8000ರೂ. ಒಳಗೆ ಲಭ್ಯ ಇರುವ ಟಾಪ್‌ 10 ಸ್ಪೀಕರ್ಸ್‌: ಫೀಚರ್ಸ್‌ ಬಗ್ಗೆ ತಿಳಿಯಿರಿ

By 6666
|

ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ ಹಾಗೂ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ ಸ್ಪೀಕರ್‌ ಆಯ್ಕೆ ಇದ್ದರೆ ಅದರ ಮಜವೇ ಬೇರೆ. ಅದರಲ್ಲೂ ಸಂಗೀತ ಆಲಿಸಲು, ಚಲನಚಿತ್ರ ವೀಕ್ಷಣೆ ಮಾಡಲು ಉತ್ತಮವಾದ ಸ್ಪೀಕರ್‌ಗಳನ್ನು ಬಳಕೆ ಮಾಡಿದರೆ ಸಿನಿಮಾ ಥಿಯೇಟರ್‌ನಂತಹ ಅನುಭವವನ್ನು ಪಡೆಯಬಹುದು. ಇತ್ತೀಚೆಗಂತೂ ಪ್ರಮುಖ ಸ್ಮಾರ್ಟ್‌ ಡಿವೈಸ್‌ ತಯಾರಕರು ಹಲವು ಫೀಚರ್ಸ್‌ ಇರುವ ಸ್ಪೀಕರ್‌ಗಳನ್ನು ಪರಿಚಯಿಸಿದ್ದಾರೆ.

ಸ್ಪೀಕರ್‌

ಹೌದು, ನಮ್ಮ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಸ್ಪೀಕರ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ನಿವೇನಾದರೂ ಸ್ಪೀಕರ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಪ್ರಮುಖವಾಗಿ ಎರಡು ವಿಷಯಗಳ ಕಡೆ ಗಮನಹರಿಸಿ, ಅದುವೇ ಫೀಚರ್ಸ್‌ ಹಾಗೂ ಬೆಲೆ. ಇವೆರಡನ್ನೂ ಆಧಾರವಾಗಿರಿಸಿಕೊಂಡು ಉತ್ತಮ ಕ್ವಾಲಿಟಿ ಇರುವ ಪ್ರಮುಖ ಸ್ಪೀಕರ್‌ ವಿವರವನ್ನು ನಾವು ಇಲ್ಲಿ ನೀಡಿದ್ದೇವೆ. ಇದರಲ್ಲಿ 8000ರೂ. ಒಳಗೆ ಲಭ್ಯವಾಗುವ ಟಾಪ್‌ ಟೆನ್‌ ಸ್ಪೀಕರ್‌ಗಳಿಗೆ ಓದಿರಿ.

ಪೋರ್ಟ್ರೋನಿಕ್ಸ್‌ ಡ್ಯಾಶ್‌ 40W TWS ಬ್ಲೂಟೂತ್ ಸ್ಪೀಕರ್

ಪೋರ್ಟ್ರೋನಿಕ್ಸ್‌ ಡ್ಯಾಶ್‌ 40W TWS ಬ್ಲೂಟೂತ್ ಸ್ಪೀಕರ್

ಈ ಡಿವೈಸ್ 9,999 ರೂ. ಗಳ ಸಾಮಾನ್ಯ ದರ ಹೊಂದಿದ್ದು, ಅಮೆಜಾನ್‌ನಲ್ಲಿ ಕೇವಲ 5,429ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಆಡಿಯೋ ಔಟ್ಪುಟ್ ಪವರ್ 40W ಇದ್ದು, ಒಂದು ಬಾರಿಯ ಚಾರ್ಜ್‌ನಲ್ಲಿ 5 ರಿಂದ 6 ಗಂಟೆಗಳ ವರೆಗೆ ಪ್ಲೇಟೈಮ್‌ ಆಯ್ಕೆ ನೀಡುತ್ತದೆ. ಇದು 4400 mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಪಡೆದಿದೆ.

