ಆಂಡ್ರಾಯ್ಡ್‌ಗೂ ಬಂತು ಡಾರ್ಕ್‌ವೆಬ್‌ನ ಟಾರ್‌ ಬ್ರೌಸರ್..! ಅನಾಮಧೇಯತೆ ಆನಂದಿಸಿ..!

By Avinash
|

ಇಂಟರ್‌ನೆಟ್‌ನ ಕರಾಳ ಜಗತ್ತು ಎಂದೇ ಕರೆಸಿಕೊಳ್ಳುವ ಡಾರ್ಕ್‌ವೆಬ್‌ನಲ್ಲಿ ಅನಾಮಧೇಯವಾಗಿ ಹುಡುಕಾಟ ನಡೆಸುವ ಆಸೆ ಇರುವವರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಗೂಗಲ್‌ ಕ್ರೋಮ್‌ನ ಇನ್‌ಕಾಗ್ನಿಟೋ ಮೋಡ್‌ಗಿಂತಲೂ ಬಹಳ ಮುಂದುವರೆದಿರುವ ಬ್ರೌಸರ್‌ ಒಂದು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ.

ಆಂಡ್ರಾಯ್ಡ್‌ಗೂ ಬಂತು ಡಾರ್ಕ್‌ವೆಬ್‌ನ ಟಾರ್‌ ಬ್ರೌಸರ್..! ಅನಾಮಧೇಯತೆ ಆನಂದಿಸಿ..!

ಹೌದು, ಡಾರ್ಕ್‌ವೆಬ್‌ ಹುಡುಕಾಟಕ್ಕೆ ವೇದಿಕೆಯಾಗಿದ್ದ ಟಾರ್‌ ಬ್ರೌಸರ್ ಇನ್ಮುಂದೆ ಅಧಿಕೃತವಾಗಿ ಆಂಡ್ರಾಯ್ಡ್‌ ಡಿವೈಸ್‌ಗಳಿಗೂ ಬೆಂಬಲ ನೀಡಲಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟಾರ್‌ ಬ್ರೌಸರ್ ಲಭ್ಯವಿದ್ದು, ಅನಾಮಧೇಯವಾಗಿ ಇಂಟರ್‌ನೆಟ್‌ನಲ್ಲಿ ಸಂಚರಿಸಬೇಕು ಎನ್ನುವವರು ಬಳಸಬಹುದು. ಆಗಿದ್ರೇ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಟಾರ್ ಬ್ರೌಸರ್‌ ಹೇಗೆ ಬಳಸಬಹುದು..? ಏನೇನು ಅಗತ್ಯತೆ ಬೇಕು..? ಏನೇನು ವಿಶೇಷತೆ ಹೊಂದಿದೆ..? ಎಂಬುದನ್ನು ಮುಂದೆ ನೋಡಿ.

ಆಲ್ಫಾ ಆವೃತ್ತಿ

ಆಲ್ಫಾ ಆವೃತ್ತಿ

ಟಾರ್ ಫೀಚರ್‌ ತನ್ನ ಪ್ರಾಕ್ಸಿ ಆಪ್‌ ಆರ್ಬೊಟ್ ಮತ್ತು ಸ್ವತಂತ್ರವಾದ ಆರ್ಬೊಟ್-ಚಾಲಿತ ವೆಬ್ ಬ್ರೌಸರ್ ಆರ್ಫಾಕ್ಸ್‌ಗಳಲ್ಲಿ ಲಭ್ಯವಿದ್ದು, ಇದೀಗ ಆಂಡ್ರಾಯ್ಡ್‌ನಲ್ಲಿ ಸಿಗಲಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಲ್ಫಾ ಆವೃತ್ತಿಯಲ್ಲಿ ಲಭ್ಯವಿದೆ.

ಏನು ಪ್ರಯೋಜನ..?

ಏನು ಪ್ರಯೋಜನ..?

