ಸದ್ಯದಲ್ಲೇ ಬರಲಿದೆ ಟ್ವೀಟ್‌ ಎಡಿಟ್‌ ಫೀಚರ್ಸ್‌! ಇದರ ಕಾರ್ಯನಿರ್ವಹಣೆ ಹೇಗೆ?

|

ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಜಾಗತಿಕವಾಗಿ ಯಾವುದೇ ವಿಚಾರವಾದರೂ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕೆ ಟ್ವಿಟರ್‌ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಬಹು ನಿರೀಕ್ಷಿತ ಟ್ವೀಟ್‌ ಎಡಿಟ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ ಇನ್ನು ಕೂಡ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಟ್ವಿಟರ್ ಬ್ಲೂ ಚಂದಾದಾರರಿಗೆ ಪರೀಕ್ಷೆಯನ್ನು ವಿಸ್ತರಿಸಲಾಗುವುದು ಎಂದು ಟ್ವಿಟರ್ ಹೇಳಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಟ್ವೀಟ್‌ ಎಡಿಟ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು ಶೀಘ್ರದಲ್ಲೇ ಟ್ವಿಟರ್‌ ಬ್ಲೂ ಚಂದಾದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಇನ್ನು ಟ್ವಿಟರ್‌ ಬ್ಲೂ ಎನ್ನುವುದು ಆಯ್ದ ದೇಶಗಳಲ್ಲಿ ಲಭ್ಯವಿರುವ ಪಾವತಿಸಿದ ಚಂದಾದಾರಿಕೆ ಸೇವೆಯಾಗಿದೆ. ಟ್ವಿಟರ್‌ ಬ್ಲೂ ನಲ್ಲಿ ಜನರು 'ಎಡಿಟ್ ಟ್ವೀಟ್' ಅನ್ನು ಹೇಗೆ ಬಳಸುತ್ತಾರೆ ಎಂಬುದರ ಆಧಾರದ ಮೇಲೆ ಈ ಫೀಚರ್ಸ್‌ ಅನ್ನು ಎಲ್ಲಾ ಬಳಕೆದಾರರಿಗೂ ವಿಸ್ತರಿಸುವ ಪ್ರಯತ್ನವನ್ನು ಟ್ವಿಟರ್‌ ಮಾಡಲಿದೆ ಎನ್ನಲಾಗಿದೆ. ಹಾಗಾದ್ರೆ ಟ್ವಿಟರ್‌ನ ಟ್ವೀಟ್‌ ಎಡಿಟ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್‌

ಟ್ವಿಟರ್‌ ಟ್ವೀಟ್‌ ಎಡಿಟ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ನಲ್ಲಿ ಕಂಡುಬರಬಹುದಾದ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸುವುದಕ್ಕಾಗಿ ಈ ಫೀಚರ್ಸ್‌ ಪರಿಚಯಿಸುವಲ್ಲಿ ವಿಳಂಬವಾಗಿದೆ ಎಂದು ಟ್ವಿಟರ್‌ ಕಂಪೆನಿ ಹೇಳಿಕೊಂಡಿದೆ. ಫೀಚರ್ಸ್‌ ಜನರಿಗೆ ವ್ಯಾಪಕವಾಗಿ ಲಭ್ಯವಾಗುವ ಮೊದಲು ಅದನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬುದರ ಸಂಪೂರ್ಣ ಗ್ರಹಿಕೆಯನ್ನು ಪಡೆಯುವುದಕ್ಕೆ ಟ್ವಿಟರ್‌ ಮುಂದಾಗಿದೆ. ಟ್ವಟರ್‌ ಸೊಶೀಯಲ್‌ ಮೀಡಿಯಾವಾಗಿರುವುದರಿಂದ ಎಡಿಟ್‌ ಟ್ವೀಟ್‌ ಆಯ್ಕೆಯಿಂದ ಬೇರೆ ಯಾರಿಗೂ ಕೂಡ ತೊಂದರೆಯಾಗಬಾರದು ಎನ್ನುವ ಚಿಂತೆಯಲ್ಲಿ ಟ್ವಿಟರ್‌ ಪ್ಲಾನ್‌ ಮಾಡಿದೆ ಎನ್ನಲಾಗಿದೆ.

ಟ್ವೀಟ್ ಎಡಿಟ್ ಹೇಗೆ ಕಾರ್ಯನಿರ್ವಹಿಸಲಿದೆ?

ಟ್ವೀಟ್ ಎಡಿಟ್ ಹೇಗೆ ಕಾರ್ಯನಿರ್ವಹಿಸಲಿದೆ?

'ಟ್ವೀಟ್ ಎಡಿಟ್‌' ಫೀಚರ್ಸ್‌ ಪ್ರವೇಶವನ್ನು ಹೊಂದಿರುವ ಬಳಕೆದಾರರು ಟ್ವೀಟ್‌ ಮಾಡಿದ 30 ನಿಮಿಷಗಳ ನಂತರ ಟ್ವೀಟ್‌ ಅನ್ನು ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ನೀವು ಟ್ವೀಟ್‌ ಮಾಡಿದ ನಂತರವೂ ಟ್ವೀಟ್‌ನಲ್ಲಿ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಲಿದೆ. ಇನ್ನು ಈ 30 ನಿಮಿಷದ ಸಮಯದ ಮಿತಿಯಲ್ಲಿ ಟ್ವೀಟ್‌ಗೆ ಹಲವು ಎಡಿಟ್‌ಗಳನ್ನು ಮಾಡುವುದಕ್ಕೆ ಅವಕಾಶ ಸಿಗಲಿದೆ ಎಂದು ಟ್ವಿಟರ್‌ ಹೇಳಿಕೊಂಡಿದೆ.

