ಗೂಗಲ್‌ ಕ್ರೋಮ್‌ ಹೊರತು ಪಡಿಸಿ ಲಭ್ಯವಿರುವ ಇತರೆ ವೆಬ್‌ಬ್ರೌಸರ್‌ಗಳು!

|

ಇದು ಡಿಜಟಲ್‌ ಜಮಾನ, ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕೂಡ ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದಾಗಿದೆ. ಇನ್ನು ನಿಮಗೆ ಯಾವುದೇ ಮಾಹಿತಿಯನ್ನ ಬೇಕಾದರೂ ಕ್ಷಣಮಾತ್ರದಲ್ಲಿ ಗೂಗಲ್‌ ಕ್ರೋಮ್‌ ವೆಬ್‌ಬ್ರೌಸರ್‌ ಮೂಲಕ ತಿಳಿದುಕೊಳ್ಳಬಹುದು. ಅಷ್ಟರ ಮಟ್ಟಿಗೆ ಗೂಗಲ್‌ ಕ್ರೋಮ್‌ ವೆಬ್‌ಬ್ರೌಸರ್‌ ಬಳಕೆದಾರರ ನೆಚ್ಚಿನ ಸರ್ಚ್‌ ಬ್ರೌಸರ್‌ ಆಗಿ ಗುರ್ತಿಸಿಕೊಂಡಿದೆ. ಹಾಗಂತ ಸರ್ಚ್‌ವೆಬ್‌ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್‌ ಮಾತ್ರವಲ್ಲ ಇತರೆ ವೆಬ್‌ ಬ್ರೌಸರ್‌ಗಳು ಕೂಡ ಇವೆ.

ಹೌದು

ಹೌದು, ವೆಬ್ ಬ್ರೌಸರ್‌ಗಳಿಗೆ ಬಂದಾಗ ಥಟ್ಟನೆ ನೆನಪಾಗೋದು ಗೂಗಲ್‌ ಕ್ರೋಮ್‌, ಸ್ಟ್ಯಾಟ್‌ಕೌಂಟರ್ ಪ್ರಕಾರ, ಗೂಗಲ್‌ ಕ್ರೋಮ್‌ ಮಾರುಕಟ್ಟೆಯ 71% ಮತ್ತು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 63% ಬಳಕೆಯ ಪಾಲನ್ನು ಹೊಂದಿದೆ. ಅಂದರೆ ಮಾಹಿತಿಯನ್ನ ಸರ್ಚ್‌ ಮಾಡುವ ವೆಬ್‌ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್‌ ಮುಂಚೂಣಿಯಲ್ಲಿದೆ. ಆದರೆ ವೆಬ್‌ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್‌ನ ಹೊರತಾಗಿಯೂ ಇನ್ನು ಕೆಲವು ವೆಬ್‌ಬ್ರೌಸರ್‌ಗಳಿದ್ದು, ಅವುಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ವಿವಾಲ್ಡಿ (vivaldi)

ವಿವಾಲ್ಡಿ (vivaldi)

ಗೂಗಲ್‌ಕ್ರೋಮ್‌ ಹೊರತುಪಡಿಸಿ ಲಭ್ಯವಿರುವ ವೆಬ್‌ಬ್ರೌಸರ್‌ಗಳಲ್ಲಿ ವಿವಾಲ್ಡಿ ವೆಬ್‌ಬ್ರೌಸರ್‌ ಕೂಡ ಉತ್ತಮ ಆಯ್ಕೆಯಾಗಲಿದೆ. ಈ ಕ್ರಾಸ್ ಪ್ಲಾಟ್‌ಫಾರ್ಮ್ ವೆಬ್ ಬ್ರೌಸರ್ 2016 ರಲ್ಲಿಯೇ ಮಾರುಕಟ್ಟೆಗೆ ಬಂದಿತು. ಅಲ್ಲದೆ ಇದು ವಿಂಡೋಸ್, ಆಂಡ್ರಾಯ್ಡ್ ಮತ್ತು ಲಿನಕ್ಸ್ ಬಳಕೆದಾರರಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಐಒಎಸ್‌ ನಲ್ಲೂ ಲಭ್ಯವಾಗುವ ಎಲ್ಲಾ ಪ್ರಯತ್ನಗಳನ್ನ ವಿವಾಲ್ಡಿ ಕಂಪೆನಿ ಮಾಡ್ತಿದೆ. ಇನ್ನು ವೇಗದ ದೃಷ್ಟಿಯಿಂದ ನೋಡೋದಾದ್ರೆ ವಿವಾಲ್ಡಿ ಸಾಕಷ್ಟು ವೇಗವಾಗಿದ್ದು, ಉತ್ತಮ ಗೌಪ್ಯತೆ ನಿಯಂತ್ರಣವನ್ನು ಹೊಂದಿದೆ.

