ಟ್ವಿಟ್ಟರ್‌ ಕಾರ್ಮಿಕರಿಗೆ ಬ್ಯಾಡ್‌ ನ್ಯೂಸ್‌ ಕೊಟ್ಟ ಮಸ್ಕ್‌; 4,400 ಗುತ್ತಿಗೆ ಕಾರ್ಮಿಕರು ವಜಾ?

|

ಟ್ವಿಟ್ಟರ್‌ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಾ ಬರುತ್ತಿದೆ. ಈ ನಡುವೆ ಕೆಲವು ದಿನಗಳ ಹಿಂದೆ ಟ್ವಿಟ್ಟರ್‌ ಕಾರ್ಯಕ್ಷಮತೆ ನಿಧಾನವಾಗಿತ್ತು. ಈ ಸಂಬಂಧ ಕ್ಷಮೆಯಾಚಿಸಿರುವ ಎಲಾನ್‌ ಮಸ್ಕ್‌ ಹಾಗೆಯೇ ಕೆಲವು ದಿನಗಳ ಹಿಂದಷ್ಟೇ ಪರಿಚಯಿಸಿದ್ದ ಟ್ವಿಟ್ಟರ್‌ ಬ್ಲೂಟಿಕ್‌ ಚಂದಾದಾರಿಕೆಯನ್ನು ವಾಪಸ್‌ ಪಡೆದಿದ್ದರು. ಇದಿಷ್ಟೇ ಅಲ್ಲದೆ ಟ್ವಿಟ್ಟರ್‌ನಲ್ಲಿ ಸಾಲು ಸಾಲು ಘಟನೆಗಳು ಜರುಗುತ್ತಿರುವ ನಡುವೆ ಇದೀಗ ನೌಕರರಿಗೆ ಬ್ಯಾಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಟ್ವಿಟ್ಟರ್‌

ಹೌದು, ಟ್ವಿಟ್ಟರ್‌ನಲ್ಲಿ ಈ ಹಿಂದೆ ಕಾರ್ಮಿಕರನ್ನು ವಜಾಮಾಡಿ ಭಾರಿ ಸುದ್ದಿಯಲ್ಲಿದ್ದ ಎಲಾನ್‌ ಮಸ್ಕ್ ಈಗ ಇದೇ ಪ್ರಕರಣ ಎದುರಿಸುವಂತಾಗಿದೆ. ಅದರಂತೆ 4,400 ಗುತ್ತಿಗೆ ಕಾರ್ಮಿಕರ ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಗಮನಾರ್ಹ ವಿಷಯ ಎಂದರೆ ಯಾವೊಬ್ಬ ಗುತ್ತಿಗೆ ಕಾರ್ಮಿಕನಿಗೂ ವಜಾ ಮಾಡುವ ಬಗ್ಗೆ ಮಾಹಿತಿ ನೀಡದಿರುವುದು.

ಟ್ವಿಟರ್‌

ಟ್ವಿಟರ್‌ನಲ್ಲಿನ ತಮ್ಮ ಕೆಲಸದ ಲಾಗ್‌ ಇನ್‌ ವ್ಯವಸ್ಥೆಗಳಿಗೆ ಪ್ರವೇಶವನ್ನು ಹಠಾತ್ತನೆ ಕಳೆದುಕೊಂಡದ್ದನ್ನು ಗಮನಿಸಿರುವ ಕಾರ್ಮಿಕರು ಇನ್ಮುಂದೆ ತಾವು ಟ್ವಿಟ್ಟರ್‌ನಲ್ಲಿ ಗುತ್ತಿಗೆ ಕೆಲಸ ಮಾಡುವ ಹಾಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಜೊತೆಗೆ ಅನೇಕರು ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರತಿಶತದಷ್ಟು

ಈ ಹಿಂದೆ ಟ್ವಿಟರ್‌ನ ಸುಮಾರು 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಅಂದರೆ ಸುಮಾರು 3,800 ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಈಗ ಕನಿಷ್ಠ 4,400 ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಕಾರ್ಮಿಕರಿಗೆ ಸಿಡಿಲು ಬಡಿದ ಅನುಭವವಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಆಕ್ಸಿಯೋಸ್

ಪ್ಲಾಟ್‌ಫಾರ್ಮರ್ ಹಾಗೂ ಆಕ್ಸಿಯೋಸ್ ಈ ಸಂಬಂಧ ವರದಿ ಮಾಡಿದ್ದು, ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಈಗ ಗುತ್ತಿಗೆಯಲ್ಲಿರುವ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಗುತ್ತಿಗೆದಾರರಿಗೆ ಯಾವುದೇ ಸೂಚನೆ ನೀಡಲಾಗುತ್ತಿಲ್ಲ, ಅವರು ಕೇವಲ ಸ್ಲಾಕ್ ಮತ್ತು ಇಮೇಲ್‌ಗೆ ಪ್ರವೇಶವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಅರಿತ ನಂತರ ತಮ್ಮ ಕೆಲಸ ಹೋಗಿದೆ ಎಂಬ ಬಗ್ಗೆ ಗುತ್ತಿಗೆ ಕಾರ್ಮಿಕರಿಗೆ ತಿಳಿದಿದೆ ಎಂದು ಉಲ್ಲೇಖಿಸಿದೆ.

