ಫೋನಿಗೆ ಆಯಂಟಿ ವೈರಸ್‌ ಅಗತ್ಯವೇ?.ಇಲ್ಲಿವೆ ನೋಡಿ ಟಾಪ್‌ 5 ಆಪ್ಸ್‌!

|

ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಸಾಕಷ್ಟು ಅಪ್‌ಡೇಟ್ ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಸೆಕ್ಯುರಿಟಿ ಸಾಫ್ಟವೇರ್‌ಗಳ ಅಭಿವೃಧ್ಧಿಯು ಸಹ ವೇಗದ ಗತಿಯಲ್ಲಿಯೇ ಸಾಗುತ್ತಿದೆ. ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳಂತೆ ಸ್ಮಾರ್ಟ್‌ಫೋನ್‌ಗಳಿಗೂ ಆಯಂಟಿ ವೈರಸ್ ಹಾಕಿಸಿಕೊಳ್ಳುತ್ತಾರೆ. ಸ್ಮಾರ್ಟ್‌ಫೋನ್‌ಗಳಲ್ಲಿನ ಡೇಟಾ ಭದ್ರತೆಯ ಅವಶ್ಯಕತೆಗಾಗಿ ಆಯಂಟಿ ವೈರಸ್ ಇನ್‌ಸ್ಟಾನ್ ಮಾಡಿಕೊಳ್ಳುವುದು ಉತ್ತಮವಾಗಿದೆ.

ಇಂಟರ್ನೆಟ್‌

ಪ್ರಸ್ತುತ ಇಂಟರ್ನೆಟ್‌ ಬಳಸಿಕೊಂಡು ಬಹುತೇಕ ಎಲ್ಲ ಕೆಲಸಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿಯೇ ನಿರ್ವಹಿಸಲಾಗುತ್ತಿದ್ದು, ಹೀಗಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಹಿತಿ ರಕ್ಷಣೆ ಅಗತ್ಯ ಎನಿಸುತ್ತದೆ. ಕೆಲವೊಮ್ಮೆ ಅಸುರಕ್ಷಿತ ಆಪ್‌ಗಳ ಮೂಲಕ ವೈರಸ್‌ಗಳು ಸ್ಮಾರ್ಟ್‌ಫೋನ್‌ ಸೇರಿಕೊಂಡು ಅದರ ಕಾರ್ಯ ನಿರ್ವಹಿಸುವ ಶಕ್ತಿಯನ್ನು ಕುಗ್ಗಿಸುತ್ತದೆ. ಅಥವಾ ಕೇಲವು ದತ್ತಾಂಶಗಳನ್ನು ಕರಪ್ಟ್ ಮಾಡಬಹುದು. ಹೀಗಾಗಿ ಫೋನಿಗೊಂದು ಆಯಂಟಿ ವೈರಸ್‌ ಇದ್ದರೇ ಯೋಗ್ಯ ಅಲ್ಲವೇ...ಹಾಗಾದರೇ ಐದು ಜನಪ್ರಿಯ ಆಯಂಟಿ ವೈರಸ್‌ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕ್ಯಾಸ್ಪರ್ಸ್ಕಿ ಮೊಬೈಲ್ ಆಯಂಟಿವೈರಸ್

ಕ್ಯಾಸ್ಪರ್ಸ್ಕಿ ಮೊಬೈಲ್ ಆಯಂಟಿವೈರಸ್

ಕ್ಯಾಸ್ಪರ್ಸ್ಕಿ ಮೊಬೈಲ್ ಆಯಂಟಿ ವೈರಸ್ ಉತ್ತಮವಾಗಿದ್ದು, ಇದು ಎರಡು ಮಾದರಿಗಳಲ್ಲಿ ದೊರೆಯುತ್ತದೆ. ಫ್ರೀ ವರ್ಷನ್ ಮತ್ತು ಪ್ರೀಮಿಯಮ್ ವರ್ಷನ್. ಫ್ರೀ ವರ್ಷನ್ ಉಚಿತವಾಗಿ ಇನ್‌ಸ್ಟಾನ್ ಮಾಡಿಕೊಳ್ಳಬಹುದಾಗಿದ್ದು, ಇದು ವೈರಸ್‌ ಮತ್ತು ಆಪ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಪ್ರೀಮಿಯಮ್ ಆಂಟಿವೈರಸ್ ಪೇಯ್ಡ್ ವರ್ಷನ್ ಆಗಿದ್ದು, ಇದು ರಿಯಲ್ ಟೈಮ್ ಪ್ರೋಟೆಕ್ಷನ್, ಕಳ್ಳತನದಿಂದ ರಕ್ಷಣೆ ಮತ್ತು ಆಪ್ ಲಾಕರ್ ಒದಗಿಸುತ್ತದೆ.

