ಗ್ರೂಪ್‌ ವೀಡಿಯೋ ಕಾಲ್‌ ಮಾಡಲು ಲಭ್ಯವಿರುವ ಟಾಪ್‌ 5 ಗ್ರೂಪ್ ವೀಡಿಯೊ ಕಾಲ್‌ ಆಪ್ಸ್‌ !

|

ಪ್ರಸ್ತುತ ಇಡೀ ಜಗತ್ತು ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್‌ನಲ್ಲಿದೆ. ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗ್ತಿದ್ದ ಮಂದಿಯೆಲ್ಲಾ ಏಕಾಏಕಿ ಹೋಮ್‌ ಕ್ವಾರಂಟೈನ್‌ನಲ್ಲಿ ಇರುವಂತೆ ಮಾಡಿಬಿಟ್ಟಿದೆ. ತಾಂತ್ರಿಕವಾಗಿಉ ಸಾಕಷ್ಟು ಮುಂದುವರೆದಿರುವ ಈ ಜಮಾನದಲ್ಲಿ ಇಂತಹ ದಿನಗಳು ಬರುತ್ತವೆ ಅನ್ನೊದನ್ನ ಯಾರು ಸಹ ಎಣಿಸಿರಲಿಲ್ಲ. ಆಧುನಿಕ ಜೀವನ ಶೈಲಿ, ಸ್ನೇಹಿತರು, ಕೆಲಸ ಕಾರ್ಯ,ಕಚೇರಿ ಎಲ್ಲವು ಇದೀಗ ಏಕಾಏಕಿ ಲಾಕ್‌ಡೌನ್‌ ಆಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಸ್ನೇಹಿತರು, ಅದಿಕಾರಿಗಳು, ಕೆಲಸ ಕಾರ್ಯಗಳಿಗಾಗಿ ಬಹುತೇಕ ಮಂದಿ ವಿಡಿಯೋ ಕಾಲ್‌ ಮೊರೆ ಹೋಗ್ತಿದ್ದಾರೆ. ವೀಡಿಯೊ ಗ್ರೂಪ್‌ ಚಾಟಿಂಗ್‌ ಮೊರ ಹೋಗ್ತಿದ್ದಾರೆ.

ಸದ್ಯದ

ಹೌದು, ಸದ್ಯದ ಮಟ್ಟಿಗೆ ಎಲ್ಲರೂ ಮೆನಯಲ್ಲಿಯೇ ಇದ್ದು ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಹಮಚಿಕೊಳ್ಳುವುದಕ್ಕೆ ಎಲ್ಲರೂ ವಿಡಿಯೊ ಕಾಲ್‌ ಆಪ್‌ಗಳ ಮೊರೆ ಹೋಗಿದ್ದಾರೆ. ಜೊತೆಗೆ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ವೀಡಿಯೊ ಚಾಟಿಂಗ್‌ ಮಾಡುವುದಕ್ಕೆ ಮುಂದಾಗಿದ್ದಾರೆ. ಸದ್ಯ ಇದೀಗ ಗ್ರೂಪ್‌ ವೀಡಿಯೋ ಕಾಲ್‌ ಆಪ್‌ಗಳತ್ತ ಜನರು ಮುಖ ಮಾಡಿದ್ದು, ಗ್ರೂಪ್‌ ವೀಡಿಯೋ ಮೂಲಕ ಮಾಹಿತಿಯನ್ನ ಹಂಚಿಕೊಳ್ತಿದ್ದಾರೆ. ಹಾಗಾದ್ರೆ ಸದ್ಯ ಗ್ರೂಪ್‌ ಮೀಟಿಂಗ್‌ ಹಾಗೂ ಗ್ರೂಪ್‌ ವೀಡಿಯೋ ಚಾಟ್‌ಗಾಗಿ ಲಬ್ಯವಿರುವ ಟಾಪ್ 5 ಗ್ರೂಪ್ ವೀಡಿಯೊ ಕಾಲ್‌ ಅಪ್ಲಿಕೇಶನ್‌ಗಳು ಯಾವುವು ಅನ್ನೊ ಮಾಹಿತಿಯನ್ನ ತಿಳಿಸಿಕೊಡ್ತಿವಿ ಬನ್ನಿರಿ.

