ಸದ್ಯದಲ್ಲೇ ಟ್ವಿಟರ್‌ನಲ್ಲಿ ಲಭ್ಯವಾಗಲಿದೆ ವಾಯ್ಸ್‌ ಚಾಟ್‌ ಫೀಚರ್ಸ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಟ್ವಿಟರ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ ಪರಿಚಯಿಸಿರುವ ಟ್ವಿಟರ್‌ ಇದೀಗ ಕ್ಲಬ್‌ಹೌಸ್‌ನಂತಹ ವಾಯ್ಸ್‌ ಆಧಾರಿತ ಚಾಟ್ ರೂಮ್‌ಗಳಂತೆ ಸ್ಪೇಸಸ್ ಎಂಬ ಹೊಸ ಫೀಚರ್ಸ್‌ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಬಳಕೆದಾರರಿಗೆ ವಾಯ್ಸ್‌ ಆಧಾರಿತ ಚಾಟ್‌ ರೂಮ್‌ಗಳಂತೆ ಸ್ಪೇಸಸ್‌ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಇದು ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್‌ ಆಧಾರಿತ ಸಂಭಾಷಣೆ ನಡೆಸಲು ಬಳಕೆದಾರರಿಗೆ ಅನುಮತಿಸುತ್ತದೆ. ಅಲ್ಲದೆ ಸಂಭಾಷಣೆಯಲ್ಲಿ ಭಾಗವಹಿಸಲು ಬಳಕೆದಾರರು ತಮ್ಮ ಅನುಯಾಯಿಗಳು ಸೇರಬಹುದಾದ ಸ್ಪೇಸ್‌ ಅನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್

ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್‌ ಆಧಾರಿತ ಸಂಭಾಷಣೆಯನ್ನು ನಡೆಸಲು ಹೊಸ ಫೀಚರ್ಸ್‌ ಪರಿಚಯಸಲಿದೆ. ಇದು ಬಳಕೆದಾರರು ವಾಯ್ಸ್‌ ಚಾಟ್‌ ನಡೆಸುವುದಕ್ಕೆ ಅವಕಾಶವನ್ನು ನೀಡಲಿದೆ. ಜೊತೆಗೆ ಸಂಭಾಷಣೆಯಲ್ಲಿ ಭಾಗವಹಿಸಲು ಬಳಕೆದಾರರು ತಮ್ಮ ಅನುಯಾಯಿಗಳು ಸೇರಬಹುದಾದ ‘ಸ್ಪೇಸ್' ಅನ್ನು ರಚಿಸಬಹುದು. ಇದಲ್ಲದೆ ಟ್ವಿಟ್ಟರ್‌ನಲ್ಲಿರುವ ಯಾರಾದರೂ ಸಂಭಾಷಣೆಯನ್ನು ಆಲಿಸಬಹುದು, ಆದರೂ ಯಾರು ಮಾತನಾಡಬೇಕೆಂದು ಸ್ಪೇಸ್‌ನ ಹೋಸ್ಟ್ ಮಾತ್ರ ನಿಯಂತ್ರಿಸಬಹುದು.

ಚಾಟ್

ಇನ್ನು ಸಂಭಾಷಣೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಬಳಕೆದಾರರಿಗೆ ಎಮೋಜಿ ಪ್ರತಿಕ್ರಿಯೆಗಳನ್ನು ಸೇರಿಸಲು ಸ್ಪೇಸಸ್ ಫೀಚರ್ಸ್‌ ಅನುಮತಿಸುತ್ತದೆ. ಅಲ್ಲದೆ ಹೆಚ್ಚಿನ ಪ್ರವೇಶಕ್ಕಾಗಿ ವಾಯ್ಸ್‌ ಆಧಾರಿತ ಚಾಟ್ ಅನ್ನು ನಕಲು ಮಾಡುವ ಸಾಮರ್ಥ್ಯವನ್ನು ಟ್ವಿಟರ್ ಶೀಘ್ರದಲ್ಲೇ ಸೇರಿಸುವ ನಿರೀಕ್ಷೆಯಿದೆ. ಟ್ವಿಟರ್ ಈ ಫೀಚರ್ಸ್‌ನ ಟೀಸರ್ ಅನ್ನು ಸಹ ಈ ಹಿಂದೆ ಬಿಡುಗಡೆ ಮಾಡಿತ್ತು. ಇದು ಅಂಚಿನಲ್ಲಿರುವ ಸಮುದಾಯಗಳಿಗೆ ಆದ್ಯತೆ ನೀಡುವುದಾಗಿ ಹೇಳಿದೆ. ಇದಲ್ಲದೆ ಟ್ವಿಟರ್‌ನ ಸ್ಪೇಸ್‌ಗಳ ಫೀಚರ್ಸ್‌ಗೆ ಕ್ಲಬ್‌ಹೌಸ್ ಸ್ಫೂರ್ತಿಯಾಗಿದೆ.

ಸ್ಪೇಸ್‌

ಸದ್ಯ ಸ್ಪೇಸ್‌ಗಳ ಉಡಾವಣೆಯ ಜೊತೆಗೆ, ಕೈ ಸನ್ನೆಗಳು, ಲೈವ್ ಪ್ರತಿಲೇಖನಗಳು, ವರದಿ ಮಾಡುವುದು ಮತ್ತು ನಿರ್ಬಂಧಿಸುವುದು ಮತ್ತು ಸ್ಪೇಟ್‌ಗಳಲ್ಲಿ ಟ್ವೀಟ್‌ಗಳನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಂತೆ ಪ್ರತಿಕ್ರಿಯೆಗಳಿಗಾಗಿ ಇತರ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಟ್ವಿಟರ್ ಹೇಳಿದೆ.

Best Mobiles in India

English summary
Twitter is a social media platform that tests features before it makes them available to the general public.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X