ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಟ್ವೀಟ್‌ ಶೇರ್‌ ಮಾಡುವುದು ಇನ್ನಷ್ಟು ಸುಲಭ!

|

ಜನಪ್ರಿಯ ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಅನ್ನು ಟ್ವಿಟರ್‌ ಮೂಲಕ ಪ್ರವೇಶಿಸುವುದಕ್ಕೆ ಸುಲಭವಾಗುವಂತೆ ಮಾಡಲಿದೆ. ಇದರಿಂದಾಗಿ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಂತೆ, ಬಳಕೆದಾರರು ಟ್ವೀಟ್‌ಗಳ ಮೂಲಕ ಅಪ್ಲಿಕೇಶನ್‌ನಲ್ಲಿ ವಿಷಯವನ್ನು ಹಂಚಿಕೊಳ್ಳಲು, ರಿಟ್ವೀಟ್ ಮತ್ತು ಲೈಕ್ ಬಟನ್‌ಗಳನ್ನು ಬಳಸುವುದರ ಜೊತೆಗೆ ಡೈರೆಕ್ಟ್‌ ಮೆಸೇಜ್‌ನಲ್ಲಿ ಪೋಸ್ಟ್‌ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಬಳಕೆದಾರರರು ಟ್ವಿಟರ್‌ ಮೂಲಕವೇ ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಅನ್ನು ಪ್ರವೇಶಿಸಬಹುದಾದ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸಿಸ್ಟಂ ಶೇರ್‌ ಶೀಟ್‌ ಅನ್ನು ಬಳಸಿಕೊಂಡು ಬಳಕೆದಾರರು ಟ್ವೀಟ್‌ಗಳು ಮತ್ತು ಇತರ ವಿಷಯವನ್ನು ಬಾಹ್ಯವಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಅಪ್ಲಿಕೇಶನ್‌ಗಳಿಗೆ ಹಂಚಿಕೊಳ್ಳಬಹುದು. ಅಲ್ಲದೆ ಇನ್‌ಸ್ಟಾಗ್ರಾಮ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ, ಬಳಕೆದಾರರು ಸ್ಪಾಟಿಫೈನಂತಹ ಅಪ್ಲಿಕೇಶನ್‌ಗಳಿಂದ ತಮ್ಮ ಸ್ಟೋರಿಗಳಿಗೆ ಇಷ್ಟವಾಗುವ ರೀತಿಯಲ್ಲಿ ವಿಷಯವನ್ನು ಹಂಚಿಕೊಳ್ಳಬಹುದಾಗಿದೆ. ಹಾಗಾದ್ರೆ ಟ್ವಿಟರ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್

ಟ್ವಿಟರ್ ಈಗ ಇನ್‌ಸ್ಟಾಗ್ರಾಮ್ ಸ್ಟೋರಿಗಳಿಗೆ ಟ್ವೀಟ್‌ಗಳನ್ನು ಹಂಚಿಕೊಳ್ಳುವುದನ್ನು ಬೆಂಬಲಿಸುವ ಇತ್ತೀಚಿನ ಅಪ್ಲಿಕೇಶನ್ ಆಗಿದೆ. ಐಒಎಸ್ ಡಿವೈಸ್‌ಗಳಲ್ಲಿ ಸಿಸ್ಟಂನ ಶೇರ್‌ ಮೆನು ಮೂಲಕ ಇನ್‌ಸ್ಟಾಗ್ರಾಮ್ ಸ್ಟೋರಿಗಳಿಗೆ ಟ್ವೀಟ್‌ಗಳನ್ನು ಹಂಚಿಕೊಳ್ಳಲು ಬೆಂಬಲವನ್ನು ಸೇರಿಸಿದೆ ಎಂದು ಟ್ವಿಟರ್ ಈಗ ಘೋಷಿಸಿದೆ. ಅಂದರೆ ಬಳಕೆದಾರರು ಯಾವುದೇ ಟ್ವೀಟ್‌ನಲ್ಲಿನ ಶೇರ್ ಬಟನ್ ಅನ್ನು ತ್ವರಿತವಾಗಿ ಟ್ಯಾಪ್ ಮಾಡಲು ಮತ್ತು ಅದನ್ನು ನೇರವಾಗಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ನಿಯಮಿತವಾಗಿ ಟ್ವೀಟ್‌ಗಳನ್ನು ಹಂಚಿಕೊಳ್ಳುವ ಬಳಕೆದಾರರಿಗೆ ಇದು ಸಾಕಷ್ಟು ಉಪಯುಕ್ತವಾಗಿದೆ.

