ಕೊರೊನಾ ಸೊಂಕಿತರಿಗೆ ನೆರವಾಗಲು ಟ್ವಿಟರ್‌ನಿಂದ ಹೊಸ ಫೀಚರ್ಸ್‌ ಬಿಡುಗಡೆ!

|

ಪ್ರಸ್ತುತ ಭಾರತದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಾಕವಾಗಿ ಹರಡುತ್ತಿದೆ. ಇದೇ ಸಂದರ್ಭದಲ್ಲಿ ಜನರಿಗೆ ಸರ್ಕಾರದ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳನ್ನು ತಿಳಿಸುವಲ್ಲಿ ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯವಾಗಿವೆ. ಅಲ್ಲದೆ ಹೆಚ್ಚಿನ ಜನರು ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್‌ಗಳು ಮುಂತಾದ ವೈದ್ಯಕೀಯ ಸಂಪನ್ಮೂಲಗಳನ್ನು ಹುಡುಕಲು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ಗಳನ್ನು ಅವಲಂಬಿಸಿದ್ದಾರೆ. ಸೊಶೀಯಲ್‌ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದಾರೆ.

ಕೊರೊನಾ

ಹೌದು, ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಸನ್ನಿವೇಶದಲ್ಲಿ ದೇಶದಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಕೋವಿಡ್‌ ರೋಗಿಗಳು ಪರದಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ವೈಧ್ಯಕೀಯ ಅಗತ್ಯ ಮಾಹಿತಿಯನ್ನು ನೀಡುವಲ್ಲಿ ಸೊಶೀಯಲ್‌ ಮಿಡಿಯಾ ಅಪ್ಲಿಕೇಶನ್‌ಗಳು ಸಹಾಯಕವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ತನ್ನ ಸರ್ಚ್ ಅಪ್ಡೇಟ್‌ ಫೀಚರ್ಸ್‌ ಅನ್ನು ಅನಾವರಣಗೊಳಿಸಿದೆ. ಇದು ಜನರಿಗೆ ಇತ್ತೀಚಿನ ಮಾಹಿತಿ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿಸಲು ಸಹಾಯವಾಗಿದೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್‌

ಕೊರೊನಾ ಎರಡನೇ ಅಲೆಯಲ್ಲಿ ಕೋವಿಡ್‌ ರೋಗಿಗಳಿಗೆ ಆಸ್ಪತ್ರೆ ಬೆಡ್‌ ಸಮಸ್ಯೆ ಶುರುವಾಗಿದೆ. ಆದರೆ ಟ್ವಿಟರ್‌ ಯಾವ ಆಸ್ಪತ್ರೆಯಲ್ಲಿ ಬೆಡ್‌ ಖಾಲಿಯಿದೆ. ಎಲ್ಲಿ ಆಕ್ಸಿಜನ್‌ ಸಿಲಿಂಡರ್‌ ಲಭ್ಯವಿದೆ. ಎಲ್ಲಿ ವೈದ್ಯಕೀಯ ಸೇವೆ ಸಿಗುತ್ತಿದೆ ಎಂಬೆಲ್ಲಾ ಮಾಹಿತಿಯನ್ನು ತಿಳಿಸಿಕೊಡುತ್ತಿದೆ. ಇದೇ ಕಾರಣಕ್ಕೆ ಅಗತ್ಯ ಮಾಹಿತಿಯನ್ನು ಜನರಿಗೆ ನೀಡುವುದಕ್ಕೆ ಟ್ವೀಟರ್‌ ಮುಂದಾಗಿದೆ. ಈಗ ಪರಿಚಯಿಸಿರುವ ಆಪ್ಡೇಟ್‌ ಸರ್ಚ್‌ ಫೀಚರ್ಸ್‌ ಜನರಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಅವಲಂಬಿಸಿ ಟ್ವೀಟ್‌ಗಳನ್ನು ಫಿಲ್ಟರ್ ಮಾಡಲು ಅನುಮತಿಸುತ್ತದೆ. ಇದನ್ನು ಬಳಸಿಕೊಂಡು ನಿರ್ದಿಷ್ಟ ಹ್ಯಾಶ್‌ಟ್ಯಾಗ್, ಸಮಯದ ಅವಧಿ ಅಥವಾ ನಿರ್ದಿಷ್ಟ ಖಾತೆಯಿಂದ ಟ್ವೀಟ್‌ಗಳಂತಹ ಕ್ಷೇತ್ರಗಳಿಗಾಗಿ ಬಳಕೆದಾರರು ಫಿಲ್ಟರ್ ಮಾಡಬಹುದು.

