ಟ್ರಾಯ್‌ನಿಂದ ಜಾರಿಗೆ ಬರಲಿದೆ ಹೊಸ ನಿಯಮ! ಹೀಗೆ ಮಾಡಿದ್ರೆ ಒಂದು ವರ್ಷ ಜೈಲು ಶಿಕ್ಷೆ ಖಚಿತ!

|

ಇತ್ತೀಚಿನ ದಿನಗಳಲ್ಲಿ ಫೇಕ್‌ ಕಾಲ್‌ಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಫ್ರಾಡ್‌ ಕಾಲ್‌ಗಳ ಮೂಲಕ ಜನರನ್ನು ವಂಚಿಸುವವರ ಪ್ರಮಾಣ ಜಾಸ್ತಿಯಾಗುತ್ತಲೇ ಇದೆ. ಇದೀಗ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ಹೆಜ್ಜೆಯನ್ನು ಇಟ್ಟಿದೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ ಸಮಾರಂಭದಲ್ಲಿ ಫೇಕ್‌ ಕಾಲ್‌ಗಳನ್ನು ತಡೆಗಟ್ಟುವುದಕ್ಕಾಗಿ ಏಕೀಕೃತ ಕೆವೈಸಿ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾಪವನ್ನು ಮಾಡಲಾಗಿದೆ.

ಇಂಡಿಯಾ

ಹೌದು, ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ ಸಮಾರಂಭದಲ್ಲಿ TRAIನ ಅಧ್ಯಕ್ಷ ಪಿಡಿ ವಘೇಲಾ ಹೊಸ ಪ್ರಸ್ತಾಪವನ್ನು ಮಾಡಿದ್ದಾರೆ. ಇದರಿಂದ ನಕಲಿ ಕರೆಗಳಿಂದ ಕಿರಿಕಿರಿ ಅನುಭವಿಸುವುದು ತಪ್ಪಲಿದೆ ಎನ್ನಲಾಗಿದೆ. ಅಂದರೆ TRAI ಅಧ್ಯಕ್ಷ ಪಿಡಿ ವಘೇಲಾ ಹೇಳಿರುವಂತೆ ದೇಶದಲ್ಲಿ ಕರೆಗಳನ್ನು ಪರಿಶೀಲಿಸಲು ಏಕೀಕೃತ ಕೆವೈಸಿ ಜಾರಿಗೆ ತರಬೇಕಿದೆ ಎಂದಿದ್ದಾರೆ. ಇದಕ್ಕಾಗಿ ಟೆಲಿಕಾಂ ನಿಯಂತ್ರಕ TRAI ಏಕೀಕೃತ ನೌ-ಯುವರ್-ಕಸ್ಟಮರ್‌-ಸಿಸ್ಟಂ ಅನ್ನು ತರಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಹಾಗಾದ್ರೆ ಈ ಏಕೀಕೃತ ಕೆವೈಸಿ ಸಿಸ್ಟಂನಿಂದ ಆಗುವ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರಾಯ್‌

ಟ್ರಾಯ್‌ ಅಧ್ಯಕ್ಷ ಪಿಡಿ ವಘೇಲಾ ಏಕೀಕೃತ ಕೆವೈಸಿ ಸಿಸ್ಟಂ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅದರಂತೆ ನೌ ಯುವರ್‌ ಕಸ್ಟಮರ್‌ ಸಿಸ್ಟಂ ಅನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಈ ಸಿಸ್ಟಂ ಅನ್ನು ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಪ್ರವೇಶಿಸಬಹುದು. ಇದರಿಂದ ಫೇಕ್‌ ಕಾಲ್‌ ಮಾಡುವವರು ಮತ್ತು ಸ್ಪ್ಯಾಮರ್‌ಗಳನ್ನು ಪರಿಶೀಲಿಸಬಹುದಾಗಿದೆ ಎಂದು ಟ್ರಾಯ್‌ನ ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಪ್ರಸ್ತುತ