ಟ್ವೀಟ್‌

ಆದರೆ ನೀವು ಟ್ವೀಟ್‌ ಅನ್ನು ಎಡಿಟ್‌ ಮಾಡಿದರೆ ಓದುಗರಿಗೆ ನೀವು ಎಡಿಟ್‌ ಮಾಡಿರುವುದು ತಿಳಿಯಲಿದೆ. ಎಡಿಟ್‌ ಟ್ವೀಟ್‌ಗಳು ಐಕಾನ್, ಟೈಮ್‌ಸ್ಟ್ಯಾಂಪ್ ಮತ್ತು ಲೇಬಲ್‌ನೊಂದಿಗೆ ಗೋಚರಿಸುತ್ತವೆ. ಆದ್ದರಿಂದ ಮೂಲ ಟ್ವೀಟ್ ಅನ್ನು ಮಾರ್ಪಡಿಸಲಾಗಿದೆ ಅನ್ನೊದು ಸ್ಪಷ್ಟವಾಗುತ್ತದೆ. ಬಳಕೆದಾರರು ಲೇಬಲ್ ಅನ್ನು ಟ್ಯಾಪ್ ಮಾಡಿದರೆ, ಅವರನ್ನು ಟ್ವೀಟ್‌ನ ಎಡಿಟ್‌ ಹಿಸ್ಟರಿಗೆ ಕರೆದೊಯ್ಯಲಾಗುತ್ತದೆ. ಇಲ್ಲಿ ಮೂಲ ಟ್ವೀಟ್‌ಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ.

ಎಡಿಟ್

'ಎಡಿಟ್ ಟ್ವೀಟ್' ಫೀಚರ್ಸ್‌ ಹೆಸರೇ ಸೂಚಿಸುವಂತೆ ನಿಮ್ಮ ಟ್ವೀಟ್‌ನಲ್ಲಿ ತಪ್ಪುಗಳನ್ನು ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಎಡಿಟ್‌ ಟ್ವೀಟ್‌ಗಳಿಗೆ ಸಮಯ ಮಿತಿ ಮತ್ತು ಆವೃತ್ತಿಯ ಹಿಸ್ಟರಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಟ್ವಿಟರ್‌ ಹೇಳಿಕೊಂಡಿದೆ. ಸದ್ಯ ಟ್ವಿಟರ್ "ಉದ್ದೇಶಪೂರ್ವಕವಾಗಿ ಚಿಕ್ಕ ಗುಂಪಿನೊಂದಿಗೆ ಎಡಿಟ್ ಟ್ವೀಟ್ ಅನ್ನು ಪರೀಕ್ಷಿಸುತ್ತಿದೆ" ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಇದರಿಂದಾಗುವ ಉಪಯೋಗ ಹಾಗೂ ದುರುಪಯೋಗಗಳನ್ನು ತಿಳಿದುಕೊಳ್ಳಲು ಟ್ವಿಟರ್‌ ಮುಂದಾಗಿದೆ. ಎಲ್ಲವೂ ಸರಿ ಹೋದ ನಂತರ ಇದನ್ನು ಟ್ವಿಟರ್‌ ಬ್ಲೂ ಬಳಕೆದಾರರಿಗೆ ಪರಿಚಯಿಸಲಿದೆ.

ಟ್ವಿಟರ್‌

ಇದಲ್ಲದೆ ಟ್ವಿಟರ್‌ ಇತ್ತೀಚಿಗೆ ತನ್ನ ಎಲ್ಲಾ ಬಳಕೆದಾರರಿಗೆ ಟ್ವಿಟರ್ ಸರ್ಕಲ್ ಫೀಚರ್ಸ್‌ ಪರಿಚಯಿಸಿದೆ. ಇನ್ನು ಟ್ವಿಟರ್‌ ಸರ್ಕಲ್‌ ಫೀಚರ್ಸ್‌ ಸಾಕಷ್ಟು ವಿಶೇಷವಾಗಿದ್ದು, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ಲೋಸ್‌ ಫ್ರೆಂಡ್ಸ್‌ ಆಯ್ಕೆಯ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಅಂದರೆ ಈ ಫೀಚರ್ಸ್‌ ಮೂಲಕ ನೀವು ನಿಮ್ಮದೇ ಆಯ್ದ ಜನರ ಗುಂಪಿಗೆ ಮಾತ್ರ ಟ್ವೀಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ಒಂದೇ ಮನಸ್ಥಿತಿಯ ಜನರು ತಮ್ಮ ಅಭಿಪ್ರಾಯಗಳನ್ನು ಒಂದೆಡೆ ಹಂಚಿಕೊಳ್ಳಲು ಅವಕಾಶ ಸಿಗಲಿದೆ

Best Mobiles in India

English summary
Twitter will roll out Edit Tweet feature:how will Edit Tweet work?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X