ಲಭ್ಯವಿರುವ ಟಾಪ್ ಐದು 20,000mAh ಪವರ್‌ಬ್ಯಾಂಕ್‌ಗಳು!

|

ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾದಂತೆ ಅವುಗಳ ವಿದ್ಯುತ್‌ ದಾಹ ತೀರಿಸೋ ಪವರ್‌ ಬ್ಯಾಂಕ್‌ಗಳ ಮಾರಾಟ ಕೂಡ ಹೆಚ್ಚಾಗಿದೆ, ಸ್ಮಾರ್ಟ್‌ಫೋನ್‌ ಕಂಪೆನಿಗಳ ನಡುವೆ ಪೈಪೋಟಿ ಇರುವಂತೆ ಪವರ್‌ ಬ್ಯಾಂಕ್‌ಗಳ ಕಂಪೆನಿಗಳು ಕೂಡ ಪೈಪೋಟಿಯಿಂದ ಕೂಡಿವೆ. ಬ್ಯಾಟರಿ ಸಾಮರ್ಥ್ಯದ ಹೆಚ್ಚಳದ ಜೊತೆಗೆ ಉತ್ತಮ ಗುಣಮಟ್ಟದ ಪವರ್‌ ಬ್ಯಾಂಕ್‌ಗಳು ಈಗಾಗ್ಲೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ ಪವರ್‌ ಬ್ಯಾಂಕ್‌ ಆಯ್ಕೆ ಮಾಡಿಕೊಂಡರ ಉತ್ತಮ ಪವರ್‌ ಬ್ಯಾಕ್‌ಆಪ್‌ ಸಿಗಲಿದೆ ಅನ್ನೊ ಗೊಂದಲ ಎಲ್ಲರಲ್ಲೂ ಇದ್ದೆ ಇದೆ.

ಪವರ್‌

ಹೌದು ಹಲವು ಆಯ್ಕೆಗಳ ಪವರ್‌ ಬ್ಯಾಂಕ್‌ಗಳು ಮಾರುಕಟ್ಟೆಗೆ ಬಂದಿದ್ದರೂ ಸಹ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಸಾಮರ್ಥ್ಯದ ಅಂದರೆ 20000mAh, ಬ್ಯಾಟರಿ ಸಾಮರ್ಥ್ಯದ ಪವರ್ ಬ್ಯಾಂಕ್ ಉತ್ತಮ ಆಯ್ಕೆಯಾಗಿರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಪವರ್‌ಬ್ಯಾಂಕ್‌ಗಳ ಆಯ್ಕೆಗಳು ಲಭ್ಯವಿರುವುದರಿಂದ, ಸರಿಯಾದದನ್ನು ಆರಿಸುವುದು ಕಷ್ಟದ ಕೆಲಸ. ಹಾಗಾದ್ರೆ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮವಾದ ಟಾಪ್ 20000mAh ಪವರ್ ಬ್ಯಾಂಕುಗಳು ಯಾವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಮಿ 20000mAh ಪವರ್ ಬ್ಯಾಂಕ್ 2i

ಮಿ 20000mAh ಪವರ್ ಬ್ಯಾಂಕ್ 2i

ಲಿ ಪಾಲಿಮರ್‌ 2i ಬಹಳ ಪರಿಣಾಮಕಾರಿ ಮತ್ತು ಶಕ್ತಿಯುತವಾದ ಪವರ್‌ ಬ್ಯಾಂಕ್‌ ಆಗಿದೆ. 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಈ ಪವರ್ ಬ್ಯಾಂಕ್ ಹೆಚ್ಚಿನ ಸಾಂದ್ರತೆಯ ಲಿ-ಪಾಲಿಮರ್ ಬ್ಯಾಟರಿಗಳನ್ನು ಹೊಂದಿದೆ, ಇನ್ನು ಇದು ಡ್ಯುಯಲ್ ಯುಎಸ್‌ಬಿ output ಮಾದರಿಯನ್ನ ಹೊಂದಿದ್ದು. ಈ ಪವರ್ ಬ್ಯಾಂಕ್‌ನಿಂದ ಟ್ಯಾಬ್ಲೆಟ್‌ಗಳು, ಫಿಟ್‌ನೆಸ್ ಬ್ಯಾಂಡ್‌ಗಳು, ಸ್ಪೀಕರ್‌ಗಳು ಮತ್ತು ಹೆಡ್‌ಫೋನ್‌ಗಳನ್ನು ಸಹ ಸುಲಭವಾಗಿ ಚಾರ್ಜ್ ಮಾಡಬಹುದಾಗಿದ್ದು. ಈ ಪವರ್ ಬ್ಯಾಂಕ್ 9-ಲೇಯರ್ ರಕ್ಷಣೆಯೊಂದಿಗೆ ಬರುತ್ತದೆ, ಇದರಿಂದಾಗಿ ಓವರ್-ಕರೆಂಟ್, ಶಾರ್ಟ್-ಸರ್ಕ್ಯೂಟ್, ಓವರ್-ಚಾರ್ಜ್, ಓವರ್-ವೋಲ್ಟೇಜ್ ಮತ್ತು ಡಿಸ್ಚಾರ್ಜ್ ವಿರುದ್ಧ ಸುರಕ್ಷತೆಯನ್ನು ನೀಡುತ್ತದೆ.

