ಫೇಸ್‌ಬುಕ್‌ನಲ್ಲಿದ್ದಂತೆ ಟ್ವಿಟ್ಟರ್‌ನಲ್ಲೂ ಬರ್ತಿದೆ ವೂ ಇಸ್‌ ಆನ್‌ಲೈನ್‌ ಫೀಚರ್‌..!

By Avinash
|
How to recharge your mobile number using Facebook

ತನ್ನ ಬಳಕೆದಾರರಿಗೆ ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ಟ್ವಿಟ್ಟರ್‌ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ತಾನೇ ಅನ್‌ಫಾಲೋ ಸಲಹೆ ಫೀಚರ್‌ನ್ನು ಪ್ರಯೋಗಾರ್ಥ ಪರೀಕ್ಷೆ ಮಾಡಿ ಯಶಸ್ವಿಯಾಗಿರುವ ಮೈಕ್ರೋಬ್ಲಾಗಿಂಗ್ ತಾಣ ಅದನ್ನು ಆ ಫೀಚರ್‌ನ್ನು ಎಲ್ಲಾ ಬಳಕೆದಾರರಿಗೂ ನೀಡುವ ಸಾಧ್ಯತೆ ಇದೆ. ಆದರೆ, ಈಗ ಅದಲ್ಲ ವಿಷಯ, ಮತ್ತೊಂದು ಫೀಚರ್‌ನ್ನು ಬಳಕೆದಾರರಿಗೆ ಟ್ವಿಟ್ಟರ್‌ನ್ನು ಪರಿಚಯಿಸುತ್ತಿದೆ.

ಫೇಸ್‌ಬುಕ್‌ನಲ್ಲಿದ್ದಂತೆ ಟ್ವಿಟ್ಟರ್‌ನಲ್ಲೂ ಬರ್ತಿದೆ ವೂ ಇಸ್‌ ಆನ್‌ಲೈನ್‌ ಫೀಚರ್‌

ಹೌದು, ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್‌ನಲ್ಲಿರುವಂತೆ ಯಾರು ಆನ್‌ಲೈನ್‌ನಲ್ಲಿ ಸಕ್ರಿಯರಾಗಿದ್ದಾರೆ ಎಂಬ ಫೀಚರ್‌ನ್ನು ಟ್ವಿಟ್ಟರ್‌ನಲ್ಲಿ ಪರಿಚಯಿಸಲು ಮುಂದಾಗಿದೆ. ಟ್ವಿಟ್ಟರ್‌ನ ಸಿಇಒ ಜಾಕ್‌ ಡೋರ್ಸಿ ಶುಕ್ರವಾರ ತಮ್ಮ ಟ್ವಿಟ್ಟರ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಕೆಲವು ಹೊಸ ಟ್ವಿಟ್ಟರ್ ಫೀಚರ್‌ಗಳ ಜತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಸಂಭಾಷಣೆಯ ಓದಿಗೆ ಸಹಾಯವಾಗುವಂತೆ ಈಗ ಯಾರು ಟ್ವಿಟ್ಟರ್‌ನಲ್ಲಿ ಆಕ್ಟಿವ್‌ ಆಗಿದ್ದಾರೆ ಎಂಬ ಫೀಚರ್ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಪ್ರೇಸೆನ್ಸ್‌ ಫೀಚರ್‌ ಸರಳವಾಗಿ ಯಾರು ಆನ್‌ಲೈನ್‌ನಲ್ಲಿದ್ದಾರೆಂದು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಅದರ ಜತೆ ಥ್ರೀಡಿಂಗ್ ಫೀಚರ್‌ ಬಳಕೆದಾರರಿಗೆ ಥ್ರೀಡೆಡ್ ಅನುಭವದಲ್ಲಿ ಸಂಭಾಷಣೆಯನ್ನು ಓದಲು ಸಹಾಯ ಮಾಡುತ್ತದೆ.

ಟ್ವಿಟ್ಟರ್‌ನ ಪ್ರೊಡಕ್ಟ್‌ ಹೆಡ್‌ ಆಗಿರುವ ಸರಾಹ ಹೈದರ್‌ ಕೂಡ ಟ್ವೀಟ್‌ ಮಾಡಿದ್ದು, ನಿಮ್ಮ ಉಪಸ್ಥಿತಿ ಹಂಚಿಕೊಳ್ಳಲು ನೀವು ಸಂಪೂರ್ಣ ನಿಯಂತ್ರಣ ಹೊಂದಲು ಖಂಡಿತ ಬಯಸುತ್ತೀರಿ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಹೇ ಟ್ವಿಟರ್. ಇಲ್ಲಿ ಹೆಚ್ಚಿನ ಸಂಭಾಷಣೆ ಅನುಭವ ನಿಮಗೆ ನೀಡಲು ನಾವು ಕೆಲವು ವೈಶಿಷ್ಟ್ಯಗಳನ್ನು ಪರಿಚಯಿಸಲು ಮುಂದಾಗಿದ್ದೇವೆ. ಅವುಗಳೆಂದರೆ ಪ್ರೆಸೆನ್ಸ್‌ ಮತ್ತು ರಿಪ್ಲೇ ಥ್ರೀಡಿಂಗ್ ಆಗಿವೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

Best Mobiles in India

English summary
Twitter Planning to Launch Threaded Conversations, 'Who Is Online' Feature. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X