ಫೈರ್‌ಫಾಕ್ಸ್‌ ಕ್ವಾಂಟಮ್ (Firefox Quantum)

ಫೈರ್‌ಫಾಕ್ಸ್‌ ಕ್ವಾಂಟಮ್ (Firefox Quantum)

ಗೂಗಲ್‌ ಕ್ರೋಮ್‌ ಬಿಟ್ಟರೆ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ವೆಬ್‌ಬ್ರೌಸರ್‌ ಅಂದ್ರೆ ಫೈರ್ಫಾಕ್ಸ. ಈ ವೆಬ್‌ಬ್ರೌಸರ್‌ ಅನ್ನು 2002 ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು, ಆದರೆ 2017 ರಲ್ಲಿ ಹೊಸ ಮಾದರಿಯ ಆಪ್‌ಡೇಟ್‌ ನೊಂದಿಗೆ ಕಾಣಿಸಿಕೊಂಡಿತು. ಈ ಮೂಲಕ ಫೈರ್‌ಫಾಕ್ಸ್‌ ಬ್ರೌಸಿಂಗ್‌ನ ವೇಗದ ಪ್ರಮಾಣದಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಬ್ರೌಸರ್‌ನ ಸಂಪೂರ್ಣ ವಿನ್ಯಾಸವನ್ನು ಬದಲಾಯಿಸಲಾಗಿದೆ. ಸದ್ಯ ಈ ವೆಬ್‌ಬ್ರೌಸರ್‌ ವಿಂಡೋಸ್ 7, ಮ್ಯಾಕ್ ಒಎಸ್ ಎಕ್ಸ್ 10.9, ಆಂಡ್ರಾಯ್ಡ್ ಜೆಲ್ಲಿ ಬೀನ್, ಐಒಎಸ್ 11.0 ಮತ್ತು ಆಪರೇಟಿಂಗ್ ಸಿಸ್ಟಂಗಳಲ್ಲಿ ಲಭ್ಯವಿದೆ.

ಮೈಕ್ರೋಸಾಫ್ಟ್ ಎಡ್ಜ್ (Microsoft Edge)

ಮೈಕ್ರೋಸಾಫ್ಟ್ ಎಡ್ಜ್ (Microsoft Edge)

ಮೈಕ್ರೋಸಾಫ್ಟ್‌ ಎಡ್ಜ್‌ ಕೂಡ ಇತರೆ ವೆಬ್‌ಬ್ರೌಸರ್‌ ಆಯ್ಕೆಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಇ ವೆಬ್‌ಬ್ರೌಸರ್‌ ಬಾರಿ ಬದಲಾವಣೆಗಳನ್ನ ಕಂಡಿದ್ದು ಹೊಸ ಮಾದರಿಯ ಫೀಚರ್ಸ್‌ಗಳ ಮೂಲಕ ಎಂಟ್ರಿ ನೀಡಿದೆ. ಹಾಗೇ ನೋಡಿದ್ರೆ ಈ ವೆಬ್‌ಬ್ರೌಸರ್‌ಅನ್ನ 1995 ರಲ್ಲಿಯೇ ಪರಿಚಯಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಈ ವೆಬ್‌ಬ್ರೌಸರ್‌ ಅನ್ನ ಆಪ್‌ಡೇಟ್‌ ಮಾಡಲಾಗಿದೆ. ಸದ್ಯ ವಿಂಡೋಸ್‌ 10 ಬಳಕೆದಾರರಿಗೆ ಈ ವೆಬ್‌ಬ್ರೌಸರ್‌ ಲಭ್ಯವಿದ್ದು, ಇದರ ಪ್ರಮುಖ ವೈಶಿಷ್ಯತೆಯೆಂದರೆ ಇನ್ಯಾವುದೇ ವೆಬ್‌ಬ್ರೌಸರ್‌ನಿಂದ ಇದನ್ನ ಡೌನ್‌ಲೋಡ್‌ ಮಾಡಲು ಆಗೋದಿಲ್ಲ ಅನ್ನೊದಾಗಿದೆ.

