IPL 2022: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಟ್ವಿಟರ್‌!

|

ಜನಪ್ರಿಯ ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ತನ್ನ ಬಳಕೆದಾರರಿಗೆ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಿದೆ. ಸದ್ಯ ಇದೀಗ ಐಪಿಎಲ್‌ 2022 ಕ್ರಿಕೆಟ್‌ ಪ್ರೇಮಿಗಳಿಗಾಗಿ ತನ್ನ ಎಕ್ಸ್‌ಪ್ಲೋರ್ ಪೇಜ್‌ನಲ್ಲಿ ಕ್ರಿಕೆಟ್ ಟ್ಯಾಬ್ ಅನ್ನು ಪರೀಕ್ಷಿಸುತ್ತಿದೆ. ಇದರಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಸಂಬಂಧಿತ, ವಿಶೇಷ ಮತ್ತು ಟ್ರೆಂಡಿಂಗ್‌ ವಿಚಾರಗಳನ್ನು ತಿಳಿಸಲಿದೆ ಎನ್ನಲಾಗ್ತಿದೆ. ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಅಪ್ಡೇಟ್‌ಗಳನ್ನು ಒಂದೇ ಲ್ಯಾಂಡಿಂಗ್ ಪಾಯಿಂಟ್ ನಲ್ಲಿ ನೀಡಲಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಐಪಿಎಲ್‌ ಕ್ರಿಕೆಟ್‌ ಪ್ರಿಯರಿಗಾಗಿ ಹೊಸ ಟ್ಯಾಬ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಟ್ವಿಟರ್‌ ಆಂಡ್ರಾಯ್ಡ್‌ನಲ್ಲಿ ಕೆಲವು ಟ್ವಿಟರ್‌ ಬಳಕೆದಾರರಿಗೆ ಪ್ರಯೋಗವನ್ನು ಹೊರತರಲಿದೆ. ಇದು ಟ್ವಿಟರ್ ಕ್ರಿಕೆಟ್ ಅಭಿಮಾನಿಗಳಿಗೆ ಕೇಂದ್ರವಾಗಿರುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ಸ್ಕೋರ್, ಕಾಮೆಂಟರಿ ಮತ್ತು ಲೈವ್ ಕ್ರಿಕೆಟ್ ಅಪ್ಡೇಟ್‌ಗಳೊಂದಿಗೆ ತಮ್ಮನ್ನು ನವೀಕರಿಸಿಕೊಳ್ಳಲು ಈ ಸೇವೆಯನ್ನು ಬಳಸಬಹುದಾಗಿದೆ. ಇನ್ನುಳಿದಂತೆ ಟ್ವಿಟರ್‌ ಈ ಹೊಸ ಟ್ಯಾಬ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್

ಟ್ವಿಟರ್ ಕ್ರಿಕೆಟ್‌ ಪ್ರಿಯರಿಗಾಗಿ ಕ್ರಿಕೆಟ್‌ ಟ್ಯಾಬ್‌ ಅನ್ನು ಪರೀಕ್ಷಿಸುತ್ತಿದೆ. ಟ್ವಟಿರ್‌ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಟ್ವಿಟರ್‌ನಲ್ಲಿ ಕನಿಷ್ಠ 75% ಜನರು ಕ್ರಿಕೆಟ್ ಅಭಿಮಾನಿಗಳಾಗಿ ಗುರುತಿಸಿಕೊಂಡಿದ್ದಾರೆ. 58% ಜನರು ಕ್ರೀಡೆಯನ್ನು ಆಡುತ್ತಾರೆ. ಅಲ್ಲದೆ ಜನವರಿ 2021 ರಿಂದ ಜನವರಿ 2022 ರ ನಡುವೆ, ಟ್ವಿಟರ್‌ನಲ್ಲಿ ಸುಮಾರು 4.4 ಮಿಲಿಯನ್ ಭಾರತೀಯರು ಕ್ರಿಕೆಟ್ ಕುರಿತು 96.2 ಮಿಲಿಯನ್ ಟ್ವೀಟ್‌ಗಳನ್ನು ಶೇರ್‌ ಮಾಡಿದ್ದಾರೆ. ಇನ್ನು ಈ ಟ್ಯಾಬ್‌ಗೆ ಪ್ರವೇಶ ಹೊಂದಿರುವ ಜನರು ಏನನ್ನು ವೀಕ್ಷಿಸಬಹುದು ಎಂಬುದು ಇಲ್ಲಿದೆ.

ಕ್ರಿಕೆಟ್

ಈವೆಂಟ್ಸ್‌ ಪೇಜ್‌: ಕ್ರಿಕೆಟ್ ಟ್ಯಾಬ್‌ನ ಮೇಲ್ಭಾಗದಲ್ಲಿರುವ ರಿಸರ್ವ್‌ ಪೇಜ್‌ನಲ್ಲಿ ಇತ್ತೀಚಿನ ಟ್ವೀಟ್‌ಗಳು ಮತ್ತು ಅಪ್ಡೇಟ್‌ಗಳನ್ನು ಅಭಿಮಾನಿಗಳು ಅನುಸರಿಸಲು ಸಾಧ್ಯವಾಗುತ್ತದೆ.

