ಬಳಕೆದಾರರಿಗೆ ಅಚ್ಚರಿಯ ಫೀಚರ್ಸ್‌ ಪರಿಚಯಿಸಿದ ಟ್ವಿಟರ್‌!

|

ಪ್ರಸ್ತುತ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ಜನರ ನೆಚ್ಚಿನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಪಾರ್ಮ್‌ಗಳಲ್ಲಿ ಟ್ವಿಟರ್‌ ಕೂಡ ಒಂದಾಗಿದೆ. ಸೊಶೀಯಲ್‌ ಮೀಡಿಯಾ ಎಂದ ಮೇಲೆ ಮುಕ್ತವಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳುವ ಆಯ್ಕೆ ಇರುತ್ತದೆ. ಆದರೆ ಕೆಲವರು ಇದನ್ನೆ ದುರ್ಬಳಕೆ ಮಾಡಿಕೊಂಡು ದುರದ್ದೇಶಪೂರಿತ ಹೇಳಿಕೆಗಳು, ಅಸಂಬದ್ದ ಎನಿಸುವ ಟೀಕೆ ಟಟಿಪ್ಪಣಿಗಳು, ಟ್ವಿಟ್‌ಗಳನ್ನು ಮಾಡುವುದು ಜಾಸ್ತಿಯಾಗಿದೆ. ಇಂತಹ ಘಟನೆಗಳಿಂದ ತನ್ನ ಬಳಕೆದಾರರನ್ನು ಕಾಪಾಡುವುದಕ್ಕಾಗಿ ಟ್ವಿಟರ್‌ ಹೊಸ ಫೀಚರ್ಸ್‌ ಒಂದನ್ನು ಪರಿಚಯಿಸಿದೆ. ಇದು ಹಾನಿಕಾರಕ ಎನಿಸುವ ಟ್ವಿಟರ್‌ ಖಾತೆಗಳನ್ನು ಬ್ಲಾಕ್‌ ಮಾಡಲಿದೆ.

ಟ್ವಿಟರ್

ಹೌದು, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ತನ್ನ ಬಳಕೆದಾರರಿಗೆ ಹೊಸ 'ಸೇಫ್ಟಿ ಮೋಡ್' ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಸದ್ಯ ಈ ಫೀಚರ್ಸ್‌ ಆಯ್ದ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಈ ಫೀಚರ್ಸ್‌ ನಿಮಗೆ ತೊಂದರೆ ನೀಡುವ ಹಾಗೂ ಹಾನಿಕಾರಕ ಸಂದೇಶಗಳನ್ನು ಕಳುಹಿಸುವ ಟ್ವಿಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಆಟೋ ಬ್ಲಾಕ್‌ ಮಾಡಲಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಟ್ವಿಟರ್‌ ನ ಸೇಫ್ಟಿ ಮೋಡ್‌ ದ್ವೇಷಪೂರಿತ ಟ್ವೀಟ್‌ಗಳನ್ನು ಸ್ವೀಕರಿಸುವ ಮುನ್ನ ನಿಮ್ಮನ್ನು ಸೇಪ್‌ ಮಾಡಲಿದೆ. ಅಂದರೆ ಹಾನಿಕಾರಕ ಟ್ವೀಟ್‌ಗಳಿಂದ ನಿಮ್ಮನ್ನು ರಕ್ಷಣೆ ಮಾಡಲಿದೆ. ಇನ್ನು ಈ ಫೀಚರ್ಸ್‌ ಅನ್ನು ಆನ್‌ಲೈನ್ ಸುರಕ್ಷತೆ, ಮಾನಸಿಕ ಆರೋಗ್ಯ ಮತ್ತು ಮಾನವ ಹಕ್ಕುಗಳಲ್ಲಿ ಪರಿಣತಿ ಹೊಂದಿರುವ ವಿಶ್ವಾಸಾರ್ಹ ಪಾಲುದಾರರಿಗಾಗಿ ಪರೀಕ್ಷಿಸಲಾಗಿದೆ. ಇನ್ನು ಸೇಫ್ಟಿ ಮೋಡ್‌ ಅಡಿಯಲ್ಲಿ ಪ್ರತಿ ಖಾತೆಯು ಕೇವಲ ಏಳು ದಿನಗಳವರೆಗೆ ಮಾತ್ರ ಆಟೋ ಬ್ಲಾಕ್‌ ಆಗಿರಲಿದೆ.

