ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಸೌಂಡ್‌ ಮಾಡಿದ ಸ್ಮಾರ್ಟ್‌ವಾಚ್‌ಗಳು!

|

ಭಾರತದ ಟೆಕ್‌ ವಲಯದಲ್ಲಿ ಸ್ಮಾರ್ಟ್‌ವಾಚ್‌ಗಳ ಆರ್ಭಟ ಜೋರಾಗಿದೆ. ನವೀನ ತಂತ್ರಜ್ಞಾನವನ್ನು ಬೆಂಬಲಿಸುವ ಹಾಗೂ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಒಳಗೊಂಡ ಸ್ಮಾರ್ಟ್‌ವಾಚ್‌ಗಳಿಗೆ ಭಾರಿ ಬೇಡಿಕೆಯಿದೆ. ಇದೇ ಕಾರಣಕ್ಕೆ 2022ರಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ವಾಚ್‌ಗಳು ಭಾರತದಲ್ಲಿ ಮಾರಾಟವಾಗಿವೆ. ಸ್ಮಾರ್ಟ್‌ಫೋನ್‌ಗಳ ಮೇಲೆ ಒಲವು ತೋರಿದಂತೆ ಹೆಚ್ಚಿನ ಜನರು ಸ್ಮಾರ್ಟ್‌ವಾಚ್‌ಗಳ ಮೇಲೂ ಕೂಡ ಆಸಕ್ತಿ ತೋರಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ಈ ವರ್ಷ ಸ್ಮಾರ್ಟ್‌ವಾಚ್‌ಗಳು ಸಖತ್‌ ಸೌಂಡ್‌ ಮಾಡಿವೆ.

ಸ್ಮಾರ್ಟ್‌ವಾಚ್

ಹೌದು, 2022ರಲ್ಲಿ ಸ್ಮಾರ್ಟ್‌ವಾಚ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೆಲ್ತ್‌ ಫಿಟ್ನೆಸ್‌ ಫೀಚರ್ಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳ ಕಾರಣಕ್ಕೆ ಈ ಪರಿಯ ಬೆಳವಣಿಗೆ ಸಾಧ್ಯವಾಗಿದೆ ಎಂದು ಹೇಳಲಾಗ್ತಿದೆ. ಅದರಲ್ಲೂ ಕೈಗೆಟಕುವ ಬೆಲೆಯ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿವೆ. ಇದರಲ್ಲಿ ಶಿಯೋಮಿ, ಒನ್‌ಪ್ಲಸ್‌, ನಾಯ್ಸ್‌, ಫೈರ್‌ ಬೋಲ್ಟ್‌ ಬ್ರ್ಯಾಂಡ್‌ಗಳ ವಾಚ್‌ಗಳು ಕೂಡ ಸೇರಿವೆ. ಹಾಗಾದ್ರೆ ಈ ವರ್ಷ ಭಾರತದಲ್ಲಿ ಸಂಚಲನ ಸೃಷ್ಟಿಸಿದ ಪ್ರಮುಖ ಸ್ಮಾರ್ಟ್‌ವಾಚ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ನಾರ್ಡ್‌ ವಾಚ್

ಒನ್‌ಪ್ಲಸ್‌ ನಾರ್ಡ್‌ ವಾಚ್

ಭಾರತದಲ್ಲಿ ಈ ವರ್ಷ ಕೈ ಗೆಟಕುವ ಬೆಲೆಯಲ್ಲಿ ಸಾಕಷ್ಟು ಸೌಂಡ್‌ ಮಾಡಿದ ಸ್ಮಾರ್ಟ್‌ವಾಚ್‌ ಎಂದರೆ ಒನ್‌ಪ್ಲಸ್‌ ನಾರ್ಡ್‌ ವಾಚ್‌ ಆಗಿದೆ. ಈ ಸ್ಮಾರ್ಟ್‌ವಾಚ್‌ 4,999ರೂ. ಬೆಲೆಯಲ್ಲಿ ಲಭ್ಯವಿದೆ. ಒನ್‌ಪ್ಲಸ್‌ ನಾರ್ಡ್‌ವಾಚ್‌ 1.78 ಇಂಚಿನ HD ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 368x448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್‌ 30 ದಿನಗಳ ಸ್ಟ್ಯಾಂಡ್‌ಬೈ ಟೈಂ ಜೊತೆಗೆ 10 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದು SpO2, ಹೃದಯ ಬಡಿತ, ಒತ್ತಡ ಮಾನಿಟರ್ ಅನ್ನು ಒಳಗೊಂಡಿದೆ.