ಲೈವ್ ಸ್ಕೋರ್‌ಕಾರ್ಡ್ಸ್‌: ಇನ್ನು ಕ್ರಿಕೆಟ್ ಟ್ಯಾಬ್‌ನಲ್ಲಿ ಹಾಗೂ ಈವೆಂಟ್ಸ್‌ ಪೇಜ್‌ನಲ್ಲಿ ಗೋಚರಿಸುವ ಲೈವ್ ಸ್ಕೋರ್‌ಕಾರ್ಡ್‌ನೊಂದಿಗೆ ಟ್ವಿಟರ್‌ನಲ್ಲಿ ಪಂದ್ಯದ ಸ್ಕೋರ್‌ಗಳನ್ನು ಫಾಲೋ ಮಾಡುವುದಕ್ಕೆ ಸುಲಭವಾಗಲಿದೆ.

ಇಂಟರಾಕ್ಟಿವ್ ಟೀಮ್ ವಿಜೆಟ್ಸ್‌: ಈ ಟ್ಯಾಬ್‌ನಲ್ಲಿ ಅಭಿಮಾನಿಗಳಿಗೆ ಟಾಪ್‌ ಆಟಗಾರರ ವಿವರ ಮತ್ತು ಟೀಮ್‌ಗಳ ಶ್ರೇಯಾಂಕಗಳ ಟಾಪಿಕ್‌ ವಿಜೆಟ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

ಟಾಪ್ ವೀಡಿಯೊ ಕಂಟೆಂಟ್‌: ಇದಲ್ಲದೆ ಮ್ಯಾಚ್‌ ಟೈಂ, ಮುಖ್ಯಾಂಶಗಳು ಮತ್ತು ಆಫ್-ಫೀಲ್ಡ್ ಕ್ರಿಯೆಯನ್ನು ಒಳಗೊಂಡಂತೆ ಕಸ್ಟಮೈಸ್ ಮಾಡಿದ ವೀಡಿಯೊ ವಿಷಯವನ್ನು ತಿಳಿಸಲಿದೆ.

ವಿಷಯ

ಟಾಪಿಕ್‌ ಟ್ವೀಟ್ಸ್‌: ವಿಷಯ-ಸಂಬಂಧಿತ ಟ್ವೀಟ್‌ಗಳನ್ನು ತಲುಪಿಸಲು ಟ್ವಿಟರ್‌ ಕಂಟೆಂಟ್‌ ಗಳು ಮೆಷಿನ್‌ ಲರ್ನಿಂಗ್‌ ಅನ್ನು ಬಳಸುತ್ತವೆ. ಇದರಲ್ಲಿ ಅಭಿಮಾನಿಗಳು ಸಂಭಾಷಣೆಗಳನ್ನು ಹೆಚ್ಚು ನಿಕಟವಾಗಿ ಅನುಸರಿಸಲು ಐಪಿಎಲ್ ಕಂಟೆಂಟ್‌ ಕ್ರಿಕೆಟ್ ಟ್ಯಾಬ್ ಅಡಿಯಲ್ಲಿ ಲಭ್ಯವಾಗಲಿದೆ.

ಟ್ವಿಟರ್‌ ಲಿಸ್ಟ್‌: ಅಭಿಮಾನಿಗಳು ತಮ್ಮ ನೆಚ್ಚಿನ ಟೀಂ ಮತ್ತು ಪ್ಲೇಯರ್ಸ್‌ಗೆ ಮೀಸಲಾದ ಟ್ವಿಟರ್‌ ಲಿಸ್ಟ್‌ಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ, ಅಭಿಮಾನಿಗಳು ಪಂದ್ಯದ ಸಮಯದಲ್ಲಿ ಪ್ರಮುಖ ಕ್ಷಣಗಳ ಸುತ್ತ ಪುಶ್ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಬಹುದಾಗಿದೆ. ಜೊತೆಗೆ ಅಭಿಮಾನಿಗಳು ಇಂಗ್ಲಿಷ್ ಮತ್ತು ಹಿಂದಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಪಂಜಾಬಿ, ತಮಿಳು, ತೆಲುಗು ಸೇರಿದಂತೆ ಏಳು ಭಾರತೀಯ ಭಾಷೆಗಳಲ್ಲಿ ಕಸ್ಟಮ್ ಟೀಮ್ ಎಮೋಜಿಗಳನ್ನು ಸಕ್ರಿಯಗೊಳಿಸಬಹುದು ಎಂದು ಟ್ವಿಟರ್ ಹೇಳಿದೆ.

Best Mobiles in India

English summary
Twitter testing a Cricket Tab on its Explore page

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X