ESET ಆಯಂಟಿ ವೈರಸ್ ಆಪ್

ESET ಆಯಂಟಿ ವೈರಸ್ ಆಪ್

ESET ಮತ್ತೊಂದು ಉತ್ತಮ ಮತ್ತು ಬಹುಮುಖ ಆಂಟಿವೈರಸ್ ಅಪ್ಲಿಕೇಶನ್ ಆಗಿದೆ. ಸ್ಕ್ಯಾನ್ ವೇಳಾಪಟ್ಟಿಗಾಗಿ ಈ ಅಪ್ಲಿಕೇಶನ್ ಉತ್ತಮ ಸಾಧನವನ್ನು ಹೊಂದಿದೆ, ಆದರೆ ಅದು ಅದಕ್ಕಿಂತ ಹೆಚ್ಚು. ಕ್ಯಾಸ್ಪರ್ಸ್ಕಿಯಂತೆಯೇ, ಇದು ಕಳ್ಳತನ ವಿರೋಧಿ ಬೆಂಬಲವನ್ನು ಹೊಂದಿದೆ. ಭದ್ರತಾ ಲೆಕ್ಕಪರಿಶೋಧಕ ವೈಶಿಷ್ಟ್ಯವನ್ನೂ ಸಹ ಹೊಂದಿದೆ. ನೈಜ-ಸಮಯದ ಸ್ಕ್ಯಾನಿಂಗ್ ಅನ್ನು ಇಲ್ಲಿ ಸೇರಿಸಲಾಗಿದೆ. ಚಟುವಟಿಕೆಯ ಲಾಗ್‌ನಂತೆ ನೀವು ಬಯಸಿದಾಗಲೆಲ್ಲಾ ನೀವು ಪರಿಶೀಲಿಸಬಹುದು. ಅಪ್ಲಿಕೇಶನ್‌ನಿಂದಲೇ ನೀವು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ರಕ್ಷಣೆಯನ್ನು ಸಹ ಹೊಂದಿಸಬಹುದು.

McAfee ಆಯಂಟಿ ವೈರಸ್‌

McAfee ಆಯಂಟಿ ವೈರಸ್‌

ಮ್ಯಾಕ್‌ಅಫೀ ವಿಂಡೋಸ್‌ನ ಅತ್ಯಂತ ಜನಪ್ರಿಯ ಆಂಟಿವೈರಸ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಆಂಡ್ರಾಯ್ಡ್‌ನಲ್ಲಿಯೂ ಸಹ ದೀರ್ಘಕಾಲದಿಂದಲೂ ಇದೆ. ಇದು ಆಂಡ್ರಾಯ್ಡ್‌ಗಾಗಿ ನಿಜವಾಗಿಯೂ ಸಮರ್ಥವಾದ ಆಂಟಿವೈರಸ್ ಅಪ್ಲಿಕೇಶನ್‌ ಆಗಿದೆ. ಇದು ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಅಪ್ಲಿಕೇಶನ್ ತುಂಬಾ ಭಾರವಾಗಲು ಇದು ಒಂದು ಕಾರಣವಾಗಿದೆ, ಆದರೆ ಇದು ನಿಮಗೆ ಯೋಗ್ಯವಾಗಿರುತ್ತದೆ. ಅಪ್ಲಿಕೇಶನ್ ಸಾಮಾನ್ಯ ವೈರಸ್ ಸ್ಕ್ಯಾನಿಂಗ್‌ನೊಂದಿಗೆ ಬರುತ್ತದೆ. ಇತರ ಎಲ್ಲ ಅಪ್ಲಿಕೇಶನ್‌ಗಳು ಮಾಡುವಂತೆಯೇ, ಆದರೆ ಇದರ ಜೊತೆಗೆ, ಮಾತನಾಡಲು ಹಲವು ವೈಶಿಷ್ಟ್ಯಗಳಿವೆ.

