ಟ್ವಿಟರ್‌ ಸ್ಪೇಸಸ್ ಹೋಸ್ಟ್‌ಗಳಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಟ್ವಿಟರ್‌!

|

ಜನಪ್ರಿಯ ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈಗಾಗಲೇ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಆಡಿಯೋ ಚಾಟ್‌ರೂಮ್‌ ಸ್ಪೇಸಸ್ ಹೋಸ್ಟ್‌ಗಳಿಗೆ ಚಾಟ್‌ಗಳನ್ನು ರೆಕಾರ್ಡ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಈ ರೋಲ್‌ಔಟ್ ಆರಂಭದಲ್ಲಿ iOS ನಲ್ಲಿ ಸೀಮಿತ ಸಂಖ್ಯೆಯ ಟ್ವಿಟರ್‌ ಸ್ಪೇಸಸ್‌ ಹೋಸ್ಟ್‌ಗಳಿಗೆ ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ಟ್ವಿಟರ್‌ ಕಂಪನಿ ಹೇಳಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಬಳಕೆದಾರರಿಗೆ ಅಚ್ಚರಿಯ ಫೀಚರ್ಸ್‌ ಪರಿಚಯಿಸಿದೆ. ಇನ್ಮುಂದೆ ಆಡಿಯೋ ಚಾಟ್‌ರೂಮ್‌ ಸ್ಪೇಸಸ್‌ನಲ್ಲಿನ ಹೋಸ್ಟ್‌ ಚಾಟ್‌ ರೆಕಾರ್ಡ್‌ ಮಾಡುವ ಅವಕಾಶ ನೀಡಿದೆ. ಇದರಿಂದ ಹೋಸ್ಟ್‌ಗಳು ಆಡಿಯೋ ಚಾಟ್‌ರೂಮ್‌ನಲ್ಲಿ ಚಾಟ್‌ ರೆಕಾರ್ಡ್‌ ಮಾಡಬಹುದಾಗಿದೆ. ಟ್ವಿಟರ್ ಸ್ಪೇಸ್‌ಗಳ ಪ್ರಸಾರಕ್ಕೆ ತಡವಾಗಿ ಬಂದ ಯಾರಾದರೂ ಹೋಸ್ಟ್ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಿದ್ದರೆ ಅದು ಮುಗಿದ ನಂತರ ಪ್ರಸಾರವನ್ನು ರಿಪ್ಲೇ ಮಾಡಲು ಸಾಧ್ಯವಾಗಲಿದೆ. ಹಾಗಾದ್ರೆ ಟ್ವಿಟರ್‌ನ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಟ್ವಿಟರ್‌ ಪರಿಚಯಿಸಿರುವ ಹೊಸ ಫೀಚರ್ಸ್‌ ಬಳಕೆದಾರರಿಗೆ ಸಾಕಷ್ಟು ಉಪಯುಕ್ತ ಎನಿಸಲಿದೆ. ಏಕೆಂದರೆ ಆಡಿಯೋ ಚಾಟ್‌ರೂಮ್‌ ಸ್ಪೇಸ್‌ ಪ್ರಸಾರಕ್ಕೆ ತಡವಾಗಿ ಎಂಟ್ರಿ ನೀಡಿದರೂ ಪೂರ್ಣ ಮಾಹಿತಿ ಪಡೆದುಕೊಳ್ಳುವುದಕ್ಕೆ ಅವಕಾಸ ನೀಡಲಿದೆ. ಇನ್ನು ಸ್ಪೇಸಸ್‌ನಲ್ಲಿ ಚಾಟ್‌ ರೂಮ್‌ ರೆಕಾರ್ಡಿಂಗ್ ಕ್ರಿಯೆಟ್‌ ಮಾಡುವುದಕ್ಕೆ ಹೋಸ್ಟ್‌ಗಳು ಹೊಸ ಸ್ಪೇಸ್ ಅನ್ನು ಪ್ರಾರಂಭಿಸುವ ಮೊದಲು 'ರೆಕಾರ್ಡ್ ಸ್ಪೇಸ್' ಅನ್ನು ಟಾಗಲ್ ಮಾಡಬೇಕಾಗುತ್ತದೆ. ಇದರಿಂದ ಹೋಸ್ಟ್‌ಗಳು ಆಡಿಯೋ ಚಾಟ್‌ರೂಮ್‌ನಲ್ಲಿ ಚಾಟ್‌ ರೆಕಾರ್ಡ್‌ ಮಾಡಬಹುದಾಗಿದೆ. ಭಾಗವಹಿಸುವವರು ಸ್ಪೇಸ್‌ಗೆ ಪ್ರವೇಶಿಸಿದಾಗ, ಸ್ಪೇಸ್ ರೆಕಾರ್ಡ್ ಆಗುತ್ತಿದೆ ಎಂದು ಸೂಚಿಸುವ ರೆಕಾರ್ಡಿಂಗ್ ಐಕಾನ್ ಕಾಣಿಸಿಕೊಳ್ಳಲಿದೆ.