ಓಬೇಜ್ DT-2605

ಓಬೇಜ್ DT-2605

ಈ ಸ್ಪೀಕರ್‌ಗೆ ಅಮೆಜಾನ್‌ನಲ್ಲಿ 10,000ರೂ. ಮೂಲ ದರ ಇದ್ದು, ರಿಯಾಯಿರಿ ದರ 7,999ರೂ. ಗಳಿಗೆ ಇದನ್ನು ಮಾರಾಟ ಮಾಡುತ್ತಿದೆ. ಈ ಸ್ಪೀಕರ್‌ 100W ಔಟ್‌ಪುಟ್ ಪವರ್ ಹೊಂದಿದ್ದು, ಬ್ಲೂಟೂತ್, ಯುಎಸ್‌ಬಿ, ಆಪ್ಟಿಕಲ್ ಮತ್ತು ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದಿದೆ.

ಜೆಬಿಎಲ್‌ ಫ್ಲಿಪ್ 4

ಜೆಬಿಎಲ್‌ ಫ್ಲಿಪ್ 4

ಈ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್‌ ಮೂಲ ಬೆಲೆ 9,999ರೂ. ಗಳಾಗಿದ್ದು, ಇದನ್ನು ನೀವು ಕೇವಲ 5,999ರೂ .ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನುಳಿದಂತೆ 16W ಔಟ್‌ಪುಟ್ ಪವರ್ ಜೊತೆಗೆ 3000mAh ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, 12 ಗಂಟೆಗಳ ಪ್ಲೇ ಟೈಮ್‌ ನೀಡಲಿದೆ. ಆಪಲ್‌ ಸಿರಿ ಮತ್ತು ಗೂಗಲ್‌ ನೌ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಬೋಟ್‌ ಆವಂಟೆ ಬಾರ್ 1250

ಬೋಟ್‌ ಆವಂಟೆ ಬಾರ್ 1250

ಈ ಸ್ಪೀಕರ್‌ನ್ನು ನೀವು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಸ್ಪೀಕರ್ ಗರಿಷ್ಠ ಔಟ್ಪುಟ್ ಪವರ್ 80W ಇದ್ದು, ಇದರ ಜೊತೆಗೆ 40W ವೈರ್ಡ್ ಸಬ್‌ ವೂಫರ್‌ನೊಂದಿಗೆ ಅದ್ಭುತ ಅನುಭವ ಪಡೆಯಬಹುದಾಗಿದೆ. ಹಾಗೆಯೇ ಈ ಸ್ಪೀಕರ್‌ 10 ಮೀಟರ್‌ ಬ್ಲೂಟೂತ್‌ ರೇಂಜ್‌ ಪಡೆದಿದೆ.

ಫಿಲಿಪ್ಸ್ MMS8085B/94

ಫಿಲಿಪ್ಸ್ MMS8085B/94

ಫಿಲಿಪ್ಸ್‌ನ ಉತ್ತಮ ಕ್ಬಾಲಿಟಿಯ ಸ್ಪೀಕರ್‌ಗಳಲ್ಲಿ ಇದೂ ಒಂದು. ಇದರ ಮೂಲ ದರ 9,690ರೂ. ಗಳಾಗಿದ್ದು, ರಿಯಾಯಿತಿ ದರ 7,479ರೂ. ಗಳಿಗೆ ಕೊಂಡುಕೊಳ್ಳಬಹುದು. ಹಾಗೆಯೇ ಕನ್ವರ್ಟಿಬಲ್ ಸೌಂಡ್‌ಬಾರ್ ಮತ್ತು ಸಬ್ ವೂಫರ್ ಆಯ್ಕೆಯ ಜೊತೆಗೆ 80W ಔಟ್‌ಪುಟ್ ಪವರ್ ಇದರಲ್ಲಿದೆ.

ಪ್ಯಾನಾಸೋನಿಕ್ Sc-Ht260Gw-K

ಪ್ಯಾನಾಸೋನಿಕ್ Sc-Ht260Gw-K

ಈ ಸ್ಪೀಕರ್ 9,990ರೂ. ಸಾಮಾನ್ಯ ದರ ಹೊಂದಿದ್ದು, ಇದನ್ನು ಅಮೆಜಾನ್‌ನಲ್ಲಿ 7,990ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು 80W ಸ್ಪೀಕರ್ ಔಟ್‌ಪುಟ್‌ ನೀಡಲಿದ್ದು, ಸಬ್ ವೂಫರ್ ಮತ್ತು ಕನ್ವರ್ಟಿಬಲ್ ಸೌಂಡ್‌ಬಾರ್‌ ಆಯ್ಕೆ ಪಡೆದಿದೆ.

