‌ ಸರ್ವೇ ಸಂಸ್ಥೆಯೊಂದು ತಿಳಿಸಿದೆ. ಹಾಗಾದರೇ 2019ರಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಆಗಿರುವ ಟಾಪ್‌ ಟೆನ್ ಆಪ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ.

ಫೇಸ್‌ಬುಕ್ ಆಪ್‌

ಫೇಸ್‌ಬುಕ್ ಆಪ್‌

ಸಾಮಾಜಿಕ ತಾಣಗಳಲ್ಲಿಯೇ ದಿಗ್ಗಜ ಅನಿಸಿಕೊಂಡಿರುವ ಫೇಸ್‌ಬುಕ್ ಈ ವರ್ಷವು ಅತ್ಯಂತ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳಲ್ಲಿ ಇಂದಾಗಿದೆ. ವಿಶ್ವದಾದ್ಯಂತ ಫೇಸ್‌ಬುಕ್ ಆಪ್‌ ಇನ್ನು ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಇತ್ತೀಚಿನ ಹೊಸ ಫೀಚರ್ಸ್‌ಗಳು ಗ್ರಾಹಕರುನ್ನು ಆಕರ್ಷಿಸಿವೆ. ಫೋಟೊ, ಲೊಕೇಶನ್, ವಿಡಿಯೊ, ಗ್ರೂಪ್, ಸೇರಿದಂತೆ ಹಲವು ಆಯ್ಕೆಗಳನ್ನು ಒದಗಿಸಿದೆ.

ಮೆಸೆಂಜರ್ ಆಪ್‌

ಮೆಸೆಂಜರ್ ಆಪ್‌

ಮೆಸೆಂಜರ್ ಆಪ್‌ ಫೇಸ್‌ಬುಕ್ ಕಂಪನಿಯ ಒಡೆತನಕ್ಕೆ ಸೇರಿದ್ದು, ಈ ಆಪ್ ಸಹ ಎರಡನೇ ಸ್ಥಾನದಲ್ಲಿದೆ. ಮೆಸೆಂಜರ್ ಆಪ್‌ ಬಳಕೆದಾರರಿಗೆ ಖಾಸಗಿ ಸಂಭಾಷಣೆಗಳನ್ನು ನಡೆಸಲು ಅನುಮತಿಸುತ್ತದೆ ಮತ್ತು ಸ್ಟಿಕ್ಕರ್‌ಗಳು, ಫೇಸ್ ಮಾಸ್ಕ್‌ಗಳು ಮತ್ತು ಹೆಚ್ಚಿನವುಗಳಿಗೆ ಧನ್ಯವಾದಗಳು, ಅಪ್ಲಿಕೇಶನ್ ಅನ್ನು ಬಳಸುವುದು ಮಜವಾಗಿರುತ್ತದೆ.

ವಾಟ್ಸಾಪ್ ಆಪ್‌

ವಾಟ್ಸಾಪ್ ಆಪ್‌

ವಾಟ್ಸಾಪ್ ಆಪ್‌ ಸಹ ಫೇಸ್‌ಬುಕ್ ಮಾಲೀಕತ್ವದಲ್ಲಿಯೇ ಇದ್ದು, ಈ ಆಪ್ ಸಹ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಹಾಗೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್ ಸಹ ಇದಾಗಿದೆ. ಇನ್ನು ವಾಟ್ಸಪ್‌ನಲ್ಲಿ ಸುಲಭವಾಗಿ ಖಾಸಗಿ, ಬಳಸಲು ಸುಲಭವಾದ ಮೀಡಿಯಾ ಫೈಲ್ಸ್, ಫೋಟೊ, ಟೆಕ್ಸ್ಟ್, ವಾಯಿಸ್ ಮತ್ತಿ ವಿಡಿಯೊ ಕರೆಗಳನ್ನು ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಂ ಆಪ್

