ಬಳಕೆದಾರರ ಅನುಕೂಲಕ್ಕಾಗಿ ಟ್ವಿಟರ್‌ ಬ್ಲೂ ಚಂದಾದಾರಿಕೆ ಸೇವೆ ಪರಿಚಯಿಸಿದ ಟ್ವಿಟರ್‌!

|

ಪ್ರಸ್ತುತ ದಿನಗಳಲ್ಲಿ ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಪರಿಣಾಮಕಾರಿ ಸೊಶೀಯಲ್‌ ಮೀಡಿಯಾ ಸೈಟ್‌ ಎನಿಸಿಕೊಂಡಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಲಿದೆ. ದೇಶದ ಪ್ರಮುಖ ವಿಚಾರಗಳು ಕೂಡ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಲೇ ಇರುತ್ತದೆ. ಅಷ್ಟು ಮಾತ್ರವಲ್ಲ ರಾಜಕೀಯ, ಕ್ರಿಕೆಟ್‌, ಸಿನಿಮಾ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಟ್ವಿಟರ್‌ನಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಟ್ವಿಟರ್‌ ಕೂಡ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಮತ್ತೊಂದು ಆಕರ್ಷಕ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಟ್ವಿಟರ್‌ ಬ್ಲೂ ಚಂದಾದಾರಿಕೆಯನ್ನು ಪರಿಚಯಿಸಿದೆ. ಈ ಹೊಸ ಚಂದಾದಾರಿಕೆ ಮೂಲಕ ಟ್ವೀಟ್‌ ಅನ್ನು ರದ್ದುಮಾಡುವ(undo) ಸಾಮರ್ಥ್ಯವನ್ನು ನೀಡಲಿದೆ. ಅಲ್ಲದೆ ಇನ್ಮುಂದೆ ನೀವು ಯಾವುದೇ ನ್ಯೂಸ್‌ ಆರ್ಟಿಕಲ್‌ಗಳನ್ನು ಯಾವುದೇ ಜಾಹಿರಾತುಗಳು ಇಲ್ಲದೆ ಓದುವುದಕ್ಕೆ ಅವಕಾಶ ಸಿಗಲಿದೆ. ಇದರಿಂದ ಜಾಹಿರಾತು ಮುಕ್ತ ಲೇಖನಗಳನ್ನು ಓದುವುದಕ್ಕೆ ಉತ್ತಮ ಅವಕಾಶ ಸಿಗಲಿದೆ. ಹಾಗಾದ್ರೆ ಟ್ವಿಟರ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಮೈಕ್ರೋಬ್ಲಾಗಿಂಗ್ ಸೈಟ್‌ ಟ್ವಿಟರ್‌ ತನ್ನ ಬಳಕೆದಾರರಿಗೆ ಚಂದಾದರಿಕೆ ಸೇವೆ ನೀಡುವ ಟ್ವಿಟರ್‌ ಬ್ಲೂ ಪರಿಚಯಿಸಿದೆ. ಈ ಚಂದಾದಾರಿಕೆ ಸೇವೆಯು ಟ್ವೀಟ್‌ಗಳನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಜಾಹೀರಾತುಗಳಿಲ್ಲದೆ ಕೆಲವು ಸುದ್ದಿ ಲೇಖನಗಳನ್ನು ಓದಬಹುದಾದ ಫೀಚರ್ಸ್‌ಗಳ ಸೇರ್ಪಡೆಗೆ ಮುಂದಾಗಿದೆ. ಇದರೊಂದಿಗೆ ಟ್ವಿಟರ್‌ ಬ್ಲೂ ಚಂದಾದಾರಿಕೆ ಮೂಲಕ ತನ್ನ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಲು ನೋಡುತ್ತಿದೆ. ಈ ಚಂದಾದಾರಿಕೆ ಸೇವೆಯು undo ಬಟನ್ ಸೇರಿದಂತೆ ಹೊಸ ಫೀಚರ್ಸ್‌ಗಳನ್ನು ಸೇರಿಸುತ್ತಿದೆ. ಇದು ಟ್ವೀಟ್‌ಗಳನ್ನು ಕಳುಹಿಸುವ ಮೊದಲು undo ಮಾಡಲು ನಿಮಗೆ ಅನುಮತಿಸಲಿದೆ.

ಟ್ವಿಟರ್‌

ಟ್ವಿಟರ್‌ ಸೇರಿಸಿರುವ undo ಬಟನ್‌ ಚಂದಾದಾರರು ಟ್ವೀಟ್‌ಗಳನ್ನು ಕಳುಹಿಸುವ ಮೊದಲು ಪ್ರಿವ್ಯೂ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ಚಂದಾದಾರರು ರೀಡರ್‌ಗೆ ಪ್ರವೇಶವನ್ನು ನೀಡಲಿದೆ. ಇದು ಲಾಂಗ್‌ ಥ್ರೇಡ್‌ಗಳನ್ನು ಸುಲಭವಾಗಿ ಓದುವುದಕ್ಕೆ ಅನುಮತಿಸಲಿದೆ. ತಮ್ಮ ಅನುಭವವನ್ನು ಇನ್ನಷ್ಟು ಸರಿಹೊಂದಿಸಲು ರೀಡರ್‌ನಲ್ಲಿ ಪಠ್ಯ ಗಾತ್ರವನ್ನು ಬದಲಾಯಿಸಬಹುದು ಎಂದು ಹೇಳಲಾಗಿದೆ. ಅಲ್ಲದೆ ನೀವು ಭಾಗವಹಿಸುವ ವೆಬ್‌ಸೈಟ್‌ಗಳಲ್ಲಿ ಜಾಹೀರಾತು-ಮುಕ್ತ ಲೇಖನಗಳನ್ನು ವೀಕ್ಷಿಸಲು ಜನರಿಗೆ ಅನುಮತಿಸುತ್ತದೆ. ಆ ಸೈಟ್‌ಗಳಿಗೆ ಟ್ವಿಟರ್‌ ಬ್ಲೂ ಚಂದಾದಾರಿಕೆಗಳಿಂದ ಬರುವ ಆದಾಯದ ಒಂದು ಭಾಗವನ್ನು ನೀಡಲಿದೆ ಎನ್ನಲಾಗಿದೆ.