ಸ್ಪೇಸ್

ಟ್ವಿಟರ್‌ನಲ್ಲಿ ಒಮ್ಮೆ ಸ್ಪೇಸ್ ಎಂಡ್‌ ಆದರೆ, ಹೋಸ್ಟ್‌ಗಳು ಆರಂಭಿಕ ಪ್ರಸಾರದ ನಂತರ 30 ದಿನಗಳವರೆಗಿನ ರೆಕಾರ್ಡಿಂಗ್‌ಗೆ ಪ್ರವೇಶವನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ರಚಾಟ್‌ ರೇಕಾರ್ಡಿಂಗ್‌ ಅನ್ನು ಶೇರ್‌ ಮಾಡಬಹುದು ಇಲ್ಲವೇ ಟ್ವೀಟ್‌ ಮಾಡಬಹುದಾಗಿದೆ. ಇದಲ್ಲದೆ ಕೇಳುಗರು ತಮ್ಮ ಟೈಮ್‌ಲೈನ್‌ನಿಂದ ನೇರವಾಗಿ ಯಾವುದೇ ರೆಕಾರ್ಡ್ ಮಾಡಿದ ಸ್ಪೇಸ್ ಅನ್ನು ಪ್ಲೇ ಬ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡದುಕೊಳ್ಳಲಿದ್ದಾರೆ. ಹಾಗೆಯೇ ಚಾಟ್‌ ರೇಕಾರ್ಡ್‌ ಮಾಡಿದ ಸ್ಪೇಸ್‌ಗಳನ್ನು ಹಂಚಿಕೊಳ್ಳಬಹುದಾಗಿದೆ. ಇದರೊಂದಿಗೆ ಸಂಭಾಷಣೆಗಳನ್ನು ರೆಕಾರ್ಡ್ ಮಾಡಬಹುದು ಮತ್ತು ಅವುಗಳನ್ನು ಟ್ವೀಟ್‌ಗಳಾಗಿ ಹಂಚಿಕೊಳ್ಳಬಹುದು

ರೆಕಾರ್ಡ್

ಅಲ್ಲದೆ ಹೋಸ್ಟ್‌ಗಳು ಯಾವುದೇ ಸಮಯದಲ್ಲಿ Spaces ರೆಕಾರ್ಡಿಂಗ್ ಅನ್ನು ಡಿಲೀಟ್‌ ಮಾಡುವ ಅವಕಾಶ ಕೂಡ ಇದೆ. ಇನ್ನು ಕೇಳುಗರು ರೆಕಾರ್ಡ್ ಮಾಡಿದ ಸ್ಪೇಸ್‌ಗಳನ್ನು ಪ್ಲೇಬ್ಯಾಕ್ ಮಾಡಲು ಟೈಮ್‌ಲೈನ್‌ನಲ್ಲಿ ಯಾವುದೇ ಸ್ಪೇಸ್‌ಗಳ ಕಾರ್ಡ್‌ನಲ್ಲಿರುವ 'ಪ್ಲೇ ರೆಕಾರ್ಡಿಂಗ್' ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಚಾಟ್‌ ರೆಕಾರ್ಡಿಂಗ್‌ ನಲ್ಲಿ ಯಾವುದೇ ನಿಂದನೀಯ / ದ್ವೇಷಪೂರಿತ ವಿಷಯವನ್ನು ಪರಿಶೀಲಿಸಲು 30-120 ದಿನಗಳ ಅವಧಿಯವರೆಗೆ ಅದರ ಡೇಟಾ ಫೈಲ್ ಅನ್ನು ಉಳಿಸಲಿದೆ.