ಇನ್‌ಸ್ಟಾಗ್ರಾಂ ಆಪ್

ಇನ್‌ಸ್ಟಾಗ್ರಾಂ ಆಪ್‌ ಗೋ-ಟು ಫೋಟೋ ಮತ್ತು ವಿಡಿಯೋ-ಹಂಚಿಕೆ ಸಾಮಾಜಿಕ ನೆಟ್ವರ್ಕಿಂಗ್ ಅಪ್ಲಿಕೇಶನ್ ಆಗಿದ್ದು, ಇದು ಸಹ ಫೇಸ್‌ಬುಕ್ ಸಂಸ್ಥೆಯ ಆಪ್‌ ಆಗಿದೆ. ಬಹುಬೇಗನೆ ಹೆಚ್ಚಿನ ಬಳಕೆದಾರರನ್ನು ಹೊಂದುವಲ್ಲಿ ಈ ಆಪ್ ಸಫಲ್ ವಾಗಿದ್ದು, ಟಾಪ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. ಅನೇಕ ಸೆಲೆಬ್ರಿಟಿಗಳು ಸೇರಿದಂತೆ, ಬಹುತೇಕರು ಇನ್‌ಸ್ಟಾಗ್ರಾಂ ಸಾಮಾಜಿಕ ತಾಣವನ್ನು ಬಳಕೆಮಾಡುತ್ತಿದ್ದಾರೆ.

ಸ್ನ್ಯಾಪ್‌ಚಾಟ್ ಆಪ್‌

ಸ್ನ್ಯಾಪ್‌ಚಾಟ್ ಆಪ್‌

ಸ್ನ್ಯಾಪ್‌ಚಾಟ್ ಎನ್ನುವುದು ಜಾಗತಿಕವಾಗಿ ಲಕ್ಷಾಂತರ ಜನರು ಬಳಸುವ ಮಲ್ಟಿಮೀಡಿಯಾ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್ ಅದರ ವಿಶಿಷ್ಟ ಫಿಲ್ಟರ್‌ಗಳು ಮತ್ತು ಗೌಪ್ಯತೆ ನಿಯಂತ್ರಣಗಳಿಗಾಗಿ ಪ್ರಾಥಮಿಕವಾಗಿ ಜನಪ್ರಿಯವಾಗಿದೆ. ಅಪ್ಲಿಕೇಶನ್‌ನ ವೈಶಿಷ್ಟ್ಯಗಳಲ್ಲಿ ‘ಸ್ಟಿಕ್ಕರ್‌ಗಳೊಂದಿಗೆ ಚಾಟ್ ಮಾಡಿ', ಬಿಟ್‌ಮೊಜಿ, ಸ್ಥಿತಿ ನವೀಕರಣಗಳು ಮತ್ತು ಹೆಚ್ಚಿನವು ಸೇರಿವೆ.

ಸ್ಕೈಪ್ ಆಪ್

ಸ್ಕೈಪ್ ಆಪ್

ಸ್ಕೈಪ್ ಆಪ್ ಕಂಪ್ಯೂಟರ್, ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಸಾಧನಗಳಲ್ಲಿ ಇಂಟರ್ನೆಟ್ ಸಂಪರ್ಕದ ಮೂಲಕ ಧ್ವನಿ ಕರೆಗಳು ಮತ್ತು ವೀಡಿಯೊ ಚಾಟ್‌ಗಳನ್ನು ನೀಡುವ ಆರಂಭಿಕ ತಾಣಗಳಲ್ಲಿ ಸ್ಕೈಪ್ ಆಪ್ ಸಹ ಒಂದು. ಬಳಕೆದಾರರು ಸಂಭಾಷಣೆ ನಡೆಸಲು, ವೀಡಿಯೊಗಳು, ಆಡಿಯೋ ಮತ್ತು ಚಿತ್ರಗಳನ್ನು ಕಳುಹಿಸಲು ಅಪ್ಲಿಕೇಶನ್ ಅನುಮತಿಸುತ್ತದೆ. ವಿವಿಧ ವ್ಯಾಪಾರ ಸಂಸ್ಥೆಗಳು ಇನ್ನೂ ಸ್ಕೈಪ್ ಫಾರ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ಗಾಗಿ ಬಳಸುತ್ತವೆ.

ಟಿಕ್‌ಟಾಕ್ ಆಪ್

ಟಿಕ್‌ಟಾಕ್ ಆಪ್

ಚೀನಾ ಮೂಲದ ಬೈಟ್‌ಡಾನ್ಸ್ ಕಂಪನಿಯು 2017 ರಲ್ಲಿ ಪ್ರಾರಂಭಿಸಿದ ಈ ಟಿಕ್‌ಟಾಕ್ ವೀಡಿಯೊ ಆಪ್ ಸದ್ಯ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಬಳಕೆದಾರರಿಗೆ ಚಿಕ್ಕ ವಿಡಿಯೊ ಕ್ರಿಯೆಟ್ ಮಾಡುವ ಸೌಲಭ್ಯ ನೀಡಿದೆ. ಹಾಗೆಯೇ ಲಿಪ್ ಸಿಂಕ್ ಮಾಡುವ ಆಯ್ಕೆಗಳು ಇವೆ. ಇನ್ನು ವಿಡಿಯೊಗಳನ್ನು ಸಾಮಾಜಿಕ ತಾಣಗಳಿಗೆ ಶೇರ್ ಮಾಡುವ ಸೌಲಭ್ಯವನ್ನು ನೀಡಿದೆ. ಹೀಗಾಗಿ ಟಾಪ್‌ ಡೌನ್‌ಲೋಡ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ.