ರಿಯಲ್‌ಮಿ ವಾಚ್ 3

ರಿಯಲ್‌ಮಿ ವಾಚ್ 3

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಸ್ಮಾರ್ಟ್‌ವಾಚ್‌ಗಳಲ್ಲಿ ರಿಯಲ್‌ಮಿ ವಾಚ್‌ 3 ಸೇರಿದೆ. ಈ ಸ್ಮಾರ್ಟ್‌ವಾಚ್‌ ಐಫೋನ್‌ನೊಂದಿಗೆ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಬಳಕೆದಾರರು ಐಫೋನ್ ಅನ್ನು ಬ್ಲೂಟೂತ್ ಮೂಲಕ ಕನೆಕ್ಟ್‌ ಮಾಡುವ ಮೂಲಕ ಕಾಲ್‌ಗಳನ್ನು ರಿಸಿವ್‌ ಮಾಡುವುದಕ್ಕೆ ಅವಕಾಶವಿದೆ. ಇದು7-ದಿನದ ಬ್ಯಾಟರಿ ಅವಧಿಯನ್ನು ನೀಡಲಿದೆ. ಪ್ರಸ್ತುತ ಭಾರತದಲ್ಲಿ ಇದರ ಬೆಲೆ 3,499ರೂ. ಆಗಿದೆ.

ಅಮಾಜ್‌ಫಿಟ್ ಬಿಪ್ 3

ಅಮಾಜ್‌ಫಿಟ್ ಬಿಪ್ 3

ಅಮಾಜ್‌ಫಿಟ್‌ ಬಿಪ್ 3 ಸ್ಮಾರ್ಟ್‌ವಾಚ್‌ ಬಜೆಟ್‌ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ವಾಚ್‌ ಆಗಿದೆ. ಈ ಸ್ಮಾರ್ಟ್‌ವಾಚ್‌ 10 ದಿನಗಳ ಬ್ಯಾಟರಿ ಬಳಕೆಯನ್ನು ನೀಡುತ್ತದೆ. ಈ ಸ್ಮಾರ್ಟ್‌ವಾಚ್‌ ಅತ್ಯುತ್ತಮ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಲೀಪ್ ಟ್ರ್ಯಾಕರ್, ಹೃದಯ ಬಡಿತ, SpO2 ಮತ್ತು ಮಲ್ಟಿ ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಸದ್ಯ ಭಾರತದಲ್ಲಿ 3,499 ರೂ.ಬೆಲೆಯಲ್ಲಿ ದೊರೆಯಲಿದೆ.

ರೆಡ್ಮಿ ವಾಚ್ 2 ಲೈಟ್

ರೆಡ್ಮಿ ವಾಚ್ 2 ಲೈಟ್

ಶಿಯೋಮಿ ರೆಡ್ಮಿ ಬ್ರ್ಯಾಂಡ್‌ನ ಈ ಸ್ಮಾರ್ಟ್‌ವಾಚ್‌ ಬಜೆಟ್‌ ಬೆಲೆಯ ವಾಚ್‌ಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ವಾಚ್‌ ನಿರಂತರವಾದ SpO2 ಟ್ರ್ಯಾಕರ್, ಒತ್ತಡ ಮತ್ತು ನಿದ್ರೆಯ ಮಾನಿಟರಿಂಗ್, 5ATM ವಾಟರ್‌ ರೆಸಿಸ್ಟೆನ್ಸ್‌, 120+ ವಾಚ್ ಫೇಸ್‌ಗಳು ಮತ್ತು ಋತುಚಕ್ರ ಅವಧಿಯನ್ನು ಟ್ರ್ಯಾಕ್‌ ಮಾಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಮಲ್ಟಿ ಕಲರ್‌ ಆಯ್ಕೆಗಳಲ್ಲಿ ಕೂಡ ದೊರೆಯಲಿದೆ. ಪ್ರಸ್ತುತ ಭಾರತದಲ್ಲಿ ಇದರ ಬೆಲೆ 3,499 ರೂ. ಆಗಿದೆ.

ಫೈರ್-ಬೋಲ್ಟ್ ರಿಂಗ್ 3

ಫೈರ್-ಬೋಲ್ಟ್ ರಿಂಗ್ 3

ಫೈರ್-ಬೋಲ್ಟ್ ರಿಂಗ್ 3 ಸ್ಮಾರ್ಟ್‌ವಾಚ್‌ ಕೂಡ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ವಾಚ್‌ ಮಲ್ಟಿ ವಾಚ್‌ಫೇಸ್‌ಗಳನ್ನು ನೀಡಲಿದೆ. ಇದರಲ್ಲಿ ಡಯಲ್ ಅನ್ನು ತಿರುಗಿಸುವ ಮೂಲಕ ಬಳಕೆದಾರರು ವಾಲ್‌ಪೇಪರ್ ಅಥವಾ ವಾಚ್ ಫೇಸ್ ಅನ್ನು ಬದಲಾಯಿಸುವುದಕ್ಕೆ ಅವಕಾಶವಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಕ್ಯಾಲ್ಕುಲೇಟರ್ ಮತ್ತು ಗೇಮ್ಸ್‌, SpO2 ಮತ್ತು ಹಾರ್ಟ್‌ಬೀಟ್‌ ಮಾನಿಟರಿಂಗ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಪ್ರಸ್ತುತ 2,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Top Smartwatches that ruled this year in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X