ಡೌನ್‌ವೋಟ್‌ ಫೀಚರ್ಸ್‌ ಅನ್ನು ಜಾಗತಿಕವಾಗಿ ಪರಿಚಯಿಸಲು ಮುಂದಾದ ಟ್ವಿಟರ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ವಿಟರ್‌ ಕೂಡ ಒಂದಾಗಿದೆ. ಜಾಗತಿಕವಾಗಿ ಏನೇ ನಡೆದರೂ ಕೂಡ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಲಿದೆ. ವಿಶ್ವದ ಪ್ರಮಖ ನಾಯಕರು ಕೂಡ ಇಂದು ಟ್ವಿಟರ್‌ನಲ್ಲಿ ತಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಟ್ವಿಟರ್‌ ಕೂಡ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಕಳೆದ ವರ್ಷ ಪರಿಚಯಿಸಿದ್ದ ಹೊಸ ಡೌನ್‌ವೋಟ್ ರಿಪ್ಲೇ ಫೀಚರ್‌ ಅನ್ನು ಅಪ್ಲಿಕೇಶನ್ ಫೀಚರ್ಸ್‌ ಮೂಲಕ ಜಾಗತಿಕವಾಗಿ ಪರಿಚಯಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಡೌನ್‌ವೋಟ್‌ ರಿಪ್ಲೇ ಫೀಚರ್ಸ್‌ ಅನ್ನು ಜಾಗತಿಕವಾಗಿ ಪರಿಚಯಿಸಿದೆ. ಈ ಫೀಚರ್ಸ್‌ ನಿಂದಾಗಿ ಬಳಕೆದಾರರು ಟ್ವೀಟ್‌ಗಳಲ್ಲಿ ರಿಪ್ಲೇ ಟ್ವೀಟ್‌ಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ ಈ ಫೀಚರ್ಸ್‌ ಟ್ವಿಟರ್ ವೆಬ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ iOS ಮತ್ತು ಆಂಡ್ರಾಯ್ಡ್‌ ಬಳಕೆದಾರರು ಪಡೆಯಲು ಸೆಟ್‌ ಮಾಡಲಾಗಿದೆ. ಇನ್ನು ರಿಪ್ಲೇ ಮೇಲಿನ ಡೌನ್‌ವೋಟ್‌ಗಳು ಹೈಡ್‌ ಆಗಲಿವೆ. ಹಾಗಾದ್ರೆ ಡೌನ್‌ವೋಟ್‌ ರಿಪ್ಲೇ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೀಚರ್ಸ್‌

ಡೌನ್‌ವೋಟ್‌ ರಿಪ್ಲೇ ಫೀಚರ್ಸ್‌ ನಿಮ್ಮ ಟ್ವಿಟ್‌ಗೆ ಬರುವ ರಿಪ್ಲೇ ಟ್ವಿಟ್‌ಗಳನ್ನು ಕಡಿಮೆ ಮಾಡಲಿದೆ. ಇದರಿಂದ ರಿಪ್ಲೇಗಳು ಹೈಡ್‌ ಆಗಲಿದ್ದು, ಸಾರ್ವಜನಿಕವಾಗಿ ಗೋಚರಿಸುವುದಿಲ್ಲ ಎಂದು ಟ್ವಿಟರ್‌ ಹೇಳಿಕೊಂಡಿದೆ. ಬದಲಿಗೆ, ಹೆಚ್ಚು ಸೂಕ್ತವಾದ ಕಾಮೆಂಟ್‌ಗಳನ್ನು ಉತ್ತಮವಾಗಿ ಗುರುತಿಸಲು ಸಹಾಯ ಮಾಡಲಿದೆ. ಹೀಗಾಗಿ ಬೆಸ್ಟ್‌ ಎನಿಸುವ ಕಾಮೆಂಟ್‌ಗಳು ಹೆಚ್ಚು ಗೋಚರಿಸಲಿದೆ. ರಿಪ್ಲೇ ಮೇಲಿನ ಅಪ್‌ವೋಟ್‌ಗಳು ಲೈಕ್ಸ್‌ಗಳ ಮಾದರಿಯಲ್ಲಿ ಕಾಣಲಿದೆ.