ಟ್ವಿಟರ್ ಸೇಫ್ಟಿ ಮೋಡ್ ಫೀಚರ್ಸ್‌ ಹೇಗೆ ಕೆಲಸ ಮಾಡುತ್ತದೆ?

ಟ್ವಿಟರ್ ಸೇಫ್ಟಿ ಮೋಡ್ ಫೀಚರ್ಸ್‌ ಹೇಗೆ ಕೆಲಸ ಮಾಡುತ್ತದೆ?

ಟ್ವಿಟರ್‌ನ ಸೇಫ್ಟಿ ಮೋಡ್‌ ಫೀಚರ್ಸ್‌ "ಹಾನಿಕಾರಕ ಭಾಷೆಯನ್ನು ಬಳಸುವ ಅಕೌಂಟ್‌ಗಳನ್ನು ಏಳು ದಿನಗಳವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸುತ್ತದೆ." ಟ್ವಿಟರ್‌ನ ಬ್ಲಾಗ್ ಪೋಸ್ಟ್ ಪ್ರಕಾರ, ಈ ಹಾನಿಕಾರಕ ಭಾಷೆಯಲ್ಲಿ ಅವಮಾನ, ದ್ವೇಷದ ಟೀಕೆಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಪುನರಾವರ್ತಿತ ಮತ್ತು ಆಹ್ವಾನಿಸದ ಪ್ರತ್ಯುತ್ತರಗಳನ್ನು ಅಥವಾ ಉಲ್ಲೇಖಗಳನ್ನು ಕಳುಹಿಸುವವರನ್ನು ನಿರ್ಬಂಧಿಸುತ್ತದೆ.

ಟ್ವಿಟರ್‌

ಇನ್ನು ಈ ಟ್ವಿಟರ್‌ ಬ್ಲಾಗ್ ಪೋಸ್ಟ್ ಹಾನಿಕಾರಕ ಭಾಷೆ ಯಾವುದು ಎಂಬುದರ ಬಗ್ಗೆ ಪರ್ಫೆಕ್ಟ್‌ ಆದ ವಿವರಣೆಯನ್ನು ನೀಡಿಲ್ಲ. ಬದಲಿಗೆ ಇಂಗ್ಲಿಷ್ ಭಾಷೆಯ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿದವರಿಗೆ ಇದು ಅನ್ವಯಿಸುತ್ತದೆ. ಅಂದರೆ ಇಂಗ್ಲಿಷ್‌ ಭಾಷೆಯಲ್ಲಿ ಹಾನಿಕಾರಕ ಪದಗಳನ್ನು ಬಳಸಿದರೆ ಮಾತ್ರ ಆ ಅಕೌಂಟ್‌ ಅನ್ನು ಬ್ಲಾಕ್‌ ಮಾಡಲಿದೆ. ಇತರೆ ಭಾಷೆ ಸೆಟ್ಟಿಂಗ್‌ ಬಳಸುವವರಿಗೆ ಇದು ಅನ್ವಯಿಸುವುದಿಲ್ಲ. ಸದ್ಯ ಈ ಫೀಚರ್ಸ್‌ ಇತರ ಭಾಷೆಯ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ಕೂಡ ಸ್ಪಷ್ಟವಾಗಿಲ್ಲ.

