ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಲು ಟ್ವಿಟರ್‌ನಿಂದ ಸಿದ್ಧತೆ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಟ್ವಿಟರ್‌ ತನ್ನ ಜಾಹೀರಾತು ವ್ಯವಹಾರ ಕುಸಿಯುತ್ತಿದ್ದಂತೆ ಪಾವತಿಸಿದ ಚಂದಾದಾರಿಕೆ ಮಾದರಿಯನ್ನು ಪರಿಚಯಿಸುವುದಕ್ಕೆ ಸಿದ್ದತೆ ನಡೆಸುತ್ತಿದೆ ಎಂದು ಹೇಳಲಾಗ್ತಿದೆ. ಸದ್ಯ ಟ್ವಿಟರ್ ತನ್ನ ಪಾವತಿಸಿದ ಪ್ಲಾಟ್‌ಫಾರ್ಮ್‌ಗಾಗಿ 'Undo send button' ಬಟನ್, different font colours, badges, ಸೇರಿದಂತೆ ಇನ್ನು ಹಲವು ಹೊಸ ಮಾದರಿಯ ಫೀಚರ್ಸ್‌ ಗ್ರೂಪ್‌ಅನ್ನು ಪರಿಗಣಿಸುತ್ತಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಫೀಚರ್ಸ್‌ಗಳು ಟ್ವಿಟರ್‌ ಹೊಸ ಪಾವತಿಸಿದ ಮಾದರಿಗಾಗಿ ಬಳಕೆದಾರರಿಗೆ ಟ್ವಿಟರ್‌ನ ಸಮೀಕ್ಷೆಯ ಒಂದು ಭಾಗವಾಗಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಜಾಹೀರಾತು ವ್ಯವಹಾರ ಕುಸಿಯುತ್ತಿದ್ದಂತೆ ತನ್ನ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಸದ್ಯ ಟ್ವಿಟರ್ ಬಳಕೆದಾರರಿಗೆ ಈ ಮಾದರಿಯ ಫೀಚರ್ಸ್‌ಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಇನ್ನು ಸಮೀಕ್ಷೆಗೆ ಪ್ರವೇಶವನ್ನು ಪಡೆಯುವ ಬಳಕೆದಾರರು, ಮೊದಲು ಪ್ರತಿ ಫೀಚರ್ಸ್‌ಗಳಿಗೂ ಕನಿಷ್ಠ ಅಥವಾ ಪ್ರಮುಖವಾದದನ್ನು ಆರಿಸಬೇಕಾಗುತ್ತದೆ. ಸದ್ಯ ಇದರ ಆಧಾರದ ಮೇಲೆ, ಟ್ವಿಟರ್‌ನ ಪಾವತಿಸಿದ ಪ್ಲಾಟ್‌ಫಾರ್ಮ್‌ನೊಂದಿಗೆ ಬರಬಹುದಾದ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Undo send button

Undo send button

ಸದ್ಯ ಟ್ವಿಟರ್ Undo send button ಅನ್ನು ಪಡೆಯದಿರಬಹುದು, ಆದರೆ ಇದು ಟ್ವೀಟ್ ಅನ್ನು ಮರುಪಡೆಯಲು ಅಥವಾ ಹಿಂಪಡೆಯಲು ಬಳಕೆದಾರರಿಗೆ 30 ಸೆಕೆಂಡುಗಳ ವಿಂಡೋವನ್ನು ನೀಡುತ್ತದೆ.

Custom colours

Custom colours

ಇನ್ನು Custom colours ಫೀಚರ್ಸ್‌ ಬಳಕೆದಾರರು ಟ್ವಿಟರ್‌ನ ಫಾಂಟ್‌ಗಳು ಮತ್ತು ಥೀಮ್ ಬಣ್ಣಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ಇದು ಬಳಕೆದಾರರು ಆಯ್ಕೆ ಮಾಡಿದ ಬಣ್ಣದಲ್ಲಿ ಹಿನ್ನೆಲೆ ಬಣ್ಣ, ಉಲ್ಲೇಖಗಳು, ಹ್ಯಾಶ್‌ಟ್ಯಾಗ್‌ಗಳು ಮತ್ತು ಐಕಾನ್ ಅನ್ನು ಬದಲಾಯಿಸುತ್ತದೆ.

