ಆಂಡ್ರಾಯ್ಡ್‌ ಬಳಕೆದಾರರಿಗೆ ಅಚ್ಚರಿಯ ಫೀಚರ್ಸ್‌ ಪರಿಚಯಿಸಿದ ಟ್ರೂ ಕಾಲರ್‌!

|

ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚು ಬಳಸುವ ಅಪ್ಲಿಕೇಶನ್‌ಗಳಲ್ಲಿ ಟ್ರೂ ಕಾಲರ್‌ ಕೂಡ ಒಂದಾಗಿದೆ. ಅಪರಿಚಿತ ಸಂಖ್ಯೆ ಯಾರಾದ್ದೂ ಅನ್ನೊದನ್ನ ಪತ್ತೆ ಹಚ್ಚುವುದಕ್ಕೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಸಹಾಯ ಮಾಡಲಿದೆ. ಇದೇ ಕಾರಣಕ್ಕೆ ಟ್ರೂ ಕಾಲರ್‌ ಕೂಡ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳ ಪಟ್ಟಿಯನ್ನು ಪ್ರಕಟಿಸಿದೆ.

ಅಪ್ಲಿಕೇಶನ್‌

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳ ಲಿಸ್ಟ್‌ ಅನ್ನು ಪ್ರಕಟಿಸಿದೆ. ಈ ಫೀಚರ್ಸ್‌ಗಳು ಮುಂಬರುವ ವಾರಗಳಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿವೆ ಎಂದು ಘೋಷಿಸಿದೆ. ಇನ್ನು ಈ ಹೊಸ ಫೀಚರ್ಸ್‌ಗಳಲ್ಲಿ VoIP ಕರೆಗಾಗಿ ವಾಯ್ಸ್‌ ಕಾಲ್‌ ಲಾಂಚರ್, SMS ಇನ್‌ಬಾಕ್ಸ್‌ಗಾಗಿ ಪಾಸ್‌ಕೋಡ್ ಲಾಕ್ ಫೀಚರ್ಸ್‌ಗಳು ಸೇರಿವೆ. ಹಾಗಾದ್ರೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಹೊಸದಾಗಿ ಪರಿಚಯಿಸಿರುವ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಯ್ಸ್‌ ಕಾಲ್‌ ಲಾಂಚರ್

ವಾಯ್ಸ್‌ ಕಾಲ್‌ ಲಾಂಚರ್

ಟ್ರೂ ಕಾಲರ್‌ ಅಪ್ಲಿಕೇಶನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್‌ ಕಾಲ್‌ ಲಾಂಚ್‌ ಫೀಚರ್ಸ್‌ ಪರಿಚಯಿಸಿದೆ. ಇದು ಟ್ರೂ ಕಾಲರ್‌ ವಾಯ್ಸ್‌ನಲ್ಲಿ ಮಾತನಾಡಲು ಲಭ್ಯವಿರುವ ನಿಮ್ಮ ಎಲ್ಲಾ ಸಂಪರ್ಕಗಳನ್ನು ಹುಡುಕಲು ಸುಲಭವಾಗಲಿದೆ. ಇನ್ನು ಈ ಹೊಸ ಫೀಚರ್ಸ್‌ VoIP ಆಧಾರಿತ ಕರೆಯಲ್ಲಿ ಕಾರ್ಯನಿರ್ವಹಿಸಲಿದೆ.

ಪಾಸ್ಕೋಡ್ ಲಾಕ್

ಪಾಸ್ಕೋಡ್ ಲಾಕ್

ಟ್ರೂ ಕಾಲರ್‌ ಅಪ್ಲಿಕೇಶನ್‌ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ಟೆಕ್ಸ್ಟ್‌ ಮೆಸೇಜ್‌ಗಳಿಗೆ ಪಾಸ್‌ಕೋಡ್‌ ಲಾಕ್‌ ಕೂಡ ಒಂದು. ಇದು ಟೆಕ್ಸ್ಟ್‌ ಮೆಸೇಜ್‌ಗಳ ಗೌಪ್ಯತೆ ಕಾಪಾಡುವ ಫೀಚರ್ಸ್‌ ಆಗಿದೆ. ಟೆಕ್ಸ್ಟ್‌ ಮೆಸೇಜ್‌ ಮಾಡುವವರು ಸೆಕ್ಯುರಿಟಿಗಾಗಿ ಪಾಸ್ಕೋಡ್ ಲಾಕ್ ಅನ್ನು ಬಳಸಲು ಸಾಧ್ಯವಾಗುತ್ತದೆ.

ವರ್ಧಿತ ಕರೆ ದಾಖಲೆಗಳು

ವರ್ಧಿತ ಕರೆ ದಾಖಲೆಗಳು

ಟ್ರೂ ಕಾಲರ್‌ ಅಪ್ಲಿಕೇಶನ್‌ ಇದೀಗ 6400 ನಮೂದುಗಳನ್ನು ಸಕ್ರಿಯಗೊಳಿಸುವ ಮತ್ತು ಬೆಂಬಲಿಸುವ ಕಾಲ್‌ ಲಾಗ್‌ಗಳನ್ನು ಆಪ್ಟಿಮೈಸ್ ಮಾಡಿದೆ. ಇದು ಕಾಲ್‌ ಡಿಟೇಲ್ಸ್‌ಗಳನ್ನು ಸರ್ಚ್‌ ಮಾಡುವುದಕ್ಕೆ ಸಹಾಯ ಮಾಡಲಿದೆ.

ಇಂಪ್ರೂವ್ಡ್‌ ಕಾಲ್‌ ರೀಸನ್

ಇಂಪ್ರೂವ್ಡ್‌ ಕಾಲ್‌ ರೀಸನ್

ಟ್ರೂಕಾಲರ್ ಕಾಲ್‌ ರೀಸನ್‌ ಫೀಚರ್ಸ್‌ ಪರಿಚಯಿಸಿದೆ. ನೀವು ಕಾಲ್‌ ಅನ್ನು ಸ್ವೀಕರಿಸದಿದ್ದರೆ ಮತ್ತು ಇನ್ನೂ ಫೋನ್ ರಿಂಗ್ ಆಗುತ್ತಿದ್ದರೆ, ಕರೆ ಮಾಡಿದವರಿಗೆ ತತ್‌ಕ್ಷಣ ಕರೆಗೆ ಕಾರಣವನ್ನು ಸೇರಿಸಲು ಟ್ರೂ ಕಾಲರ್‌ ಅನುಮತಿಸಲಿದೆ. ಇದಲ್ಲದೆ ಬಳಕೆದಾರರು ಯಾವುದೇ ಕಸ್ಟಮೈಸ್ ಮಾಡಿದ ಕರೆ ಕಾರಣವನ್ನು ಸಹ ಟೈಪ್ ಮಾಡಬಹುದು.

ಫೇಸ್ ಫಿಲ್ಟರ್‌ಗಳು

ಫೇಸ್ ಫಿಲ್ಟರ್‌ಗಳು

ಇನ್ನು ಟ್ರೂ ಕಾಲರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇಂಟರ್‌ಬಿಲ್ಟ್‌ ಟೆಂಪ್ಲೇಟ್‌ಗಳನ್ನು ಸೇರಿಸಿದೆ. ಇದು ಹೆಚ್ಚು ವೈಯಕ್ತೀಕರಿಸಿದ ಮತ್ತು ಯೂನಿಕ್‌ ಕಾಲ್‌ ಅನುಭವವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಫೀಚರ್ಸ್‌ ಸೆಲ್ಫಿ ಮತ್ತು ವಿಆರ್ ಚಾಲಿತ ಫಿಲ್ಟರ್‌ಗಳನ್ನು ಅನುಮತಿಸುತ್ತದೆ. ಜೊತೆಗೆ ಬಳಕೆದಾರರಿಗೆ ಹೆಚ್ಚು ಸೃಜನಶೀಲವಾಗಿರಲು ಅವಕಾಶ ನೀಡುತ್ತದೆ.

ಫೀಚರ್ಸ್‌

ಈ ಹೊಸ ಫೀಚರ್ಸ್‌ಗಳ ಬಗ್ಗೆ ಮಾತನಾಡಿರುವ ಟ್ರೂಕಾಲರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಿಶಿತ್ ಜುಂಜುನ್‌ವಾಲಾ ನಾವು ಬಳಕೆದಾರರಿಗೆ ಸದಾ ಉತ್ತಮ ಸೇವೆಯನ್ನು ನೀಡಲು ಬಯಸುತ್ತೇವೆ. ಇದೀಗ ಪರಿಚಯಿಸಿರುವ ಹೊಸ ಫೀಚರ್ಸ್‌ಗಳು ದಕ್ಷ ಮತ್ತು ಸುರಕ್ಷಿತ ಸಂವಹನ ಅನುಭವವನ್ನು ನೀಡುವುದು ಮಾತ್ರವಲ್ಲದೆ ಬಳಕೆದಾರರಿಗೆ ಹೆಚ್ಚಿನ ಶಕ್ತಿ ಮತ್ತು ಅವರ ಸಂವಹನ ಮತ್ತು ಪ್ರಮುಖ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಚಲಾಯಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

Best Mobiles in India

English summary
Truecaller has announced a list of new features that wil be released to Android users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X