ಆಂಬ್ರೇನ್ 20000mAh ಪವರ್ ಬ್ಯಾಂಕ್ (ಸ್ಟೈಲೋ -20 ಕೆ)

ಆಂಬ್ರೇನ್ 20000mAh ಪವರ್ ಬ್ಯಾಂಕ್ (ಸ್ಟೈಲೋ -20 ಕೆ)

ಈ ಪವರ್‌ ಬ್ಯಾಂಕ್‌ ಹೆಚ್ಚಿನ ಸಾಂದ್ರತೆಯ ಲಿಥಿಯಂ ಪಾಲಿಮರ್‌ ಬ್ಯಾಟರಿಯನ್ನ ಹೊಂದಿದ್ದು ಪವರ್‌ಫುಲ್‌ ಮತ್ತು ಹೆಚ್ಚು ಬಾಳಿಕೆ ಬರುವ ಪವರ್‌ ಬ್ಯಾಂಕ್‌ಗಳಲ್ಲಿ ಒಂದಾಗಿದೆ.
ಇನ್ನು ಈ ಪವರ್ ಬ್ಯಾಂಕ್ ನ ಹೊರಭಾಗವನ್ನು ಎಬಿಎಸ್ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದು ಈ ಪವರ್ ಬ್ಯಾಂಕ್‌ಗೆ ಪ್ರೀಮಿಯಂ ಫಿನಿಶ್ ನೀಡಲಾಗಿರುತ್ತೆ. ಅಲ್ಲದೆ ಡ್ಯುಯಲ್ ಟೈಪ್-ಸಿ ಮತ್ತು ಮೈಕ್ರೋ ಯುಎಸ್ಬಿ ಔಟ್‌ಪುಟ್‌ ಮತ್ತು ಇನ್‌ಪುಟ್‌ ಹೊಂದಿದ್ದು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸೂಕ್ತವಾದ ಬ್ಯಾಕಪ್ ನೀಡುತ್ತದೆ. ಜೊತೆಗೆ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿರುವುದರಿಂದ ಆಂಬ್ರೇನ್ ಸ್ಟೈಲೋ 20K ಪವರ್‌ ಬ್ಯಾಂಕ್‌ ಅನ್ನು ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ.

ಇಂಡೋ 20 ಡಿ ಪವರ್‌ ಬ್ಯಾಂಕ್‌

ಇಂಡೋ 20 ಡಿ ಪವರ್‌ ಬ್ಯಾಂಕ್‌

ವೇಗದ ಚಾರ್ಜಿಂಗ್‌ಗೆ ಹೆಸರಾದ ಇಂಡೋ 20 ಡಿ ಪವರ್ ಬ್ಯಾಂಕ್ 365 ಗ್ರಾಂ ತೂಕವನ್ನ ಹೊಂದಿದ್ದು 20000mAh ಸಾಮರ್ಥ್ಯದ ಲಿ-ಪೊ ಬ್ಯಾಟರಿಯೊಂದಿಗೆ ಬರುತ್ತದೆ. ಇನ್ನು ಈ ಪವರ್‌ ಬ್ಯಾಂಕ್‌ ಟೈಪ್-ಸಿ ಮತ್ತು ಮೈಕ್ರೋ ಯುಎಸ್ಬಿ ಡ್ಯುಯಲ್ ಇನ್ಪುಟ್ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ಗೆ ಅದ್ಭುತ ಬ್ಯಾಕಪ್ ನೀಡಲಿದೆ. ಜೊತೆಗೆ ಶಾರ್ಟ್ ಸರ್ಕ್ಯೂಟ್ ಮತ್ತು ವೋಲ್ಟೇಜ್ ಓವರ್‌ಲೋಡ್‌ನಿಂದ 6-ಹಂತದ ರಕ್ಷಣೆಯನ್ನ ನೀಡಲಿದೆ.

