ಟ್ವಿಟರ್ ಸ್ಪೇಸ್‌ನಲ್ಲಿ ಹೊಸ ಟ್ವೀಟ್ ಕಂಪೋಸರ್ ಫೀಚರ್ಸ್‌ ಸೇರ್ಪಡೆ!

|

ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವಾದರೂ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಬಿಡುತ್ತೆ. ಅದರಲ್ಲೂ ಹೆಚ್ಚಿನ ಜನರು ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್‌ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಟ್ವಿಟರ್‌ ಕೂಡ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಟ್ವಿಟರ್‌ ಕ್ಲಬ್‌ಹೌಸ್‌ ಮಾದರಿಯಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪೇಸ್‌ನಿಂದ ನೇರವಾಗಿ ಟ್ವೀಟ್ ಮಾಡಲು ಅವಕಾಶ ನೀಡಿದೆ. ಇನ್ನು ಈ ಟ್ವಿಟರ್‌ ಸ್ಪೇಸ್‌ಗಳು ಟ್ವಿಟರ್‌ನಲ್ಲಿ ಲೈವ್ ಆಡಿಯೋ ಚಾಟ್ ಫೀಚರ್ಸ್‌ ಆಗಿದ್ದು, ಕ್ಲಬ್‌ಹೌಸ್‌ಗೆ ಪ್ರತಿಸ್ಪರ್ಧಿಯಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ 600 ಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಯಾರಾದರೂ ವೇದಿಕೆಯಲ್ಲಿ ಆಡಿಯೋ ಟಾಕ್ ಅನ್ನು ಹೋಸ್ಟ್ ಮಾಡಬಹುದು. ಹಾಗಾದ್ರೆ ಟ್ವಿಟರ್‌ನ ಸ್ಪೇಸಸ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಟ್ವಿಟರ್‌ನ ಹೊಸ 'ಗೆಸ್ಟ್‌ ಮ್ಯಾನೇಜ್‌ ಮೆಂಟ್‌' ಕಂಟ್ರೋಲ್‌ಗಳು ಮತ್ತು ಸ್ಪೇಸಸ್‌ ಒಳಗೊಂಡಂತೆ ಐಒಎಸ್ ಅಪ್ಲಿಕೇಶನ್‌ಗೆ ಹೆಚ್ಚುವರಿ ಫೀಚರ್ಸ್‌ಗಳನ್ನು ಪರಿಚಯಿಸಲಿದೆ. ಈ ಎಲ್ಲಾ ಫೀಚರ್ಸ್‌ಗಳು ಪ್ರಸ್ತುತ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಸ್ಪೇಸ್‌ಗಳನ್ನು ಹೆಚ್ಚು ವಿಶ್ವಾಸಾರ್ಹವಾಗಿಸಲು ಹೊಸ ಅಪ್‌ಡೇಟ್‌ನಲ್ಲಿ ಕೆಲವು ದೋಷಗಳನ್ನು ಸರಿಪಡಿಸಲಿದೆ. ಇದಲ್ಲದೆ ನೀವು ಆಂಡ್ರಾಯ್ಡ್ ಅಥವಾ ಐಒಎಸ್ ಡಿವೈಸ್‌ ಅನ್ನು ಬಳಸಿದರೆ, ಸ್ಪೇಸ್ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸ್ವಯಂಚಾಲಿತವಾಗಿ ಆಡಿಯೋಗೆ ಲಿಂಕ್ ಆಗುವ ಹೊಸ ಸಂಯೋಜಕವನ್ನು ಬಳಸಿಕೊಂಡು ನೀವು ಸ್ಪೇಸ್ ಪುಟದಿಂದ ನೇರವಾಗಿ ಟ್ವೀಟ್ ಮಾಡಲು ಸಾಧ್ಯವಾಗುತ್ತದೆ.

ಹ್ಯಾಂಡಲ್

ಇನ್ನು ನಿರ್ದಿಷ್ಟ ಸ್ಪೇಸ್‌ನ ಹೋಸ್ಟ್‌ನ ಹ್ಯಾಂಡಲ್ ಅನ್ನು ಶೀಘ್ರದಲ್ಲೇ ಟ್ವೀಟ್‌ಗಳಿಗೆ ಸ್ವಯಂಚಾಲಿತವಾಗಿ ಸೇರಿಸಲಾಗುವುದು ಎಂದು ಟ್ವಿಟರ್ ಹೇಳಿದೆ. ಟ್ವಿಟರ್ ಐಒಎಸ್ ಆಪ್ ಸ್ಪೇಸ್‌ಗಳಿಗೆ ಸಂಬಂಧಿಸಿದ ವಿವಿಧ ಫೀಚರ್ಸ್‌ಗಳನ್ನು ಪಡೆಯುತ್ತಿದೆ. ಹೊಸ ಅಪ್ಡೇಟ್‌ ಟ್ಯಾಬ್ ಬೀಟಾ ಬಳಕೆದಾರರಿಗೆ ಐಒಎಸ್‌ನಲ್ಲಿ ಶೀರ್ಷಿಕೆ, ಹೋಸ್ಟ್ ಹೆಸರು ಮತ್ತು ಹೋಸ್ಟ್ ಹ್ಯಾಂಡಲ್ ಮೂಲಕ ಲೈವ್ ಮತ್ತು ಮುಂಬರುವ ಸ್ಪೇಸ್‌ಗಳನ್ನು ಹುಡುಕಲು ಅನುಮತಿಸುತ್ತದೆ.

ಲೈವ್

ಇದಲ್ಲದೆ ಈ ಹೊಸ ಅಪ್ಡೇಟ್‌ನಿಂದಾಗಿ ಲೈವ್ ಮತ್ತು ಮುಂಬರುವ ಸ್ಪೇಸ್‌ಗಳನ್ನು ಹುಡುಕಬಹುದಾಗಿದೆ ಎಂದು ಟ್ವಿಟರ್‌ ದೃಡಪಡಿಸಿದೆ. ಹೆಚ್ಚಿನ ಲೈವ್ ಸ್ಪೇಸ್‌ಗಳನ್ನು ಅನ್ವೇಷಿಸಲು ಹೊಸ ಸರ್ಚ್‌ ಫೀಚರ್ಸ್‌ಗಳು ಯಾವಾಗ ಆಂಡ್ರಾಯ್ಡ್ ಮತ್ತು ಡೆಸ್ಕ್‌ಟಾಪ್ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂಬುದನ್ನು ಟ್ವಿಟರ್ ಘೋಷಿಸಿಲ್ಲ. ಈ ಅಪ್‌ಡೇಟ್ ಮೂಲಕ ಐಒಎಸ್ ಬಳಕೆದಾರರಿಗೆ ಲಭ್ಯವಿರುವ ಇನ್ನೊಂದು ವೈಶಿಷ್ಟ್ಯವೆಂದರೆ ಸುಧಾರಿತ 'ಅತಿಥಿ ನಿರ್ವಹಣೆ' ನಿಯಂತ್ರಣಗಳು. ಇದರ ಅರ್ಥವೇನೆಂದರೆ, ಅತಿಥಿ ನಿರ್ವಹಣಾ ಪುಟದ ಮೇಲ್ಭಾಗದಲ್ಲಿ ಕಂಟ್ರೋಲ್ ಬಾರ್ ಅನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ.

Best Mobiles in India

English summary
Twitter is releasing another update to make Twitter Spaces easier to discover and share.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X