ಯುಸಿ ಬ್ರೌಸರ್ ಆಪ್

ಯುಸಿ ಬ್ರೌಸರ್ ಆಪ್

ಯುಸಿ ಬ್ರೌಸರ್ ಆಪ್ ಒಂದು ವೆಬ್ ಬ್ರೌಸರ್ ಆಗಿದ್ದು, ಇದನ್ನು ಸಿಂಗಾಪುರ / ಚೀನಾ ಮೂಲದ ಮೊಬೈಲ್ ಇಂಟರ್ನೆಟ್ ಕಂಪನಿ ಯುಸಿ ವೆಬ್ ಅಭಿವೃದ್ಧಿಪಡಿಸಿದೆ, ಇದನ್ನು ಅಲಿಬಾಬಾ ಗ್ರೂಪ್ ಒಡೆತನದಲ್ಲಿದೆ. ಭಾರತ ಮತ್ತು ಇಂಡೋನೇಷ್ಯಾದಂತಹ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಈ ಅಪ್ಲಿಕೇಶನ್ ಗೂಗಲ್ ಕ್ರೋಮ್ ಗಿಂತ ಹೆಚ್ಚು ಜನಪ್ರಿಯವಾಗಿದೆ.

ಯೂಟ್ಯೂಬ್ ಆಪ್‌

ಯೂಟ್ಯೂಬ್ ಆಪ್‌

ಯೂಟ್ಯೂಬ್ ಆಪ್‌ ಗೂಗಲ್ ಒಡೆತನದ ವೀಡಿಯೊ-ಹಂಚಿಕೆ ಪ್ಲಾಟ್‌ಫಾರ್ಮ್ ಜಾಗತಿಕವಾಗಿ ಹೆಚ್ಚು ಡೌನ್‌ಲೋಡ್ ಮಾಡಲಾದ ಮೊದಲ ಹತ್ತು ಅಪ್ಲಿಕೇಶನ್‌ಗಳಲ್ಲಿ ಇರಬೇಕಾಗಿತ್ತು, ಅದರ ಉಚಿತ ಬಳಕೆ ಮತ್ತು ಮುಕ್ತ ಸ್ವಭಾವಕ್ಕೆ ಧನ್ಯವಾದಗಳು. ಇದು ಮಾಹಿತಿಯುಕ್ತ ಅಥವಾ ಮನರಂಜನಾ ವೀಡಿಯೊ ಆಗಿರಲಿ, ಯೂಟ್ಯೂಬ್ ಸೃಷ್ಟಿಕರ್ತರು ಮತ್ತು ಬಳಕೆದಾರರಿಗೆ ಸಮಾನ ವೇದಿಕೆಯಾಗಿದೆ.

ಟ್ವಿಟರ್ ಆಪ್

ಟ್ವಿಟರ್ ಆಪ್

ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್ವರ್ಕಿಂಗ್ ವೇದಿಕೆಯಾದ ಟ್ವಿಟರ್ ಆಪ್ ಸಹ ಅತೀ ಹೆಚ್ಚು ಡೌನ್‌ಲೋಡ್ ಆದ ಆಪ್‌ಗಳ ಲಿಸ್ಟ್‌ನಲ್ಲಿದೆ. ಸದ್ಯದ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಟ್ವಿಟರ್ ಸಹ ಒಂದಾಗಿದೆ, ಈ ಟ್ವಿಟರ್ ಆಪ್‌ ಅನ್ನು ಗಣ್ಯರು, ಸೇರಿದಂತೆ ಅನೇಕರು ಬಳಕೆಮಾಡುತ್ತಾರೆ. ಹಾಶ್‌ಟ್ಯಾಗ್‌ಗಳನ್ನು ಬಹುಬೇಗ ಟ್ರೆಂಡ್ ಮಾಡಲು ಪೂರಕವಾಗಿದೆ.

Most Read Articles
Best Mobiles in India

English summary
millions of apps on Google Play Store, and Apple’s App Store and a few more are being added every day. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X