ಸಿಸ್ಕಾ ಪವರ್ ಕೋರ್ 200 ಪವರ್‌ ಬ್ಯಾಂಕ್‌

ಸಿಸ್ಕಾ ಪವರ್ ಕೋರ್ 200 ಪವರ್‌ ಬ್ಯಾಂಕ್‌

ಈ ಪವರ್‌ ಬ್ಯಾಂಕ್‌ ಲಿಥಿಯಂ ಪಾಲಿಮರ್ ನಶಕ್ತಿಯನ್ನ ಒಳಗೊಂಡಿದ್ದು ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳು, ಹೆಡ್‌ಫೋನ್‌ಗಳು, ಐಪಾಡ್‌ಗಳು ಮತ್ತು ಕ್ಯಾಮೆರಾಗಳನ್ನು ಚಾರ್ಜ್ ಮಾಡಲು ಅವಕಾಶ ಕಲ್ಪಿಸುತ್ತದೆ. ಅಲ್ಲದೆ ಟೈಪ್-ಸಿ ಮತ್ತು ಮೈಕ್ರೋ ಯುಎಸ್ಬಿಯ ಡ್ಯುಯಲ್ ಇನ್ಪುಟ್ ಚಾರ್ಜಿಂಗ್ ವ್ಯವಸ್ಥೆಯನ್ನ ಹೊಂದಿದೆ. ಜೊತೆಗೆ ಶಾರ್ಟ್ ಸರ್ಕ್ಯೂಟ್‌ಗಳು ಮತ್ತು ವೋಲ್ಟೇಜ್ ಓವರ್‌ಲೋಡ್‌ ನಿಂದ ರಕ್ಷಣೆ ನೀಡಲು ಇದರಲ್ಲಿ ಇಂಟೆಲಿಜೆಂಟ್ ಮಲ್ಟಿ-ಪ್ರೊಟೆಕ್ಷನ್ ಸಿಸ್ಟಮ್‌ ಅಳವಡಿಸಲಾಗಿದೆ. ಇನ್ನು ಇದರಿಂದ ಗೇಮಿಂಗ್ ಕನ್ಸೋಲ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಡಿಜಿಟಲ್ ಕ್ಯಾಮೆರಾಗಳನ್ನು ಸಹ ಚಾರ್ಜ್ ಮಾಡಬಹುದು.

ಇಂಟೆಕ್ಸ್ ಐಟಿ-ಪಿಬಿ 20k ಪವರ್‌ ಬ್ಯಾಂಕ್‌

ಇಂಟೆಕ್ಸ್‌ ಐಟಿ-ಪಿಬಿ 20k ಪವರ್‌ ಬ್ಯಾಂಕ್‌ ಎರಡು ಯುಎಸ್ಬಿ ಪೋರ್ಟ್‌ಗಳನ್ನು ಹೊಂದಿದ್ದು ಜೊತೆಗೆ ಎಲ್ಇಡಿ ಟಾರ್ಚ್ ಹೊಂದಿದೆ. ಈ ಪವರ್ ಬ್ಯಾಂಕ್ ಬಿಐಎಸ್-ಪ್ರಮಾಣೀಕರಿಸಲ್ಪಟ್ಟಿದ್ದು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಇನ್ನು ಈ ಪವರ್‌ ಬ್ಯಾಂಕ್‌ 355 ಗ್ರಾಂ ತೂಕವಿದ್ದು ಕ್ಯಾರಿ ಮಾಡಲು ಸುಲಭವಾಗಿದೆ. ಜೊತೆಗೆ ಮೊಬೈಲ್, ಎಂಪಿ 3 / ಎಂಪಿ 4 ಪ್ಲೇಯರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕ್ಯಾಮೆರಾಗಳನ್ನ ಸಹ ಇದರಿಂದ ಚಾರ್ಜಿಂಗ್‌ ಮಾಡಬಹುದಾಗಿದೆ.

Best Mobiles in India

English summary
A high-capacity power bank, for instance, 20000mAh, is always a good choice because it can charge your smartphone (and even your tablets) on the go. But, with so many options available in the market, choosing the right one can be a difficult task. So, to help you out with the same, we have jotted down top 20000mAh power banks, which are sure to provide an excellent backup for your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X