Instagram ನಲ್ಲಿ ಟ್ವೀಟ್‌ಗಳನ್ನು ಶೇರ್‌ ಮಾಡುವ ಹಳೆಯ ಶೈಲಿಯ ವಿಧಾನ

Instagram ನಲ್ಲಿ ಟ್ವೀಟ್‌ಗಳನ್ನು ಶೇರ್‌ ಮಾಡುವ ಹಳೆಯ ಶೈಲಿಯ ವಿಧಾನ

ಟ್ವಿಟರ್ ಅಪ್‌ಡೇಟ್‌ಗೆ ಮೊದಲು, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸ್ಟೋರಿಸ್‌ಗೆ ಟ್ವೀಟ್ ಹಂಚಿಕೊಳ್ಳಲು ಬಯಸುವ ಬಳಕೆದಾರರು ಮೊದಲು ಟ್ವೀಟ್‌ನ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬೇಕಾಗುತ್ತದೆ. ಅವರು ಟ್ವೀಟ್ ಅನ್ನು ಕ್ರಾಪ್ ಮಾಡಬೇಕಾಗುತ್ತದೆ ಮತ್ತು ನಂತರ ಫಲಿತಾಂಶವನ್ನು ಇನ್‌ಸ್ಟಾಗ್ರಾಮ್‌ಗೆ ಹಂಚಿಕೊಳ್ಳಬೇಕು. ನಂತರ ಪುಟದಲ್ಲಿನ ಚಿತ್ರದ ಸ್ಥಾನವನ್ನು ಸೆಟ್‌ ಮಾಡಬೇಕು.

Instagram ಸ್ಟೋರಿಸ್‌ಗೆ ಟ್ವೀಟ್‌ಗಳನ್ನು ಹಂಚಿಕೊಳ್ಳುವ ಹೊಸ ವಿಧಾನ ಹೇಗೆ

Instagram ಸ್ಟೋರಿಸ್‌ಗೆ ಟ್ವೀಟ್‌ಗಳನ್ನು ಹಂಚಿಕೊಳ್ಳುವ ಹೊಸ ವಿಧಾನ ಹೇಗೆ

ಹೊಸ ಟ್ವಿಟರ್ ಅಪ್‌ಡೇಟ್‌ನೊಂದಿಗೆ, ಟ್ವಿಟರ್ ಬಳಕೆದಾರರು ಯಾವುದೇ ಟ್ವೀಟ್‌ನಲ್ಲಿ ಶೇರ್ ಬಟನ್ ಟ್ಯಾಪ್ ಮಾಡುವ ಮೂಲಕ ತಮ್ಮ ಇನ್‌ಸ್ಟಾಗ್ರಾಮ್ ಕಥೆಗಳಿಗೆ ಟ್ವೀಟ್‌ಗಳನ್ನು ಹಂಚಿಕೊಳ್ಳಬಹುದು. ನಂತರ ಶೇರ್ ಮೆನುವಿನಲ್ಲಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಬಟನ್ ಟ್ಯಾಪ್ ಮಾಡಬಹುದು. ಸ್ಪಾಟಿಫೈ ಮತ್ತು ಆಪಲ್ ಮ್ಯೂಸಿಕ್‌ನಿಂದ ಹಾಡುಗಳನ್ನು ಹಂಚಿಕೊಂಡ ಬಳಕೆದಾರರು ಈ ಪ್ರಕ್ರಿಯೆಯನ್ನು ಸಾಕಷ್ಟು ಪರಿಚಿತರು, ಮತ್ತು ನೀವು ಯಾವುದೇ ಪಠ್ಯವನ್ನು ಸೇರಿಸದಿದ್ದರೆ ಅಥವಾ ಕಥೆಯನ್ನು ಕಸ್ಟಮೈಸ್ ಮಾಡದಿದ್ದರೆ ಇಡೀ ಪ್ರಕ್ರಿಯೆಯು 10 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಈ ಹೊಸ ವೈಶಿಷ್ಟ್ಯದ ಲಾಭ ಪಡೆಯಲು ಬಳಕೆದಾರರು ತಮ್ಮ ಐಫೋನ್‌ಗಳಲ್ಲಿರುವ ಆಪ್ ಸ್ಟೋರ್‌ನಿಂದ ಟ್ವಿಟರ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಈಗಿನಿಂದಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಟ್ವಿಟರ್ ತಿಳಿಸಿದೆ.

Best Mobiles in India

English summary
Twitter update has rolled out a feature that will make accessing Instagram stories much easier for you thereby saving you time and effort.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X