ವೆಬ್ ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ ಸಾಂಪ್ರದಾಯಿಕ ವೆಬ್ ಬ್ರೌಸರ್‌ನಂತೆ ನಿಮ್ಮ ಗುರುತನ್ನು ಎಲ್ಲಿ ಶೇಖರಿಸಿಡುವುದಿಲ್ಲ. ಟಾರ್ ಬ್ರೌಸರ್ ಡೀಫಾಲ್ಟ್‌ ಆಗಿಯೇ ನಿಮ್ಮ ಐಪಿ ಮತ್ತೀತರ ಗುರುತನ್ನು ನಿರ್ಬಂಧಿಸುತ್ತದೆ. ಅದಲ್ಲದೇ ನಿಮ್ಮ ಪ್ರಸ್ತುತ ಲೊಕೇಷನ್‌ ಅಕ್ಸೆಸ್ ಮಾಡದಂತೆ ಬ್ಲಾಕ್‌ ಮಾಡುವ ಫೀಚರ್ ಹೊಂದಿದ್ದು, ಪೂರ್ಣ ಪ್ರಮಾಣದ ಅನಾಮಧೇಯವನ್ನು ಇಂಟರ್‌ನೆಟ್‌ನಲ್ಲಿ ಸ್ಥಾಪಿಸಿ ಹುಡುಕಾಡಬಹುದು.

ಹೇಗೆ ಬಳಕೆ..?

ಹೇಗೆ ಬಳಕೆ..?

ಟಾರ್‌ ಬ್ರೌಸರ್ ಬಳಕೆಗೂ ಮುಂಚೆ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಆರ್ಬಟ್‌ ಆಪ್‌ನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಆರ್ಬಟ್‌ ಆಪ್‌ನಲ್ಲಿ ಟಾರ್‌ ನೆಟ್‌ವರ್ಕ್‌ನೊಂದಿಗೆ ಬ್ರೌಸರ್‌ನ್ನು ಸಂಪರ್ಕಿಸಬೇಕು. ಆಗ ನಿಮಗೆ ಟಾರ್‌ ನೆಟ್‌ವರ್ಕ್‌ ಸಿಗಲಿದೆ. ಆದರೂ, ಮುಂದಿನ ದಿನಗಳಲ್ಲಿ ಟಾರ್ ಬ್ರೌಸರ್‌ನ ಪೂರ್ಣ ಪ್ರಮಾಣದ ಆವೃತ್ತಿಯನ್ನು ಆಂಡ್ರಾಯ್ಡ್‌ಗೆ ಬಿಡುಗಡೆ ಮಾಡುವಾಗ ಆರ್ಬಟ್ ಆಪ್‌ ಅಗತ್ಯತೆಯನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

ಪಿಸಿಯಂತೆ ಅನುಭವ

ಪಿಸಿಯಂತೆ ಅನುಭವ

ಲಿನಕ್ಸ್‌, ಮ್ಯಾಕ್ ಮತ್ತು ವಿಂಡೋಸ್‌ನಲ್ಲಿ ಅಸ್ತಿತ್ವದಲ್ಲಿರುವಂತೆಯೇ ಟಾರ್ ಬ್ರೌಸರ್‌ನ್ನು ಆಂಡ್ರಾಯ್ಡ್‌ನಲ್ಲಿ ಖಾಸಗಿ ವೆಬ್ ಬ್ರೌಸಿಂಗ್ ಅನುಭವ ನೀಡುವಂತೆ ರೂಪಿಸಲಾಗಿದೆ. ಇದು ಅನಾಮಧೇಯವಾಗಿ ನಿಮ್ಮ ನೆಚ್ಚಿನ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡಲು ಅನುಮತಿಸುತ್ತದೆ. ಅದಲ್ಲದೆ, ಬ್ರೌಸ್ ಮಾಡುವಾಗ ಸಂಗ್ರಹವಾದ ಕುಕ್ಕಿಗಳನ್ನು ಬ್ರೌಸರ್ ಸ್ವಯಂಚಾಲಿತವಾಗಿ ತೆರವುಗೊಳಿಸುತ್ತದೆ.

