80,000ರೂ.ಒಳಗೆ ಲಭ್ಯವಾಗುವ ಅತ್ಯುತ್ತಮ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು!

|

ಆನ್‌ಲೈನ್‌ ಆಧಾರಿತ ಗೇಮ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಯುವಜನತೆಯನ್ನು ಸೆಳೆದಿವೆ. ಇದೇ ಕಾರಣಕ್ಕೆ ಗೇಮಿಂಗ್‌ಗೆ ಪೂರಕವಾದ ಅನೇಕ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಕೂಡ ಸೇರಿವೆ. ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ವಿಶೇಷ ಬೇಡಿಕೆ ಇದೆ. ಅತ್ಯುತ್ತಮ ಸ್ಟೋರೇಜ್‌ ಕ್ಯಾಪಸಿಟಿ ಮತ್ತು ಪ್ರೊಸೆಸರ್‌ ಕಂಪ್ಯೂಟಿಂಗ್‌ ಸಿಸ್ಟಮ್‌ಗಳು ಗೇಮಿಂಗ್‌ ಪ್ರಿಯರಿಗೆ ಅಚ್ಚುಮೆಚ್ಚಿನ ಆಯ್ಕೆಯಾಗಿವೆ.

ಗೇಮಿಂಗ್‌

ಹೌದು, ಗೇಮಿಂಗ್‌ ಪ್ರಿಯರಿಗಾಗಿಯೇ ವಿನ್ಯಾಸಗೊಳಿಸಲಾದ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿವೆ. ವೇಗದ ಕಾರ್ಯದಕ್ಷತೆ, ಹೆಚ್ಚಿನ RAM ಸಾಮರ್ಥ್ಯವನ್ನು ಒಳಗೊಂಡ ಲ್ಯಾಪ್‌ಟಾಪ್‌ಗಳು ಗೆಮಿಂಗ್‌ ಅನ್ನು ಇನ್ನಷ್ಟು ಆನಂದಿಸಲು ಅವಕಾಶ ಮಾಡಿಕೊಡುತ್ತವೆ. ಆದರಿಂದ ಪರ್ಸನಲ್‌ ಲ್ಯಾಪ್‌ಟಾಪ್‌ಗಳ ಬಳಕೆಗಿಂತ ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಬಳಕೆಯನ್ನು ಭಿನ್ನವಾಗಿಸಿವೆ. ಇನ್ನು ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ವಿವಿಧ ಬೆಲೆ ಮಾದರಿಯಲ್ಲಿ ಲಭ್ಯವೆವೆ. ಪ್ರಸ್ತುತ ಭಾರತದಲ್ಲಿ 80,000ರೂ.ಒಳಗೆ ಖರೀದಿಸಬಹುದಾದ ಅತ್ಯುತ್ಯಮ ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

MSI GF75 ಥಿನ್ ಗೇಮಿಂಗ್

MSI GF75 ಥಿನ್ ಗೇಮಿಂಗ್

MSI GF75 ಥಿನ್ ಗೇಮಿಂಗ್ ಲ್ಯಾಪ್‌ಟಾಪ್ ಅತ್ಯುತ್ತಮ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಈ ಲ್ಯಾಪ್‌ಟಾಪ್‌ 17.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 144 Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ i5-10300H ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಜೊತೆಗೆ ಜಿಫೋರ್ಸ್‌ GTX 1650 ಗ್ರಾಫಿಕ್ಸ್ ಕಾರ್ಡ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ದೀರ್ಘ ಗೇಮಿಂಗ್ ಸೆಷನ್‌ಗಳಿಗಾಗಿ 7 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇದು ಕಸ್ಟಮೈಸ್ ಮಾಡಿದ ಕೂಲಿಂಗ್ ಅನ್ನು ನೀಡುತ್ತದೆ. ಪ್ರಸ್ತುತ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಈ ಲ್ಯಾಪ್‌ಟಾಪ್‌ ಅನ್ನು 78,999ರೂ.ಬೆಲೆಗೆ ಖರೀದಿಸಬಹುದಾಗಿದೆ.

ಲೆನೊವೊ ಲೀಜನ್ Y540

ಲೆನೊವೊ ಲೀಜನ್ Y540

ಲೆನೊವೊ ಕಂಪೆನಿಯ ಲೆನೊವು ಲೀಜನ್‌ Y540 ಲ್ಯಾಪ್‌ಟಾಪ್‌ ಅತ್ಯುತ್ತಮ ಗೇಮಿಂಗ್‌ ಲ್ಯಾಪ್‌ಟಾಪ್‌ ಆಯ್ಕೆಗಳಲ್ಲಿ ಒಂದಾಗಿದೆ. ಈ ಲ್ಯಾಪ್‌ಟಾಪ್‌ 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 250 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 9ನೇ ಜನ್ ಇಂಟೆಲ್ ಕೋರ್ i5-9300HF ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಹಾಗೆಯೇ NVIDIA GeForce GTX 1650 ಗ್ರಾಫಿಕ್ಸ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 8GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ 70,999ರೂ.ಬೆಲೆಗೆ ಲಭ್ಯವಾಗಲಿದೆ.

