Subscribe to Gizbot

ಕಪ್ಪು ರಂಧ್ರಗಳ ಡಿಕ್ಕಿಯಿಂದ ಹಿಂಸಾತ್ಮಕ ಘಟನೆಗಳು

Written By:

ಎರಡು ಕಪ್ಪು ರಂಧ್ರಗಳು ವಿಶ್ವದ ಅತ್ಯಂತ ಹಿಂಸಾತ್ಮಕ ಘಟನೆಗಳಾಗಿ ಪರಿಗಣಿತವಾಗಿದೆ. ಪ್ರಬಲ ಗುರುತ್ವ ಪರಿಣಾಮಗಳನ್ನು ಹೊಂದಿರುವ ಇವುಗಳು ಸ್ಪೇಸ್ ಟೈಮ್ ಪ್ರದೇಶದಲ್ಲಿ ಇವೆ. ಬೆಳಕು ಕೂಡ ಇವುಗಳನ್ನು ತಪ್ಪಿಸಿಕೊಂಡು ಹೋಗಲಾರವು. ಅಂತಹ ಎರಡು ಕಪ್ಪು ಕುಳಿಗಳು ಒಂದಕ್ಕೊಂಡು ಢಿಕ್ಕಿ ಹೊಡೆಯುವಂತಿದ್ದು ಸಂಪೂರ್ಣ ಗ್ಯಾಲಕ್ಸಿಗೆ ಇದು ದೊಡ್ಡ ಹೊಡೆತವನ್ನು ನೀಡಲಿದೆ ಎಂದು ನಾಸಾ ತಿಳಿಸಿದೆ.

ಓದಿರಿ: ವಿದೇಶಿ ಉಪಗ್ರಹಗಳ ಉಡಾವಣೆಯಲ್ಲಿ 50 ದಾಟಲಿರುವ ಭಾರತ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಳಕಿನ ವರ್ಷ

ಒಂದು ಮಿಲಿಯನ್ ಬೆಳಕಿನ ವರ್ಷ

ಈ ಕಪ್ಪು ಕುಳಿಗಳು ಒಂದು ಮಿಲಿಯನ್ ಬೆಳಕಿನ ವರ್ಷಗಳಿಗಿಂತಲೂ ಆಚೆಯದ್ದಾಗಿದ್ದು ನಮ್ಮ ಸೋಲಾರ್ ವ್ಯವಸ್ಥೆಯ ವ್ಯಾಸಕ್ಕೆ ಸಮಾನಾಂತರವಾಗಿದೆ.

ಸುರುಳಿ ಸುತ್ತುವಿಕೆ

ಮಾರಣಾಂತಿಕ ಸುರುಳಿ ಸುತ್ತುವಿಕೆ

ಮುನ್ನೋಟಗಳ ಪ್ರಕಾರ, ಈ ಘರ್ಷಣೆಯು ಮಾರಣಾಂತಿಕ ಸುರುಳಿ ಸುತ್ತುವಿಕೆಯನ್ನು ಏರ್ಪಡಿಸಲಿದ್ದು 100 ಮಿಲಿಯನ್ ಸೂಪರ್‌ನೋವಾ ಶಕ್ತಿಯನ್ನು ಪಡೆದುಕೊಂಡಿದೆ.

ಅಲೆಗಳಂತಹ ಏರಿಳಿತ

ಅಲೆಗಳಂತಹ ಏರಿಳಿತ

ಈ ಸುತ್ತಿಕೊಳ್ಳುವಿಕೆಯು ಗುರುತ್ವ ಅಲೆಗಳಂತಹ ಏರಿಳಿತವನ್ನು ಉಂಟುಮಾಡಬಹುದು.

ಹಿಂಸಾತ್ಮಕ ಘಟನೆ

ಹೆಚ್ಚು ಹಿಂಸಾತ್ಮಕ

ಕಪ್ಪು ಕುಳಿಗಳನ್ನು ವಿಶ್ವದ ಹೆಚ್ಚು ಹಿಂಸಾತ್ಮಕ ಘಟನೆಗಳು ಎಂದೇ ಬಿಂಬಿಸಲಾಗಿದೆ.