ಪ್ರಸ್ತುತ ದಿನಗಳಲ್ಲಿ ನಕಲಿ ಕರೆಗಳು ಮತ್ತು ಸ್ಪ್ಯಾಮ್‌ ಸಂದೇಶಗಳನ್ನು ಕಳುಹಿಸುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಇದರಿಂದ ಸಾಕಷ್ಟು ವಂಚಕರು ಸಾಮಾನ್ಯ ಜನರಿಗೆ ಫ್ರಾಡ್‌ ಕಾಲ್‌ಗಳ ಮೂಲಕ ವಂಚಿಸುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಟ್ರಾಯ್‌ ಹಲವಾರು ಕಾರ್ಯವಿಧಾನಗಳನ್ನು ಅನ್ವೇಷಿಸುತ್ತಿದೆ. ಇದರಲ್ಲಿ ಏಕೀಕೃತ KYC (ನೌ-ಯುವರ್-ಕಸ್ಟಮರ್‌) ಸಿಸ್ಟಂ ಇರಬೇಕು ಎಂದು ಹೇಳಿದೆ. ಈ ಸಿಸ್ಟಂ ಅನ್ನು ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಬಳಸಲು ಸಾಧ್ಯವಾಗಲಿದೆ ಎಂದಿದ್ದಾರೆ.

ಫೇಕ್‌ ಕಾಲ್‌

ಫೇಕ್‌ ಕಾಲ್‌ ನಂಬರ್‌ಗಳನ್ನು ನೀವು ಬ್ಲಾಕ್‌ ಮಾಡಿ ನಂತರವೂ ಸ್ಪ್ಯಾಮರ್‌ಗಳು ಹೊಸ ಸಂಖ್ಯೆಯನ್ನು ಬಳಸುವುದು ಕಂಡು ಬಂದಿದೆ. ಹೀಗೆ ಹೊಸ ಸಂಖ್ಯೆಗಳಿಗೆ ಬದಲಾಗುವುದರ ಜೊತೆಗೆ ಇನ್ನಷ್ಟು ಸ್ಪ್ಯಾಮ್‌ ಕಾಲ್‌ಗಳ ಮೂಲಕ ಕಿರಿಕಿರಿ ನೀಡುತ್ತಿರುವ ಪ್ರಮಾಣ ಜಾಸ್ತಿಯಾಗಿದೆ. ಪ್ರಾಕ್ಸಿ ಸರ್ವರ್‌ಗಳನ್ನು ಬಳಸಿದ ನಂತರ ಮತ್ತೊಂದು ಸಂಖ್ಯೆಯನ್ನು ಬಳಸಲು ಪ್ರಾರಂಭಿಸಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಬೇಕಾದರೆ ಏಕೀಕೃತ ಕೆವೈಸಿ ಸಿಸ್ಟಂ ಸೂಕ್ತ ಅನ್ನೊದು ಟ್ರಾಯ್‌ನ ವಾದವಾಗಿದೆ.

ಪತ್ತೆಹಚ್ಚಲು

ಎಲ್ಲಾ ಟೆಲಿಕಾಂ ಕಂಪೆನಿಗಳು ತಮ್ಮ ಗ್ರಾಹಕರ ಕೆವೈಸಿಯನ್ನು ಇದರಲ್ಲಿ ಪರಿಶೀಲಿಸಲು ಸಾಧ್ಯವಿದೆ. ಇದರಿಂದ ಹೊಸ ಸಂಖ್ಯೆಗೆ ಬದಲಾಗುವ ಸ್ಪ್ಯಾಮರ್‌ಗಳನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ. ಇದಕ್ಕಾಗಿ ಮೋಸದ ಕರೆ ಮಾಡುವವರು ಮತ್ತು ಸ್ಪ್ಯಾಮರ್‌ಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್‌ ಲರ್ನಿಂಗ್‌ ಬಳಸಲು ಕಂಟ್ರೋಲ್‌ ಸೇವಾ ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ.

ಅಪರಾಧ

ಸದ್ಯ ಭಾರತದಲ್ಲಿ ಜಾರಿ ಇರುವ ಹೊಸ ಟೆಲಿಕಾಂ ಮಸೂದೆಯು ವಂಚನೆಗಳು ಮತ್ತು ಅಪರಾಧ ಚಟುವಟಿಕೆಗಳನ್ನು ಪರಿಶೀಲಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಅದರಂತೆ ಟೆಲಿಕಾಂ ಸೇವೆಗಳನ್ನು ಪಡೆಯಲು ಸುಳ್ಳು ಗುರುತನ್ನು ನೀಡುವವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸಿದೆ. ಅಲ್ಲದೆ ಇಂಟರ್‌ನೆಟ್ ಕರೆ ಮತ್ತು ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಕಳುಹಿಸಲಾದ ಕರೆಗಳು ಮತ್ತು ಸಂದೇಶಗಳಿಗೆ KYC ಅನ್ನು ಅನ್ವಯಿಸುವಂತೆ ಈ ಹೊಸ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

Best Mobiles in India

Read more about:
English summary
TRAI will propose to set up a unified know-your-customer system:..Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X