Just In
Don't Miss
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೇಮಿಂಗ್ ಪ್ರಿಯರ ಮನಗೆಲ್ಲುವ ಅತ್ಯುತ್ತಮ ಆನ್‌ಲೈನ್ ರೇಸಿಂಗ್ ಗೇಮ್‌ಗಳು!
ಇಂದಿನ ಟೆಕ್ನಾಲಜಿ ಯುಗದಲ್ಲಿ ಆನ್‌ಲೈನ್ ಗೇಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಪ್ರಸ್ತುತ ಯುವಜನತೆ ಹೆಚ್ಚಿನ ಸಮಯ ಆನ್‌ಲೈನ್ ಗೇಮ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೇ ಕಾರಣಕ್ಕೆ ಅನೇಕ ಗೇಮಿಂಗ್ ಕಂಪೆನಿಗಳು ವಿವಿಧ ಮಾದರಿಯ ಆಕರ್ಷಕವಾದ ಆನ್‌ಲೈನ್ ಗೇಮ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇವುಗಳಲ್ಲಿ ರೇಸಿಂಗ್ ಗೇಮ್‌ಗಳು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿವೆ. ಅದರಲ್ಲೂ ಹೆಚ್ಚಿನ ಗ್ರಾಫಿಕ್ಸ್ ಮತ್ತು ಧ್ವನಿ ವಿನ್ಯಾಸವನ್ನು ಹೊಂದಿರುವ ಗೇಮ್‌ಗಳು ಎಲ್ಲರನ್ನೂ ಸುಲಭವಾಗಿ ಆಕರ್ಷಿಸುತ್ತಿವೆ.

ಹೌದು, ಆನ್‌ಲೈನ್ ಗೇಮ್‌ಗಳು ಹೆಚ್ಚು ಆಕರ್ಷಕವಾಗಿವೆ. ಯುವಜನತೆಯ ಆಶಯಕ್ಕೆ ತಕ್ಕಂತೆ ಇಂದಿನ ಆನ್‌ಲೈನ್ ಗೇಮ್‌ಗಳು ರೂಪುಗೊಳ್ಳುತ್ತಿವೆ. ಅದರಂತೆ ರೇಸಿಂಗ್ ಗೇಮ್‌ಗಳು ಕೂಡ ಅನೇಕ ಬದಲಾವಣೆಗಳನ್ನು ಕಂಡಿದ್ದು, ಹೆಚ್ಚಿನ ಗ್ರಾಫಿಕ್ಸ್ ಮೂಲಕ ಗಮನ ಸೆಳೆಯುತ್ತಿವೆ. ಇದರಿಂದ ಮೊಬೈಲ್‌ನಲ್ಲಿ ಅಸಾಧಾರಣ ರೇಸಿಂಗ್ ಅನುಭವವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ನಿಮ್ಮ ಗೇಮಿಂಗ್ ಅನುಭವವನ್ನು ಹೆಚ್ಚಿಸುವ ಜನಪ್ರಿಯ ರೇಸಿಂಗ್ ಗೇಮ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸ್ಫಾಲ್ಟ್ 9: ಲೆಜೆಂಡ್ಸ್
ಜನಪ್ರಿಯ ರೇಸಿಂಗ್ ಗೇಮ್‌ಗಳ ಸಾಲಿನಲ್ಲಿ ಆಸ್ಫಾಲ್ಟ್ 9: ಲೆಜೆಂಡ್ಸ್ ಕೂಡ ಸೇರಿದೆ. ಕಂಪ್ಲೀಟ್ ನೋ-ಬ್ರೇನರ್ - ಗೇಮ್‌ಲಾಫ್ಟ್‌ನ ಆಸ್ಫಾಲ್ಟ್ ಸರಣಿಯು Forza Horizon ಮಾದರಿಯಲ್ಲಿದೆ. ಈ ಗೇಮ್‌ನಲ್ಲಿ ನೀವು ಫೆರಾರಿ, ಪೋರ್ಷೆ ಮತ್ತು ಲಂಬೋರ್ಘಿನಿಯವರೆಗಿನ ಸೂಪರ್‌ಫಾಸ್ಟ್ ಪರವಾನಗಿ ಪಡೆದ ವಾಹನಗಳಲ್ಲಿ ರಿಯಲ್ ವರ್ಲ್ಡ್‌ನಲ್ಲಿ ಗೇಮ್ ಆಡಿದಂತೆ ಅನುಭವ ಪಡೆಯಬಹುದು. ಆನ್‌ಲೈನ್ ಮಲ್ಟಿಪ್ಲೇಯರ್‌ನಲ್ಲಿ ಸ್ಪರ್ಧಿಸಲು ನೀವು ಚಕ್ರದ ರಿಮ್‌ಗಳು, ಬಾಡಿ ಪೇಂಟ್ ಮತ್ತು ಸ್ಪಾಯ್ಲರ್‌ಗಳ ನಡುವೆ ವಿನಿಮಯ ಮಾಡಿಕೊಳ್ಳುವುದರಿಂದ ಅನೇಕ ಆಯ್ಕೆಗಳು ಹೇರಳವಾಗಿ ಸಿಗುತ್ತವೆ. ಅಲ್ಲದೆ ಆಟೋ ಮತ್ತು ಹಸ್ತಚಾಲಿತ ರೇಸಿಂಗ್ ಕಂಟ್ರೋಲ್ ಗೇಮ್‌ಗಳನ್ನು ಕೂಡ ಆಡಬಹುದಾಗಿದೆ.