HP ಪೆವಿಲಿಯನ್ 15

HP ಪೆವಿಲಿಯನ್ 15

ಹೆಚ್‌ಪಿ ಪೆವಿಲಿಯನ್‌ 15 ಲ್ಯಾಪ್‌ಟಾಪ್‌ ನೀವು ಆಯ್ಕೆ ಮಾಡಬಹುದಾದ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಹೆಚ್ಚಿನ ಹೊಸ AAA ಗೇಮ್‌ಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತವೆ. ಈ ಲ್ಯಾಪ್‌ಟಾಪ್‌ 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು AMD ರೈಜೆನ್ 5 4600H ಪ್ರೊಸೆಸರ್‌ ಬಲವನ್ನು ಹೊಂದಿದೆ. Nvidia 1650Ti ಗ್ರಾಫಿಕ್ಸ್‌ ಕಾರ್ಡ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಬಲವನ್ನು ಒಳಗೊಂಡಿದೆ. ಪ್ರಸ್ತುತ ಅಮೆಜಾನ್‌ ತಾಣದಲ್ಲಿ 75,444 ರೂ.ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಲ್ಯಾಪ್‌ಟಾಪ್‌ ಶ್ಯಾಡೋ ಬ್ಲಾಕ್‌ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಆಸುಸ್‌ ಟಫ್‌ ಗೇಮಿಂಗ್ F15 ಲ್ಯಾಪ್‌ಟಾಪ್‌

ಆಸುಸ್‌ ಟಫ್‌ ಗೇಮಿಂಗ್ F15 ಲ್ಯಾಪ್‌ಟಾಪ್‌

ಆಸುಸ್ ಕಂಪೆನಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಆಸುಸ್‌ ಕಂಪೆನಿ ಹಲವು ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದರಲ್ಲಿ ಆಸುಸ್‌ ಟಫ್‌ ಗೇಮಿಂಗ್‌ F15 ಲ್ಯಾಪ್‌ಟಾಪ್‌ ಕೂಡ ಒಂದಾಗಿದೆ. ಇದು 2022 ರಲ್ಲಿ ನೀವು ಭಾರತದಲ್ಲಿ 80,000ರೂ. ಒಳಗೆ ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 144Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇದು 10ನೇ ತಲೆಮಾರಿನ ಇಂಟೆಲ್ ಕೋರ್ i5-10300H ಪ್ರೊಸೆಸರ್ ಬಲವನ್ನು ಹೊಂದಿದೆ. ಜೊತೆಗೆ ಎನ್‌ವಿಡಿಯಾ ಜಿಪೋರ್ಸ್‌ GTX 1650 ಗ್ರಾಫಿಕ್ಸ್‌ ಅನ್ನು ಹೊಂದಿದೆ. ಪ್ರಸ್ತುತ ಅಮೆಜಾನ್‌ ತಾಣದಲ್ಲಿ ಈ ಲ್ಯಾಪ್‌ಟಾಪ್‌ ಬೆಲೆ 54,990ರೂ.ಆಗಿದೆ.

ಏಸರ್ ನಿಟ್ರೋ 5 ಗೇಮಿಂಗ್ ಲ್ಯಾಪ್‌ಟಾಪ್

ಏಸರ್ ನಿಟ್ರೋ 5 ಗೇಮಿಂಗ್ ಲ್ಯಾಪ್‌ಟಾಪ್

ಭಾರತದಲ್ಲಿ ಲಭ್ಯವಿರುವ ಜನಪ್ರಿಯ ಲ್ಯಾಪ್‌ಟಾಪ್‌ ಬ್ರ್ಯಾಂಡ್‌ಗಳಲ್ಲಿ ಏಸರ್‌ ಸಂಸ್ಥೆ ಕೂಡ ಒಂದಾಗಿದೆ. ಏಸರ್‌ ಕಂಪೆನಿಯ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಅಗ್ಗದ ಬೆಲೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿವೆ. ಇದರಲ್ಲಿ ಏಸರ್ ನೈಟ್ರೋ 5 ಗೇಮಿಂಗ್ ಲ್ಯಾಪ್‌ಟಾಪ್ ಕೂಡ ಒಂದಾಗಿದೆ. ಇದು 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ i5-10300H ಪ್ರೊಸೆಸರ್ ಹೊಂದಿದೆ. ಹಾಗೆಯೇ 8GB RAM ಮತ್ತು 512 GB ಸ್ಟೋರೇಜ್‌ ಅನ್ನು ಒಳಗೊಂಡಿದೆ. ಪ್ರಸ್ತುತ ಅಮೆಜಾನ್‌ ತಾಣದಲ್ಲಿ ಈ ಲ್ಯಾಪ್‌ಟಾಪ್‌ 68,999ರೂ.ಬೆಲೆಗೆ ದೊರೆಯಲಿದೆ.

ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3

ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3

ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3 ಲ್ಯಾಪ್‌ಟಾಪ್‌ ಜನಪ್ರಿಯ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಈ ಲ್ಯಾಪ್‌ಟಾಪ್‌ 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ i5-10300H ಪ್ರೊಸೆಸರ್‌ ಅನ್ನು ಹೊಂದಿದ್ದು, ಬೇಸ್ ಕ್ಲಾಕ್ ಸ್ಪೀಡ್ 2.5 GHz ಮತ್ತು 4.5 GHz ಟರ್ಬೊ ಬೂಸ್ಟ್ ವೇಗವನ್ನು ಹೊಂದಿದೆ. ಜೊತೆಗೆ NVIDIA GeForce GTX 1650 4GB GDDR6 ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ. ಹಾಗೆಯೇ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ಅಮೆಜಾನ್‌ ತಾಣದಲ್ಲಿ 53,490ರೂ.ಬೆಲೆಗೆ ಲಭ್ಯವಿದೆ.

Most Read Articles
Best Mobiles in India

English summary
gaming laptops have supplanted standard business and personal use laptops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X