ಕ್ರಿಯೇಟಿವ್‌ SBS E2900

ಕ್ರಿಯೇಟಿವ್‌ SBS E2900

ಈ ಸ್ಪೀಕರ್‌ ಅಮೆಜಾನ್‌ನಲ್ಲಿ 9,999ರೂ ಸಾಮಾನ್ಯ ದರ ಹೊಂದಿದ್ದು, ನೀವು 6,899ರೂ. ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ಈ ಸ್ಪೀಕರ್‌ ಬರೋಬ್ಬರಿ 120W ಔಟ್‌ಪುಟ್‌ ಪವರ್‌ ಪಡೆದಿದ್ದು, ಸಬ್ ವೂಫರ್ ಹಾಗೂ ಸೆಟಲೈಟ್‌ ಸ್ಪೀಕರ್‌ ಆಯ್ಕೆ ಇದರಲ್ಲಿದೆ.

ಫಿಲಿಪ್ಸ್ SPA4040B/94

ಫಿಲಿಪ್ಸ್ SPA4040B/94

ಈ ಡಿವೈಸ್‌ನ್ನು ನೀವು ಅಮೆಜಾನ್‌ ಮೂಲಕ 4,990ರೂ. ಗಳಿಗೆ ಖರೀದಿ ಮಾಡಬಹುದು. ಇದರ ಮೂಲ ದರ 4,990ರೂ. ಗಳಾಗಿದೆ. ಹಾಗೆಯೇ 5.1 ಸ್ಪೀಕರ್ ಚಾನೆಲ್ ಆಯ್ಕೆಯ ಜೊತೆಗೆ 45W ಔಟ್‌ಪುಟ್‌ ಪವರ್ ಪಡೆದಿದೆ. ಇದರಲ್ಲಿ ಎಲ್‌ಇಡಿ ಡಿಸ್‌ಪ್ಲೇ ಇದ್ದು, ಐದು ಸೆಟಲೈಟ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಝೆಬ್ರೋನಿಕ್ಸ್ ZEB ಸೋನಾಟಾ

ಝೆಬ್ರೋನಿಕ್ಸ್ ZEB ಸೋನಾಟಾ

ZEB ಸೋನಾಟಾ ಸ್ಪೀಕರ್‌ ಅನ್ನು 6,189ರೂ. ಗಳಿಗೆ ಕೊಂಡುಕೊಳ್ಳಬಹುದು. ಇದರ ಮೂಲ ದರ 10,990ರೂ. ಗಳಾಗಿದೆ. 105W ಔಟ್‌ಪುಟ್ ಪವರ್ ಜೊತೆಗೆ ಸೆಟಲೈಟ್‌ ಸ್ಪೀಕರ್‌ ಆಯ್ಕೆ ಪಡೆದಿದೆ. ಇನ್ನು ಬಹುವರ್ಣದ ಎಲ್ಇಡಿ ಲೈಟ್, ಎಲ್ಇಡಿ ಇಂಡಿಕೇಟರ್ ಇದರಲ್ಲಿದೆ.

ಬ್ಲೂಪಂಕ್ಟ್ SBW100

ಬ್ಲೂಪಂಕ್ಟ್ SBW100

ಬ್ಲೂಪಂಕ್ಟ್ SBW100 ಸ್ಪೀಕರ್‌ಗೆ ಅಮೆಜಾನ್‌ ರಿಯಾಯಿತಿ ನೀಡಿದ್ದು, ನೀವು ಇದನ್ನು 7,498ರೂ. ಗಳಿಗೆ ಖರೀದಿ ಮಾಡಬಹುದು. ಇದರ ಮೂಲ ದರ 12,990ರೂ. ಗಳಾಗಿದೆ.ಈ ಸ್ಪೀಕರ್‌ 120W ಔಟ್‌ಪುಟ್ ಪವರ್ ಹೊಂದಿದ್ದು, ಸೈಡ್ ಫೈರಿಂಗ್ ಸಬ್ ವೂಫರ್‌ ಆಯ್ಕೆ ಪಡೆದಿದೆ.

Best Mobiles in India

English summary
Recently, the leading smart device manufacturers have introduced speakers with many features. In this article we will give some speakers details and price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X