ಮಾರಿಯೋ ಕಾರ್ಟ್ ಟೂರ್
ಮಾರಿಯೋ ಕಾರ್ಟ್ ಟೂರ್ ಗೇಮ್ ಕೂಡ ಜನಪ್ರಿಯ ರೇಸಿಂಗ್ ಗೇಮ್ ಎನಿಸಿಕೊಂಡಿದೆ. ಇದರಲ್ಲಿ ನೀವು 50 ರಷ್ಟು AI (ಬಾಟ್‌ಗಳು) ವಿರುದ್ಧ ಸ್ಪರ್ಧಿಸಬಹುದು. ಇನ್ನು ಈ ಗೇಮ್‌ನಲ್ಲಿ ನಿಂಟೆಂಡೊ ಮೊಬೈಲ್ ಹಾರ್ಡ್‌ವೇರ್‌ಗೆ ಸರಿಹೊಂದುವಂತೆ ಕ್ಲಾಸಿಕ್ ಟ್ರ್ಯಾಕ್‌ಗಳನ್ನು ಕಂಪ್ಲೀಟ್ ರಿಬಿಲ್ಟ್ ಮಾಡಿದೆ. ಆದರೂ ಕೇವಲ ಎರಡು ಸಣ್ಣ ಲ್ಯಾಪ್‌ಗಳವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಪ್ರತಿ 2 ವಾರಗಳಿಗೊಮ್ಮೆ, ಬೋನಸ್ ಆಫರ್‌ಗಳೊಂದಿಗೆ ಗೇಮ್ ಹೊಸ ಟೂರ್ ಪ್ಲೇಸ್ ಅನ್ನು ಒಳಗೊಂಡಿದೆ. ಸವಾಲುಗಳನ್ನು ಪೂರ್ಣಗೊಳಿಸುವುದು ಮತ್ತು ಸರಳವಾಗಿ ರೇಸ್‌ಗಳನ್ನು ಗೆಲ್ಲುವುದು ಗ್ರ್ಯಾಂಡ್ ಸ್ಟಾರ್‌ಗಳನ್ನು ಗಳಿಸುವುದಕ್ಕೆ ಅವಕಾಶ ನೀಡಲಿದೆ.

ಗ್ರಿಡ್: ಆಟೋಸ್ಪೋರ್ಟ್
ಈ ಗೇಮ್‌ನಲ್ಲಿ ಡೆವಲಪರ್ ಕೋಡ್‌ಮಾಸ್ಟರ್‌ಗಳು ಹೊಸ ಅನುಭವವನ್ನು ನೀಡಲಿದ್ದಾರೆ. ಇದರಲ್ಲಿ ಹಸ್ತಚಾಲಿತ ನಿರ್ವಹಣೆಯಂತಹ ಸಾಂಪ್ರದಾಯಿಕ ರೇಸಿಂಗ್ ಅಂಶಗಳನ್ನು ಪರಿಚಯಿಸಿದ್ದಾರೆ. ಗೇಮರ್‌ಗಳು ಆನ್‌ಲೈನ್ ಮಲ್ಟಿಪ್ಲೇಯರ್, ಆಫ್‌ಲೈನ್ ಕ್ಯಾರಿಯರ್ ಮೋಡ್‌ನಿಂದ ಹಿಡಿದು ಅಸಂಖ್ಯಾತ ಹಂತಗಳಲ್ಲಿ ಸ್ಪರ್ಧಿಸಬಹುದು. ಗೇಮರ್‌ಗಳು ತಮ್ಮ ಕೌಶಲ್ಯಗಳನ್ನು ಪರೀಕ್ಷಿಸಲು 100 ಕಾರುಗಳು ಮತ್ತು ಸರ್ಕ್ಯೂಟ್‌ಗಳ ನಡುವೆ ಬದಲಾಯಿಸಬಹುದಾಗಿದೆ. ಈ ಗೇಮ್‌ನಲ್ಲಿ ಟಿಲ್ಟ್, ಚಕ್ರ ಸ್ಪರ್ಶ, ಬಾಣದ ಸ್ಪರ್ಶ ಮತ್ತು ಬಾಹ್ಯ ಗೇಮ್‌ಪ್ಯಾಡ್‌ಗೆ (ನಿಯಂತ್ರಕ) ಬೆಂಬಲದ ನಡುವೆ ಆಯ್ಕೆಗಳನ್ನು ನೀಡುತ್ತವೆ.