ಟ್ವಿಟರ್‌

ಇದಲ್ಲದೆ ಇತ್ತೀಚಿಗಷ್ಟೇ ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪೇಸ್‌ನಿಂದ ನೇರವಾಗಿ ಟ್ವೀಟ್ ಮಾಡಲು ಅವಕಾಶ ನೀಡಿದೆ. ಇನ್ನು ಈ ಟ್ವಿಟರ್‌ ಸ್ಪೇಸ್‌ಗಳು ಟ್ವಿಟರ್‌ನಲ್ಲಿ ಲೈವ್ ಆಡಿಯೋ ಚಾಟ್ ಫೀಚರ್ಸ್‌ ಆಗಿದ್ದು, ಕ್ಲಬ್‌ಹೌಸ್‌ಗೆ ಪ್ರತಿಸ್ಪರ್ಧಿಯಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ 600 ಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಯಾರಾದರೂ ವೇದಿಕೆಯಲ್ಲಿ ಆಡಿಯೋ ಟಾಕ್ ಅನ್ನು ಹೋಸ್ಟ್ ಮಾಡಬಹುದು.

ಸ್ಪೇಸಸ್‌

ಇದೊರಂದಿಗೆ ಟ್ವಿಟರ್‌ನ ಹೊಸ 'ಗೆಸ್ಟ್‌ ಮ್ಯಾನೇಜ್‌ ಮೆಂಟ್‌' ಕಂಟ್ರೋಲ್‌ಗಳು ಮತ್ತು ಸ್ಪೇಸಸ್‌ ಒಳಗೊಂಡಂತೆ ಐಒಎಸ್ ಅಪ್ಲಿಕೇಶನ್‌ಗೆ ಹೆಚ್ಚುವರಿ ಫೀಚರ್ಸ್‌ಗಳನ್ನು ಪರಿಚಯಿಸಲಿದೆ. ಈ ಎಲ್ಲಾ ಫೀಚರ್ಸ್‌ಗಳು ಪ್ರಸ್ತುತ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಸ್ಪೇಸ್‌ಗಳನ್ನು ಹೆಚ್ಚು ವಿಶ್ವಾಸಾರ್ಹವಾಗಿಸಲು ಹೊಸ ಅಪ್‌ಡೇಟ್‌ನಲ್ಲಿ ಕೆಲವು ದೋಷಗಳನ್ನು ಸರಿಪಡಿಸಲಿದೆ. ಇದಲ್ಲದೆ ನೀವು ಆಂಡ್ರಾಯ್ಡ್ ಅಥವಾ ಐಒಎಸ್ ಡಿವೈಸ್‌ ಅನ್ನು ಬಳಸಿದರೆ, ಸ್ಪೇಸ್ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸ್ವಯಂಚಾಲಿತವಾಗಿ ಆಡಿಯೋಗೆ ಲಿಂಕ್ ಆಗುವ ಹೊಸ ಸಂಯೋಜಕವನ್ನು ಬಳಸಿಕೊಂಡು ನೀವು ಸ್ಪೇಸ್ ಪುಟದಿಂದ ನೇರವಾಗಿ ಟ್ವೀಟ್ ಮಾಡಲು ಸಾಧ್ಯವಾಗುತ್ತದೆ.

Best Mobiles in India

English summary
Twitter Space conversations can now be recorded and can be shared as tweets.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X