ಟ್ವಿಟರ್‌

ಇತ್ತೀಚಿನ ದಿನಗಳಲ್ಲಿ ಯಾವುದೇ ಲೇಖನವನ್ನು ಓದುವುದಕ್ಕೆ ವೆಬ್‌ಸೈಟ್‌ ತೆರೆದು ಜಾಹಿರಾತುಗಳು ಪಾಪ್‌ಆಪ್‌ ಆಗುತ್ತಲೇ ಇರುತ್ತವೆ. ಆದರೆ ಟ್ವಿಟರ್‌ ಬ್ಲು ಚಂದಾದರಿಕೆ ಇದನ್ನು ತಡೆಯಲಿದೆ. ಇದರಿಂದ ಜಾಹೀರಾತು-ಮುಕ್ತ ಲೇಖನಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ. ಇದಕ್ಕಾಗಿ ಟ್ವಿಟರ್ ಬ್ಲೂ ಚಂದಾದಾರಿಕೆ ಶುಲ್ಕದಿಂದ ಬರುವ ಆದಾಯದ ಒಂದು ಭಾಗವನ್ನು ಲೇಖನ ಪ್ರಕಾಶಕರಿಗೆ ನೀಡುವುದಾಗಿ ಹೇಳಿದೆ. "ಪ್ರತಿಯೊಬ್ಬ ಪ್ರಕಾಶನ ಪಾಲುದಾರರು ಆ ವ್ಯಕ್ತಿಗೆ ಜಾಹೀರಾತುಗಳನ್ನು ನೀಡುವುದರಿಂದ ಪ್ರತಿ ವ್ಯಕ್ತಿಗೆ 50% ಹೆಚ್ಚಿನದನ್ನು ಮಾಡಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ ಎಂದು ಟ್ವಿಟರ್‌ ಸ್ಪಷ್ಟ ಪಡಿಸಿದೆ.

ಟ್ವಿಟರ್‌

ಇನ್ನು ಟ್ವಿಟರ್‌ ಕಂಪನಿಯು ಕಸ್ಟಮ್ ನ್ಯಾವಿಗೇಶನ್ ಅನ್ನು ಸಹ ಪರಿಚಯಿಸುತ್ತಿದೆ. ಇದು ಚಂದಾದಾರರಿಗೆ ನ್ಯಾವಿಗೇಶನ್ ಬಾರ್‌ನಲ್ಲಿ ಗೋಚರಿಸುವದನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ನೀಡಲಿದೆ. ಇದರಲ್ಲಿ ಚಂದಾದಾರರು ದೀರ್ಘಾವಧಿಯ ವೀಡಿಯೊ ಅಪ್‌ಲೋಡ್‌ಗಳ ಮೂಲಕ 10-ನಿಮಿಷಗಳವರೆಗಿನ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಚಂದಾದಾರರಲ್ಲದವರಿಗೆ ಸ್ಟ್ಯಾಂಡರ್ಡ್ 2 ನಿಮಿಷಗಳ ವೀಡಿಯೋ ಅಪ್‌ಲೋಡ್‌ ಮಾಡುವುದಕ್ಕೆ ಅವಕಾಶವಿದೆ. ಜೊತೆಗೆ ಪಿನ್ ಮಾಡಿದ ಸಂವಾದಗಳೊಂದಿಗೆ ತಮ್ಮ ಮೆಚ್ಚಿನ ಸಂಭಾಷಣೆಗಳನ್ನು ತಮ್ಮ DM ನ ಮೇಲ್ಭಾಗಕ್ಕೆ ಪಿನ್ ಮಾಡಬಹುದಾಗಿದೆ.

ಟ್ವಿಟರ್‌

ಇದಲ್ಲದೆ ಇತ್ತೀಚಿಗೆ ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪೇಸ್‌ನಿಂದ ನೇರವಾಗಿ ಟ್ವೀಟ್ ಮಾಡಲು ಅವಕಾಶ ನೀಡಿದೆ. ಇನ್ನು ಈ ಟ್ವಿಟರ್‌ ಸ್ಪೇಸ್‌ಗಳು ಟ್ವಿಟರ್‌ನಲ್ಲಿ ಲೈವ್ ಆಡಿಯೋ ಚಾಟ್ ಫೀಚರ್ಸ್‌ ಆಗಿದ್ದು, ಕ್ಲಬ್‌ಹೌಸ್‌ಗೆ ಪ್ರತಿಸ್ಪರ್ಧಿಯಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ 600 ಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಯಾರಾದರೂ ವೇದಿಕೆಯಲ್ಲಿ ಆಡಿಯೋ ಟಾಕ್ ಅನ್ನು ಹೋಸ್ಟ್ ಮಾಡಬಹುದು.

Best Mobiles in India

English summary
The company's subscription service is also adding new features.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X