Google duo

Google duo

ಸದ್ಯದ ಪರಿಸ್ಥಿತಿಯಲ್ಲಿ ಸ್ಮಾರ್ಟ್‌ಫೋನ್‌ ಮೂಲಕವೇ ಗ್ರೂಪ್‌ ಕಾಲ್‌ ಮಾಡಲು ಗೂಗಲ್‌ ಡುವೋ ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌ ಬಲಸುವುದಕ್ಕೆ ಸುಲಭವಾಗಿದ್ದು, ಗರಿಷ್ಠ 8 ಜನರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮಾಡುವ ಸಾಧ್ಯತೆಯನ್ನು ಒಳಗೊಂಡಿದೆ. ಅಲ್ಲದೆ ಇದು ಆಂಡ್ರಾಯ್ಡ್, ಐಒಎಸ್ ಮತ್ತು ಕಂಪ್ಯೂಟರ್‌ಗೂ ಬೆಂಬಲವನ್ನ ನಿಡಲಿದೆ. ಇನ್ನು ಈ ಅಪ್ಲಿಕೇಶನ್‌ ಅತ್ಯಂತ ವೇಗವಾದ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸಬಹುದಾದ ಅಪ್ಲಿಕೇಶನ್‌ ಆಗಿದೆ.

Oovoo

Oovoo

ಇನ್ನು ಗ್ರೂಪ್‌ಕಾಲ್‌ ಆಪ್‌ಗಳಲ್ಲಿ OOVOO ಆಪ್‌ ಕೂಡ ಉತ್ತಮ ಅಪ್ಲಿಕೇಶನ್‌ ಆಗಿದ್ದು. ಒಂದು ಬಾರಿಗೆ ಗರಿಷ್ಠ 12 ಮಂದಿ ಭಾಗವಹಸಿಬಹುದಾಗಿದೆ. ಜೊತೆಗೆ ಗ್ರೂಪ್‌ ಕಾಲ್‌ ಮಾಡಲು ಇದು ಉಚಿತ ಅಪ್ಲಿಕೇಶನ್ ಆಗಿದೆ. ಇದು ಆಂಡ್ರಾಯ್ಡ್, ಐಒಎಸ್, ಮ್ಯಾಕೋಸ್, ವಿಂಡೋಸ್ ಮತ್ತು ಅಮೆಜಾನ್ ಫೈರ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ವೀಡಿಯೊ ಕರೆಯನ್ನು ರೆಕಾರ್ಡ್ ಮಾಡುವ ಸಾಧ್ಯತೆ ಅಥವಾ ಉಳಿದ ಭಾಗವಹಿಸುವವರೊಂದಿಗೆ ಯೂಟ್ಯೂಬ್ ವೀಡಿಯೊಗಳನ್ನು ಸಹ ಇದರಲ್ಲಿ ನೊಡಬಹುದಾಗಿದೆ. ಇನ್ನು ಇದು ಉಚಿತ ಅಪ್ಲಿಕೇಶನ್ ಆಗಿರುವುದರಿಂದ, ಆಗಾಗ ಜಾಹಿರಾತುಗಳು ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಜಾಹೀರಾತನ್ನು ತೆಗೆದುಹಾಕಲು ಬಳಕೆದಾರರು ಪ್ರೀಮಿಯಂ ಯೋಜನೆಯನ್ನ ತೆಗೆದುಕೊಳ್ಳಬಹುದಾಗಿದೆ.

Hangouts

Hangouts

ಇದಲ್ಲದೆ ಆಂಡ್ರಾಯ್ಡ್ ಫೋನ್‌ನಿಂದ ಗ್ರೂಪ್‌ ವೀಡಿಯೊ ಕರೆಗಳನ್ನು ಮಾಡಲು ಹ್ಯಾಂಗ್‌ಔಟ್ಸ್‌ ಅತ್ಯುತ್ತಮವಾದ ಅಪ್ಲಿಕೇಶನ್‌ ಆಗಿದೆ. 720p ಯಲ್ಲಿ HD ಯಲ್ಲಿ ಗುಣಮಟ್ಟ ವೀಕ್ಷಣೆಯಲ್ಲಿ ಏಕಕಾಲದಲ್ಲಿ 10 ಜನರೊಂದಿಗೆ ಗ್ರೂಪ್‌ ವೀಡಿಯೋ ಮೀಟಿಂಗ್‌ ಮಾಡಲು ಇದು ಅವಕಾಶವನ್ನ ನೀಡುತ್ತದೆ. ಇನ್ನು ವಿಂಡೋಸ್, ಮ್ಯಾಕ್, ಐಒಎಸ್ ಮತ್ತು ಲಿನಕ್ಸ್‌ನಂತಹ ಇತರ ಪ್ಲ್ಯಾಟ್‌ಫಾರ್ಮ್‌ಗಳಿಗೆ ವೆಬ್ ಆವೃತ್ತಿಯಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. ಅಲ್ಲದೆ ಗ್ರೂಪ್‌ ಮೀಟಿಂಗ್‌ ಸೇರಲು ಇತರೆ ಜನರೊಂದಿಗೆ ಹಂಚಿಕೊಳ್ಳುವುದಕ್ಕೆ ಲಿಂಕ್‌ ಅನನ್ಉ ಕೂಡ ಇದರಲ್ಲಿ ರಚಿಸಕೊಳ್ಳಲು ಅವಕಾಶವಿದ್ದು, ಲಿಂಕ್‌ ಮೂಲಕ ಇತರರು ಮೀಟಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ.