ಟ್ವಿಟರ್

ಇದಲ್ಲದೆ, ಬಳಕೆದಾರರು ತಮ್ಮ ಸ್ಥಳಕ್ಕೆ ಹತ್ತಿರವಿರುವ ಟ್ವೀಟ್‌ಗಳನ್ನು ನೋಡಲು ಬಯಸಿದರೆ ಟ್ವಿಟರ್ ಸಹ ಒಂದು ಆಯ್ಕೆಯನ್ನು ನೀಡುತ್ತದೆ. ಹಾಗೆ ಮಾಡಲು, ಸಂಬಂಧಿತ ಹ್ಯಾಶ್‌ಟ್ಯಾಗ್ ಅನ್ನು ಟೈಪ್ ಮಾಡಿ ಸರ್ಚ್‌ ಬಾರ್‌ನಲ್ಲಿ ಮತ್ತು "ಸ್ಥಳ" ಆಯ್ಕೆಯ ಅಡಿಯಲ್ಲಿ ಇರಿಸಲಾಗಿರುವ "ನಿಮ್ಮ ಹತ್ತಿರ" ಆಯ್ಕೆಯನ್ನು ಆನ್ ಮಾಡಲು ಮೇಲಿನ ಬಲಭಾಗದಲ್ಲಿರುವ ಟಾಗಲ್ ಬಟನ್ ಟ್ಯಾಪ್ ಮಾಡಿ. ಅಲ್ಲದೆ ಈ ಫೀಚರ್ಸ್‌ ಕಾರ್ಯನಿರ್ವಹಿಸಲು ಸ್ಥಳ ಸೆಟ್ಟಿಂಗ್‌ಗಳನ್ನು ಆನ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಟ್ವೀಟ್‌ಗಳು

ತೀರಾ ಇತ್ತೀಚಿನ ಟ್ವೀಟ್‌ಗಳು ತಮ್ಮ ಟೈಮ್‌ಲೈನ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತವೆಯೆ ಎಂದು ಖಚಿತಪಡಿಸಿಕೊಳ್ಳಲು, ಬಳಕೆದಾರರು ತಮ್ಮ ಹೋಮ್‌ನ ಟೈಮ್‌ಲೈನ್‌ನ ಮೇಲಿನ ಬಲಭಾಗದಲ್ಲಿರುವ "ಬ್ರೈಟ್‌ನೆಸ್‌" ಗುಂಡಿಯನ್ನು ಟ್ಯಾಪ್ ಮಾಡಬೇಕಾಗುತ್ತದೆ. ಬಳಕೆದಾರರ ಟ್ವಿಟರ್ ಟೈಮ್‌ಲೈನ್‌ಗಳ ಮೇಲೆ ಇತ್ತೀಚಿನ ಟ್ವೀಟ್‌ಗಳು ಗೋಚರಿಸುತ್ತವೆ ಎಂದು ಇದು ಖಚಿತಪಡಿಸುತ್ತದೆ. ಈ ಮೂಲಕ ನಿಮಗೆ ಬೇಕಾದ ಅಗತ್ಯ ಮಾಹಿತಿ ಟ್ವೀಟರ್‌ನಲ್ಲಿ ಸಿಗಲಿದೆ. ಇದರಿಂದ ನೀವು ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪಲಿದೆ. ಬದಲಿಗೆ ಎಲ್ಲಿ ಬೆಡ್‌ ಖಾಲಿ ಇದೆಯೋ ಅಲ್ಲಿಗೆ ನರವಾಗಿ ಹೋಗುವುದಕ್ಕೆ ಅವಕಾಶ ಸಿಗಲಿದೆ.

ಮೀಡಿಯಾ

ಸದ್ಯ ಭಾರತದಲ್ಲಿ COVID-19 ಎಸೆನ್ಷಿಯಲ್‌ಗಳಾದ ರೆಮ್‌ಡೆಸಿವಿರ್ ಚುಚ್ಚುಮದ್ದು, ಆರ್‌ಟಿ-ಪಿಸಿಆರ್ ಪರೀಕ್ಷೆಗಳು, ಆಕ್ಸಿಜನ್‌ ಸಿಲಿಂಡರ್‌ಗಳು ಮತ್ತು ಆಸ್ಪತ್ರೆಯ ಬೆಡ್‌ ಲಭ್ಯವಿರುವ ಮಾಹಿತಿ ಬಗ್ಗೆ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ಸರ್ಚ್‌ ಮಾಡಿರುವುದು ಇತ್ತೀಚಿನ ದಿನಗಳಲ್ಲಿ ನಡೆದಿದೆ. ಗೂಗಲ್ ಮತ್ತು ಇತರೆ ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಪಡೆದ ಡೇಟಾದಲ್ಲಿ ಇದು ಬಹಿರಂಗವಾಗಿದೆ.

Most Read Articles
Best Mobiles in India

English summary
Twitter's Advanced Search feature essentially lets people filter Tweets.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X