ಟಾರ್ (Tor)

ಟಾರ್ (Tor)

ಸದ್ಯ ಲಭ್ಯವಿರುವ ಇತರೆ ವೆಬ್‌ಬ್ರೌಸರ್‌ಗಳಲ್ಲಿ ಟಾರ್‌ ಕೂಡ ಒಂದಾಗಿದ್ದು, 90ರ ದಶಕದಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ರಿಸರ್ಚ್ ಲ್ಯಾಬೊರೇಟರಿ ಉದ್ಯೋಗಿ ಅಭಿವೃದ್ಧಿಪಡಿಸಿದ ವೆಬ್‌ಬ್ರೌಸರ್‌ ಇದಾಗಿದೆ. ಈ ವೆಬ್‌ಬ್ರೌಸರ್‌ ಯಾವುದೇ ಲಾಗ್‌ಇನ್‌ ಇಲ್ಲದೆ ಇಂಟರ್ನೆಟ್ ಬ್ರೌಸ್ ಮಾಡಲು ಅವಕಾಶ ನೀಡುತ್ತದೆ. ಇದು ಇಂಟರ್‌ನೆಟ್‌ ಬಳಕೆ ಮಾಡುವ ವ್ಯಕ್ತಿಯ ಸ್ಥಳವನ್ನು ಮರೆ ಮಾಚುತ್ತದೆ. ಅಲ್ಲದೆ ಓವರ್‌ಲೇ ನೆಟ್‌ವರ್ಕ್ ಮೂಲಕ ಇಂಟರ್ನೆಟ್ ದಟ್ಟಣೆಯನ್ನು ಸಹ ನಿಯಂತ್ರಿಸುವ ಸಾಮರ್ಥ್ಯವನ್ನ ಒಳಗೊಂಡಿದೆ.

ಬ್ರೇವ್‌(Brave)

ಬ್ರೇವ್‌(Brave)

ಬ್ರೇವ್‌ ವೆಬ್‌ಬ್ರೌಸರ್‌ ಕೂಡ ನಿಮಗೆ ಇತರೆ ವೆಬ್‌ಬ್ರೌಸರ್‌ಗಳ ಆಯ್ಕೆಯಲ್ಲಿಮಲಭ್ಯವಾಗಲಿದ್ದು, ಇದು ಕ್ರೋಮಿಯಂ ಆಧಾರಿತ ಓಪನ್ ಸೋರ್ಸ್ ವೆಬ್ ಬ್ರೌಸರ್ ಆಗಿದೆ. ಈ ವೆಬ್‌ಬ್ರೌಸರ್‌ನಲ್ಲಿ ಯಾವುದೇ ರೀತಿಯ ಜಾಹೀರಾತುಗಳು ಮತ್ತು ವೆಬ್‌ಸೈಟ್ ಟ್ರ್ಯಾಕರ್‌ಗಳು ಕಂಡು ಬರುವುದಿಲ್ಲ. ಈ ವೆಬ್‌ಬ್ರೌಸರ್‌ ಸದ್ಯ ವಿಂಡೋಸ್, ಮ್ಯಾಕೋಸ್, ಲಿನಕ್ಸ್, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ.

Most Read Articles
Best Mobiles in India

English summary
Google Chrome is immensely popular, but it isn’t the only web browser out there.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X