ಮೂರು ಬಾರಿಯ ಎನಕ್ರಿಪ್ಷನ್‌

ಮೂರು ಬಾರಿಯ ಎನಕ್ರಿಪ್ಷನ್‌

ಟಾರ್ ನೆಟ್‌ವರ್ಕ್‌ ಬ್ರೌಸ್‌ ಮಾಡುವಾಗ ಮೂರು ಬಾರಿಯ ಎನಕ್ರಿಪ್ಷನ್ ನಿಮಗೆ ದೊರೆಯುತ್ತದೆ. ಇದರಿಂದ ನಿಮಗೆ ಬ್ರೌಸ್‌ ಮಾಡುವಾಗ ಹೆಚ್ಚಿನ ಅನಾಮಧೇಯತೆ ದೊರೆಯುತ್ತದೆ. ಆದರೆ, ಸದ್ಯ ಟಾರ್ ನೆಟ್‌ವರ್ಕ್‌ ಬಳಸಲು ನೀವು ಆರ್ಬಟ್ ಆಪ್‌ನ್ನು ಪ್ರತ್ಯೇಕವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು.

ಫೈರ್‌ಫಾಕ್ಸ್‌ನಂತೆ ಕಾಣುತ್ತೆ..!

ಫೈರ್‌ಫಾಕ್ಸ್‌ನಂತೆ ಕಾಣುತ್ತೆ..!

ಟಾರ್ ಬ್ರೌಸರ್ ಆಂಡ್ರಾಯ್ಡ್‌ನಲ್ಲಿ ಫೈರ್‌ಫಾಕ್ಸ್‌ ಬ್ರೌಸರ್‌ನಂತೆ ಕಾಣುತ್ತದೆ. ಹೋಮ್‌ ಪೇಜ್‌ನಲ್ಲಿ ಫೇಸ್‌ಬುಕ್‌, ವಿಕಿಪೀಡಿಯಾದಂತಹ ಟಾಪ್‌ ಸೈಟ್‌ಗಳು, ಆರ್ಟಿಕಲ್ಸ್‌, ವಿಡಿಯೋಗಳು ಮತ್ತು ನೀವು ಇತ್ತೀಚೆಗೆ ಬ್ರೌಸ್‌ ಮಾಡಿದ ವೆಬ್‌ಪೇಜ್‌ಗಳನ್ನು ಇಲ್ಲಿ ಕಾಣಬಹುದು. ಬುಕ್‌ಮಾರ್ಕ್‌ ಟ್ಯಾಬ್‌ ಮತ್ತು ಹಿಸ್ಟರಿ ಟ್ಯಾಬ್‌ಗಳನ್ನು ಸಹ ಕಾಣಬಹುದು. ಆಂಡ್ರಾಯ್ಡ್‌ನ ಟಾರ್ ಬ್ರೌಸರ್ ಫೈರ್‌ಫಾಕ್ಸ್‌ 60ನೇ ಆವೃತ್ತಿಯ ಆಧಾರಿತವಾಗಿದೆ. ಅಲ್ಲದೆ, ಎಲ್ಲಾ ಎಕ್ಸ್‌ಟೆನ್ಷನ್‌ಗಳಲ್ಲಿ NoScript ‌10.1.9.1 ಮತ್ತು HTTPS ಭದ್ರತೆಯನ್ನು ಹೊಂದಿದೆ.

ಯಾವ್ಯಾವ ಒಎಸ್‌ಗೆ ಲಭ್ಯ..?

ಯಾವ್ಯಾವ ಒಎಸ್‌ಗೆ ಲಭ್ಯ..?

ನೀವು ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಮತ್ತು ಅದರ ನಂತರ ಒಎಸ್‌ಗಳಿಗೆ ಈ ಟಾರ್ ಬ್ರೌಸರ್‌ ಸದ್ಯ ಬೆಂಬಲಿಸುತ್ತಿದೆ. ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ನೇರವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. 32MB ಗಾತ್ರವನ್ನು ಈ ಆಪ್ ಹೊಂದಿದೆ. ಅದಲ್ಲದೇ APK Mirrorನಲ್ಲಿ APK ಫೈಲ್‌ ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

Best Mobiles in India

English summary
Tor Browser Debuts on Android to Let You Browse the Web Anonymously. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X