ಗುರುತ್ವಾಕರ್ಷಣ ಶಕ್ತಿ

ಹೆಚ್ಚು ಗುರುತ್ವಾಕರ್ಷಣ ಶಕ್ತಿ

ಇವುಗಳು ಹೆಚ್ಚು ಗುರುತ್ವಾಕರ್ಷಣ ಶಕ್ತಿಯನ್ನು ಪಡೆದುಕೊಂಡಿರುವುದರಿಂದ ಬೆಳಕು ಕೂಡ ಇವುಗಳನ್ನು ದಾಟಿ ಹೋಗುವುದು ಅಸಂಭವವಾಗಿದೆ.

ಮಿಲ್ಕಿ ವೇ ಗ್ಯಾಲಕ್ಸಿ

ಮಿಲ್ಕಿ ವೇ ಗ್ಯಾಲಕ್ಸಿ

ನಮ್ಮ ಗ್ಯಾಲಕ್ಸಿಯು ಮಿಲ್ಕಿ ವೇ ಗ್ಯಾಲಕ್ಸಿ ಎಂದೇ ಪ್ರಸಿದ್ಧವಾಗಿದ್ದು, ಇದು ಕಪ್ಪುಕುಳಿಯನ್ನು ಹೊಂದಿದೆ ಮತ್ತು ಸುಮಾರು 4.3 ದಶಲಕ್ಷ ಸೌರ ದ್ರವ್ಯರಾಶಿಗಳು ಅಂದರೆ ಸೂರ್ಯನಿಗಿಂತಲೂ 4.3 ಮಿಲಿಯನ್ ಪಟ್ಟು ಅಧಿಕ ತೂಗುತ್ತದೆ.

ಸ್ಟೆಲ್ಲಾರ್ ಬ್ಲ್ಯಾಕ್ ಹೋಲ್ಸ್

ಸ್ಟೆಲ್ಲಾರ್ ಬ್ಲ್ಯಾಕ್ ಹೋಲ್ಸ್

ನಕ್ಷತ್ರಗಳು ಸತ್ತಾಗ ಅವುಗಳು ಕಪ್ಪು ಕುಳಿಯನ್ನು ಉಂಟುಮಾಡುತ್ತವೆ. ಇನ್ನು ಸತ್ತ ನಕ್ಷತ್ರಗಳು ರಚಿಸಿರುವ ಕಪ್ಪು ಕುಳಿಯನ್ನು ಸ್ಟೆಲ್ಲಾರ್ ಬ್ಲ್ಯಾಕ್ ಹೋಲ್ಸ್ ಎಂದು ಕರೆಯಲಾಗುತ್ತದೆ.

ಪರಿಣಾಮವನ್ನು ಬೀರುತ್ತವೆ

ಪರಿಣಾಮವನ್ನು ಬೀರುತ್ತವೆ

ಕಪ್ಪು ಕುಳಿಗಳಿಗೆ ಸಮಯ ತಾಗುತ್ತದೆ. ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಸಮಯ ಮತ್ತು ಬಾಹ್ಯಾಕಾಶದ ಮೇಲೆ ಕಪ್ಪು ಕುಳಿಗಳು ಪರಿಣಾಮವನ್ನು ಬೀರುತ್ತವೆ.

ಸಮಯ

ಸಮಯ

ಇನ್ನು ಗುರುತ್ವದ ಪರಿಣಾಮದಿಂದಾಗಿ ಸಮಯವು ನಿಧಾನವಾಗಿ ಚಲಿಸುತ್ತದೆ.

ಹಾನಿಕಾರಕ ಪರಿಣಾಮ

ಹಾನಿಕಾರಕ ಪರಿಣಾಮ

ಇನ್ನು ಕಪ್ಪು ಕುಳಿಗಳು ಗ್ರಹಗಳು, ನಕ್ಷತ್ರ ಸಮೂಹಗಳು ಮತ್ತು ಬ್ರಹ್ಮಾಂಡದ ಮೇಲೆ ಹಾನಿಕಾರಕ ಪರಿಣಾಮವನ್ನು ಹೊಂದಿದೆ. ಇನ್ನು ಎರಡು ಕಪ್ಪು ಕುಳಿಗಳ ಘರ್ಷಣೆ ಒಂದು ಊಹಿಸಲಾಗದ ಘಟನೆಗೆ ಕಾರಣವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
National Aeronautics and Space Administration (NASA) discovered that two black holes are on their way to colliding each other. The two black holes will collide sooner than expected and the collision will create a titanic blast which has a capability of destroying an entire galaxy.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot