ತನ್ನದೇ ಆದ ಸೊಶೀಯಲ್‌ ಮೀಡಿಯಾ ಪ್ರಾರಂಭಿಸಲು ಡೋನಾಲ್ಡ್‌ ಟ್ರಂಪ್‌ ಸಿದ್ಧತೆ!

|

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಹಲವು ನಾಟಕೀಯ ಘಟನೆಗಳಿಗೆ ಕಾರಣವಾಗಿದ್ದ ಡೊನಾಲ್ಡ್‌ ಟ್ರಂಪ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅಧ್ಯಕ್ಷೀಯ ಪಟ್ಟವನ್ನು ಬಿಟ್ಟು ಕೊಡುವ ಮುನ್ನ ಅಮೆರಿಕದಲ್ಲಿ ಸಾಕಷ್ಟು ದಾಂದಲೆ ನಡೆದಿತ್ತು. ಈ ದಾಂದಲೆಯ ಹಿಂದೆ ಟ್ರಂಪ್‌ ಸೊಶೀಯಲ್‌ ಮೀಡಿಯಾದಲ್ಲಿ ಮಾಡಿದ್ದ ಸಂದೇಶಗಳು ಕಾರಣವಾಗಿದ್ದವು. ಇದೇ ಕಾರಣಕ್ಕೆ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ಗಳು ಡೊನಾಲ್ಡ್‌ ಟ್ರಂಪ್‌ರನ್ನು ಶಾಶ್ವತವಾಗಿ ನಿಷೇದಿಸಿವೆ. ಸದ್ಯ ಇದೀಗ ಈ ಎಲ್ಲಾ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಟ್ರಂಪ್‌ ಸೆಡ್ಡು ಹೊಡೆದಿದ್ದಾರೆ.

ಡೋನಾಲ್ಡ್‌

ಹೌದು, ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ತಮ್ಮದೇ ಆದ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಅನ್ನು ಶುರುಮಾಡುವುದಾಗಿ ಘೋಷಿಸಿದ್ದಾರೆ. ಶೀಘ್ರದಲ್ಲೇ ಡೋನಾಲ್ಡ್‌ ಟ್ರಂಪ್‌ ಅವರ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಶುರುವಾಗಲಿದೆ ಎಂದು ವರದಿ ಆಗಿದೆ. ಸದ್ಯ ಯಾವುದೇ ಸೊಶೀಯಲ್‌ ಮೀಡಿಯಾದಲ್ಲಿ ಡೋನಾಲ್ಡ್‌ ಟ್ರಂಪ್‌ಗೆ ಎಂಟ್ರಿ ಇಲ್ಲದ ಕಾರಣ, ಟ್ರಂಪ್‌ ಶೀಘ್ರದಲ್ಲೇ ತಮ್ಮದೇ ಆದ ಸೊಶೀಯಲ್‌ ಮೀಡಿಯಾ ಮೂಲಕ ಮರಳಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಟ್ರಂಪ್‌ ಸ್ವತಃ ಸೊಶೀಯಲ್‌ ಮೀಡಿಯಾ ಹುಟ್ಟು ಹಾಕುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಧ್ಯಕ್ಷೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಂತರ ಕ್ಯಾಪಿಟಲ್ ದಂಗೆ ನಡೆದು ಅಮೆರಿಕ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿ ದಾಖಲಾಗಿದೆ. ಇದಾದ ನಂತರ ಜನವರಿ ತಿಂಗಳಲ್ಲಿ ಟ್ವಿಟರ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಟ್ರಂಪ್ ಅವರನ್ನು ನಿಷೇದಿಸಿವೆ. ಇದಾದ ನಂತರ ಡೋನಾಲ್ಡ್‌ ಟ್ರಂಪ್‌ ತಮ್ಮ ರಾಜಕೀಯ ಕ್ರಿಯಾ ಸಮಿತಿಯ ಮೂಲಕ ಹೇಳಿಕೆಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಟ್ರಂಪ್‌ ತಮ್ಮದೇ ಆದ ಸೊಶೀಯಲ್‌ ಮಿಡಿಯಾ ಶುರುಮಾಡಲು ಸಿದ್ಧತೆ ನಡೆಸಿದ್ದಾರೆ.

ಟ್ರಂಪ್

ಟ್ರಂಪ್ ಅಧ್ಯಕ್ಷೀಯ ಚುನಾವಣೆ ಪ್ರಚಾರವನ್ನು ನಿರ್ವಹಿಸಿದ್ದ ಜೇಸನ್ ಮಿಲ್ಲರ್ ಅವರು ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಅವರು: "ಇದು ಆಟವನ್ನು ಸಂಪೂರ್ಣವಾಗಿ ಮರು ವ್ಯಾಖ್ಯಾನಿಸಲು ಹೊರಟಿದೆ, ಮತ್ತು ಮಾಜಿ ಅಧ್ಯಕ್ಷ ಟ್ರಂಪ್ ಏನು ಮಾಡುತ್ತಾರೆಂದು ನೋಡಲು ಜನರು ಕಾಯುತ್ತಿದ್ದಾರೆ. ಇದೇ ಕಾರಣಕ್ಕೆ ಟ್ರಂಪ್‌ ಹೊಸ ಸೊಶೀಯಲ್‌ ಮೀಡಿಯಾ ಶುರುಮಾಡಲಿದ್ದಾರೆ. ಇದು ಸುಮಾರು ಎರಡು ಅಥವಾ ಮೂರು ತಿಂಗಳಲ್ಲಿ ಶುರುವಾಗುವ ಸಾದ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಧ್ಯಕ್ಷ

ಇನ್ನು ಮಾಜಿ ಅಧ್ಯಕ್ಷ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಸೋತ ನಂತರ ವಾಷಿಂಗ್ಟನ್ ತೊರೆದು ಈ ವರ್ಷದ ಆರಂಭದಲ್ಲಿ ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್ ಮನೆಗೆ ಮರಳಿದರು. ಅಂದಿನಿಂದ ಅವರು ಏನು ಮಾಡುತ್ತಿದ್ದಾರೆ ಎಂಬುದು ಅವರ ಬೆಂಬಲಿಗರಿಗೆ ತಿಳಿಯುತ್ತಿಲ್ಲ. ಎಲ್ಲರಿಗೂ ಅವರು ಹೇಳಿದ ಹೇಳಿಕೆಗಳು ತಲುಪುತ್ತಿಲ್ಲ. ಆದರಿಂದ ಮಾರ್-ಎ-ಲಾಗೊದಲ್ಲಿ ಹಲವಾರು ಉನ್ನತ-ಸಭೆಗಳು ನಡೆಸಿರುವ ಟ್ರಂಪ್‌ ಈ ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಈ ಹೊಸ ಸಾಮಾಜಿಕ ಮಾಧ್ಯಮ ಹೇಗಿರಲಿದೆ ಅನ್ನೊದು ಇನ್ನು ಬಹಿರಂಗಗೊಂಡಿಲ್ಲ.

ಟ್ರಂಪ್ ಅವರ ಸೊಶೀಯಲ್‌ ಮೀಡಿಯಾ ಜನಪ್ರಿಯತೆ

ಟ್ರಂಪ್ ಅವರ ಸೊಶೀಯಲ್‌ ಮೀಡಿಯಾ ಜನಪ್ರಿಯತೆ

ಸೋಶಿಯಲ್ ಮೀಡಿಯಾವನ್ನು ಪ್ರಚೋದನಕಾರಿಯಾಗಿ ಬಳಸಿದ ಕೆಲವೇ ಕೆಲವು ಯುಎಸ್ ಅಧ್ಯಕ್ಷರಲ್ಲಿ ಟ್ರಂಪ್ ಕೂಡ ಒಬ್ಬರು. ಅಲ್ಲದೆ ಇದೇ ನಿರ್ಧಾರ ಅವರನ್ನು ಅಮೆರಿಕದ ಅಧ್ಯಕ್ಷ ಪಟ್ಟಕ್ಕೂ ಕರೆತರುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಇದಲ್ಲದೆ, ಅಧ್ಯಕ್ಷರಾದ ನಂತರ ಅವರ ಟ್ವಿಟ್ಟರ್‌ನಲ್ಲಿ 88 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಅಷ್ಟೆ ಅಲ್ಲ. ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲೂ ಟ್ರಂಪ್ ಸಾಕಷ್ಟು ಪ್ರಸಿದ್ಧರಾಗಿದ್ದರು. ಆದರೆ ಯುಎಸ್ ಕ್ಯಾಪಿಟಲ್ ದಂಗೆಗೆ ಇವರ ಪ್ರಚೋದನಕಾರಿ ಸಂದೇಶಗಳು ಕಾರಣವಾಗಿದ್ದರಿಂದ ಅವರ @realDonaldTrump ಖಾತೆಯ ಮೇಲೆ ಶಾಶ್ವತ ನಿಷೇಧವನ್ನು ಹೇರಲಾಗಿದೆ.

ಟ್ರಂಪ್

ಸದ್ಯ ಈ ಸನ್ನಿವೇಶದಲ್ಲಿ, ಟ್ರಂಪ್ ಅವರ ಹೊಸ ಸಾಮಾಜಿಕ ಮಾಧ್ಯಮ ವೇದಿಕೆ ಯಶಸ್ವಿಯಾಗಬಹುದು. ನವೆಂಬರ್‌ನಲ್ಲಿ ಜೋ ಬಿಡನ್ ವಿರುದ್ಧ ಅಧ್ಯಕ್ಷೀಯ ಸೋಲಿನ ಹೊರತಾಗಿಯೂ, ಟ್ರಂಪ್ ಇನ್ನೂ ರಿಪಬ್ಲಿಕನ್ ಪಕ್ಷದಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಇದಲ್ಲದೆ, 2024 ರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವ ವಿಚಾರವನ್ನು ತಳ್ಳಿಹಾಕುವಂತಿಲ್ಲ. ತನ್ನದೇ ಆದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಹೊಂದಿರುವುದು ಯಾವುದೇ ನಿಷೇಧ ಅಥವಾ ಅಮಾನತುಗಳನ್ನು ಎದುರಿಸದೆ, ನಿಯಮಗಳನ್ನು ನಿರ್ದೇಶಿಸಲು ಸೂಕ್ತವಾದ ವೇದಿಕೆಯಾಗಿದೆ. ಟ್ರಂಪ್ ಅವರ ಸಾಮಾಜಿಕ ಮಾಧ್ಯಮವು ಅವರ ಅನುಯಾಯಿಗಳನ್ನು ತಲುಪಲು ಉತ್ತಮ ವೇದಿಕಯಾಗಲಿದೆ.

Best Mobiles in India

English summary
Trump To Start His Own Social Media Platform Following Facebook, Twitter Ban.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X