ಬಳಕೆದಾರರಿಗೆ ಮತ್ತೊಂದು ಉಪಯುಕ್ತ ಫೀಚರ್ಸ್‌ ಪರಿಚಯಿಸಲು ಟ್ವಿಟರ್‌ ಸಿದ್ಧತೆ!

|

ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್‌ ಟ್ವಿಟರ್‌ ತನ್ನ ವಿಶೇಷ ಫೀಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಸೊಶೀಯಲ್‌ ಮೀಡಿಯಾ ವೇದಿಕೆ ಆಗಿದೆ. ಇತ್ತಿಚಿನ ದಿನಗಳಲ್ಲಿ ಪ್ರಮುಖ ವಿಚಾರಗಳನ್ನ ಟ್ವಟರ್‌ನಲ್ಲಿ ಹಂಚಿಕೊಳ್ಳುವುದು ಕೂಡ ಟ್ರೆಂಡ್‌ ಆಗಿ ಹೋಗಿದೆ. ಇನ್ನು ಟ್ವಿಟರ್‌ ಕೂಡ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಟ್ವಿಟರ್ ಹೊಸ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಟ್ವೀಟ್‌ಗಳಿಗಾಗಿ ಹೊಸ ಅಪ್‌ವೋಟ್ ಮತ್ತು ಡೌನ್‌ವೋಟ್ ಪ್ರತಿಕ್ರಿಯೆಗಳನ್ನು ಪರೀಕ್ಷಿಸುತ್ತಿದೆ ಎಂದು ಕಂಪನಿ ದೃಡಪಡಿಸಿದೆ. ಇದು ಹೊಸ "ವಾಯ್ಸ್ ಟ್ರಾನ್ಸ್‌ಫಾರ್ಮರ್" ವೈಶಿಷ್ಟ್ಯವನ್ನು ಕೂಡ ಸೇರಿಸುತ್ತಿದೆ. ಇದು ಮೂಲತಃ ಲೈವ್ ಸ್ಪೇಸ್ ಅನ್ನು ಹೋಸ್ಟ್ ಮಾಡುವಾಗ ಬಳಕೆದಾರರು ತಮ್ಮ ಧ್ವನಿಯನ್ನು ನೈಜ ಸಮಯದಲ್ಲಿ ಬದಲಾಯಿಸಲು ಅನೇಕ ವಾಯ್ಸ್‌ ಎಫೆಕ್ಟ್‌ಗಳನ್ನು ಸಹ ಬಳಸಲು ಅನುಮತಿಸುತ್ತದೆ. ಹಾಗಾದ್ರೆ ಟ್ವಿಟರ್‌ನ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್

ಟ್ವಿಟರ್ ಹೊಸದಾಗಿ ಅಪ್‌ವೋಟ್ ಮತ್ತು ಡೌನ್‌ವೋಟ್ ಪ್ರತಿಕ್ರಿಯೆಗಳನ್ನು ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಈ ಫೀಚರ್ಸ್‌ ಪ್ರಸ್ತುತ ಐಒಎಸ್ ಬಳಕೆದಾರರಿಗೆ ಮಾತ್ರ ಗೋಚರಿಸುತ್ತದೆ ಎಂದು ಕಂಪನಿ ದೃಡಪಡಿಸಿದೆ. ಆದ್ದರಿಂದ, ಆಂಡ್ರಾಯ್ಡ್ ಬಳಕೆದಾರರು ಇದನ್ನು ಪರೀಕ್ಷಿಸಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಈ ಹೊಸ ಫೀಚಸರ್ಸ್‌ನಿಂದ ನಿಮ್ಮ "ವಾಯ್ಸ್‌ ಪಿಚ್ ಅನ್ನು ಬದಲಾಯಿಸಲು ಅಥವಾ ನಿಮ್ಮ ಆಡಿಯೊಗೆ ಬೇಸ್‌ಸೌಂಡ್‌ ಸೇರಿಸಲು" ಇದು ನಿಮಗೆ ಅವಕಾಶ ನೀಡುತ್ತದೆ ಎನ್ನಲಾಗಿದೆ.

ಡೆವಲಪರ್

ಇನ್ನು ಡೆವಲಪರ್ ಸ್ಟೀವ್ ಮೋಸರ್ ಕೂಡ ಟ್ವಿಟರ್ ಸ್ಪೇಸ್‌ಗಳಲ್ಲಿ ಲಭ್ಯವಿರುವ ಧ್ವನಿ ಪರಿಣಾಮಗಳ ಪಟ್ಟಿಯನ್ನು ಸಹ ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಬೀ, ಕಾರ್ಟೂನ್, ಹೀಲಿಯಂ, ಅಜ್ಞಾತ, ಕರಾಒಕೆ, ಮೈಕ್ರೊಫೋನ್, ಫೋನ್, ಪ್ರಾದೇಶಿಕ, ಕ್ರೀಡಾಂಗಣ ಮತ್ತು ಹಂತ ಸೇರಿವೆ. ಈ ವೈಶಿಷ್ಟ್ಯವು ಸಾರ್ವಜನಿಕರಿಗೆ ಯಾವಾಗ ಲಭ್ಯವಾಗುತ್ತದೆ ಎಂಬುದು ಪ್ರಸ್ತುತ ತಿಳಿದಿಲ್ಲ. ಟ್ವಿಟರ್ ಇದು ಹೊಸ ಅಪ್‌ವೋಟ್ ಅಥವಾ ಡೌನ್‌ವೋಟ್ ಪ್ರತ್ಯುತ್ತರ ಬಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ದೃಡಪಡಿಸಿದೆ.

ಟ್ವಿಟರ್‌

ಇದಲ್ಲದೆ ಡೌನ್‌ವೋಟ್‌ಗಳು ಸಾರ್ವಜನಿಕವಾಗಿರುವುದಿಲ್ಲ ಎಂದು ಟ್ವಿಟರ್‌ ಬಹಿರಂಗಪಡಿಸಿದೆ. ಇದು ಇತರರಿಗೆ ಸಾರ್ವಜನಿಕವಾಗಿ ನಾಚಿಕೆಪಡದೆ ಪ್ರತ್ಯುತ್ತರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಖಾಸಗಿಯಾಗಿ ಧ್ವನಿಸುವ ಶಕ್ತಿಯನ್ನು ನೀಡುತ್ತದೆ ಮತ್ತು ನಮಗೆ ಹೆಚ್ಚು ಸೂಕ್ಷ್ಮ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಟ್ವಿಟ್ಟರ್‌ನ ಬಳಕೆದಾರ ಸಂಶೋಧಕ ಕೋಡಿ ಎಲಾಮ್ ಟ್ವೀಟ್‌ಗಳ ಎಳೆಯಲ್ಲಿ ಹೇಳಿದ್ದಾರೆ. ಆದರೆ, ಟ್ವೀಟ್‌ನಲ್ಲಿ ಇಷ್ಟವಾದಂತೆ ಎಲ್ಲರಿಗೂ ಅಪ್‌ವೋಟ್‌ಗಳು ಗೋಚರಿಸುತ್ತವೆ. ಸದ್ಯ ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿಯಲ್ಲಿದೆ ಮತ್ತು ಕೆಲವು ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

Best Mobiles in India

English summary
Twitter has confirmed that it is testing new upvote and downvote reactions for tweets.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X