ಪ್ರೈವೆಸಿ

ಇದಲ್ಲದೆ ರಿಪ್ಲೆ ಮಾಡುವ ಗುಂಪಿನಲ್ಲಿರುವ ಬಳಕೆದಾರರು ಕೂಡ ಸೆಟ್ಟಿಂಗ್‌ಗಳಿಗೆ ಹೋಗಬಹುದು. ಹೊಸ ಸೇಫ್ಟಿ ಮೋಡ್ ಅನ್ನು ಸಕ್ರಿಯಗೊಳಿಸಲು ಪ್ರೈವೆಸಿ ಮತ್ತು ಸೇಫ್ಟಿಯನ್ನು ಅನುಸರಿಸಬಹುದು. ಇದರ ಮೂಲಕ "ಟ್ವೀಟ್‌ನ ವಿಷಯ ಮತ್ತು ಟ್ವೀಟ್ ಲೇಖಕರು ಮತ್ತು ಪ್ರತ್ಯುತ್ತರದ ನಡುವಿನ ಸಂಬಂಧ ಎರಡನ್ನೂ ಪರಿಗಣಿಸುವ ಮೂಲಕ ನಕಾರಾತ್ಮಕ ಪ್ರತ್ಯುತ್ತರಗಳನ್ನು ಬ್ಲಾಕ್‌ ಮಾಡಲಿದೆ. ತಂತ್ರಜ್ಞಾನವು "ಅಸ್ತಿತ್ವದಲ್ಲಿರುವ ಸಂಬಂಧಗಳನ್ನು" ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ ಒಬ್ಬರು ಆಗಾಗ್ಗೆ ಖಾತೆಯೊಂದಿಗೆ ಸಂವಹನ ನಡೆಸುತ್ತಿದ್ದರೆ ಅಥವಾ ಅವುಗಳನ್ನು ಅನುಸರಿಸಿದರೆ, ಅದನ್ನು ಆಟೋ ಬ್ಲಾಕ್‌ ಮಾಡಲು ಸಾಧ್ಯವಾಗುವುದಿಲ್ಲ.

ಟ್ವಿಟರ್‌ನ

ಇನ್ನು ಟ್ವಿಟರ್‌ನ ಸಿಸ್ಟಂಗಳು ಯಾರೊಬ್ಬರ ಟ್ವೀಟ್‌ಗಳು ಹಾನಿಕಾರಕ ಅನ್ನೊದನ್ನ ಕಂಡುಕೊಂಡರೆ, ಅವರ ಖಾತೆಯನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲಾಗುತ್ತದೆ. ಅಲ್ಲದೆ ಟ್ವೀಟ್ ಕಳುಹಿಸಿದ ವ್ಯಕ್ತಿಗೆ ಅವರ ಅಕೌಂಟ್‌ ಕಾಣದಂತೆ ಮಾಡಲಿದೆ. ತನ್ನ ಖಾತೆಯನ್ನು ಆಟೋಬ್ಲಾಕ್ ಮಾಡಿದ ಬಳಕೆದಾರರು ಇನ್ನೊಂದು ಖಾತೆಯನ್ನು ಫಾಲೋ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಆದರೆ ಬೇರೆಯವರ ಟ್ವೀಟ್‌ಗಳನ್ನು ನೋಡಲು ಅಥವಾ ಅವರಿಗೆ ನೇರ ಸಂದೇಶಗಳನ್ನು ಕಳುಹಿಸಬಹುದಾಗಿದೆ.

ಮೋಡ್

ಬಳಕೆದಾರರು ಸೇಫ್ಟಿ ಮೋಡ್ ಮೂಲಕ ಫ್ಲಾಗ್ ಮಾಡಿರುವ ಟ್ವೀಟ್‌ಗಳ ಬಗ್ಗೆ ಮಾಹಿತಿಯನ್ನು ಪಡೆಯುವುದಕ್ಕೆ ಅವಕಾಶವಿದೆ. ಹಾಗೆಯೇ ಯಾವುದೇ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ಖಾತೆಗಳ ವಿವರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಇನ್ನು ಪ್ರತಿ ಸೇಫ್ಟಿ ಮೋಡ್ ಅವಧಿ ಮುಗಿಯುವ ಮುನ್ನ, ಬಳಕೆದಾರರು ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ. ಇನ್ನು ಸೇಫ್ಟಿ ಮೋಡ್‌ ಅಡಿಯಲ್ಲಿ ಪ್ರತಿ ಖಾತೆಯು ಕೇವಲ ಏಳು ದಿನಗಳವರೆಗೆ ಮಾತ್ರ ಆಟೋ ಬ್ಲಾಕ್‌ ಆಗಿರಲಿದೆ.

Best Mobiles in India

English summary
Twitter is testing a new 'Safety Mode' which is rolling out as a beta feature for select users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X