ಸ್ಕೈಪ್

ಸ್ಕೈಪ್

ಗ್ರೂಪ್‌ ವೀಡಿಯೊ ಕರೆಗಳನ್ನು ಮಾಡಲು ಉಚಿತ ಅಪ್ಲಿಕೇಶನ್ ಗಳಲ್ಲಿ ಉತ್ತಮವಾದದ್ದು ಅಂದರೆ ಅದು ಸ್ಕೈಪ್ ಆಗಿದೆ. ಈ ಅಪ್ಲಿಕೇಶನ್‌ ಮೂಲಕ, 25 ಮಂದಿ ಗ್ರೂಪ್‌ ವೀಡಿಯೋ ಕರೆಗಳನ್ನ ಏಕಾಕಾಲದಲ್ಲಿ ಮಾಡಬಹುದು. ಜೊತೆಗೆ 10 ಜನರ ಜೊತೆ ವೀಡಿಯೊ ಮೀಟಿಂಗ್‌ ಮಾಡಬಹುದು. ಇದು ಉಚಿತ ಅಪ್ಲಿಕೇಶನ್ ಆದ್ದರಿಂದ, ಇದರಲ್ಲಿ ಪಾವತಿ ಮಾಡಿ ಪಡೆಯಬಹುದಾದ ಪ್ಲ್ಯಾನ್‌ಗಳು ಕುಡ ಲಬ್ಯವಿವೆ. ಪಾವತಿ ಪ್ಲ್ಯಾನ್‌ಗಳನ್ನ ಅಳವಡಿಸಿಕೊಂಡರೆ ನಿವು ಏಕಕಾಲದಲ್ಲಿ 250 ಜನರಿಗೆ ವೀಡಿಯೋ ಕರೆ ಮಾಡಬಹುದಾಗಿದೆ.

ಫ್ರೀ ಕಾನ್ಫೆರೆನ್ಸ್

ಫ್ರೀ ಕಾನ್ಫೆರೆನ್ಸ್

ಇನ್ನು ಅನೇಕ ಮಂದಿ ಭಾಗವಹಿಸುವ ವೀಡಿಯೊ ಮೀಟಿಂಗ್‌ಗಳನ್ನು ಆಯೋಜಿಸಲು ಫ್ರೀ ಕಾನ್ಫರೆನ್ಸ್ ಅಫ್ಲಿಕೇಶನ್‌ ಉತ್ತಮವಾದ ಆಯ್ಕೆಯಾಗಿದೆ. ಇದು ಇತರ ರೀತಿಯ ಸೇವೆಗಳಿಗಿಂತ ಹೆಚ್ಚು ವ್ಯಾಪಾರ-ಆಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಥಳೀಯ ಕರೆ ವೆಚ್ಚದಲ್ಲಿ ಅಂತರರಾಷ್ಟ್ರೀಯ ಕರೆಗಳನ್ನು ಮಾಡುವ ಸಾಮರ್ಥ್ಯ, ಜ್ಞಾಪನೆಗಳನ್ನು ಕಳುಹಿಸುವುದು, ವೇಯಿಟಿಂಗ್‌ ಟ್ಯೂನ್‌ ಅನ್ನು ಹೊಂದಿಸುವುದು. ಅಥವಾ ಸಮ್ಮೇಳನವನ್ನು ಪ್ರಾರಂಭಿಸುವ ಮೊದಲು ನಿಮ್ಮ ತಂಡದ ಸದಸ್ಯರೊಂದಿಗೆ ಮಾತನಾಡುವ ಅವಕಾಶವನ್ನು ಇದರಲ್ಲಿ ಕಾಣಬಹುದಾಗಿದೆ.ಈ ಅಪ್ಲಿಕೇಶನ್ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ ಎರಡರಲ್ಲೂ ಲಭ್ಯವಿದೆ ಮತ್ತು ಏಕಕಾಲದಲ್ಲಿ 400 ಮಂದಿ ಭಾಗವಹಿಸಬಹುದಾಗಿದೆ.

Best Mobiles in India

English summary
Videoconferencing tools have always been closely associated with teleworking and the business environment. However, in these times, its social function has multiplied exponentially. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X