Videos

Videos

ಟ್ವಿಟರ್‌ನ ಪಾವತಿಸಿದ ಸದಸ್ಯತ್ವವು ಬಳಕೆದಾರರಿಗೆ ಈಗ ಅನುಮತಿಸಲಾಗಿರುವುದಕ್ಕಿಂತ 5x ಉದ್ದದ ವೀಡಿಯೊಗಳನ್ನು ಪ್ರಕಟಿಸಲು ಅನುಮತಿಸುತ್ತದೆ. ರೆಸಲ್ಯೂಶನ್ 8192 x 8192 ಪಿಕ್ಸೆಲ್‌ಗಳಿಗೂ ಹೆಚ್ಚಾಗುತ್ತದೆ.

Badges

Badges

ಬ್ಯಾಡ್ಜ್‌ಗಳು ಬಳಕೆದಾರರು ಹೊಂದಿರುವ ಅಥವಾ ಕೆಲಸ ಮಾಡುವ ವ್ಯವಹಾರಗಳಿಗೆ ಲಿಂಕ್ ಮಾಡುತ್ತದೆ. ಉದಾಹರಣೆಗೆ, ಪತ್ರಕರ್ತ ಅವರು ಬರೆಯುವ ಪತ್ರಿಕೆಯ ಬ್ಯಾಡ್ಜ್ ಅನ್ನು ಸೇರಿಸಬಹುದು. ಬಳಕೆದಾರರು ತಮ್ಮ ಪ್ರೊಫೈಲ್‌ಗೆ ಒಂದಕ್ಕಿಂತ ಹೆಚ್ಚು ಬ್ಯಾಡ್ಜ್‌ಗಳನ್ನು ಸೇರಿಸಬಹುದಾಗಿದೆ.

Auto responses

Auto responses

ಹೆಸರೇ ಸೂಚಿಸುವಂತೆ, ಈ ಫೀಚರ್ಸ್‌ ಆಟೋ ರಿಪ್ಲೇಗಳನ್ನು ಹೊಂದಿಸುತ್ತದೆ, ಅದನ್ನು ಪ್ರತ್ಯುತ್ತರಗಳಲ್ಲಿ ಕಳುಹಿಸಬಹುದಾಗಿದೆ. ಅಲ್ಲದೆ ಟ್ವಿಟರ್‌ನ ಪಾವತಿಸಿದ ಪ್ಲಾಟ್‌ಫಾರ್ಮ್‌ನಲ್ಲಿ, ಬಳಕೆದಾರರು ಸ್ವಯಂ ಪ್ರತಿಕ್ರಿಯೆಗಳ ಮೆನುವನ್ನು ಬರೆಯಲು ಮತ್ತು ಸೆಟ್‌ ಮಾಡಲು ಸಾಧ್ಯವಾಗುತ್ತದೆ.

Advanced analytics

Advanced analytics

ಇನ್ನು ಪಾವತಿಸಿದ ಪ್ಲಾಟ್‌ಫಾರ್ಮ್‌ನಲ್ಲಿರುವ ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಲು ಉತ್ತಮ ಸಮಯ ಮತ್ತು ಉತ್ತಮ ಉದ್ದ, ಪ್ರೇಕ್ಷಕರ ಜನಸಂಖ್ಯಾಶಾಸ್ತ್ರ ಮತ್ತು ಹೆಚ್ಚಿನವುಗಳಂತಹ ಸುಧಾರಿತ ವಿಶ್ಲೇಷಣೆಗಳಿಗೆ ಪ್ರವೇಶವನ್ನು ಹೊಂದಿಸಲಾಗುತ್ತದೆ. ಇವೆಲ್ಲವೂ ಟ್ವಿಟರ್‌ನ ಪಾವತಿಸಿದ ಚಂದಾದಾರಿಕೆ ಮಾದರಿಯೊಂದಿಗೆ ಬಳಕೆದಾರರಿಗೆ ಪರಿಚಯಿಸಬಹುದಾದ ಫೀಚರ್ಸ್‌ಗಳ ಮಾಹಿತಿ ಆಗಿದ್ದು, ಇದು ಪಾವತಿಸಿದ ಚಂದಾದಾರಿಕೆ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದಾಗ ಪರಿಚಯಿಸಲಾಗುವ ಫೀಚರ್ಸ್ಗಳಾಗಿದ್ದು, ಸದ್ಯ ಇದರ ಬಗ್ಗೆ ಟ್ವಿಟರ್ ಇನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Most Read Articles
Best Mobiles in India

English summary
More features expected on Twitter's paid platform include custom colours, advanced analytics and auto responses.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X