ಮಾಲೀಕ

ಜೊತೆಗೆ ಈ ಸಂಬಂಧ ಕಾರ್ಮಿಕರು ಟ್ವಿಟ್ಟರ್‌ ಮಾಲೀಕರನ್ನು ಪ್ರಶ್ನೆ ಮಾಡಿಲ್ಲ ಎಂದೂ ಸಹ ಬರೆದಿದೆ. ಅದಾಗ್ಯೂ ಈ ವಾರಾಂತ್ಯದಲ್ಲಿ ಆರಂಭ ಆಗಿರುವ ವಜಾ ಎಂಬ ಬಿರುಗಾಳಿ ಬಗ್ಗೆ ಎಲಾನ್‌ಮಸ್ಕ್‌ ಆಗಲಿ ಅಥವಾ ಟ್ವಿಟ್ಟರ್‌ ಪ್ಲಾಟ್‌ಫಾರ್ಮ್‌ ಆಗಲಿ ಯಾವುದೇ ಮಾಹಿತಿಯನ್ನೂ ಈವರೆಗೆ ಬಹಿರಂಗಪಡಿಸಿಲ್ಲ.

ಮ್ಯಾನೇಜರ್‌

ಇದರ ನಡುವೆ ಟ್ವಿಟ್ಟರ್‌ನ ಮ್ಯಾನೇಜರ್‌ ಒಬ್ಬರು, ನಿರ್ಣಾಯಕ ಬದಲಾವಣೆಗಳನ್ನು ಮಾಡುವ ಭಾಗವಾಗಿ ನನ್ನ ಗುತ್ತಿಗೆದಾರರಲ್ಲಿ ಒಬ್ಬರು ಸೂಚನೆಯಿಲ್ಲದೆ ಕೆಲಸದಿಂದ ವಜಾಗೊಂಡಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಕಂಟೆಂಟ್ ಮಾಡರೇಶನ್, ರಿಯಲ್ ಎಸ್ಟೇಟ್, ಮಾರ್ಕೆಟಿಂಗ್, ಇಂಜಿನಿಯರಿಂಗ್ ಮತ್ತು ಇತರ ವಿಭಾಗಗಳಲ್ಲಿ ಕೆಲಸ ಮಾಡುವ ಯುಎಸ್ ಮೂಲದ ಮತ್ತು ಜಾಗತಿಕ ಉದ್ಯೋಗಿಗಳ ಹೆಚ್ಚಿನ ಪರಿಣಾಮ ಉಂಟಾಗಲಿದೆ.

ಬ್ಲೂ ಟಿಕ್‌

ಇದರ ನಡುವೆ ಬ್ಲೂ ಟಿಕ್‌ನ ನಕಲಿ ಖಾತೆಗಳು ಹೆಚ್ಚಾದ ಹಿನ್ನೆಲೆ ತನ್ನ $8 ಟ್ವಿಟರ್ ಬ್ಲೂ ಚಂದಾದಾರಿಕೆ ಹಿಂತೆಗೆದುಕೊಂಡಿರುವುದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್‌, ಇದರ ಬದಲು ಮತ್ತೊಂದು ಫೀಚರ್ಸ್‌ ಅನ್ನು ಅನಾವರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಬ್ಲೂ ಟಿಕ್ ಅನ್ನು ಮೊದಲು ಪ್ರಸಿದ್ಧ ವ್ಯಕ್ತಿಗಳು, ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ ಅದರಲ್ಲೂ ಪರಿಶೀಲಿಸಿದ ಖಾತೆಗಳಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ, ಟ್ವಿಟರ್ ಚಂದದಾರಿಕೆ ಪ್ಲ್ಯಾನ್‌ ಅನ್ನು ಪರಿಚಯಿಸುವ ಮೂಲಕ ಭಾರೀ ಗೊಂದಲದ ವಾತಾವರಣ ನಿರ್ಮಾಣ ಮಾಡಿತ್ತು.

 ಎಲಾನ್ ಮಸ್ಕ್

ಹಾಗೆಯೇ ಕಳೆದ ವಾರ ಎಲಾನ್ ಮಸ್ಕ್ ಅವರು ವರ್ಕ್‌ ಫ್ರಮ್‌ ಹೋಮ್‌ ನೀತಿಯನ್ನು ರದ್ದುಗೊಳಿಸಿದ್ದಾರೆ ಹಾಗೆಯೇ ಸಿಬ್ಬಂದಿಯನ್ನು ಕಚೇರಿಗೆ ಬರಲು ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿತ್ತು. ಅದರಂತೆ ನಿಮಗೆ ನಿರ್ದಿಷ್ಟ ವಿನಾಯಿತಿ ಇಲ್ಲ ಎಂದಾದರೆ ರಿಮೋಟ್ ಕೆಲಸವನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ. ವಿನಾಯಿತಿ ಪಟ್ಟಿಗಳನ್ನು ಪರಿಶೀಲಿಸಿ ಮತ್ತು ಅನುಮೋದನೆಗಾಗಿ ನನಗೆ ಮ್ಯಾನೇಜರ್ಸ್ ಮಾಹಿತಿ ನೀಡುತ್ತಾರೆ ಎಂದು ಇಮೇಲ್‌ನಲ್ಲಿ ಉದ್ಯೋಗಿಗಳಿಗೆ ಮೆಸೆಜ್‌ ರವಾನೆ ಮಾಡಿದ್ದರು.

Best Mobiles in India

English summary
Twitter reportedly fires 4,400 contract workers without informing them

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X