ಡಿವೈಸ್‌ನಲ್ಲಿ

ಇನ್ನು iOS ಡಿವೈಸ್‌ನಲ್ಲಿ ಕೆಲವರು ರಿಪ್ಲೇಗಳ ಮೇಲೆ ವೋಟ್‌ ಮಾಡುವುದಕ್ಕೂ ಕೂಡ ವಿವಿಧ ಆಯ್ಕೆಗಳನ್ನು ಕಾಣಬಹುದು. ಇದರಿಂದ ನಿಮಗೆ ಬರುವ ಸೂಕ್ತವಾದ ರಿಪ್ಲೇಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ಜೊತೆಗೆ ಅಪ್ರಸ್ತುತ ಎನಿಸುವ ಟ್ವಿಟ್‌ ರಿಪ್ಲೇಗಳನ್ನು ಸಹ ಗುರುತಿಸಬಹುದಾಗಿದೆ. ಈಗಾಗಲೇ ಹೆಚ್ಚಿನ ಬಳಕೆದಾರರು ಡೌನ್ ಬಾಣವನ್ನು ಕ್ಲಿಕ್ ಮಾಡಿದ್ದಾರೆ ಎಂದು ಟ್ವಿಟರ್ ನಂತರದ ಟ್ವೀಟ್‌ನಲ್ಲಿ ಹೇಳಿದೆ. ಈ ಪ್ರಯೋಗವು ಜನರು ನೋಡಲು ಬಯಸದ ವಿಷಯವನ್ನು ಫ್ಲ್ಯಾಗ್ ಮಾಡಲು ಡೌನ್‌ವೋಟಿಂಗ್ ಅನ್ನು ಹೆಚ್ಚಾಗಿ ಬಳಸುವ ಮಾರ್ಗವಾಗಿದೆ ಎಂದು ಬಹಿರಂಗಪಡಿಸಿದೆ.

ಟ್ವಿಟರ್‌

ಇದರೊಂದಿಗೆ ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸ್ತುತ ಇರುವ ಅಕ್ಷರ ಮಿತಿಯನ್ನು ಬದಲಾಯಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಟ್ವಿಟರ್ ವಿಂಡೋದಲ್ಲಿ ಸ್ಪೇಸ್‌ಗಳು ಅಥವಾ ಎಕ್ಸ್‌ಪ್ಲೋರ್‌ನಂತೆಯೇ ತನ್ನದೇ ಆದ ಮೀಸಲಾದ ಟ್ಯಾಬ್ ಅನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಫೀಚರ್ಸ್‌ ಪ್ರಸ್ತುತ ಬಳಕೆದಾರರಿಗೆ ಲಭ್ಯವಿಲ್ಲ. ಇದು ಅಭಿವೃದ್ಧಿಯ ಹಂತದಲ್ಲಿರಬಹುದು ಎಂದು ಊಹಿಸಲಾಗಿದೆ. ಅಲ್ಲದೆ ಇದನ್ನು ಇನ್ನು ಕೂಡ ಸ್ಥಿರ ಆವೃತ್ತಿಯಲ್ಲಿ ಬಿಡುಗಡೆ ಮಾಡದಿರುವ ಸಾಧ್ಯತೆಯಿದೆ. ಸದ್ಯ ನೀವು 280 ಅಕ್ಷರಗಳ ಮಿತಿಯನ್ನು ದಾಟಬೇಕಾದರೆ ಬಳಕೆದಾರರು ಥ್ರೆಡ್ ಅನ್ನು ಕ್ರಿಯೆಟ್‌ ಮಾಡಬಹುದು. ಇದರ ಮೂಲಕ ಮಲ್ಟಿ ಟ್ವೀಟ್‌ಗಳನ್ನು ಸರಣಿಯಲ್ಲಿ ಸೇರಿಸುವ ಅಗತ್ಯವಿದೆ.

ಟ್ವಿಟರ್

ಇದಲ್ಲದೆ ಟ್ವಿಟರ್ ಸದ್ಯದಲ್ಲೇ ಹೊಸ ಫ್ಲಾಕ್‌ ಫೀಚರ್ಸ್‌ ಪರಿಚಯಿಸಲಿದೆ. ಟ್ವಿಟರ್‌ ನೀಡಿರುವ ಮಾಹಿತಿ ಪ್ರಕಾರ ಈ ಫೀಚರ್ಸ್‌ ಮೂಲಕ ನೀವು 150 ಸದಸ್ಯರನ್ನು ಸೇರಿಸಬಹುದು ಎಂದು ವಿವರಿಸಲಾಗಿದೆ. ಈ ಫೀಚರ್ಸ್‌ ಬಳಸುವ ಬಳಕೆದಾರರು ಮಾತ್ರ ನಿಮ್ಮ ಫ್ಲಾಕ್‌ಗೆ ಕಳುಹಿಸಲಾದ ಟ್ವೀಟ್‌ಗಳನ್ನು ವೀಕ್ಷಿಸಬಹುದು ಅಥವಾ ಪ್ರತ್ಯುತ್ತರಿಸಬಹುದು. ಇದಲ್ಲದೆ ನಿಮ್ಮ ಗುಂಪಿನಲ್ಲಿ ಇನ್ನು ಮುಂದೆ ಯಾರಾದರೂ ಬೇಡವೆಂದು ನೀವು ನಿರ್ಧರಿಸಿದರೆ, ಯಾವುದೇ ಸಮಯದಲ್ಲಿ ಅವರನ್ನು ನೀವು ತೆಗೆದುಹಾಕಬಹುದು. ಅಲ್ಲದೆ ನೀವು ಅವರನ್ನು ಗ್ರೂಪ್‌ನಿಂದ ತೆಗೆದು ಹಾಕಿದರೆ ಅವರಿಗೆ ಯಾವುದೇ ನೋಟಿಫಿಕೇಶನ್ ಪಡೆಯಲು ಸಾದ್ಯವಾಗುವುದಿಲ್ಲ.

Best Mobiles in India

English summary
Twitter's downvote replies feature is now globally available on web.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X