CSR ರೇಸಿಂಗ್ 2
CSR ರೇಸಿಂಗ್ 2 ಆಕರ್ಷಕವಾದ ಚೇಸಿಂಗ್ ಗೇಮ್ ಅನುಭವ ನೀಡಲಿದೆ. ಇದರಲ್ಲಿ ಗೇಮರ್‌ಗಳು ಮ್ಯಾಕ್‌ಲಾರೆನ್ ಮತ್ತು ಫೆರಾರಿಯಂತಹ 200 ಟಾಪ್-ಆಫ್-ಲೈನ್ ಕಾರುಗಳನ್ನು ಓಡಿಸಬಹುದು. ಫಾಸ್ಟ್ ಅಂಡ್ ಫ್ಯೂರಿಯಸ್ ಫ್ರ್ಯಾಂಚೈಸ್‌ನ ಡ್ರ್ಯಾಗ್ ರೇಸಿಂಗ್ ಗೇಮ್ ಆಡಬಹುದು. ಜೊತೆಗೆ ಗೇಮ್‌ನಲ್ಲಿ ನಿಮ್ಮ ವಾಹನಕ್ಕೆ ಡ್ಯಾಮೇಜ್ ಆದರೆ ನಿಮ್ಮ ವೈಯಕ್ತಿಕಗೊಳಿಸಿದ ಗ್ಯಾರೇಜ್‌ನಲ್ಲಿ ನವೀಕರಣಗಳಿಗೆ ಅವಕಾಶ ನೀಡುತ್ತದೆ. ಮೊಬೈಲ್ ಮಾನದಂಡಗಳಿಗೆ ಗ್ರಾಫಿಕ್ಸ್ ಹೈಪರ್-ರಿಯಲಿಸ್ಟಿಕ್ ಆಗಿ ಕಾಣುತ್ತದೆ.

ಗ್ರ್ಯಾಂಡ್ ಪ್ರಿಕ್ಸ್ ಸ್ಟೋರಿ
ಗ್ರ್ಯಾಂಡ್ ಪ್ರಿಕ್ಸ್ ಸ್ಟೋರಿಯನ್ನು ರೇಸಿಂಗ್ ಗೇಮ್‌ಗಳ ಮ್ಯಾನೇಜರ್ ಮೋಡ್ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಗೇಮ್‌ನಲ್ಲಿ ಡೀಪ್ ಟ್ರೈನಿಂಗ್ ಸಿಸ್ಟಂ ನಿಮಗೆ ವಿಶ್ರಾಂತಿ ನೀಡುವ ಅನುಭವವನ್ನು ನೀಡುತ್ತದೆ. ಅಲ್ಲದೆ ನೀವು ಚಾಲಕರಿಗೆ ತರಬೇತಿ ನೀಡುವಾಗ, ಪ್ರಾಯೋಜಕರನ್ನು ಪಡೆದುಕೊಳ್ಳುವಾಗ ಮತ್ತು ಭವಿಷ್ಯದಲ್ಲಿ ಉತ್ತಮ ಅವಕಾಶಗಳಿಗಾಗಿ ವಾಹನ ನವೀಕರಣಗಳನ್ನು ಕಾಣಬಹುದಾಗಿದೆ. ಅಲ್ಲದೆ ಗೇಮ್ ಮುಂದುವರೆದಂತೆ ಭೂಪ್ರದೇಶವು ಕೂಡ ಬದಲಾಗುತ್ತದೆ. ಇದರಲ್ಲಿ ಆಟಗಾರರು ವಿವಿಧ ರೋಡ್ ಕಂಡಿಷನ್ಸ್ ಮತ್ತು ಮಳೆಯನ್ನು ಗಣನೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ. ಗ್ರ್ಯಾಂಡ್ ಪ್ರಿಕ್ಸ್ ಈವೆಂಟ್‌ಗಳನ್ನು ಗೆಲ್ಲುವ ಮೂಲಕ ನೀವು ಸರಳವಾಗಿ ರೇಸ್‌ಗಳನ್ನು ವೀಕ್ಷಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470