ಅವಾಸ್ಟ್ ಮೊಬೈಲ್ ಸೆಕ್ಯುರಿಟಿ

ಅವಾಸ್ಟ್ ಮೊಬೈಲ್ ಸೆಕ್ಯುರಿಟಿ

ಅವಾಸ್ಟ್ ಸ್ಮಾರ್ಟ್‌ಫೋನ್ ಸೆಕ್ಯುರಿಟಿ ವೈರಸ್ ಒಂದೇ ಟ್ಯಾಪ್ ಮಾಡಿದರೇ ಕಾರ್ಯಪ್ರವೃತ್ತವಾಗಲಿದ್ದು, ಸ್ಮಾರ್ಟ್‌ಫೋನಿನ್ ಇರುವ ಎಲ್ಲ ಆಪ್‌ಗಳನ್ನು ಸ್ಕ್ಯಾನ್ ಮಾಡಿಬಿಡುತ್ತದೆ. ಸ್ಪೈವೇರ್ ಮತ್ತು ವೈರಸ್‌ಗಳಿಂದ ಸ್ಮಾರ್ಟ್‌ಫೋನ್‌ಗೆ ಸಂಪೂರ್ಣ ಸುರಕ್ಷೆ ನೀಡುತ್ತದೆ. ಇದರಲ್ಲಿ ಪೇಯ್ಡ್ ವರ್ಷನ್ ಸಾಫ್ಟವೇರ್ ಇದ್ದು, ಇದು ಜಾಹಿರಾತು ಮುಕ್ತವಾಗಿರುವ ಜೊತೆಗೆ ಸಿಮ್‌ಗೆ ಸೆಕ್ಯುರಿಟಿ ನೀಡುವುದು ಮತ್ತು ಕ್ಯಾಮೆರಾ ಟ್ರಾಪ್‌ನಂತಹ ರಕ್ಷಣೆ ಹೊಂದಿದೆ. ಫ್ರೀ ವರ್ಷನ್‌ನಲ್ಲಿಯೂ ದೊರೆಯಲಿದೆ.

Bitdefender ಆಯಂಟಿ ವೈರಸ್

Bitdefender ಆಯಂಟಿ ವೈರಸ್

ಈ ಆಯಂಟಿ ವೈರಸ್‌ ಸಂಪೂರ್ಣ ಉಚಿತವಾಗಿ ದೊರೆಯಲಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಎಲ್ಲ ರೀತಿ ಭದ್ರತೆ ನೀಡುವ ಉಪಯುಕ್ತ ಸಾಫ್ಟವೇರ್ ಆಗಿದೆ. ಅತ್ಯಂತ ವೇಗವಾಗಿ ಸ್ಕ್ಯಾನ್‌ ಮಾಡುವ ಈ ಸಾಫ್ಟ್‌ವೇರ್ ಸ್ಮಾರ್ಟ್‌ಫೋನಿನ್ ಬ್ಯಾಟರಿಯನ್ನು ಕಬಳಿಕೆ ಮಾಡುವುದಿಲ್ಲ. ರಿಯಲ್‌ ಟೈಮ್‌ ರಕ್ಷಣೆಯೊಂದಿಗೆ ಪ್ರತಿ ಆಪ್‌ ಇನ್‌ಸ್ಟಾಲ್ ಮಾಡಿದಾಗಲೂ ಸ್ಕ್ಯಾನ್‌ ಮಾಡಿಕೊಳ್ಳುತ್ತದೆ. ಪೇಯ್ಡ್ ವರ್ಷನ್‌ ಆಯ್ಕೆ ಸಹ ಇದ್ದು, ಇದರಲ್ಲಿ ವೆಬ್‌ ರಕ್ಷಣೆ, ಆಪ್‌ ಲಾಕರ್‌ ಸೇರಿದಂತೆ ಇನ್ನೂ ಹೆಚ್ಚಿನ್ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿವೆ.

Best Mobiles in India

English summary
Top 5 Best Antivirus Apps For Android – 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X